<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಬಾಲಿವುಡ್ ನಟಿ ಹುಮಾ ಖುರೇಷಿ ಹಸೆಮಣೆ ಏರಲು ಸಜ್ಜು

ಬಾಲಿವುಡ್ ನಟಿ ಹುಮಾ ಖುರೇಷಿ ಹಸೆಮಣೆ ಏರಲು ಸಜ್ಜು
Summary: Toxic actress Huma Qureshi is all set to tie the knot. There is a lot of curiosity about who her future husband will be, but the official information about this has not been revealed yet.

Belagavi News:

ಮನರಂಜನ ಲೋಕದಲ್ಲಿ ಪದ್ಯ ಚರ್ಚೆಗೆ ಕಾರಣವಾಗಿರುವ ಸುದ್ದಿ ಎಂದರೆ ಹುಮಾ ಖುರೇಷಿ ಅವರ ವೈಯಕ್ತಿಕ ಜೀವನ ಮತ್ತು ವೃತ್ತಿ ಬದುಕಿನ ಅಪ್ಡೇಟ್ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರುವ ನಡುವೆಯೇ ನಟಿಯ ಮದುವೆ ಸುದ್ದಿಯು ಮುನ್ನೆಲೆಗೆ ಬಂದಿದೆ.

ವರದಿಗಳ ಪ್ರಕಾರ ಹುಮಾ ಖುರೇಷಿ ತಮ್ಮ ಪ್ರಿಯತಮ ರಚಿತ್ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ಮದುವೆ ಸಂಬಂಧಿತ ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರ ಬಂದಿದ್ದು, ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹುಮಾ ಖುರೇಷಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರ ವೈಯಕ್ತಿಕ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆದರೆ ಮದುವೆ ಕುರಿತಾದ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ. ಟಾಕ್ಸಿಕ್ ಸಿನಿಮಾದ ಬಿಡುಗಡೆಯಲ್ಲೂ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ನಟಿಯ ಮುಂದಿನ ಯೋಜನೆಗಳ ಬಗ್ಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಈ ಬೆಳವಣಿಗೆ ಮನರಂಜನಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಹುಮಾ ಖುರೇಷಿ ವಯಕ್ತಿಕ ಮತ್ತು ವೃತ್ತಿ ಬದುಕಿನ ಮುಂದಿನ ಹೆಜ್ಜೆಗಳ ಬಗ್ಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಬಾಲಿವುಡ್ ನ ಖ್ಯಾತ ನಟಿ ಹುಮಾ ಖುರೇಷಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬಿಟ್ಟೌನ್ ನಲ್ಲಿ ಸಂಚಲನ ಮೂಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ತರಬೇತುದಾರ ರಚಿತ್ ಸಿಂಗ್ ಅವರೊಂದಿಗೆ ಪ್ರೀತಿಯಲ್ಲಿದ್ದ ಹುಮಾ ಈ ವರ್ಷದ ಅಂತ್ಯಕ್ಕೆ ಮದುವೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಮಾಧ್ಯಮ ವರದಿಗಳ ಪ್ರಕಾರ, ಈ ಜೋಡಿ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ತಿಂಗಳಲ್ಲಿ ಮದುವೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಇಬ್ಬರ ನಡುವೆ ದೀರ್ಘಕಾಲದ ಸಂಬಂಧ ಇದ್ದು, ಇದೀಗ ಅದನ್ನು ಅಧಿಕೃತವಾಗಿ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹುಮಾ ಖುರೇಷಿ ಇತ್ತೀಚೆಗೆ ನಟಿಸಿರುವ ಟಾಕ್ಸಿಕ್ ಸಿನಿಮಾದ ಬಿಡುಗಡೆ ನಿರೀಕ್ಷೆಯಲ್ಲಿರುವಾಗಲೇ ಅವರ ವೈಯಕ್ತಿಕ ಜೀವನದ ಈ ಮಹತ್ವದ ಬೆಳವಣಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡು ಕಡೆಗಳಿಂದಲೂ ಅವರು ಸುದ್ದಿಯಲ್ಲಿದ್ದಾರೆ.

ಮೂಲಗಳ ಪ್ರಕಾರ, ಈ ವಿವಾಹ ಸಮಾರಂಭವನ್ನು ಬಹಳ ಖಾಸಗಿಯಾಗಿ ನಡೆಸಲು ಕುಟುಂಬ ನಿರ್ಧರಿಸಿದೆ. ಕೇವಲ ಆಪ್ತ ಬಂಧುಗಳು ಮತ್ತು ಸ್ನೇಹಿತರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮದುವೆಯ ನಂತರ ಮುಂಬೈನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಶನ್ ಆಯೋಜಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.

ಈ ಸುದ್ದಿ ಹೊರ ಬಿದ್ದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಮಾ ಖುರೇಷಿ ಅವರ ಅಭಿಮಾನಿಗಳು ಶುಭಾಶಯಗಳು ಸುರಿಮಳೆಗಯುತ್ತಿದ್ದಾರೆ. ಆದರೆ ಮದುವೆಯ ಕುರಿತು ಅಧಿಕೃತ ಘೋಷಣೆಯನ್ನು ಇನ್ನು ಬಂದಿಲ್ಲ.

ಬಾಲಿವುಡ್ ನಟಿ ಹುಮಾ ಖುರೇಷಿ ಮತ್ತು ನಟನ ತರಬೇತಿದಾರ ರಚಿತ್ ಸಿಂಗ್ ನಡುವಿನ ಸಂಬಂಧ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಜೋಡಿ ತಮ್ಮ ವೈಯಕ್ತಿಕ ಸಂಬಂಧವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿರಲಿಲ್ಲವಾದರೂ, ಇತ್ತೀಚಿನ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಾರೆ ಕಾಣಿಸಿಕೊಂಡಿದ್ದು ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಅವರ ವಿವಾಹ ಸೇರಿದಂತೆ ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಕಳೆದ ವರ್ಷವೇ ಅಮೆರಿಕದಲ್ಲಿ ಇವರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳು ಹರಿದಾಡಿದ್ದರು,ಈ ಬಗ್ಗೆ ಅಧಿಕೃತ ದೃಡೀಕರಣ ಇನ್ನೂ ಬಂದಿಲ್ಲ.

ವರದಿಗಳ ಪ್ರಕಾರ, ಈ ಮೊದಲು:

ಹುಮಾ ಖುರೇಷಿ ನಿರ್ದೇಶಕ ಮುದಸರ ಅಜೀಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಆದರೆ 2022 ರಲ್ಲಿ ಇಬ್ಬರು ವಿಭಜನೆಯಾದ ಬಳಿಕ, ರಚಿತ್ ಸಿಂಗ್ ಜೊತೆ ಅವರ ಸಂಬಂಧ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಜೋಡಿ ಮದುವೆಗೆ ಸಿದ್ಧವಾಗಿದ್ದಾರೆ ಎಂಬ ಸುದ್ದಿ ಬಿಟ್ಟೌನ್ ನಲ್ಲಿ ಹರಿದಾಡುತ್ತಿದೆ.

ವೃತ್ತಿ ಜೀವನದಲ್ಲೂ ಹುಮಾ ಖುರೇಷಿ ಬ್ಯುಸಿ ಆಗಿದ್ದಾರೆ. ಅವರು ಯಶ್ ಅಭಿನಯದ ಬಹು ನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ಹುಮಾ ಎಲಿಜಬೆತ್ ಎಂಬ ಕುತೂಹಲಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ.

ಆದರೆ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿರುವ ಹಿನ್ನೆಲೆಯಲ್ಲಿ, ಅವರ ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡು ಮತ್ತು ಚರ್ಚೆಗೆ ಬಂದಿವೆ. ಮದುವೆಯ ಕುರಿತ ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲವಾದರೂ, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Also Read:

NEET - UG 2026 ಪರೀಕ್ಷೆ : ಉದ್ದನೆಯ ಪ್ರಶ್ನೆಗಳಿಂದ ವಿದ್ಯಾರ್ಥಿಗಳ ಸಂಕಷ್ಟ!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online