belagavi news :
ಮೆಸ್ಸಿ ಹ್ಯಾಟ್ರಿಕ್ ಮಿಂಚು: ಅಲ್ಜೀರಿಯಾ ವಿರುದ್ಧ ಅರ್ಜೆಂಟೀನಾಗೆ ಭರ್ಜರಿ ಗೆಲುವು.
ಅರ್ಜೆಂಟೀನಾವನ್ನು ಸತತ ಎರಡನೇ ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಕಣಕಿಳಿದ ಲಿಯೋನೆಲ್ ಮೆಸ್ಸಿ, ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಅಲ್ಜೀರಿಯಾದ ಬಲಿಷ್ಠ ರಕ್ಷಣಾ ಪಡೆಯ ನಡುವೆಯೂ ಮೆಸ್ಸಿ ತಮ್ಮ ಅಪ್ರತಿಮ ಆಟದ ಮೂಲಕ ಹ್ಯಾಟ್ರಿಕ್ ಗೋಲುಗಳನ್ನು ದಾಖಲಿಸಿದರು.
ತಮ್ಮ ಎರಡು ನೂರನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದ ಮೆಸ್ಸಿ, 17ನೇ ನಿಮಿಷದಲ್ಲೇ ಮೊದಲ ಗೋಲು ಸಿಡಿಸಿ ಅರ್ಜೆಂಟೀನಾಗೆ ಮುನ್ನಡೆ ತಂದು ಕೊಟ್ಟರು. ಮೊದಲಾರ್ಧದ ಅಂತ್ಯಕ್ಕೆ ಅರ್ಜೆಂಟೀನಾ 1-0 ಅಂತರದ ಮುನ್ನಡೆಯಲ್ಲಿತ್ತು. ಅಲ್ಜೀರಿಯಾ ಸಮಬಲ ಸಾಧಿಸಲು ಹಲವು ಪ್ರಯತ್ನ ಮಾಡಿದರು ಯಶಸ್ವಿಯಾಗಲಿಲ್ಲ.
ದ್ವಿತೀಯಾರ್ಧದಲ್ಲಿ ಮೆಸ್ಸಿಯ ಪ್ರಾಬಲ್ಯ ಮುಂದುವರೆಯಿತು. 60ನೇ ನಿಮಿಷದಲ್ಲಿ ಎರಡನೇ ಗೋಳು ಗಳಿಸಿದ ಅವರು ಪಂದ್ಯದಲ್ಲಿ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿ ಅಲ್ಜೀರಿಯಾ ರಕ್ಷಣಾಪಡೆಗೆ ದೊಡ್ಡ ಸವಾಲು ಹಾಕಿದರು. 76ನೇ ನಿಮಿಷದಲ್ಲಿ ಬಂದ ಮೂರನೇ ಗೋಲು ಅವರ ಅದ್ಭುತ ಫಾರ್ಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿತು.
ಈ ಪಂದ್ಯದಲ್ಲಿ ಮೆಸ್ಸಿ ಒಟ್ಟು 3 ಗೋಲುಗಳೊಂದಿಗೆ ಮಿಂಚಿದ್ದು, ಅರ್ಜೆಂಟೀನಾ ಅಲ್ಜಿರಿಯಾವನ್ನು 3-0 ಅಂತರದಿಂದ ಮಣಿಸಿತು. ಫಿಫಾ ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಅವರ ಪ್ರದರ್ಶನ ಅಭಿಮಾನಿಗಳಲ್ಲಿ ಬಾರಿ ಸಂಭ್ರಮ ಮೂಡಿಸಿದೆ. 38ನೇ ವಯಸ್ಸಿನಲ್ಲೂ ಮೆಸ್ಸಿಯ ಆಟದ ಶಕ್ತಿ ಕಡಿಮೆಯಾಗಿಲ್ಲ ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ದೃಢಪಡಿಸಿದೆ. ಅವರು ಈಗಾಗಲೇ ವಿಶ್ವಕಪ್ ನಲ್ಲಿ 15 ಗೋಳುಗಳ ದಾಖಲೆಯನ್ನು ತಲುಪಿದ್ದಾರೆ.
ರಿಯಾದ್ ಮಹ್ರೆಜ್ ಸೇರಿದಂತೆ ಬಲಿಷ್ಠ ತಂಡವನ್ನು ಕಣಕ್ಕಿಳಿಸಿದ ಅಲ್ಜೀರಿಯಾ, ಅರ್ಜೆಂಟೀನಾದ ರಕ್ಷಣಾತ್ಮಕ ಗೋಡೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಕ್ರಿಶ್ಚಿಯನ್ ರೊಮೆರೊ ಮತ್ತು ಲಿಸಾಂಡ್ರೊ ಮಾರ್ಟಿನೆಜ್ ನೇತೃತ್ವದ ರಕ್ಷಣಾತ್ಮಕ ವಿಭಾಗ ಅಲ್ಜೀರಿಯಾಗೆ ಯಾವುದೇ ಅವಕಾಶ ನೀಡಲಿಲ್ಲ. ಅಲ್ಜೀರಿಯಾ ಗೋಲು ಗಳಿಸಲು ಶ್ರಮಿಸಿತು, ಆದರೆ ಗೋಲ್ ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು.
ದಾಖಲೆ ಬರೆದ ಮೆಸ್ಸಿ: ವಿಶ್ವಕಪ್ ಇತಿಹಾಸದಲ್ಲಿ ಕ್ಲೋಸ್ ದಾಖಲೆಗೆ ಸಮ
ಅಲ್ಜೀರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕ ಎರಡು ಗೋಲುಗಳನ್ನು ಗಳಿಸಿದ ಲಿಯೋನೆಲ್ ಮೆಸ್ಸಿ, ನಂತರ 76ನೇ ನಿಮಿಷದಲ್ಲಿ ತಮ್ಮ ಹ್ಯಾಟ್ರಿಕ್ ಸಂಪೂರ್ಣಗೊಳಿಸಿ ಅರ್ಜೆಂಟಿನಾಗೆ ಭರ್ಜರಿ ಜಯ ತಂದು ಕೊಟ್ಟರು. ಈ ಮೂರನೇ ಗೋಲಿನೊಂದಿಗೆ ಅವರು ಪಂದ್ಯದಲ್ಲಿ ಗೆಲುವನ್ನು ಸಂಪೂರ್ಣವಾಗಿ ಖಚಿತಪಡಿಸಿದರು.
ಈ ಪಂದ್ಯದಲ್ಲಿ ದಾಖಲಿಸಿದ ಗೋಲುಗಳೊಂದಿಗೆ ಮೆಸ್ಸಿ ವಿಶ್ವಕಪ್ ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 16ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಜರ್ಮನಿಯ ದಂತಕಥೆ ಸ್ಟ್ರೈಕರ್ ಮೀರೋಸ್ಲಾವ್ ಕ್ಲೋಸ್ ಅವರ 16 ಗೋಳುಗಳ ವಿಶ್ವಕಪ್ ಸಾರ್ವ ಸರ್ವಕಾಲಿಕ ದಾಖಲೆಯನ್ನು ಸರಿಗತ್ತಿದ್ದಾರೆ.
ನಮ್ಮ ಎರಡು ನೂರನೇ ಅಂತರಾಷ್ಟ್ರೀಯ ಪಂದ್ಯದಲ್ಲೇ ಈ ಇತಿಹಾಸ ಸಾಧನೆ ಮಾಡಿದ ಮೆಸ್ಸಿ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ಪಟ್ಟಿಯಲ್ಲಿ ಕ್ಲೋಸ್ ಗೆ ಸಮವಾಗಿ ಸ್ಥಾನ ಪಡೆದಿದ್ದಾರೆ. ಈಗ ಮುಂದಿನ ಪಂದ್ಯದಲ್ಲಿ ಕ್ಲೋಸ್ ಅವರನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಲು ಮೆಸ್ಸಿ ಎದುರು ನೋಡುತ್ತಿದ್ದಾರೆ.
ದಾಖಲೆಗಳ ಮೇಲೆ ದಾಖಲೆ: ವಿಶ್ವ ಕಪ್ ನಲ್ಲಿ ಮೆಸ್ಸಿಯ ಐತಿಹಾಸಿಕ ಸಾಧನೆ
ಲಿಯೊನೆಲ್ ಮೆಸ್ಸಿ ಮತ್ತೊಂದು ಐತಿಹಾಸಿಕ ಸಾಧನೆ ಮೂಲಕ ವಿಶ್ವಕಪ್ ದಾಖಲೆಗಳ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮತ್ತಷ್ಟು ಗಟ್ಟಿಯಾಗಿ ದಾಖಲಿಸಿದ್ದಾರೆ. ವಿಶ್ವ ಕಪ್ ಇತಿಹಾಸದಲ್ಲಿ 11 ವಿಭಿನ್ನ ದೇಶಗಳ ವಿರುದ್ಧ ಗೋಲು ಗಳಿಸಿದ ಮೊದಲ ಆಟಗಾರ ಎಂಬ ವಿಶೇಷ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಇದರ ಜೊತೆಗೆ, ವಿಶ್ವ ಕಪ್ ನಲ್ಲಿ ಬಾಕ್ಸ್ ಹೊರಗಿನಿಂದ ಐದು ಗೋಳುಗಳನ್ನು ದಾಖಲಿಸಿದ ಬ್ರೆಜಿಲ್ ನ ದಂತಕಥೆ ರಿವೆಲ್ಲಿನೊ ಅವರ 60 ವರ್ಷಗಳ ಹಳೆಯ ದಾಖಲೆಯನ್ನು ಸಹ ಮೆಸ್ಸಿ ಸರಿಯಾಗಿದ್ದಾರೆ. 38ನೇ ವಯಸ್ಸಿನಲ್ಲೂ ಅವರ ವೇಗ, ತಂತ್ರ ಮತ್ತು ಚಂಡಿನ ಮೇಲಿನ ನಿಯಂತ್ರಣ ಯಾವುದೇ ಕುಗ್ಗಿಲ ಎಂಬುದನ್ನು ಈ ಪ್ರದರ್ಶನ ಸ್ಪಷ್ಟಪಡಿಸಿದೆ. ಮೆಸ್ಸಿ ಈಗ ವಿಶ್ವಕಪ್ ನಲ್ಲಿ ಅರ್ಜೆಂಟೀನಾ ಪರಗೋಲು ಗಳಿಸಿದ ಅತ್ಯಂತ ಕಿರಿಯ ಮತ್ತು ಅತ್ಯಂತ ಹಿರಿಯ ಆಟಗಾರ ಎಂಬ ಅಪೂರ್ವ ಸಾಧನೆಗೂ ಪಾತ್ರರಾಗಿದ್ದಾರೆ. ಈ ಎಲ್ಲ ದಾಖಲೆಗಳು ಅವರ ದೀರ್ಘಕಾಲಿನ ಸ್ಥಿರತೆ ಮತ್ತು ಅಪ್ರತಿಮ ಆಟದ ಮಟ್ಟವನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿವೆ.
Also Read:
ಭೀಕರ ರಸ್ತೆ ಅಪಘಾತ: ನಿಂತಿದ್ದ ಟ್ರಕ್ ಗೆ ಬಸ್ ಢಿಕ್ಕಿ, 6 ಸಾವು; 20ಕ್ಕೂ ಹೆಚ್ಚು ಜನರಿಗೆ ಗಾಯ