Belagavi news:
ಹೇಗ್ ನಲ್ಲಿ ಭಾರತೀಯ ವಲಸಿಗರೊಂದಿಗೆ ಮೋದಿ ಸಂವಾದ: " ಝಲ್ಮುರಿ ಇಲ್ಲಿಗೂ ತಲುಪಿದೆಯೇ?" ಎಂಬ ಆಸೆ ಭರಿತ ಪ್ರಶ್ನೆ ಗಮನಿಸಲಿಲ್ಲ ಕ್ಷಣ
ಹೇಗ್, ಮೇ 16: ಪ್ರಧಾನಿ ನರೇಂದ್ರ ಮೋದಿ ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಅವರು ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.
ಸಂವಾದದ ವೇಳೆ ಪಂಚ ರಾಜ್ಯಗಳ ಚುನಾವಣೆಯ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ನಗುತ್ತಾ " ಝಲ್ಮುರಿ ಇಲ್ಲಿಗೂ ತಳುಪಿದೇಯೇ?" ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು.
ಮೋದಿ ಅವರ ಈ ಮಾತು ಸಭೆಯಲ್ಲಿ ನಗು ಹಾಗು ಸಂಭ್ರಮವನ್ನು ಹುಟ್ಟಿಸಿದ್ದು, ಅಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಭರ್ಜರಿ ಕರತಾಡನದಿಂದ ಪ್ರತಿಕ್ರಿಯಿಸಿದರು. ಕಾರ್ಯಕ್ರಮದ ಈ ಕ್ಷಣ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಝಲ್ಮುರಿ ಎಂಬ ಹೆಸರು ಕೇಳುತ್ತಿದ್ದಂತೆಯೇ ಸಭೆಯಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಚಪ್ಪಾಳೆ ತಟ್ಟುತ್ತಾ ಉತ್ಸಾಹ ಭರಿತವಾಗಿ ಪ್ರತಿಕ್ರಿಯಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಇತ್ತೀಚಿಗೆ ವಿಧಾನಸಭಾ ಚುನಾವಣೆಯ ಮತದಾನ ಪ್ರಮಾಣದ ಕುರಿತು ಉಲ್ಲೇಖಿಸಿದರು.
ಅವರ ಮಾತನಾಡುತ್ತಾ, ಈ ಬಾರಿ ಮತದಾನ ಪ್ರಮಾಣ ಶೇ. 80 ರಿಂದ 90ರಷ್ಟು ದಾಖಲಾಗಿದ್ದು, ವಿಶೇಷವಾಗಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚು ಕಂಡು ಬಂದಿದೆ ಎಂದು ತಿಳಿಸಿದರು. ಈ ಕುರಿತು ಅವರು ಸಂತೋಷ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ಬಂಗಾಳಿ ತಿಂಡಿಯಾದ ಜ
ಝಲ್ಮುರಿಯನ್ನೂ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ವು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಟಿಎಂಸಿ ಪಕ್ಷದಿಂದ ತೀವ್ರ ಟೀಕೆಯನ್ನು ಎದುರಿಸಿತ್ತು.
ಈ ಘಟನೆ ಬಳಿಕ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲವು ಸಾಧಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಝಲ್ಮುರಿ ಹಂಚಿ ಸಂಭ್ರಮಾಚರಣೆ ನಡೆಸಿದ್ದರು. ಈ ಮೂಲಕ ಝಲ್ಮುರಿ ಒಂದು ರೀತಿಯಲ್ಲಿ ರಾಜಕೀಯ ಚರ್ಚೆಯ ಹಾಗೂ ಸಂಭ್ರಮದ ಸಂಕೇತವಾಗಿಯೂ ಗಮನ ಸೆಳೆದಿತ್ತು.
Also Read:
ಮಗುವಿಗೆ ಹಸಿವಾಗಿದೆಯೇ? ಈ ಸಂಕೇತಗಳನ್ನು ಪೋಷಕರು ತಪ್ಪದೇ ತಿಳಿದುಕೊಳ್ಳಿ