ಭಾರತೀಯ ಮೂಲದ ಮಮ್ದಾನಿ ನ್ಯೂಯಾರ್ಕ್ ನೂತನ ಮೇಯರ್
ನ್ಯೂಯಾರ್ಕ್ನ ನೂತನ ಮೇಯರ್ ಮಮ್ದಾನಿ ಅವರು ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹಮೂದ್ ಮಮ್ದಾನಿ ಅವರ ಪುತ್ರನಾಗಿದ್ದಾರೆ.
ನ್ಯೂಯಾರ್ಕ್:
ಮಂಗಳವಾರ ನಡೆದ ಚುನಾವಣೆಯಲ್ಲಿ ಮಮ್ದಾನಿ ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಮತ್ತು ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿದ್ದಾರೆ. ಕ್ಯುಮೊ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಚುನಾವಣೆಯ ಮುನ್ನಾ ದಿನದಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲವನ್ನು ಪಡೆದಿದ್ದರು.
ಕ್ಯುಮೊ 776,547 ಮತ ಗಳಿಸಿದರೆ, ಸ್ಲಿವಾ 137,030 ಮತಗಳನ್ನು ಪಡೆದರು. 1969ರ ನಂತರ ಮೊದಲ ಬಾರಿಗೆ ಮೇಯರ್ ಚುನಾವಣೆಯಲ್ಲಿ ಎರಡು ಮಿಲಿಯನ್ ಮತಗಳು ಚಲಾವಣೆಯಾಗಿವೆ ಎಂದು ನ್ಯೂಯಾರ್ಕ್ ಚುನಾವಣಾ ಮಂಡಳಿ ತಿಳಿಸಿದೆ. ಮ್ಯಾನ್ಹ್ಯಾಟನ್ನಲ್ಲಿ 444,439 ಚೆಕ್-ಇನ್ಗಳು, ನಂತರ ಬ್ರಾಂಕ್ಸ್ (187,399), ಬ್ರೂಕ್ಲಿನ್ (571,857), ಕ್ವೀನ್ಸ್ (421,176) ಮತ್ತು ಸ್ಟೇಟನ್ ಐಲ್ಯಾಂಡ್ (123,827) ಮತಗಳು ಚಲಾವಣೆ ಆಗಿವೆ.
ಜೋಹ್ರಾನ್ ಮಮ್ದಾನಿ ಚುನಾವಣೆ ಪ್ರಚಾರದಲ್ಲಿ ಕಾರ್ಮಿಕ ವರ್ಗದ ನ್ಯೂಯಾರ್ಕ್ ನಿವಾಸಿಗಳ ಜೀವನ ವೆಚ್ಚವನ್ನು ಕಡಿಮೆ ಮಾಡಲು ಮೇಯರ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದರು. ಯುವ ರಾಜಕಾರಣಿ ದೇಶದಲ್ಲಿ ಕಠಿಣ ಆರ್ಥಿಕ ಮತ್ತು ರಾಜಕೀಯ ವಾತಾವರಣದ ನಡುವೆ ಹೆಚ್ಚಿನ ವೆಚ್ಚಗಳು ಮತ್ತು ಉದ್ಯೋಗ ಅಭದ್ರತೆಯ ಹೊರೆಯಿಂದ ತತ್ತರಿಸುತ್ತಿರುವ ಯುವಕರು ಮತ್ತು ಕಾರ್ಮಿಕ ವರ್ಗದ ನ್ಯೂಯಾರ್ಕ್ ನಿವಾಸಿಗಳ ಬೆಂಬಲವನ್ನು ಗಳಿಸುವಲ್ಲಿ ಅವರು ಸಫಲರಾಗಿದ್ದಾರೆ.
ನ್ಯೂಯಾರ್ಕ್ನ ನೂತನ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ಅತಿದೊಡ್ಡ ನಗರದ ಚುಕ್ಕಾಣಿ ಹಿಡಿದ ಮೊದಲ ದಕ್ಷಿಣ ಏಷ್ಯಾದ ಮತ್ತು ಮುಸ್ಲಿಂ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಮ್ದಾನಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ 948,202 ಮತಗಳನ್ನು (ಶೇಕಡಾ 51.5) ಪಡೆದು ವಿಜಯಶಾಲಿಯಾಗಿದ್ದಾರೆ.
ಭಾರತೀಯ ಮೂಲದ ಮಮ್ದಾನಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹಮೂದ್ ಮಮ್ದಾನಿ ಅವರ ಪುತ್ರ. ಅವರು ಉಗಾಂಡದ ಕಂಪಾಲಾದಲ್ಲಿ ಹುಟ್ಟಿ ಬೆಳೆದ ಅವರು, 7 ವರ್ಷದವರಾಗಿದ್ದಾಗ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್ ನಗರಕ್ಕೆ ಬಂದು ನೆಲೆಸಿದರು. ಮಮ್ದಾನಿ 2018 ರಿಂದ ಯುಎಸ್ ಪ್ರಜೆಯಾದರು.
ಮಮ್ದಾನಿಯವರ ಗೆಲುವಿನೊಂದಿಗೆ, ನ್ಯೂಯಾರ್ಕ್ ನಗರ ಮತ್ತು ಅಮೆರಿಕ ಹೊಸ ರಾಜಕೀಯ ಮತ್ತು ಸೈದ್ಧಾಂತಿಕ ಯುಗವನ್ನು ಪ್ರವೇಶಿಸಿದೆ. ಈಗ ಪ್ರಜಾಪ್ರಭುತ್ವ ಸಮಾಜವಾದಿಗಳು ಬಂಡವಾಳಶಾಹಿಯ ಭದ್ರಕೋಟೆಯ ಚುಕ್ಕಾಣಿ ಹಿಡಿದಿದ್ದಾರೆ.
ಇನ್ನಷ್ಟು ಓದಿರಿ :
ಅಮೆರಿಕದಲ್ಲಿ ಸರಕು ಸೇವಾ ವಿಮಾನ ಪತನ: 7 ಮಂದಿ ಸಾವು