Belagavi news:
ರೋಮ್, ಮೇ 20: ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ' ಮೆಲೋಡಿ ಚಾಕೊಲೇಟ್ ' ಇದೀಗ ಅಂತರರಾಷ್ಟ್ರೀಯ ರಾಜತಾಂತ್ರಿಕ ಕ್ಷಣದಲ್ಲಿ ಗಮನ ಸೆಳೆದಿದೆ. ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ವಿಶೇಷವಾಗಿ ಮೆಲೋಡಿ ಚಾಕೋಲೇಟ್ ಪ್ಯಾಕ್ ಉಡುಗೊರೆಯಾಗಿ ನೀಡಿದ್ದು, ಎರಡು ದೇಶಗಳ ಸಂಬಂಧಗಳು ಇಷ್ಟೇ ಸಿಹಿಯಾಗಿರಲಿ ಎಂದು ಹಾರೈಸಿದ್ದಾರೆ.
ಭಾರತೀಯರು ಚೆನ್ನಾಗಿ ಪರಿಚಿತರಾಗಿರುವ ಈ ಚಾಕೋಲೇಟ್ ಬ್ರ್ಯಾಂಡ್ ನ ಸಿಹಿ ಕ್ಷಣ ಈಗ ರಾಜತಾಂತ್ರಿಕ ಮಟ್ಟದಲ್ಲೂ ಚರ್ಚೆಗೆ ಕಾರಣವಾಗಿದೆ. ಉಡುಗೊರೆ ಸ್ವೀಕರಿಸಿದ ನಂತರ ಪ್ರಧಾನಿ ಮೆಲೋನಿ ಅವರು ಈ ಕ್ಷಣದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.
ಭಾರತ- ಇಟಲಿ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲವಾಗುತ್ತಿರುವ ಸಂದರ್ಭದಲ್ಲಿ ನಡೆದ ಈ ಸೌಹಾರ್ದಪೂರ್ಣ ಕ್ಷಣವು ರಾಜ ತಾಂತ್ರಿಕ ಸ್ನೇಹಕ್ಕೆ ಮತ್ತೊಂದು ಸಿಹಿ ಸಂಕೇತವಾಗಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇದು ರಾಷ್ಟ್ರಗಳ ಪ್ರವಾಸದ ಐದನೇ ಹಾಗೂ ಕೊನೆಯ ಹಂತವಾಗಿ ಮಂಗಳವಾರ ಇಟಲಿಯ ಪ್ರಧಾನಿ ರೋಮ್ ಗೆ ಆಗಮಿಸಿದರು. ಈ ಭೇಟಿಯು ಭಾರತ - ಇಟಲಿ ದ್ವಿಪಕ್ಷಿಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.
ವ್ಯಾಪಾರ, ಹೂಡಿಕೆ, ರಕ್ಷಣೆ, ಶುದ್ಧ ಇಂಧನ, ನಾವೀನ್ಯತೆ , ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಉದ್ದೇಶದಿಂದ ರೂಪುಗೊಂಡಿರುವ India - Italy Joint Strategic Action 2025- 2029 ಅಡಿಯಲ್ಲಿ ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಇಟಲಿ ಭೇಟಿ ವಿಶೇಷ ಮಹತ್ವ ಪಡೆದಿದ್ದು, ದ್ವಿಪಕ್ಷಿಯ ಸಹಕಾರಕ್ಕೆ ಹೊಸ ದಿಕ್ಕು ನೀಡುವ ನಿರೀಕ್ಷೆ ವ್ಯಕ್ತವಾಗಿದೆ. ಈ ಕಾರ್ಯಕ್ರಮದ ಮೂಲಕ ಎರಡು ದೇಶಗಳ ನಡುವಿನ ಆರ್ಥಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಬಲವಾಗುವ ಸಾಧ್ಯತೆ ಇದೆ.
Also Read:
ಠೇವಣಿದಾರನೊಂದಿಗೆ ಸಿಐಡಿ ತೀವ್ರ ವಿಚಾರಣೆ: ಶಿವಾನಂದ ನೀಲಣ್ಣವರ ಪ್ರಕರಣಕ್ಕೆ ಹೊಸ ಟ್ವಿಸ್ಟ್