<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಸಂಕಷ್ಟದಿಂದ ಪಾರಾದ LNG ಹಡಗು: ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಸುರಕ್ಷಿತ ಪ್ರವೇಶ

ಸಂಕಷ್ಟದಿಂದ ಪಾರಾದ LNG ಹಡಗು: ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಸುರಕ್ಷಿತ ಪ್ರವೇಶ
Summary: A liquefied natural gas (LNG) ship stranded in the Strait of Hormuz has safely reached India. The development comes as a major relief to India amid growing concerns about global energy supplies and provides a temporary answer to many questions raised about energy security.

belagavi news :

ಭರೂಚ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಕಡಿಮೆಯಾಗಿದ್ದು, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಸುಗಮಗೊಂಡಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ದ್ರವೀಕೃತ ಅನಿಲ (LNG) ಸಾಗಿಸುತ್ತಿದ್ದ ಟ್ಯಾಂಕರ್ ಸುರಕ್ಷಿತವಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಗುಜರಾತ್ ನ ದಹೇಜ್ ಬಂದರನ್ನು ತಲುಪಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಅನಿಶ್ಚಿತತೆಯ ನಡುವೆ ಇಂಧನ ಸರಬರಾಜು ವ್ಯತ್ಯಯಗೊಳ್ಳುವ ಆತಂಕ ವ್ಯಕ್ತವಾಗಿತ್ತು. ಆದರೆ ಟ್ಯಾಂಕರ್ ಯಾವುದೇ ಅಡೆತಡೆ ಇಲ್ಲದೆ ಗಮ್ಯಸ್ಥಾನ ತಲುಪಿರುವುದು ಎಲ್ಎನ್ ಜಿ ಆಮದು ಮತ್ತು ಇಂಧನ ಪೂರೈಕೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಮತ್ತು ಅನಿಲ ಸಾಗಣಿಕೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವುದು ಇಂಧನ ಮಾರುಕಟ್ಟೆಗೂ ನಿರಾಳತೆಯನ್ನು ತಂದಿದೆ. ದಹೇಜ್ ಬಂದರಿಗೆ ಟ್ಯಾಂಕರ್ ಆಗಮನದಿಂದ ದೇಶದ ಅನಿಲ ಪೂರೈಕೆ ವ್ಯವಸ್ಥೆಗೆ ಅಗತ್ಯವಾದ ಬೆಂಬಲ ದೊರೆಯುವ ನಿರೀಕ್ಷೆ ಇದೆ.

Sponsored

ಪಶ್ಚಿಮ ಏಷ್ಯಾದ ಉದ್ವಿಗ್ನತೆಯ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ದ್ರವೀಕೃತ ನೈಸರ್ಗಿಕ ಅನಿಲ LNG ಸಾಗಣಿ ಹಡಗು 'ದಿಶಾ' ಸುರಕ್ಷಿತವಾಗಿ ಗುಜರಾತ್ ನ ದಹೇಜ್ ಬಂದರನ್ನು ತಲುಪಿದೆ. ಈ ಬೆಳವಣಿಗೆ ಭಾರತದ ಇಂಧನ ಭದ್ರತೆ ದೃಷ್ಟಿಯಿಂದ ಮಹತ್ವದ್ದೆಂದು ಪರಿಗಣಿಸಲಾಗಿದೆ.

ಸುಮಾರು 62,370 ಮೆಟ್ರಿಕ್ ಟನ್ LNG ಹೊತ್ತಿದ್ದ 'ದಿಶಾ' ಹಡಗು ಕತಾರ್ ನ ರಾಸ್ ಲಫಾನ್ ಬಂದರಿನಿಂದ ಹೊರಟಿತ್ತು. ಆದರೆ ಅಮೆರಿಕ ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಭದ್ರತಾ ಸವಾಲುಗಳಿಂದಾಗಿ ಹಡಗು ಮೂರುವರೆ ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು. ಬಳಿಕ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಹಡಗು ಸುರಕ್ಷಿತವಾಗಿ ಭಾರತ ತಲುಪಿದೆ.

ಈ ಕುರಿತು ಮಾಹಿತಿ ನೀಡಿರುವ ಬಂದರು, ಹಡಗು ಮತ್ತು ಜಲ ಮಾರ್ಗಗಳ ಸಚಿವಾಲಯದ (MoPSW) ನಿರ್ದೇಶಕ ಒಫೇಶ್ ಕುಮಾರ್ ಶರ್ಮಾ ಪರ್ಷಿಯನ್ ಕೊಲ್ಲಿ ಪ್ರದೇಶದಿಂದ ಭಾರತೀಯ ಹಡಗುಗಳು ಮತ್ತು ಇಂಧನ ಸರಕುಗಳ ಸುರಕ್ಷಿತ ಸಂಚಾರ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ವಿವಿಧ ದೇಶಗಳು ಹಾಗೂ ಸಂಬಂಧಿತ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎಂದು ತಿಳಿಸಿದ್ದಾರೆ.

"ಇಲ್ಲಿಯವರೆಗೆ 'ದಿಶಾ' ಹೊರತುಪಡಿಸಿ ಯಾವುದೇ ಭಾರತೀಯ ಧ್ವಜದ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿಲ್ಲ. ಸರ್ಕಾರವು ಎಲ್ಲ ಸಂಬಂಧಿತ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ" ಎಂದು ಅವರು ಹೇಳಿದ್ದಾರೆ.

Sponsored

ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಮಟ್ಟದಲ್ಲಿ ಅಪಾರ ಪ್ರಮಾಣದ ಕಚ್ಚಾ ತೈಲ ಮತ್ತು LNG ಸಾಗಿಸಲಾಗುತ್ತದೆ. ಈ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ಇಂಧನ ಮಾರುಕಟ್ಟೆ ಅನಿಲ ಬೆಲೆಗಳು ಮತ್ತು ಪೂರೈಕೆ ಸರಪಳಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ.

ಗುಜರಾತ್ ನ ಭರೂಚ್ ಜಿಲ್ಲೆಯ ದಹೇಜ್ LNG ಟರ್ಮಿನಲ್ ದೇಶದ ಪ್ರಮುಖ ಅನಿಲ್ ಆಮದು ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ಬಂದ LNG ಯನ್ನು ಕೈಗಾರಿಕೆಗಳು ವಿದ್ಯುತ್ ಉತ್ಪಾದನಾ ಘಟಕಗಳು ಹಾಗೂ ಗೃಹ ಬಳಕೆಗೆ ವಿವಿಧ ರಾಜ್ಯಗಳಿಗೆ ವಿತರಿಸಲಾಗುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ LNG ಪೂರೈಕೆ ಕುರಿತು ಆತಂಕ ವ್ಯಕ್ತವಾಗಿದ್ದರೂ , 'ದಿಶಾ' ಹಡಗಿನ ಸುರಕ್ಷಿತ ಆಗಮನವು ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸಕಾರಾತ್ಮಕ ಸಂದೇಶ ನೀಡಿದೆ.

Also Read:

ಮಹಾಭಾರತದಲ್ಲಿ ಕೃಷ್ಣ ಮಾಡಿದಂತೆ ನಾವು ಕೂಡ ಮಾಡಬೇಕು: ಅಮಿತ್ ಶಾ ಕರೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online