belagavi news :
ಮೇಲ್ಮನೆ ಚುನಾವಣೆಯ ಫಲಿತಾಂಶ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಜೆಡಿಎಸ್ ದೋಸ್ತಿ ಪಕ್ಷಗಳಿಗೆ ಅಚ್ಚರಿಯ ಆಘಾತ ತಂದ ಈ ಫಲಿತಾಂಶದಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಚಾಣಾಕ್ಷತನವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಂತ್ರಗಾರಿಕೆ ಫಲ ನೀಡಿದ್ದು, ಕಾಂಗ್ರೆಸ್ ಭರ್ಜರಿ ಗೆಲುವಿಗೆ ನಗೆ ಬೀರಿದೆ.
ಅತ್ಯಂತ ಗಮನಾರ್ಹ ಬೆಳವಣಿಗೆ ಎಂದರೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕೆಲ ಶಾಸಕರು ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕದೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡಿರುವುದು. ಈ ಬೆಳವಣಿಗೆ ದೋಸ್ತಿ ಪಕ್ಷಗಳ ನಾಯಕತ್ವಕ್ಕೆ ದೊಡ್ಡ ಆಘಾತ ನೀಡಿದ್ದು, ಪಕ್ಷದೊಳಗಿನ ಅಸಮಾನವು ಬಹಿರಂಗಗೊಂಡಿದೆ ಎನ್ನುವ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಮಾಹಿತಿಗಳ ಪ್ರಕಾರ,ಬಿಜೆಪಿ ಮತ್ತು ಜೆಡಿಎಸ್ ಸೇರಿ ಒಟ್ಟು 11 ಶಾಸಕರು ಕಾಂಗ್ರೆಸ್ ಪರ ಮತ ಚಲಾಯಿಸಿದ್ದು,ಇದು ಚುನಾವಣೆಯ ಫಲಿತಾಂಶದ ಮೇಲೆ ನಿರ್ಣಾಯಕ ಪ್ರಭಾವ ಬೀರಿದೆ.ಈ ಅಡ್ಡಮತದಾನದ ಹಿಂದೆ ಇರುವ ರಾಜಕೀಯ ಲೆಕ್ಕಾಚಾರ ಏನು? ದೋಸ್ತಿ ಪಕ್ಷಗಳ ಒಳಜಗಳವೇ ಕಾರಣವೇ? ಅಥವಾ ಕಾಂಗ್ರೆಸ್ ನ ಮೌನ ತಂತ್ರವೇ ಯಶಸ್ವಿಯಾಗಿದೆಯೇ ? ಎಂಬ ಪ್ರಶ್ನೆಗಳು ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಫಲಿತಾಂಶದಿಂದ ಕಾಂಗ್ರೆಸ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರೆ, ಬಿಜೆಪಿ ಹಾಗೂ ಜೆಡಿಎಸ್ ನಾಯಕತ್ವಕ್ಕೆ ತಮ್ಮ ಪಕ್ಷದೊಳಗಿನ ಭಿನ್ನಮತ ಮತ್ತು ಅಸಮಾಧಾನವನ್ನು ಎದುರಿಸುವ ಸವಾಲು ಎದುರಾಗಿದೆ. ಮೇಲ್ಮನೆ ಚುನಾವಣೆ ಕೇವಲ ಸ್ಥಾನಗಳ ಗೆಲುವು - ಸೋಲಿನ ಕಥೆಯಾಗದೆ, ಮುಂದಿನ ರಾಜಕೀಯ ಸಮೀಕರಣಗಳ ದಿಕ್ಕನ್ನು ತೋರಿಸುವ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.
ಬಿಜೆಪಿಯ ಮೂವರು ಶಾಸಕರಿಂದ ಕ್ರಾಸ್ ವೋಟಿಂಗ್: ಪರಿಷತ್ ಚುನಾವಣೆಯಲ್ಲಿ ತಮ್ಮ ಶಾಸಕರಿಂದ ಅಡ್ಡ ಮತದಾನದ ಕಿಂಚಿತ್ತು ಊಹೆ ಮಾಡದ ರಾಜ್ಯ ಬಿಜೆಪಿ ನಾಯಕರಿಗೆ ಫಲಿತಾಂಶ ಆಶ್ಚರ್ಯ ಶಾಕ್ ನೀಡಿದೆ. ಕಾರಣ ಪಕ್ಷದ ಮೂವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಪರ ಮತ ಚಲಾಯಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಬಿಜೆಪಿ ರಾಜ್ಯನಾಯಕತ್ವದ ಕಾರ್ಯವೈಕರಿಯ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತನ್ನದೇ 62 ಶಾಸಕರನ್ನು ಒಗ್ಗೂಡಿಸಿ ಮತದಾನ ಮೂಡಿಸುವಲ್ಲಿ ಬಿಜೆಪಿ ವಿಫಲವಾಗಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಅಭ್ಯರ್ಥಿಗಳ ಗೆಲುವು ಸಾಧಿಸಿದ್ದರು, ಪಕ್ಷದೊಳಗಿನ ಅಸಮಾಧಾನ ಮತ್ತು ಭಿನ್ನಮತ ಈ ಚುನಾವಣೆಯಲ್ಲಿ ಬಹಿರಂಗಗೊಂಡಿರುವುದು ಗಮನಾರ್ಹವಾಗಿದೆ.
ಬಿಜೆಪಿ ಅಭ್ಯರ್ಥಿಗಳಾದ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ್ ಇಬ್ಬರು ಗೆಲುವು ಸಾಧಿಸಿದರು, ಪಕ್ಷದ ಲೆಕ್ಕಾಚಾರ ಸಂಪೂರ್ಣವಾಗಿ ಸರಿಹೊಂದಿಲ್ಲ. ಬಿಜೆಪಿ ನಾಯಕತ್ವ ತನ್ನ ಶಾಸಕರಿಗೆ ತಲಾ 30 ಮತಗಳನ್ನು ಇಬ್ಬರು ಅಭ್ಯರ್ಥಿಗಳಿಗೆ ಹಂಚಿಕೆ ಮಾಡುವಂತೆ ಸೂಚಿಸಿತು. ಆದರೆ ಫಲಿತಾಂಶ ಹೊರ ಬಂದಾಗ ರಘು ಕೌಟಿಲ್ಯ ಅವರಿಗೆ 29 ಮತಗಳು ಮಾತ್ರ ಲಭಿಸಿದ್ದು, ಒಂದು ಮತ ಅಸಿಂಧುವಾಗಿದೆ. ಮತ್ತೊಂದೆಡೆ, ಲಿಂಗರಾಜ್ ಪಾಟೀಲ್ ಅವರಿಗೆ ಕೇವಲ 27 ಮತಗಳು ಸಿಕ್ಕಿವೆ.
ಇದೇ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಲಿಂಗರಾಜ್ ಪಾಟೀಲ್ ಅವರಿಗೆ ಮತ ಹಾಕಬೇಕಿದ್ದ ಮೂವರು ಬಿಜೆಪಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡಿರುವುದು ಬಹಿರಂಗವಾಗಿದ್ದು, ಇದು ರಾಜ್ಯ ಬಿಜೆಪಿ ನಾಯಕತ್ವಕ್ಕೆ ಬಾರಿ ಅಪಘಾತವಾಗಿ ಪರಿಣಮಿಸಿದೆ. ಪಕ್ಷದ ವಿಪ್ ಮತ್ತು ಸೂಚನೆಗಳ ನಡುವೆಯೂ ಶಾಸಕರು ವಿಭಿನ್ನ ನಿಲುವು ತಾಳಿರುವುದು ಪಕ್ಷದೊಳಗಿನ ಅಸಮಾಧಾನದ ಸೂಚನೆ ಎಂಬ ಪ್ರಶ್ನೆ ಎದ್ದಿದೆ.
ಈ ಬೆಳವಣಿಗೆ ಕೇವಲ ಚುನಾವಣಾ ಫಲಿತಾಂಶಕ್ಕೆ ಸೀಮಿತವಾಗದೆ, ಬಿಜೆಪಿ ಸಂಘಟನೆ ಮತ್ತು ನಾಯಕತ್ವದ ಹಿಡಿತದ ಬಗ್ಗೆ ಹೊಸ ಚೆರ್ಚೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಅಡ್ಡಿ ಮತದಾನದ ವಿರುದ್ಧ ಪಕ್ಷ ಯಾವ ಕ್ರಮ ಕೈಗೊಳ್ಳಲಿದೆ? ಆಸಮಾಧಾನಗೊಂಡ ಶಾಸಕರು ಯಾರು? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.
ವಿಧಾನಪರಿಷ ಚುನಾವಣೆಯ ಫಲಿತಾಂಶ ಬಿಜೆಪಿ ಪಾಳಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಬಿಜೆಪಿ ತನ್ನ 62 ಶಾಸಕರು ಹಾಗೂ ಜನಾರ್ಧನ್ ರೆಡ್ಡಿ ಅವರ ಬೆಂಬಲ ಸೇರಿ ಒಟ್ಟು 63 ಮತಗಳ ಬಲ ಹೊಂದಿದ್ದರೂ, ಪಕ್ಷದ ಅಭ್ಯರ್ಥಿಗಳಿಗೆ ನಿರೀಕ್ಷಿತ ಮತಗಳು ಸಿಗದಿರುವುದು ನಾಯಕತ್ವಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ತಂತ್ರದ ಪ್ರಕಾರ, ಇಬ್ಬರು ಬಿಜೆಪಿ ಅಭ್ಯರ್ಥಿಗಳಾದ ರಘು ಕೌಟಿಲ್ಯ ಮತ್ತು ಲಿಂಗರಾಜ ಪಾಟೀಲ್ ಅವರಿಗೆ ತಲಾ 30ರಂತೆ ಒಟ್ಟು 60 ಮೊದಲ ಪ್ರಾಶಸ್ತ್ಯದ ಮತಗಳನ್ನು ಹಂಚಿಕೆ ಮಾಡಲು ಸೂಚಿಸಲಾಗಿತ್ತು. ಇದೆ ವೇಳೆ, ಶಾಸಕರಾದ ದುರ್ಯೋಧನ ಐಹೊಳೆ, ಕೃಷ್ಣ ನಾಯಕ್ ಹಾಗೂ ಚಂದು ಲಮಾಣಿ ಅವರಿಗೆ ಬಿಜೆಪಿ ಅಭ್ಯರ್ಥಿಗಳಿಗೆ ಮೊದಲ ಪ್ರಶಸ್ತದ ಮತ ಹಾಕುವಂತೆ ನಿರ್ದೇಶನ ನೀಡಲಾಗಿತ್ತು. ಜೊತೆಗೆ, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಜೆಡಿಎಸ್ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಲಾಗಿತ್ತು.
ಆದರೆ ಮತ ಎಣಿಕೆಯ ನಂತರ ಹೊರಬಂದ ಅಂಕಿ ಅಂಶಗಳು ಬಿಜೆಪಿ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳಿಗೆ ಸೇರಿ ಸಿಗಬೇಕಿದ್ದ 60 ಮತಗಳ ಬದಲು ಕೇವಲ 56 ಮತಗಳು ಮಾತ್ರ ಲಭಿಸಿದೆ. ಇದಲ್ಲದೆ, ಒಂದು ಮತ ಅಸಿಂಧು ಆಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಹೀಗಾಗಿ, ಸೂಚಿಸಲ್ಪಟ್ಟ ಶಾಸಕರಲ್ಲಿ ಎಷ್ಟು ಮಂದಿ ನಿಜವಾಗಿಯೂ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದರು? ಎಷ್ಟು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಡ್ಡ ಮತದಾನ ಮಾಡಿದರು? ಅಥವಾ ಇನ್ನಾವುದೇ ರಾಜಕೀಯ ಲೆಕ್ಕಾಚಾರ ನಡೆಯಿತೆ? ಎಂಬ ಪ್ರಶ್ನೆಗಳು ಇದೀಗ ರಾಜ ರಾಜಕೀಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಈ ಮತಗಳ ವ್ಯತ್ಯಾಸ ಬಿಜೆಪಿ ಪಾಳಯದೊಳಗಿನ ಸಮಾಧಾನ, ಬಿನ್ನಮತ ಹಾಗೂ ನಾಯಕತ್ವದ ಹಿಡಿತದ ಬಗ್ಗೆ ಗಂಭೀರ ಚರ್ಚೆಗಳು ಎಬ್ಬಿಸಿವೆ.
ಮೇಲ್ಮನೆ ಚುನಾವಣೆಯ ಈ ಫಲಿತಾಂಶ ಕೇವಲ ಸ್ಥಾನಗಳ ಗೆಲುವು-ಸೋಲಿನ ಕಥೆಯಾಗದೆ, ಬಿಜೆಪಿ-ಜೆಡಿಎಸ್ ಮೈತ್ರಿಯ ಒಳರಾಜಕೀಯ ಮತ್ತು ಭವಿಷ್ಯದ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಬೆಳವಣಿಗೆಯಾಗಿ ಪರಿಣಮಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಅತಿ ದೊಡ್ಡ ರಾಜಕೀಯ ಆಘಾತ ಎದುರಾಗಿದೆ. ಏಳನೇ ಸ್ಥಾನದಲ್ಲಿ ಕಾಂಗ್ರೆಸ್ ಗೆ ಸವಾಲು ಹಾಕುವ ಉದ್ದೇಶದಿಂದ ಅಭ್ಯರ್ಥಿಯಾಗಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿದ ಜೆಡಿಎಸ್, ನಿರೀಕ್ಷೆಗೂ ಮೀರಿದ ಹಿನ್ನಡೆಯನ್ನು ಅನುಭವಿಸಿದೆ. 18 ಶಾಸಕರ ಸಂಖ್ಯಾಬಲ ಹೊಂದಿದ ಪಕ್ಷಕ್ಕೆ ಕೇವಲ 14 ಮತಗಳು ಮಾತ್ರ ಲಭಿಸಿದ್ದು, ಇದು ಪಕ್ಷದೊಳಗಿನ ಅಸಮಾಧಾನ ಮತ್ತು ಅಡ್ಡ ಮತದಾನದ ತೀವ್ರತೆಯನ್ನು ಬಯಲಿಗೆಳೆದಿದೆ.
ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್ ಪಾಳ್ಯದಲ್ಲಿ ಆತಂಕ ಹೆಚ್ಚಿಸಿದ್ದು, ಪಕ್ಷದ ಶಾಸಕರಲ್ಲಿ ದೊಡ್ಡ ಪ್ರಮಾಣದಲ್ಲಿ ಅಡ್ಡ ಮತದಾನ ನಡೆದಿರುವ ಸಾಧ್ಯತೆಗಳು ಮೇಲ್ನೋಟಕ್ಕೆ ಗೋಚರಿಸಿವೆ. ಒಟ್ಟು 18 ಶಾಸಕರ ಪೈಕಿ ಎಷ್ಟು ಮಂದಿ ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಮತ ಹಾಕಿಲ್ಲ ಎಂಬುದು ಸ್ಪಷ್ಟವಾಗದಿದ್ದರೂ, ಬಿಜೆಪಿ ಜೆಡಿಎಸ್ ದೋಸ್ತಿ ಶಿಬಿರದಿಂದ ಕಾಂಗ್ರೆಸ್ ಪರವಾಗಿ ಚಲಾಯಿಸಲಾದ 11 ಅಡ್ಡ ಮತಗಳಲ್ಲಿ ಗಣನೀಯ ಪರಿಣಾಮ ಜೆಡಿಎಸ್ ಶಾಸಕರದ್ದೇ ಎಂಬ ರಾಜಕೀಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.
ಈ ಬೆಳವಣಿಗೆಗೆ ಜೆಡಿಎಸ್ ನಾಯಕತ್ವಕ್ಕೆ ಗಂಭೀರ ಎಚ್ಚರಿಕೆಯ ಗಂಟೆಯಾಗಿದೆ. ತಮ್ಮದೇ ಶಾಸಕರ ವಿಶ್ವಾಸ ಮತ್ತು ನಿಷ್ಠೆಯನ್ನು ಉಳಿಸಿಕೊಳ್ಳುವಲ್ಲಿ ಪಕ್ಷ ವಿಫಲವಾಗಿದೆ ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷದೊಳಗಿನ ಭಿನ್ನಮತ, ಅಸಮಾಧಾನ ಹಾಗೂ ನಾಯಕತ್ವದ ನಿರ್ಧಾರಗಳ ಮೇಲೆ ಅಸಮಾಧಾನವೇ ಈ ಅಡ್ಡ ಮತದಾನದ ಹಿಂದಿನ ಕಾರಣವೇ ಎಂಬ ಕುತೂಹಲವು ಹೆಚ್ಚಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕತ್ವದ ರಾಜಕೀಯ ಚಾಣಾಕ್ಷತನದ ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೂಪಿಸಿದ ಸೂಕ್ಷ್ಮ ರಣತಂತ್ರ ದೋಸ್ತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗೆ ಅನಿರೀಕ್ಷಿತ ಆಘಾತ ನೀಡಿದ್ದು, ಕಾಂಗ್ರೆಸ್ ತನ್ನ ಐವರು ಅಭ್ಯರ್ಥಿಗಳನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದೆ.
ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಎಲ್ಲಾ 135 ಶಾಸಕರನ್ನು ಒಗ್ಗೂಡಿಸಿ ಮತದಾನ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಪಕ್ಷದೊಳಗಿನ ಶಿಸ್ತು ಮತ್ತು ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅದಷ್ಟೇ ಅಲ್ಲದೆ, ಪ್ರತಿಪಕ್ಷಗಳ ಶಾಸಕರಲ್ಲಿದ್ದ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಂಡು ಅವರ ಒಗ್ಗಟ್ಟಿನಲ್ಲೂ ಬಿರುಕು ಮೂಡಿಸಿರುವುದು ಕಾಂಗ್ರೆಸ್ ತಂತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಕ್ಷದ 135 ಮತಗಳ ಜೊತೆಗೆ 3 ಪಕ್ಷೇತರ ಶಾಸಕರ ಬೆಂಬಲ ದೊರೆತಿದೆ. ಇದರೊಂದಿಗೆ ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಸೇರಿದಂತೆ ದೋಸ್ತಿ ಪಕ್ಷಗಳಿಂದ ಬಂದ 11 ಅಡ್ಡ ಮತಗಳು ಕಾಂಗ್ರೆಸ್ಗೆ ಹೆಚ್ಚುವರಿ ಬಲ ನೀಡಿವೆ. ಈ ಮೂಲಕ ಕಾಂಗ್ರೆಸ್ ನ ಐವರು ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ಲಭಿಸಿರುವುದು ಚುನಾವಣೆಯ ಪ್ರಮುಖ ಹೈಲೈಟ್ ಆಗಿದೆ.
ಅಭ್ಯರ್ಥಿಗಳ ಪೈಕಿ ಬಿ.ಕೆ.ಹರಿಪ್ರಸಾದ್ 30 ಮತ್, ಪಿ.ವಿ.ಮೋಹನ್ 29 ಮತ, ಬಿ.ಎಸ್.ಶಿವಣ್ಣ 30 ಮತ, ತಿಪ್ಪಣ್ಣಪ್ಪ ಕಾಮಕನೂರು 30 ಮತ ಹಾಗೂ ವಿನಯ್ ಕಾರ್ತಿಕ್ 32 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ವಿಶೇಷವಾಗಿ, ನಿರೀಕ್ಷೆಗಿಂತ ಹೆಚ್ಚಿನ ಮತಗಳು ಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗಿರುವುದು ಪ್ರತಿಪಕ್ಷಗಳ ಮತ ಬ್ಯಾಂಕ್ ನಲ್ಲಿ ದೊಡ್ಡ ಪ್ರಮಾಣದ ಸೋರಿಕೆ ನಡೆದಿರುವುದು ಸೂಚಿಸಿದೆ.
ಪರಿಷತ್ ಚುನಾವಣೆಯಲ್ಲಿ ಫಲಿತಾಂಶಕ್ಕೆ ಅವರ ಸಂಖ್ಯೆಗಳ ಗೆಲುವಲ್ಲ; ಇದು ಕಾಂಗ್ರೆಸ್ ನ ಸಂಘಟನಾ ಶಕ್ತಿ, ನಾಯಕತ್ವದ ಹಿಡಿತ ಮತ್ತು ಡಿಕೆ ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಯ ಪ್ರದರ್ಶನವೆಂದು ವಿಸ್ತರಿಸಲಾಗುತ್ತಿದೆ. ಮತ್ತೊಂದೆಡೆ, ಬಿಜೆಪಿ-ಜೆಡಿಎಸ್ ಮೈತ್ರಿಗೆ ಇದು ಗಂಭೀರ ಎಚ್ಚರಿಕೆಯ ಸಂದೇಶವಾಗಿದ್ದು, ತಮ್ಮದೇ ಶಾಸಕರ ವಿಶ್ವಾಸ ಉಳಿಸಿಕೊಳ್ಳುವ ಸವಾಲು ಇನ್ನಷ್ಟು ದೊಡ್ಡದಾಗಿದೆ.
Also Read:
ಜೆಡಿಎಸ್ ಸೋಲಿನ ರಹಸ್ಯ ಬಿಚ್ಚಿಟ್ಟ ಕುಮಾರಸ್ವಾಮಿ? ಅಡ್ಡ ಮತದಾನದ ಬಗ್ಗೆ ಮಹತ್ವದ ಮಾತು