<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಸಚಿವ ಮುನಿಯಪ್ಪ ಹೇಳಿಕೆಯಿಂದ ಒಳ ಮೀಸಲಾತಿ ಹುದ್ದೆಗಳ ಚರ್ಚೆಗೆ ಹೊಸ ತಿರುವು

ಸಚಿವ ಮುನಿಯಪ್ಪ ಹೇಳಿಕೆಯಿಂದ ಒಳ ಮೀಸಲಾತಿ ಹುದ್ದೆಗಳ ಚರ್ಚೆಗೆ ಹೊಸ ತಿರುವು
Summary: Minister KH Muniyappa has made an important statement on the roster point issue of Palamisalati posts in Karnataka. Let's see what he had to say...

Belagavi News:

ಕರ್ನಾಟಕದಲ್ಲಿ ವಳ ಮೀಸಲಾತಿ ಹುದ್ದೆಗಳ ನೇಮಕಾತಿ ಸಂಬಂಧ ರೋಸ್ಟರ್ ಬಿಂದು ಸಮಸ್ಯೆ ಮತ್ತು ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸಚಿವ ಕೆಎಚ್ ಮುನಿಯಪ್ಪ ಪ್ರತಿಕ್ರಿಯೆ ನೀಡಿ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಮತ್ತು ಮೀಸಲಾತಿ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಒಣ ಮೀಸಲಾತಿ ಹುದ್ದೆಗಳ ಬರ್ತಿಯಲ್ಲಿ ರೋಸ್ಟರ್ ಪಾಯಿಂಟ್ ಅನುಸರಣೆ ಕುರಿತು ಹಲವು ಅಭ್ಯರ್ಥಿಗಳು ಮತ್ತು ಸಂಘಟನೆಗಳು ಗೊಂದಲ ವ್ಯಕ್ತಪಡಿಸಿದ್ದವು. ಕೆಲವು ವರ್ಗಗಳಿಗೆ ನ್ಯಾಯಯುತ ಅವಕಾಶ ಸಿಗುತ್ತಿಲ್ಲ ಎಂಬ ಆರೋಪಗಳ ನಡುವೆಯೇ ಸಚಿವರು ಸ್ಪಷ್ಟನೆ ನೀಡಿದ್ದು, ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.

ಸರ್ಕಾರ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ರೋಸ್ಟರ್ ಬಿಂದು ಸಮಸ್ಯೆ ಪರಿಹಾರಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಜೊತೆಗೆ, ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Sponsored

ಹೇಳಿಕೆಯಿಂದ ಒಳ ಮೀಸಲಾತಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಬಗ್ಗೆ ಹೊಸ ಚರ್ಚೆ ಆರಂಭವಾಗಿದ್ದು, ಸರ್ಕಾರದ ಮುಂದಿನ ನಿರ್ಧಾರಗಳತ್ತ ಅಭ್ಯರ್ಥಿಗಳು ಕಾದು ನೋಡುತ್ತಿದ್ದಾರೆ.

ಕರ್ನಾಟಕ ಸರ್ಕಾರವು ನಾಗಮೋಹನ್ ದಾಸ್ ವರದಿಯನ್ನು ಆಧರಿಸಿ ಬೆಳಮಿಸಲಾತಿ ಜಾರಿಗೆ ಸಂಬಂಧಿಸಿದಂತೆ ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ದಶಕಗಳಿಂದ ಬಾಕಿ ಉಳಿದಿದ್ದ ರೋಸ್ಟರ್ ಬಿಂದು ಸಮಸ್ಯೆಗಳು ಮತ್ತು ಗೊಂದಲಗಳಿಗೆ ಈ ಕ್ರಮ ಸ್ಪಷ್ಟ ಪರಿಹಾರ ನೀಡಲಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸುಮಾರು 40 ವರ್ಷಗಳಿಂದ ವಿವಿಧ ಸಂಘಟನೆಗಳು ಹಾಗೂ ದಲಿತರ ಸಂಘರ್ಷ ಸಮಿತಿಗಳು ನಡೆಸಿದ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಎಂದು ಹೇಳಿದ್ದಾರೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ ಎಂದು ಹೇಳಿದರು.

ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರೋಸ್ಟರ್ ಬಿಂದು ಗೊಂದಲ, ಹುದ್ದೆಗಳ ಹಂಚಿಕೆ ಹಾಗೂ ನೇಮಕಾತಿ ಪ್ರಕ್ರಿಯೆ ಕುರಿತು ಹಲವಾರು ವರ್ಷಗಳಿಂದ ಚರ್ಚೆಗಳು ನಡೆಯುತ್ತಿದ್ದು, ನಾಗಮೋಹನ್ ದಾಸ್ ಸ್ಪರ್ಧಿ ಆಧಾರಿತ ಕ್ರಮಗಳಿಂದ ಸಮಸ್ಯೆಗೆ ಅಂತಿಮ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Sponsored

ಸರ್ಕಾರದ ಈ ತೀರ್ಮಾನಕ್ಕೆ ದಲಿತ ಪರ ಸಂಘಟನೆಗಳು ಸ್ವಾಗತ ವ್ಯಕ್ತಪಡಿಸಿದ್ದು, ಸಾಮಾಜಿಕ ಸಮಾನತೆ ಮತ್ತು ನ್ಯಾಯದ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿವೆ. ಕರ್ನಾಟಕದಲ್ಲಿ ಒಳ ಮೀಸಲಾತಿ ವಿಚಾರ ಇದೀಗ ಮತ್ತೆ ರಾಜ್ಯ ರಾಜಕೀಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.

ರೋಸ್ಟರ್ ಬಿಂದು ಸಮಸ್ಯೆಗೆ ಹೊಸ ಸೂತ್ರ :

ದೀರ್ಘಕಾಲದಿಂದ ಮುಂದುವರೆದಿದ್ದ ರೋಸ್ಟರ್ ಬಿಂದು ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಹೊಸ ಸೂತ್ರವನ್ನು ಅಳವಡಿಸಿಕೊಂಡಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದವರು, ರೋಸ್ಟರ್ ವ್ಯವಸ್ಥೆಯಲ್ಲಿ 15 ಬಿಂದುಗಳ ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ 14, 8, 9 ಅಥವಾ 3 ಬಿಂದುಗಳಂತಹ ಸಂದರ್ಭಗಳಲ್ಲಿ ಕೆಲವು ಒಳ ಮೀಸಲಾತಿ ಗುಂಪುಗಳಿಗೆ ಅವಕಾಶ ಸಿಗದೇ ಗೊಂದಲ ಉಂಟಾಗುತ್ತಿತ್ತು ಎಂದು ವಿವರಿಸಿದ್ದರು.

Sponsored

ಉದಾಹರಣೆಗೆ, 15 ರೋಸ್ಟರ್ ಬಿಂದುಗಳಲ್ಲಿ 12 ಸಾಮಾನ್ಯ ವರ್ಗಕ್ಕೆ ಹೋಗಿ, ಉಳಿದ ಮೂರು ಬಿಂದುಗಳು ಎಸ್ಸಿ- ಎ,ಬಿ ಮತ್ತು ಪಿ ಗುಂಪುಗಳಿಗೆ ಹಂಚಿಕೆಯಾಗುತ್ತಿತ್ತು. ಆದರೆ 14 ಬಿಂದು ಗಳಿದ್ದಾಗ ಎ ಮತ್ತು ಬಿ ಗುಂಪುಗಳಿಗೆ ಅವಕಾಶ ಸಿಕ್ಕರು, ಸಿ ಗುಂಪಿಗೆ ಅವಕಾಶ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದೇ ಸಮಸ್ಯೆ ಹಲವು ವರ್ಷಗಳಿಂದ ದಲಿತ ಸಂಘಟನೆಗಳು ಮತ್ತು ಹೋರಾಟಗಾರರು ಉಲ್ಲೇಖಿಸುತ್ತಿದ್ದ ಪ್ರಮುಖ ಅಂಶವಾಗಿತ್ತು ಎಂದು ಹೇಳಿದರು.

ಈ ಗೊಂದಲ ನಿವಾರಣೆಗೆ ಸರ್ಕಾರ ಹೊಸ ಕ್ರಮ ಕೈಗೊಂಡಿದ್ದು, ಶೆಡ್ಯೂಲ್ಡ್ ಕಾಸ್ಟ್ ವರ್ಗದ ಅಡಿಯಲ್ಲಿ ಬರುವ ಎಲ್ಲಾ 101 ಜಾತಿಗಳಿಗೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಇದರಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಸಮಾನ ಅವಕಾಶ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಾಗಮಹಂದ ವರದಿ ಆಧಾರಿತ ಒಳ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದ್ದು, ರೋಸ್ಟರ್ ಬಿಂದು ಗೊಂದಲಗಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.

Also Read:

Sponsored

Iran oil leak : ಖಾರ್ಗ್ ದ್ವೀಪ ತೈಲ ಸೋರಿಕೆ ಜಾಗತಿಕ ಆತಂಕಕ್ಕೆ ಕಾರಣ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online