Belagavi News :
ರಾಮ ಮಂದಿರ ದೇಣಿಗೆ ಕಳ್ಳತನ ಆರೋಪಕ್ಕೆ ಹೊಸ ತಿರುಗು ಸಿಕ್ಕಿದೆ. ರಾಮ ಮಂದಿರ ಅಯೋಧ್ಯೆಗೆ ಹಣದ ಸಂಬಂಧಿಸಿದೆ ಕಳ್ಳತನದ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ವರದಿಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಆರ್‌ಎಸ್ ಎಸ್ ಮುಖ್ಯಸ್ಥ ಮೋಹನ್ ಭಗವದ್ ಅವರ ಪ್ರತಿಕ್ರಿಯೆ ಬಗ್ಗೆ ಕುತೂಹಲ ಹೆಚ್ಚಾಗಿದೆ.
ವಿವಾದಿತ ಆರೋಪಗಳ ಪ್ರಕಾರ ರಾಮ ಮಂದಿರ ನಿರ್ಮಾಣ ಮತ್ತು ದೇಣಿಗೆ ಸಂಗ್ರಹದ ಹಣದ ಬಳಕೆ ಕುರಿತು ಪ್ರಶ್ನೆಗಳು ಎದ್ದಿವೆ. ಆದರೆ ಈ ಕುರಿತು ಅಧಿಕೃತ ತನಿಖಾ ವರದಿ ಅಥವಾ ದೃಢೀಕೃತ ಮಾಹಿತಿ ಇನ್ನು ಸಾರ್ವಜನಿಕವಾಗಿ ಸ್ಪಷ್ಟವಾಗಿಲ್ಲ.
ಮೋಹನ್ ಭಗವತ್ ಅವರ ಈ ವಿಚಾರದಲ್ಲಿ ನೇರವಾಗಿ ಏನನ್ನಾದರೂ ಹೇಳಿದರೆಂಬುದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಈಗಿನವರೆಗೆ ಲಭ್ಯವಾಗಿಲ್ಲ. ಆದ್ದರಿಂದ ಈ ವಿವಾದಕ್ಕೆ ಸಂಬಂಧಿಸಿದ ಅವರ ನಿಲುವು ಏನು ಎಂಬುದು ಸ್ಪಷ್ಟನೆ ನಿರೀಕ್ಷೆಯಲ್ಲಿದೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆಗಳು ಮುಂದುವರೆದಿದ್ದು , ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಧಿಕೃತ ಹೇಳಿಕೆ ಬಂದ ನಂತರ ಮಾತ್ರ ವಿಷಯಕ್ಕೆ ಸಂಪೂರ್ಣ ಸ್ಪಷ್ಟತೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ರಾಮ ಮಂದಿರ ದೇಣಿಗೆ ವಿವಾದದ ನಡುವೆ ಮೋಹನ್ ಭಾಗವತ್ ಪ್ರತಿಕ್ರಿಯೆ - "ರಾಮ್ - ರಾಮ್ " ಎಂದಷ್ಟೇ ಹೇಳಿ ತೆರಳಿದರು :
ರಾಮ ಮಂದಿರದ ದೇಣಿಗೆ ಹಣದಲ್ಲಿ ದುರುಪಯೋಗ ನಡೆದಿದೆ ಎಂಬ ಆರೋಪಗಳು ಮತ್ತು ಈ ವಿಚಾರದ ಸುತ್ತಲಿನ ಚರ್ಚೆಗಳ ನಡುವೆ, ಭಕ್ತಿಯನ್ನೇ ಗುರಿಯಾಗಿಸಿ ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆಯೇ? ಎಂಬ ಪ್ರಶ್ನೆಗಳು ಎದ್ದಿವೆ.
ಈ ಕುರಿತು ಪ್ರತಿಕ್ರಿಯೆ ಕೇಳಿದಾಗ ಮೋಹನ್ ಭಗವತ್ ಅವರ ನಾಗಪುರದಲ್ಲಿ ಸುದ್ದಿಗಾರರ ಮುಂದೆ ಅತ್ಯಂತ ಶುಟು ವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದದ ಬಗ್ಗೆ ಯಾವುದೇ ವಿವರವಾದ ಹೇಳಿಕೆ ನೀಡದೆ,ಅವರು ಕೇವಲ "ರಾಮ್ - ರಾಮ್ " ಎಂದು ಹೇಳಿ ಸ್ಥಳದಿಂದ ನಿರ್ಗಮಿಸಿದ್ದಾರೆ.
ಅವರ ಈ ಸಂಕ್ಷಿಪ್ತ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಕೆಲವರು ಇದನ್ನು ಭಕ್ತಿಯ ಪ್ರತೀಕವೆಂದು ವ್ಯಾಖ್ಯಾನಿಸುತ್ತಿದ್ದರೆ, ಇನ್ನೂ ಕೆಲವರು ಇದನ್ನು ವಿವಾದದಿಂದ ದೂರ ಉಳಿಯುವ ನಿಲುವು ಎಂದು ಹೇಳುತ್ತಿದ್ದಾರೆ.
ರಾಮ ಮಂದಿರ ಅಯೋಧ್ಯ ದೇಣಿಗೆ ಮತ್ತು ಅದರ ಬಳಕೆಗೆ ಸಂಬಂಧಿಸಿದ ಆರೋಪಗಳ ಕುರಿತು ಇನ್ನೂ ಅಧಿಕೃತ ಸ್ಪಷ್ಟನೆ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಅವರ ಪ್ರತಿಕ್ರಿಯೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಮ ಮಂದಿರ ದೇಣಿಗೆ ವಿವಾದ - ಆರ್ ಎಸ್ ಎಸ್ ಆಕ್ರೋಶ, ಎಸ್ಐಟಿ ತನಿಖೆಗೆ ದತ್ತಾತ್ರೇಯ ಹೊಸ ಬಾಳೆ ಒತ್ತಾಯ :
ರಾಮ ಮಂದಿರ ಡೇಣಿಗೆ ಹಣ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ದೇಶಾದ್ಯಂತ ಚರ್ಚೆ ಮುಂದುವರೆದಿದೆ. ಈ ನಡುವೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳಿ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ
ಶುಕ್ರವಾರ ಮಾತನಾಡಿದ ಅವರು, ಈ ಘಟನೆ ಕುರಿತು ಆರ್ ಎಸ್ ಎಸ್ ಅತ್ಯಂತ ತೀವ್ರ ಆಘಾತ ಮತ್ತು ಆಕ್ರೋಶಗೊಂಡಿದೆ ಎಂದು ಹೇಳಿದ್ದಾರೆ. ಪ್ರಕರಣದ ಸಂಪೂರ್ಣ ತಣಿಕೆ ನಡೆಸುತ್ತಿರುವ sit ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವಿವಾದವು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ಹೇಳಿದ ಹೊಸಬಾಳೆ, ಶ್ರೀ ರಾಮ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇದನ್ನು ಅಸಾಧಾರಣ ಪ್ರಕರಣವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಮಂದಿರದ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ತಕ್ಷಣ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
ದೇಣಿಗೆ ಬಳಕೆ ಸಂಬಂಧಿಸಿದ ಆರೋಪಗಳ ಕುರಿತು ಎಸ್ಐಟಿ ತನಿಖೆ ಮುಂದುವರೆದಿರುವ ಹಿನ್ನೆಲೆಯಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಬೆಳವಣಿಗೆಗಳ ಮೇಲೆ ದೇಶದ ಗಮನ ಕೇಂದ್ರೀಕೃತವಾಗಿದೆ.
ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ - ಎಂಟು ಮಂದಿ ಬಂಧನ, ಟ್ರಸ್ಟ್ ಸಿಬ್ಬಂದಿ ಹಾಗೂ ಆಪ್ತರ ಹೆಸರು ಬೆಳಕಿಗೆ :
ರಾಮ ಮಂದಿರ ದೇಣಿಗೆ ಹಣ ದುರುಪಯೋಗ ಆರೋಪದ ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಇದುವರೆಗೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಪ್ರಕರಣವು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.
ಬಲಿತರಲ್ಲಿ ಭಕ್ತರ ಕಾಣಿಕೆ ಹಣ ಎಣಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ 6 ಮಂದಿ ಹೊರಗುತ್ತಿಗೆ ನೌಕರರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಇವರ ವಿರುದ್ಧ ಹಣಕಾಸು ದುರುಪಯೋಗ ಮತ್ತು ಅನಿಯಮಿತ ಕ್ರಮಗಳ ಆರೋಪಗಳು ಕೇಳಿ ಬಂದಿವೆ.
ಇದೇ ಪ್ರಕರಣದಲ್ಲಿ ರಾಮ್ ಶಂಕರ್ ಯಾದವ್ ಎಂಬುವರು ಕೂಡ ಬಂಧಿತರಾಗಿದ್ದಾರೆ. ಅವರು ಚಂಪತ್ ರೈ ಅವರ ಆಪ್ತರಾಗಿದ್ದಾರೆ ಎಂದು ವರದಿಯಾಗಿದೆ.
ಬಂದಿತರಲ್ಲಿ ಅವಿನಾಶ್ ಶುಕ್ಲ ಕೂಡ ಸೇರಿದ್ದು,ತನಿಖಾಧಿಕಾರಿಗಳು ಹಣದ ಹರಿವು ಮತ್ತು ಲೆಕ್ಕಪತ್ರಗಳ ಬಗ್ಗೆ ಆಳವಾದ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿರ್ವಹಣೆಯ ಕಾರ್ಯ ವೈಖರಿ ಮತ್ತು ಹಣಕಾಸು ಪ್ರಕ್ರಿಯೆಗಳ ಕುರಿತು ಪ್ರಶ್ನೆಗಳು ಹೆಚ್ಚಾಗಿದ್ದು, ತನಿಖೆಯ ಮುಂದಿನ ಹಂತಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.