belagavi news :
ಕಿಲಿಯನ್ ಎಂಬಾಪೆ ಅಬ್ಬರ : ವಿಶ್ವಕಪ್ ಅಂಗಳದಲ್ಲಿ ಮೆಸ್ಸಿಯ ಹಳೆಯ ದಾಖಲೆ ಅಲುಗಾಡಿಸಿದ ಫ್ರೆಂಚ್ ಸೂಪರ್ ಸ್ಟಾರ್
ಮಿಂಚಿನ ವೇಗ, ಮಂತ್ರಮುಗ್ಧಗೊಳಿಸವ ಡ್ರಿಬ್ಲಿಂಗ್ ಕೌಶಲ್ಯ ಹಾಗೂ ಗೋಲು ಪೆಟ್ಟಿಗೆಯ ಮುಂದೆ ಎದುರಾಳಿ ರಕ್ಷಣೆಯನ್ನು ಧೂಳಿಪಟ ಮಾಡುವ ಅಪ್ರತಿಮ ಚಾಣಾಕ್ಷತೆಯೊಂದಿಗೆ ಕಿಲಿಯನ್ ಎಂಬಾಪೆ ವಿಶ್ವಕಪ್ ಅಂಗಳದಲ್ಲಿ ತನ್ನ ಪರಾಕ್ರಮವನ್ನು ಮುಂದುವರಿಸಿದ್ದಾರೆ.
ಫಿಫಾ ವಿಶ್ವಕಪ್ 2026ರಲ್ಲಿ ಫ್ರಾನ್ಸ್ ತಂಡದ ಪರವಾಗಿ ಆಡುತ್ತಿರುವ ಎಂಬಾಪೆ, ಕಳೆದ ಮೂರು ಪಂದ್ಯಗಳಲ್ಲಿ ನಾಲ್ಕು ಗೋಳುಗಳನ್ನು ಸೇರಿಸಿ ಇದೀಗ ಮತ್ತೆರಡು ಗೋಳುಗಳನ್ನು ದಾಖಲಿಸಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಅವರು 20 ವರ್ಷಗಳ ಹಳೆಯ ವಿಶ್ವ ದಾಖಲೆ ಒಂದನ್ನು ಮುರಿದಿದ್ದಾರೆ ಎಂದು ವರದಿಯಾಗಿದೆ.
ಈ ಸಾಧನೆಯ ಮೂಲಕ ಎಂಬಾಪೆ ಮತ್ತೊಮ್ಮೆ ಜಾಗತಿಕ ಪುಟ್ಬಾಲ್ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದ್ದು, ಲಿಯೋನೆಲ್ ಮೆಸ್ಸಿಯ ಹಿಂದಿನ ದಾಖಲೆಗೂ ಸ್ಪರ್ಧೆ ನೀಡುವ ಮಟ್ಟಕ್ಕೆ ತಲುಪಿದ್ದಾರೆ. ಫುಟ್ಬಾಲ್ ಅಭಿಮಾನಿಗಳ ನಡುವೆ ಈಗ ಎಂಬಾಪೆಯ ಮುಂದಿನ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ಪರ ಸೆಂಟರ್ ಫಾರ್ವರ್ಡ್ ನಲ್ಲಿ ಆಡಿದ ಎಂಬಾಪೆ ಮೊದಲಾರ್ಧದ 45ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದ್ದರು.
ಎಂಬಾಪೆ ವಿಶ್ವ ದಾಖಲೆ ಅಬ್ಬರ : ನಾಕೌಟ್ ಪಂದ್ಯದಲ್ಲಿ 10 ಗೋಳುಗಳೊಂದಿಗೆ ಇತಿಹಾಸ ನಿರ್ಮಿಸಿದ ಫ್ರೆಂಚ್ ಸೂಪರ್ ಸ್ಟಾರ್
ಸ್ವೀಡನ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ, ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಿದ್ದರು. ಪಂದ್ಯದಲ್ಲಿ ದ್ವಿತೀಯಾರ್ಧದ 74ನೇ ನಿಮಿಷದಲ್ಲಿ ಮೈಕಲ್ ಒಲಿಸೆ ನೀಡಿದ ನಿಖರ ತ್ರೂ- ಪಾಸ್ ಅನ್ನು ಗೋಳು ಬಲೆಗೆ ತಲುಪಿಸಿದ ಎಂಬಾಪೆ, ತನ್ನ ಗೋಲ್ ಖಾತೆಯನ್ನು ಮತ್ತಷ್ಟು ವಿಸ್ತರಿಸಿದರು.
ಇದಕ್ಕೂ ಮುನ್ನ53ನೇ ನಿಮಿಷದಲ್ಲಿ ಮೈಕೆಲ್ ಒಲಿಸೆ ಕೂಡ ಒಂದು ಗೋಲು ದಾಖಲಿಸಿ ಫ್ರಾನ್ಸ್ ತಂಡಕ್ಕೆ ಬಲ ನೀಡಿದ್ದರು. ಅಂತಿಮವಾಗಿ ಫ್ರಾನ್ಸ್ 3-0 ಅಂತರದಿಂದ ಸ್ವೀಡನ್ ತಂಡವನ್ನು ಮನಿಸಿ ಫ್ರೀ- ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿತು.
ಈ ಪಂದ್ಯದಲ್ಲಿ ಬಾರಿಸಿದ ಎರಡು ಗೋಳುಗಳೊಂದಿಗೆ ಕಿಲಿಯನ್ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ನಾಕೌಟ್ ಗೋಲುಗಳನ್ನು ದಾಖಲಿಸಿದ ಆಟಗಾರ ಎಂಬ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಹಿಂದೆ ಈ ದಾಖಲೆ ಬ್ರೆಜಿಲ್ ದಿಗ್ಗಜರಾದ ರೊನಾಲ್ಡೋ ನಜಾರಿಯೊ ಮತ್ತು ಲಿಯೋನಿಡಾಸ್ ಡಾ ಸಿಲ್ವಾ ಅವರ ಹೆಸರಿನಲ್ಲಿತ್ತು. ಇಬ್ಬರು ತಲಾ 8-4 ಗೋಲುಗಳನ್ನು ದಾಖಲಿಸಿ, ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಎಂಬಾಪೆ 10 ನಾಕೌಟ್ ಗೋಲುಗಳೊಂದಿಗೆ ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಫುಟ್ಬಾಲ್ ಜಗತ್ತಿನಲ್ಲಿ ಈ ಸಾಧನೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಎಂಬಾಪೆಯ ಮುಂದಿನ ಪಂದ್ಯಗಳ ಮೇಲೆ ಎಲ್ಲರ ಗಮನ ನೆಟ್ಟಿದೆ.
2018ರ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ಮೂರು ಗೋಲು ಬಾರಿಸಿದ ಎಂಬಾಪೆ, 2022ರ ವಿಶ್ವಕಪ್ ನಾಕ್ಔಟ್ ದಾಖಲಿಸಿದ್ದರು. ಇದೀಗ ಸ್ವೀಡನ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಮತ್ತೆರಡು ಗೋಲು ಬಾರಿಸಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮೆಸ್ಸಿ ದಾಖಲೆಗೆ ಸವಾಲು : ವಿಶ್ವಕಪ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಮುಟ್ಟಿದ ಎಂಬಾಪೆ
ಸ್ವೀಡನ್ ವಿರುದ್ಧದ ಪಂದ್ಯದಲ್ಲಿ ಎರಡು ಗೋಳುಗಳನ್ನು ದಾಖಲಿಸುವ ಮೂಲಕ ಕಿಲಿಯನ್ ಎಂಬಾಪೆ ತಮ್ಮ ವಿಶ್ವಕಪ್ ವೃತ್ತಿ ಜೀವನದ ಒಟ್ಟು ಗೋಲುಗಳನ್ನು18ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿ ವಿಶ್ವಕಪ್ ಸಾರ್ವಕಾಲಿಕ ಗೋಲ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಸೇರಿದ್ದಾರೆ.
ಪ್ರಸ್ತುತ 19ನೇ ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ ಅವರಿಗಿಂತ ಎಂಬಾಪೆ ಕೇವಲ ಒಂದು ಗೋಲಿನ ಅಂತರದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಟೂರ್ನಿಯಲ್ಲಿ ಮೆಸ್ಸಿಯ ದಾಖಲೆಯನ್ನು ಎಂಬಾಪೆ ಮುರಿಯುವ ಸಾಧ್ಯತೆ ಹೆಚ್ಚಾಗಿದೆ. ಎಂದು ಚರ್ಚೆ ಫುಟ್ಬಾಲ್ ವಲಯದಲ್ಲಿ ಜೋರಾಗಿದೆ.
ಮೆಸ್ಸಿ 29 ವಿಶ್ವಕಪ್ ಪಂದ್ಯಗಳಲ್ಲಿ 19 ಗೋಳುಗಳನ್ನು ದಾಖಲಿಸಿದ್ದರೆ, ಎಂಬಾಪೆ ಕೇವಲ 18 ಪಂದ್ಯಗಳಲ್ಲೇ 18 ಗೋಳುಗಳನ್ನು ಬಾರಿಸಿರುವುದು ಅವರ ದಕ್ಷತೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ಈಗಾಗಲೇ ಈ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಆರು ಗೋಳುಗಳನ್ನು ದಾಖಲಿಸಿರುವ ಎಂಬಾಪೆ, ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ.
ಈ ಪ್ರದರ್ಶನದೊಂದಿಗೆ 'ಫ್ರೆಂಚ್ ಬುಲೆಟ್' ಎಂಬ ಖ್ಯಾತಿಯ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ಹೊರಹೊಮ್ಮುವತ್ತ ದಾಪುಗಾಲಿಡುತ್ತಿದ್ದಾರೆ. ಫುಟ್ಬಾಲ್ ಅಭಿಮಾನಿಗಳು ಈಗ ಅವರ ಮುಂದಿನ ಪಂದ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ.