<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಮತ ಎಣಿಕೆ ಕೇಂದ್ರದಲ್ಲಿ ಮಮತಾ - ಸುವೆಂದು ಮುಖಾಮುಖಿ : ಎಡಪಕ್ಷಗಳು 1ಕ್ಕೆ ಕುಸಿತ, ಕಾಂಗ್ರೆಸ್ ಗೆ 2 ಸ್ಥಾನ

ಮತ ಎಣಿಕೆ ಕೇಂದ್ರದಲ್ಲಿ ಮಮತಾ - ಸುವೆಂದು ಮುಖಾಮುಖಿ : ಎಡಪಕ್ಷಗಳು 1ಕ್ಕೆ ಕುಸಿತ, ಕಾಂಗ್ರೆಸ್ ಗೆ 2 ಸ್ಥಾನ
Summary: The saffron wave is sweeping Bengal, with the BJP taking a huge lead in the counting again. Meanwhile, the Left parties are leading in only one seat, while the Congress has suffered a setback by being limited to just two seats. This has been seen as a significant change in the state's political equation.

belagavi news :

ಟಿಎಂಸಿ ಏಜೆಂಟ್ ಒಬ್ಬರನ್ನು ಬಲವಂತವಾಗಿ ಹೊರ ದಬ್ಬಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಭಬಾನಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ವಿರುದ್ಧದ ಸ್ಪರ್ಧೆಯಲ್ಲಿ ತಮ್ಮ ಮುನ್ನಡೆ ಕಳೆದ ಕೆಲವು ಸುತ್ತುಗಳಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ, ಲಾರ್ಡ್ ಸಿನ್ಹಾ ರಸ್ತೆಯಲ್ಲಿರುವ ಸಖಾವತ್ ಸ್ಮಾರಕ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಎಣಿಕೆ ಕೇಂದ್ರಕ್ಕೆ ಸಿಎಂ ಭೇಟಿ ನೀಡಿದರು.

ಟಿಎಂಸಿ ನಾಯಕರು ತಮ್ಮ ಎಣಿಕೆ ಏಜೆಂಟ್ ಗಳಲ್ಲಿ ಒಬ್ಬರನ್ನು ಕೇಂದ್ರದಿಂದ ಪರ ಡಬ್ಬಲಾಗಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಮಮತಾ ಬ್ಯಾನರ್ಜಿ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಭಬಾನಿಪುರ ವಿಧಾನಸಭಾ ಕ್ಷೇತ್ರದ ಸ್ಪರ್ಧೆ ರಾಜ್ಯದ ಅತ್ಯಂತ ಕುತೂಹಲಕರ ಅಖಾಡವಾಗಿ ಪರಿಣಮಿಸಿದ್ದು, ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ. ದಿನವಿಡೀ ಎರಡು ಅಭ್ಯರ್ಥಿಗಳ ಮುನ್ನಡೆಗಳಲ್ಲಿ ಏರಿಳಿತಗಳು ಕಂಡುಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಗಮನ ಸೆಳೆದಿದೆ.

ಒಂದು ಸ್ಥಾನಕ್ಕೆ ಕುಸಿದ ಎಡಪಕ್ಷಗಳು: ಒಂದು ಸ್ಥಾನಕ್ಕೆ ಕುಸಿದ ಎಡ ಪಕ್ಷಗಳು: ಪಶ್ಚಿಮ ಬಂಗಾಳದಲ್ಲಿ ಕೇಸರಿ ಅಲೆ ಪ್ರಬಲವಾಗುತ್ತಿದ್ದು, ಎಡಪಕ್ಷಗಳು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಮುನ್ನಡೆಯಲ್ಲಿವೆ. ಕಾಂಗ್ರೆಸ್ ಕೂಡ ಬಾರಿ ಹಿನ್ನಡೆ ಅನುಭವಿಸಿ ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಿದೆ. ಕಳೆದ ವರ್ಷ ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆಯ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾದ ಮುರ್ಷಿದಾಬಾದ್ ಜಿಲ್ಲೆಯ ರಾಣಿ ನಗರ ಮತ್ತು ಫರಕ್ಕಾ ಹಾಗೂ ಡೊಮ್ಕಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಿ.ಪಿ.ಐ ಮುನ್ನಡೆ ಸಾಧಿಸಿರುವುದು ಗಮನಾರ್ಹವಾಗಿದೆ.

Sponsored

ಈ ಚುನಾವಣೆಯಲ್ಲಿ ಎಡಪಕ್ಷವು 252 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಆಲ್ ಇಂಡಿಯಾ ಸೆಕ್ಯೂರಲ್ ಫ್ರಂಟ್ ಮತ್ತು ಸಿಪಿಐ ಲೈಬ್ರೆಶನ್ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇತ್ತ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲಾ 294 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತು. ಆದರೆ ಫಲಿತಾಂಶದಲ್ಲಿ ಗ್ರ್ಯಾಂಡ್ ಓಲ್ಡ್ ಪಕ್ಷ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷ, ಕಾಂಗ್ರೆಸ್ ಮತ್ತು ಎಐಎಸ್ಎಫ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಈ ಬಾರಿ ಚುನಾವಣಾ ಪ್ರಚಾರವನ್ನು ಎಡಪಕ್ಷವು ಇತರ ಪಕ್ಷಗಳಿಗಿಂತ ಮುಂಚಿತವಾಗಿ ಆರಂಭಿಸಿತು. ಬಿಜೆಪಿ ಮತ್ತು ಟಿಎಂಸಿ ಧಾರ್ಮಿಕ ಧ್ರುವೀಕರಣ ರಾಜಕೀಯ ನಡೆಸುತ್ತಿವೆ ಎಂದು ಸಿಪಿಐ ನಾಯಕರು ಆಗಾಗ್ಗೆ ಆರೋಪಿಸಿದ್ದಾರೆ.

ಕಳೆದ ವರ್ಷ ನವೆಂಬರ್ ನಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರೋಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಹಾಗೂ ಬಿಜೆಪಿ ರಾಜ್ಯದಲ್ಲಿ ಧಾರ್ಮಿಕ ಘರ್ಜನೆಗಳನ್ನು ಸೃಷ್ಟಿಸಿದೆ ಎಂದು ಆರೋಪಿಸಿ, ಎಡಪಕ್ಷಗಳು 20 ದಿನಗಳ ಬಂಗಾಳ ಬಚಾವೋ ಯಾತ್ರೆ ನಡೆಸಿದ್ದವು. ಇದಲ್ಲದೆ, ಅವರ ಅಭಿಮಾನಿಗಳು ಎಡಪಂಥೀಯ ಸಂಘಟನೆಗಳು ರಾಜ್ಯದ ಪ್ರಮುಖ ಸಮಸ್ಯೆಗಳಾದ ಶಾಲಾ ಉದ್ಯೋಗ ಹಗರಣ ಹಾಗೂ ಆರ್ ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ವಿರುದ್ಧವು ವ್ಯಾಪಕ ಆಂದೋಲನಗಳನ್ನು ನಡೆಸಿದ್ದವು.

ಆದರೆ ಇಷ್ಟೆಲ್ಲ ಹೋರಾಟಗಳ ನಡುವೆಯೂ ಮತದಾರರ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ದೊರಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಮತ ಪ್ರಮಾಣದ ಕೇವಲ 4.73 % ಇಳಿದಿದ್ದರೆ, ಕಾಂಗ್ರೆಸ್ ನ ಮತ ಹಂಚಿಕೆ ಕೇವಲ 2.93% ರಷ್ಟಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

Also Read:

Sponsored

ಬಾಲಿವುಡ್ ನಟಿ ಹುಮಾ ಖುರೇಷಿ ಹಸೆಮಣೆ ಏರಲು ಸಜ್ಜು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online