belagavi news :
ಕರ್ನಾಟಕಕ್ಕೆ ನೈರುತ್ಯ ಮುಂಗಾರು ಆಗಮನ: ದೇಶಾದ್ಯಂತ ಮಳೆಯ ಸಂಭ್ರಮ, ರೈತರಿಗೆ ವರದಾನ. ಇಡೀ ದೇಶದ ಜನರು ಕಾತುರದಿಂದ ಎದುರು ನೋಡುತ್ತಿದ್ದ ನೈರುತ್ಯ ಮುಂಗಾರು ಕೊನೆಗೂ ಕೇರಳ ಕರಾವಳಿಯನ್ನು ತಲುಪಿದೆ. ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ಘೋಷಣೆಯಂತೆ, ಜೂನ್ 4ರಂದು ಮುಂಗಾರು ದೇಶಕ್ಕೆ ಪ್ರವೇಶಿಸಿದ್ದು, ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯ ವಾತಾವರಣ ನಿರ್ಮಾಣವಾಗಿದೆ.
ಈ ಬಾರಿ ಮುಂಗಾರು ಸಾಮಾನ್ಯ ಸಮಯಕ್ಕಿಂತ ಸ್ವಲ್ಪ ತಡವಾಗಿ ಬಂದಿದ್ದರು, ಅದರ ಚಟುವಟಿಕೆಗಳು ಅತ್ಯಂತ ಬಲವಾಗಿದ್ದು, ಕೃಷಿ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಕೇರಳ, ಲಕ್ಷದ್ವೀಪ, ಮಾಹೆ, ಕರ್ನಾಟಕ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಮುಂಗಾರು ಬಿತ್ತನೆ ಕಾರ್ಯಗಳನ್ನು ಆರಂಭಿಸಲು ಅನುಕೂಲಕರ ಉಪಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕಕ್ಕೂ ಬಾರಿ ಮಳೆಯ ಮುನ್ಸೂಚನೆ:
ಮುಂಗಾರು ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆ ಸುರಿಸುವ ನಿರೀಕ್ಷೆ ಇದೆ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆಯಿದ್ದು, ತಾಪಮಾನದಲ್ಲೂ ಗಮನಾರ್ಹ ಇಳಿಕೆ ಕಂಡು ಬರಲಿದೆ.
ಎಲ್ ನಿನೋ ನಡುವೆಯೂ ಆಶಾದಾಯಕ ಮುಂಗಾರು:
ಜಾಗತಿಕ ಹವಾಮಾನ ವರದಿಗಳಲ್ಲಿ ಎಲ್ಲ ನಿನೋ ಪರಿಣಾಮಗಳು ಕಂಡುಬಂದಿದ್ದರೂ, ಧನಾತ್ಮಕ indian ocean dipole ಪರಿಸ್ಥಿತಿ ಮಳೆಯ ಪ್ರಮಾಣ ಹೆಚ್ಚಿಸಲು ಪೂರಕವಾಗಿದೆ. ಇದರ ಪರಿಣಾಮವಾಗಿ ದೇಶದ ಅನೇಕ ಭಾಗಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ.
ದೆಹಲಿ-ಎನ್ ಸಿ ಆರ್ ಸೇರಿ ಉತ್ತಮ ಭಾರತಕ್ಕೂ ನೆಮ್ಮದಿ : ದಕ್ಷಿಣ ಭಾರತದಲ್ಲಿ ಆರಂಭವಾದ ಮುಂಗಾರು ಕ್ರಮೇಣ ಉತ್ತರದತ್ತ ಚಲಿಸಿದ್ದು, ದೆಹಲಿ ಎನ್ ಸಿ ಆರ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೂ ಮಳೆಯ ತಂಪು ನೀಡಲಿದೆ. ಕಳೆದ ಕೆಲವು ವಾರಗಳಿಂದ ತೀವ್ರ ಬಿಸಿಲು ಅಥವಾ ಉಷ್ಣಾಂಶ ಏರಿಕೆಯಿಂದ ಬಳಲುತ್ತಿದ್ದ ಜನರಿಗೆ ಮುಂಗಾರು ದೊಡ್ಡ ನೆಮ್ಮದಿಯಾಗಿದೆ.
ರೈತರ ಸುವರ್ಣ ಅವಕಾಶ: ಭಾರತದ ಕೃಷಿ ವ್ಯವಸ್ಥೆ ಬಹುಪಾಲು ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಮುಂಗಾರದ ಆಗಮನ ರೈತರಿಗೆ ವರದಾನವಾಗಿದ್ದು, ಅಕ್ಕಿ, ಜೋಳ, ಸೋಯಾಬೀನ್, ಹತ್ತಿ ಸೇರಿದಂತೆ ಹಲವು ಖರೀಫ್ ಬೆಳೆಗಳ ಬಿತ್ತನೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಮಳೆಯು ಕೃಷಿ ಉತ್ಪಾದನೆ ಹೆಚ್ಚಿಸಲು ಹಾಗೂ ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ನೀರಿಕ್ಷೆ ಇದೆ
ಒಟ್ಟಾರೆ, ನೈರುತ್ಯ ಮುಂಗಾರದ ಆಗಮನ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ತಂಪಿನ ಅನುಭವ ನೀಡುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಿದೆ.
ಎಲ್ ನಿನೋ ಸವಾಲಿನ ನಡುವೆಯೂ ಮುಂಗಾರಿಗೆ ಐಓಡಿ ಬೆಂಬಲ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಉತ್ತಮ ಮಳೆ ನಿರೀಕ್ಷೆ. ಪೆಸಿಫಿಕ್ ಮಹಾಸಾಗರದಿಂದ ಎನ್ ನಿನೋ ಪ್ರಭಾವದ ಲಕ್ಷಣಗಳು ಕಂಡು ಬರುತ್ತಿದ್ದರು, ಹಿಂದೂ ಮಹಾಸಾಗರದಲ್ಲಿ ರೂಪು ಗೊಳ್ಳುತ್ತಿರುವ ದುರ್ಲಭ ಧನಾತ್ಮಕ ಐಓಡಿ ಭಾರತದ ನೈರುತ್ಯ ಮುಂಗಾರಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿದೆ. ಹವಾಮಾನ ತಜ್ಞರ ಪ್ರಕಾರ, ಈ ಬೆಳವಣಿಗೆ ದೇಶದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಲು ನೆರವಾಗುವ ಸಾಧ್ಯತೆ ಇದೆ.
ಜೂನ್ 11 ರಿಂದ 17ರವರೆಗೆ ಕರ್ನಾಟಕ, ಕೊಂಕಣಿ-ಗೋವಾ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ವಿವಿಧ ಪ್ರದೇಶಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ವಿಶೇಷವಾಗಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಉತ್ತಮ ಮಳೆಯ ನಿರೀಕ್ಷೆ ರೈತರರಲ್ಲಿ ಆಶಾವಾದ ಮೂಡಿಸಿದೆ.
ಕರ್ನಾಟಕದಲ್ಲಿ ಕೃಷಿಗೆ ಅನುಕೂಲಕರ ವಾತಾವರಣ: ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಚಟುವಟಿಕೆಗಳು ವೇಗ ಪಡೆಯುವ ಸಾಧ್ಯತೆ ಇದೆ. ನಿರಂತರ ಮಳೆಯು ಜಲಾಶಯಗಳ ನೀರಿನ ಮಟ್ಟ ಹೆಚ್ಚಿಸುವುದರ ಜೊತೆಗೆ ಮುಂಗಾರು ಬಿತ್ತನೆ ಕಾರ್ಯಗಳಿಗೆ ಅನುಕೂಲಕರ ಪರಿಸ್ಥಿತಿಯನ್ನು ನಿರ್ಮಿಸಿ ನಿರ್ಮಿಸಲಿವೆ.
ಉತ್ತರ ಭಾರತಕ್ಕೂ ಮುಂಗಾರದ ತಂಪು : ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು ಮುಂದಿನ ಹತ್ತರಿಂದ ಹದಿನೈದು ದಿನಗಳಲ್ಲಿ ಮಧ್ಯಮ ಮತ್ತು ಪೂರ್ವ ಭಾರತದತ್ತ ಸಾಗಲಿದ್ದು, ಬಳಿಕ ಉತ್ತರ ಭಾರತದ ಪ್ರದೇಶಗಳನ್ನು ತಲುಪಲಿದೆ. ಇದರ ಪರಿಣಾಮವಾಗಿ ದೀರ್ಘಕಾಲದ ಉಷ್ಣ ಅಲೆಯಿಂದ ಬಳಲುತ್ತಿದ್ದ ಜನರಿಗೆ ನೆಮ್ಮದಿ ದೊರೆಯಲಿದೆ.
ದೆಹಲಿ ಎನ್ ಸಿ ಆರ್ ನಲ್ಲಿ ತಾಪಮಾನ ಇಳಿಕೆ: ದೆಹಲಿ ಮತ್ತು ಸುತ್ತಮುತ್ತಲಿನ ಎನ್ ಸಿ ಆರ್ ಪ್ರದೇಶಗಳಲ್ಲಿ ಜೂನ್ 5 ರಂದು ತಾಪ ಎರಡು ಹಂತಗಳಲ್ಲಿ ಹಗುರ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇದೆ. ಈ ಮಳೆಯ ಪರಿಣಾಮವಾಗಿ ಕಳೆದ ಕೆಲವು ದಿನಗಳಿಂದ ದಾಖಲಾಗುತ್ತಿದ್ದ ಹೆಚ್ಚಿನ ತಾಪಮಾನದಲ್ಲಿ ಗಣನೀಯ ಇಳಿಕೆಯಾಗುವ ನಿರೀಕ್ಷೆ ಇದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಇದು ತಾತ್ಕಾಲಿಕವಾಗಿದ್ದರೂ ದೊಡ್ಡ ನೆಮ್ಮದಿಯಾಗಲಿದೆ. ರೈತರಿಗೆ ಆಶಾಕಿರಣ: ಭಾರತದ ಕೃಷಿ ಕ್ಷೇತ್ರಕ್ಕೆ ಮುಂಗಾರು ಮಳೆ ಜೀವನಾಡಿಯಂತಿದೆ . ಎಲ್ ನಿನೋ 1 ಪರಿಸ್ಥಿತಿಗಳ ನಡುವೆಯೂ ಧನಾತ್ಮಕ
ಐಓಡಿ ಪರಿಣಾಮದಿಂದn ಮನೋಭಾವನೆ ಉತ್ತಮ ಮಳೆಯ ಸಾಧ್ಯತೆ ಹೆಚ್ಚುತ್ತಿರುವುದು ಕರಿ ಹಂಗಾಮಿನ ಬೆಲೆಗಳಿಗೆ ಅನುಕೂಲಕರ ಬೆಳವಣಿಯಾಗಾಗಿದೆ. ಅಕ್ಕಿ, ಜೋಳ, ಹತ್ತಿ, ಸೋಯಾಬಿನ್ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಚಟುವಟಿಕೆಗಳು ವೇಗ ಪಡೆಯಲಿವೆ.
ಉತ್ತರ ಭಾರತದಿಂದ ದಕ್ಷಿಣದ ವರೆಗೆ ಮುಂಗಾರು ಅಬ್ಬರ: ದೇಶಾದ್ಯಂತ ತಂಪಿನ ವಾತಾವರಣ
ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿರುವ ನೈರುತ್ಯ ಮುಂಗಾರು ಹಲವು ರಾಜ್ಯಗಳಲ್ಲಿ ಮಳೆಯ ಚಟುವಟಿಕೆ ಗಳನ್ನು ಹೆಚ್ಚಿಸಿದ್ದು, ಬಿಸಿಲಿನ ತಾಪದಿಂದ ಕಂಗೆಟ್ಟ ಜನರಿಗೆ ನೆಮ್ಮದಿ ತಂದಿದೆ. ಮುಂದಿನ ಕೆಲವು ದಿನಗಳಲ್ಲಿ ಉತ್ತರ, ಮಧ್ಯ ಹಾಗೂ ಪೂರ್ವ ಭಾಗದ ಅನೇಕ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿದಿದ್ದಾರೆ.
ಉತ್ತರ ಭಾರತದ ಗುಡ್ಡಗಾಡು ರಾಜ್ಯಗಳಾದ ಜಮ್ಮು ಕಾಶ್ಮೀರ್, ಹಿಮಾಚಲ ಪ್ರದೇಶ, ಉತ್ತರಾಖಂಡಗಳಲ್ಲಿ ಗುಡುಗು, ಮಿಂಚು ಹಾಗೂ ಆಲಿಕಲ್ಲು ಸಹಿತ ಮಳೆ ಆಗುವ ಮುನ್ಸೂಚನೆ ಇದೆ. ಈ ಮಳೆಯು ಪರ್ವತ ಪ್ರದೇಶಗಳ ತಾಪಮಾನವನ್ನು ಇಳಿಸುವುದರ ಜೊತೆಗೆ ಪ್ರವಾಸಿ ತಾಣಗಳಲ್ಲಿಯೂ ತಂಪಿನ ವಾತಾವರಣವನ್ನು ಸೂಚಿಸಿದೆ.
ಇದೇ ವೇಳೆ, ಪಂಜಾಬ್, ಹರಿಯಾಣ, ರಾಜಸ್ಥಾನ್, ಪ್ರದೇಶ ಮತ್ತು ಬಿಹಾರ ರಾಜ್ಯಗಳ ಬಯಲು ಪ್ರದೇಶಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಹಲವು ದಿನಗಳಿಂದ ಉಷ್ಣ ಅಲೆಯ ಪ್ರಭಾವಕ್ಕೆ ಒಳಗಾಗಿದ್ದ ಈ ಪ್ರದೇಶಗಳಲ್ಲಿ ಮಳೆ ಯೊಂದಿಗೆ ತಾಪಮಾನದಲ್ಲಿ ಗಮನಾರ್ರ ಇಳಿಕೆ ಕಂಡುಬಂದಿರುವ ನಿರೀಕ್ಷೆ ಇದೆ.
ಇನ್ನೊಂದೆಡೆ, ಓಡಿಸಾ, ಕರಾವಳಿ ಆಂಧ್ರಪ್ರದೇಶ ಹಾಗೂ ಬಿಹಾರದ ಕೆಲವು ಭಾಗಗಳಲ್ಲಿ ಜೂನ್ 6 ರವರೆಗೆ ಸಾಧಾರಣ ತೇವಾಂಶದ ಒನ ಹವಾಮಾನ ಮುಂದುವರಿಯಬಹುದು. ಆದರೆ ಅದರ ನಂತರ ಮುಂಗಾರು ಚಟುವಟಿಕೆಗಳು ಚುರುಕುಗೊಂಡು ಈ ಪ್ರದೇಶಗಳನ್ನು ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಕೇರಳದಿಂದ ಆರಂಭವಾದ ನೈರುತ್ಯ ಮುಂಗಾರು ಈಗ ಕ್ರಮೇಣ ದೇಶದ ವಿವಿಧ ಭಾಗಗಳಿಗೆ ವ್ಯಾಪಿಸುತ್ತಿದ್ದು, ಕರಾವಳಿ ಪ್ರದೇಶಗಳಿಂದ ಹಿಡಿದು ಒಳನಾಡಿನವರೆಗೆ ಮಳೆಯ ವಿಸ್ತರಣೆ ಕಂಡುಬರುತ್ತಿದೆ. ಈ ಮಳೆಯೂ ಜಲಾಶಯಗಳ ನೀರಿನ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಲಿದೆ.
ರೈತರು ಕರಿ ಹಂಗಾಮಿನ ಬಿತ್ತನೆ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಉತ್ತಮ ಮಳೆಯ ನಿರೀಕ್ಷೆ ಕೃಷಿ ಉತ್ಪಾದನಾ ಹೆಚ್ಚಿಸುವ ವಿಶ್ವಾಸ ಮೂಡಿದೆ. ಜೊತೆಗೆ ನಗರ ಪ್ರದೇಶಗಳಲ್ಲಿ ಉಷ್ಣತೆ ಇಂದ ಬಳಲುತ್ತಿದ್ದ ಜನತೆಗೆ ತಂಪಾದ ಹವಾಮಾನ ನೆಮ್ಮದಿ ನೀಡುತ್ತಿದೆ.
Also Read:
ಟ್ರಂಪ್ ನಿಂದ ಮೋದಿ ಬಗ್ಗೆ ವಿಶೇಷ ಹೇಳಿಕೆ: "ನನ್ನ ಬೆಸ್ಟ್ ಫ್ರೆಂಡ್", ಆದರೂ ಸುಂಕದ ಕಿಡಿ