Belagavi news:
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯೂ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮದಲ್ಲಿ ಹೊಸ ಆತಂಕವನ್ನು ಹುಟ್ಟು ಹಾಕಿದೆ. ಇಂಧನ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಊಟ-ತಿಂಡಿ ದರಗಳ ಮೇಲೆ ನೇರ ಪರಿಣಾಮ ಬೀಳಬಹುದೇ ಎಂಬ ಪ್ರಶ್ನೆ ಇದೀಗ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಹೋಟೆಲ್ ಮಾಲೀಕರ ಪ್ರಕಾರ ಅಡುಗೆಗೆ ಬಳಸುವ LPG ಸಿಲಿಂಡರ್ ಬೆಲೆ ನಿರಂತರವಾಗಿ ಏರುತ್ತಿರುವುದರಿಂದ ಒಟ್ಟು ಕಾರ್ಯಾಚರಣ ವೆಚ್ಚ ಹೆಚ್ಚಾಗಿದೆ. ಇದಕ್ಕೆ ಜೊತೆಗೆ ತರಕಾರಿ, ಎಣ್ಣೆ, ಬೇಳೆ ಸೇರಿದಂತೆ ಇತರ ಕಚ್ಚಾ ವಸ್ತುಗಳ ಬೆಲೆಯೂ ಏರಿಕೆಯ ಹಾದಿಯಲ್ಲಿ ಇರುವುದರಿಂದ ಉದ್ಯಮದ ಮೇಲೆ ಒತ್ತಡ ಹೆಚ್ಚಾಗಿದೆ.
ಕೆಲವು ಹೋಟೆಲ್ ಮಾಲೀಕರು,"ಪ್ರಸ್ತುತ ಪರಿಸ್ಥಿತಿಯಲ್ಲಿ ದರ ಏರಿಕೆ ಅನಿವಾರ್ಯವಾಗಬಹುದು" ಎಂದು ಹೇಳಿದ್ದರೆ, ಇನ್ನು ಕೆಲವರು ಗ್ರಾಹಕ ಸಂಖ್ಯೆಗೆ ದಕ್ಕಿಯಾಗುವ ಭಯದಿಂದ ತಕ್ಷಣದ ದರ ಬದಲಾವಣೆ ಮಾಡುವ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದಾರೆ.
ವಾಣಿಜ್ಯ LPG ಸಿಲೆಂಡರ್ ಬೆಲೆ ಮತ್ತೆ ಏರಿಕೆ :
ವಾಣಿಜ್ಯ ಬಳಕೆಯ LPG ಸಿಲೆಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಉತ್ತಮ ಮತ್ತು ರೆಸ್ಟೋರೆಂಟ್ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇಂದು ಕೂಡ ಬೆಂಗಳೂರಿನಲ್ಲಿ ಕಮರ್ಷಿಯಲ್ ಸಿಲಿಂಡರ್ ದರದಲ್ಲಿ ಸುಮಾರು 46 ರೂಪಾಯಿ ಹೆಚ್ಚಳವಾಗಿರುವುದು ವ್ಯಾಪಾರ ವಲಯದಲ್ಲಿ ಆತಂಕವನ್ನು ಮೂಡಿಸಿದೆ.
ಗ್ಯಾಸ್ ಏಜೆನ್ಸಿಗಳ ಪ್ರಾಥಮಿಕ ಮುನ್ಸೂಚನೆಯ ಪ್ರಕಾರ, ಮುಂದಿನ ದಿನಗಳಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬಲಿ ಸುಮಾರು 4000 ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಿರಂತರ ಬೆಲೆ ಏರಿಕೆ ಹೋಟೆಲ್ ಉದ್ಯಮದ ಕಾರ್ಯಾಚರಣ ವೆಚ್ಚವನ್ನು ಹೆಚ್ಚಿಸುತ್ತಿದ್ದು, ಸಣ್ಣ ಹಾಗೂ ಮಧ್ಯಮ ಹೋಟೆಲ್ ಗಳು ಹೆಚ್ಚು ಒತ್ತಡಕ್ಕೆ ಒಳಗಾಗಿವೆ.
ಹೋಟೆಲ್ ಮಾಲೀಕರ ಪ್ರಕಾರ, ಇಂಧನ ವೆಚ್ಚದ ಜೊತೆಗೆ ಕಚ್ಚಾವಸ್ತುಗಳ ಬೆಲೆಯೂ ಹೆಚ್ಚುತ್ತಿರುವುದರಿಂದ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಕೆಲ ಹೋಟೆಲ್ ಗಳು ಈಗಾಗಲೇ ವೆಚ್ಚ ತಾಳಲಾರದೆ ಕಾರ್ಯಾಚರಣೆ ಕಡಿಮೆ ಮಾಡುವುದು ಅಥವಾ ಮುಚ್ಚಿರುವ ಪ್ರಕರಣಗಳು ವರದಿಯಾಗಿವೆ.
ಹೋಟೆಲ್ ಉದ್ಯಮಕ್ಕೆ ಗಂಭೀರ ಸವಾಲು :
ವಾಣಿಜ್ಯ LPG ದರ ಏರಿಕೆ ನೇರವಾಗಿ ಊಟ ತಿಂಡಿ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಿನನಿತ್ಯದ ಅಡುಗೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನೀಡುವ ಆಹಾರದ ದರವನ್ನು ಪರಿಷ್ಕರಿಸದೆ ಮುಂದುವರೆಯುವುದು ಕಷ್ಟಕರವಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಕೆಲವು ಹೋಟೆಲ್ ಸಂಘಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಒಗ್ಗಟ್ಟಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
LPG ಬೆಲೆ ಏರಿಕೆ ನಡುವೆಯೂ ಹೋಟೆಲ್ ಉದ್ಯಮಕ್ಕೆ ಹೊಸ ದಾರಿ :
ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮವು ಹೊಸ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಆರಂಭಿಸಿದೆ. ಇಂಧನ ವೆಚ್ಚ ಹೆಚ್ಚಳದ ಹೊರೆ ನೇರವಾಗಿ ಗ್ರಾಹಕರ ಮೇಲೆ ಹಾಕುವುದು ಸಾಧ್ಯವಿಲ್ಲದ ಕಾರಣ ಉದ್ಯಮಿಗಳು ತಂತ್ರ ಬದ್ಧವಾಗಿ ಪರಿಹಾರ ಹುಡುಕುತ್ತಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಕೃಷ್ಣರಾಜ ಅವರ ಪ್ರಕಾರ ದರ ಏರಿಕೆ ಪರಿಣಾಮವನ್ನು ಕಡಿಮೆ ಮಾಡಲು ಹಲವಾರು ಹೋಟೆಲ್ ಗಳು ಈಗ ಎಲೆಕ್ಟ್ರಿಕ್ ಸ್ಟವ್ ಬಳಕೆ ಶಿಫ್ಟ್ ಆಗುತ್ತಿವೆ. ಇದರಿಂದ ಅಡುಗೆ ವೆಚ್ಚದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅವರು ನೀಡಿದ ಮಾಹಿತಿಯ ಪ್ರಕಾರ ಹಿಂದಿನ ದಿನಗಳಲ್ಲಿ ಒಂದು ಹೋಟೆಲ್ಗೆ ದಿನಕ್ಕೆ ಸರಾಸರಿ ಐದು ವಾಣಿಜ್ಯ ಸಿಲಿಂಡರ್ ಗಳು ಬೇಕಾಗುತ್ತಿತ್ತು. ಆದರೆ ಈಗ ಎಲೆಕ್ಟ್ರಿಕ್ ಸ್ಟವ್ ಬಳಕೆಯಿಂದ ಈ ಅವಶ್ಯಕತೆ ಸುಮಾರು ಒಂದುವರೆ ಸಿಲಿಂಡರ್ ಗೆ ಇಳಿದಿದೆ. ಇದರಿಂದ ಕಾರ್ಯಾಚರಣ ವೆಚ್ಚ ಕಡಿಮೆಯಾಗಿದ್ದು, ಗ್ರಾಹಕರ ಮೇಲಿನ ದರ ಏರಿಕೆಯ ಹೊರೆ ತಪ್ಪಿಸಲು ಸಾಧ್ಯವಾಗುತ್ತಿದೆ.
ಹೋಟೆಲ್ ಉದ್ಯಮದಲ್ಲಿ ಹೊಸ ತಂತ್ರ :
LPG ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆ ಸಣ್ಣ ಹಾಗೂ ಮಾಧ್ಯಮ ಹೋಟೆಲ್ ಗಳು ಸಹ ವಿದ್ಯುತ್ ಆಧಾರಿತ ಅಡುಗೆ ವಿಧಾನಗಳತ್ತ ಮುಖ ಮಾಡುತ್ತಿದೆ. ಇದರಿಂದ ಇಂಧನ ಬಳಕೆ ಕಡಿಮೆಯಾಗುವುದರ ಜೊತೆಗೆ ದೀರ್ಘಾವಧಿಯಲ್ಲಿ ವೆಚ್ಚ ನಿರ್ವಹಣೆಯಲ್ಲೂ ಸಹಾಯವಾಗುತ್ತದೆ ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಗ್ರಾಹಕರಿಗೆ ತಾತ್ಕಾಲಿಕ ಪರಿಹಾರ :
ಹೋಟೆಲ್ ಉದ್ಯಮದ ಈ ಬದಲಾವಣೆ ಗ್ರಾಹಕರಿಗೆ ತಕ್ಷಣದ ದರ ಏರಿಕೆ ತಡೆಯಲು ಸಹಾಯಕವಾಗಬಹುದು. ಆದರೆ ವಿದ್ಯುತ್ ದರ ಮತ್ತು ನಿರ್ವಹಣಾ ವೆಚ್ಚಗಳ ಮೇಲೆ ಅವಲಂಬಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಒಟ್ಟಾರೆ ಎಲ್‍ಪಿಜಿ ಬೆಲೆ ಏರಿಕೆ ಹೋಟೆಲ್ ಉದ್ಯಮವನ್ನು ಹೊಸ ತಂತ್ರಗಳಿಗೆ ಒತ್ತಾಯಿಸುತ್ತಿದ್ದು, ಎಲೆಕ್ಟ್ರಿಕ್ ಸ್ಟವ್ ಬಳಕೆ ಇದೀಗ ಒಂದು ಪ್ರಮುಖ ಪರ್ಯಾಯವಾಗಿ ಹೊರಹೊಮ್ಮುತ್ತಿದೆ.
Also Read:
ವಿಶೇಷ ವಿಮಾನದಲ್ಲಿ ದೆಹಲಿಗೆ ಹೊರಟ ಸಿದ್ದರಾಮಯ್ಯ - ಡಿಕೆಶಿ ; ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ