ಮೋದಿ ಅದ್ಭುತ ವ್ಯಕ್ತಿ, ನನ್ನ ಸ್ನೇಹಿತ: ಟ್ರಂಪ್
ಭಾರತದೊಂದಿಗೆ ಉತ್ತಮ ಸಂಬಂಧ ಸಾಗಿದ್ದು, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಮದು ಟ್ರಂಪ್ ತಿಳಿಸಿದ್ದಾರೆ.
ನ್ಯೂಯಾರ್ಕ್:
ಭಾರತದ ಜೊತೆಗೆ ವ್ಯಾಪಾರ ಒಪ್ಪಂದ ಹೇಗೆ ಸಾಗಿದೆ ಎಂಬ ಪ್ರಶ್ನೆಗೆ ಓವಲ್ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಟ್ರಂಪ್, ಅದು ಅದ್ಭುತ. ಉತ್ತಮವಾಗಿ ಸಾಗುತ್ತಿದೆ. ಪ್ರಧಾನಿ ಮೋದಿ ದೊಡ್ಡ ಮಟ್ಟದಲ್ಲಿ ರಷ್ಯಾದಿಂದ ತೈಲ ಆಮದನ್ನು ಸ್ಥಗಿತಗೊಳಿಸಿದ್ದಾರೆ ಎಂದರು.
ಮೋದಿ ನನ್ನ ಸ್ನೇಹಿತ, ನಾವು ಮಾತನಾಡುತ್ತೇವೆ. ಅವರಿಗೆ ನಾನು ಅಲ್ಲಿಗೆ ಹೋಗಬೇಕು ಎಂಬ ಇಚ್ಛೆ ಇದೆ. ಈ ಕುರಿತು ಚಿಂತಿಸಿ, ಹೋಗುತ್ತೇನೆ. ಅಲ್ಲಿ ಪ್ರಧಾನಿ ಮೋದಿ ಅವರ ಜೊತೆ ಉತ್ತಮ ಪ್ರವಾಸ ನಡೆಸುತ್ತೇನೆ. ಅವರು ಅದ್ಭುತ ಮನುಷ್ಯ. ನಾನು ಹೋಗುತ್ತೇನೆ ಎಂದು ತಿಳಿಸಿದರು.
ಮುಂದಿನ ವರ್ಷ ಭಾರತ ಪ್ರಯಾಣ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಸಾಧ್ಯತೆ ಇದೆ ಎಂದರು.
ಕ್ವಾಡ್ ಶೃಂಗಸಭೆ 2024ರಲ್ಲಿ ಡೆಲವೇರ್ನ ವಿಲ್ಮಿಂಗ್ಟನ್ನಲ್ಲಿ ನಡೆದಿದ್ದು, ಮುಂದಿನ ಸಭೆ ನವದೆಹಲಿಯಲ್ಲಿ ನಡೆಯಲಿದೆ. ಕ್ವಾಡ್ ಶೃಂಗಸಭೆಗೆ ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ನಾಯಕರನ್ನು ಭಾರತ ಆಹ್ವಾನಿಸಲಿದೆ. ಆದರೆ, ಈ ಶೃಂಗಸಭೆ ಯಾವಾಗ ನಡೆಯಲಿದೆ ಎಂಬ ಅಧಿಕೃತ ದಿನಾಂಕ ಪ್ರಕಟವಾಗಿಲ್ಲ.
ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ವ್ಯಾಪಾರವನ್ನು ಬಳಸಿಕೊಂಡು ನಿಲ್ಲಿಸಿದೆ ಎಂಬ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
ದೆಹಲಿ ಜೊತೆಗೆ ಉತ್ತಮ ಮಾತುಕತೆ ಸಾಗುತ್ತಿದ್ದು, ಮುಂದಿನ ವರ್ಷ ಭಾರತಕ್ಕೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈಗಾಗಲೇ ಹಲವು ಬಾರಿ ಹೇಳಿರುವಂತೆ, ಈ ರೀತಿ ಯುದ್ಧ ಮುಂದುವರೆಸಿದರೆ ನಾನು ನಿಮ್ಮೊಂದಿಗೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ ಎಂದೆ. ಇದರ ಪರಿಣಾಮಮ ಅವರು ಶಾಂತಿಗೆ ಮುಂದಾದರು ಎಂದರು.
ಯುದ್ಧ ನಿಲ್ಲಿಸಿದ ಮರುದಿನ ನನಗೆ ಕರೆ ಬಂತು. ನಾವು ಶಾಂತಿಗೆ ಮುಂದಾದೆವು ಎಂದು ಹೇಳಿದರು. ನಾನು ಧನ್ಯವಾದ, ವ್ಯಾಪಾರ ಒಪ್ಪಂದ ಮಾಡೋಣ ಎಂದೆ. ಇದು ಅದ್ಬುತವಲ್ಲವೇ? ಎಂದ ಟ್ರಂಪ್, ಸುಂಕದ ಹೊರತಾಗಿ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ಜೊತೆಗೆ ವ್ಯಾಪಾರ ಒಪ್ಪಂದದ ಕುರಿತು ನಾನು ಮಾತನಾಡಿದ್ದೆ. ಈ ಯುದ್ಧದಲ್ಲಿ ಒಟ್ಟು 7 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. 8ನೇ ವಿಮಾನಕ್ಕೆ ಹೆಚ್ಚಿನ ಹಾನಿಯಾಗಿತ್ತು. ಒಟ್ಟಾರೆ ಎಂಟು ವಿಮಾನ ಹೊಡೆದುರುಳಿಸಲಾಗಿತ್ತು ಎಂದಿರುವ ಟ್ರಂಪ್, ಉಭಯ ದೇಶಗಳ ಮಧ್ಯೆ ನಾನು ಶಾಂತಿ ಮಾತುಕತೆ ನಡೆಸಿದ್ದಾಗಿ ತಿಳಿಸಿದರು.
ಇನ್ನಷ್ಟು ಓದಿರಿ:
ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯಲ್ಲಿ ಮೋದಿ