<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಹಿಜಾಬ್ ವಿವಾದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ

ಹಿಜಾಬ್ ವಿವಾದಕ್ಕೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ
Summary: Education Minister Madhu Bangarappa has clarified that the government's order on hijab is a step taken from the perspective of children. He said that education and religion should not be mixed to create unnecessary controversy.

Belagavi News:

ಬೆಂಗಳೂರು: ಹಿಜಾಬ್ ಅನುಮತಿ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶದ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ನಿರ್ಧಾರ ಮಕ್ಕಳ ಹಿತ ದೃಷ್ಟಿಯಿಂದ ಕೈಗೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ. ಶಿಕ್ಷಣ ಮತ್ತು ಧರ್ಮದ ವಿಚಾರವನ್ನು ರಾಜಕೀಯವಾಗಿ ಬಳಸಬಾರದು ಎಂದು ಸಂದೇಶವನ್ನು ಸಚಿವರು ನೀಡಿದ್ದಾರೆ.

ಇನ್ನೊಂದೆಡೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಬಿಜೆಪಿಯವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ. ಹಿಜಾಬ್ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಆರೋಪವನ್ನು ಅವರು ಮಾಡಿದ್ದಾರೆ .

ಹಿಜಾಬ್ ಸಂಬಂಧಿತ ಸರ್ಕಾರದ ಆದೇಶ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು ಪರ ವಿರೋಧ ಅಭಿಪ್ರಾಯಗಳು ವ್ಯಕ್ತ ವಾಗುತ್ತಿವೆ .

Sponsored

ಹಿಜಾಬ್ ಗೆ ಅನುಮತಿ ನೀಡಿರುವ ಸರ್ಕಾರದ ಆದೇಶ ಮಕ್ಕಳ ಹಿತದೃಷ್ಟಿಯಿಂದ ಕೈಗೊಂಡ ಕ್ರಮವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ ಶಿಕ್ಷಣ ಮತ್ತು ಧರ್ಮದ ವಿಚಾರಕ್ಕೆ ಅನಗತ್ಯವಾಗಿ ಕೈಹಾಕಬೇಡಿ ಎಂದು ಅವರು ತಿಳಿಸಿದ್ದಾರೆ.

ಶಾಲೆ- ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ನೀಡಿರುವ ಕುರಿತು ಪ್ರತಿಕ್ರಿಸಿದ ಸಚಿವರು, " ಬರೀ ಹಿಜಾಬ್ ಬಗ್ಗೆ ಮಾತ್ರ ಯಾಕೆ ಮಾತನಾಡ್ತೀರಾ? ಜನಿವಾರ ಕಾಣಿಸೋದಿಲ್ಲವೇ?" ಎಂದು ಪ್ರಶ್ನಿಸಿದರು. ಹಿಜಾಬ್ ವಿಚಾರವನ್ನು ಮಾತ್ರ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ನೀಟ್ ಪರೀಕ್ಷೆಯ ಸಂಬಂಧ ವಿದ್ಯಾರ್ಥಿಗಳು ಎದುರಿಸಿದ ಸಮಸ್ಯೆಗಳನ್ನು ಉಲ್ಲೇಖಿಸಿದ ಅವರು, " ಒಂದುವರೆ ಲಕ್ಷಕ್ಕೂ ಹೆಚ್ಚು ಮಕ್ಕಳು ತೊಂದರೆ ಅನುಭವಿಸಿದರು. ಕೇಂದ್ರ ಶಿಕ್ಷಣ ಸಚಿವರು ಅದಕ್ಕೆ ಉತ್ತರ ಕೊಡಬೇಕಲ್ಲವೇ?" ಎಂದು ಪ್ರಶ್ನಿಸಿದರು. ರಾಜಸ್ಥಾನ್ ಮತ್ತು ಗುಜರಾತ್ ನಲ್ಲಿ ನಡೆದ ಘಟನೆಗಳ ಬಗ್ಗೆ ಕೂಡ ಅವರು ಬಿಜೆಪಿ ವಿರೋಧ ವಾಗ್ದಾಳಿ ನಡೆಸಿದರು.

ಹಿಜಾಬ್ ಆದೇಶ ವಿರೋಧಿಸುವವರಿಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ"ನೀಟ್ ನಿಂದ 25 ಲಕ್ಷ ಮಕ್ಕಳು ತೊಂದರೆ ಅನುಭವಿಸಿದ್ದಾರೆ. ಮೊದಲು ಅವರ ಬಗ್ಗೆ ಮಾತನಾಡಲಿ" ಎಂದರು. ಕೇಂದ್ರ ವಿಶ್ವವಿದ್ಯಾಲಯಗಳು ಮತ್ತು ಇತರ ರಾಜ್ಯಗಳಲ್ಲಿಯೂ ಇಂತಹ ನಿಯಮಗಳಿವೆ ಎಂದವರು ಹೇಳಿದರು.

Sponsored

ಮುಖ್ಯಮಂತ್ರಿ ಎಲ್ಲಾ ಸಮುದಾಯಗಳನ್ನು ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದ ಸಚಿವರು, ಎಸ್ ಸಿ ಎಸ್ ಟಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚು ಪಾಸ್ ಆಗುತ್ತಿರುವುದೇ ಬಿಜೆಪಿ ಅವರಿಗೆ ಅಸಹನೀಯವಾಗಿದೆ ಎಂದು ಕಿಡಿಕಾರಿದರು.

ಇದೇ ನಾಗೇಶ್, ಸುರೇಶ್ ಕುಮಾರ್, ಕಾಗೇರಿ ಎಲ್ಲಾ ಹಾಳು ಮಾಡಿದ್ರಲ್ಲ. ಚುನಾವಣಾ ಬರವಸೆ ಮೇಲೆ ತಾನೆ ಓಟು ವೋಟು ಬರೋದು. ಪುಕ್ಸಟ್ಟೆ ವೋಟು ಬರುತ್ತಾ...? ನಾನು ಹೊರಟಗಾರರಿಗೂ ರಿಕ್ವೆಸ್ಟ್ ಮಾಡುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ದ್ವೇಷ ಮಾಡಬೇಡಿ. ಅದನ್ನು ಮೋದಿ ವಿರೋಧ ಅಂತಾನೇ ಅಂದುಕೊಳ್ಳಿ. ಹಿಂದಿನ ಸರ್ಕಾರದ ಆದೇಶವನ್ನು ವಿತ್ ಡ್ರಾ ಮಾಡುತ್ತೇವೆ. ಲೀಗಲ್ ಫೈಟ್ ಅನ್ನು ಕಾನೂನು ಇಲಾಖೆ ನೋಡುತ್ತದೆ ಎಂದು ತಿಳಿಸಿದರು.

ಜನರು ಬಿಜೆಪಿಯವರ ಬಗ್ಗೆ ಹುಷಾರಾಗಿರಬೇಕು: ಹಿಜಾಬ್ ನಿಷೇಧ ವಾಪಸ್ ಪಡೆದಿರುವ ಸರ್ಕಾರದ ನಿರ್ಧಾರವನ್ನು ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದು, ಜನರು ಬಿಜೆಪರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, " ಹಿಜಾಬ್ ಯಾವುದೇ ಹೊಸ ವಿವಾದವಲ್ಲ. ಇದು ಹಿಂದಿನಿಂದಲೂ ಇತ್ತು. ಬಿಜೆಪಿ ಸರ್ಕಾರ ಅದನ್ನು ಬ್ಯಾನ್ ಮಾಡಿತ್ತು, ನಾವು ಅದನ್ನು ತೆರವು ಮಾಡಿದ್ದೇವೆ" ಎಂದು ಹೇಳಿದರು.

Sponsored

ಒಂದು ಧರ್ಮಕ್ಕೆ ಮಾತ್ರ ಅವಕಾಶ ನೀಡಿಲ್ಲ, ಈ ತರ ಧಾರ್ಮಿಕ ಗುರುತುಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು, " ಸಣ್ಣಪುಟ್ಟ ಗೊಂದಲಗಳನ್ನು ಸರಿಪಡಿಸಿದ್ದೇವೆ" ಎಂದು ಹೇಳಿದರು. ಬಿಜೆಪಿ ನಾಯಕರು ಮುಂದಿನ ಎರಡು ವರ್ಷವೂ ಇದೇ ವಿಚಾರವನ್ನು ರಾಜಕೀಯವಾಗಿ ಬಳಸುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

"ಸರ್ಕಾರ ಹಿಂದಿನ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ. ಜನರು ಬಿಜೆಪಿಯವರ ಬಗ್ಗೆ ತುಂಬಾ ಹುಷಾರಾಗಿರಬೇಕು" ಎಂದು ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದರು. ನಮ್ಮ ಪಕ್ಷ ಜನರಿಗೆ ನೀಡಿದ ಭರವಸೆಯನ್ನು ಈಗ ಈಡೇರಿಸಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ದಾವಣಗೆರೆ ಅಥವಾ ಅಲ್ಪಸಂಖ್ಯಾತರ ವಿಚಾರಕ್ಕಾಗಿ ಮಾತ್ರ ಈ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ ಸಚಿವರು ಸರ್ಕಾರದ ಕ್ರಮವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

Also Read:

Sponsored

ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online