ನಾಳೆ ಆರು ಗಂಟೆಗಳ ಕಾಲ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ನಿಲ್ದಾಣ ಬಂದ್
ವಿಮಾನ ನಿಲ್ದಾಣದ ರನ್ವೇ ಕಾರ್ಯಾಚರಣೆಯ ಪರಿಶೀಲನೆ, ದುರಸ್ತಿ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ವಿಮಾನ ಹಾರಾಟ ಕಾರ್ಯಾಚರಣೆಯಲ್ಲಿ ಅಡಚಣೆಯಾಗಲಿದೆ.
ಮುಂಬೈ (ಮಹಾರಾಷ್ಟ್ರ):
ಅಂತಾರಾಷ್ಟ್ರೀಯ ವಿಮಾನಯಾನ ಮಾನದಂಡದ ನಿಯಮಗಳ ಪ್ರಕಾರ ವಿಮಾನ ನಿಲ್ದಾಣದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ವಾರ್ಷಿಕವಾಗಿ ವಿಮಾನ ನಿಲ್ದಾಣ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ಹೀಗಾಗಿ ನಾಳೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ತಿಳಿಸಿದೆ.
ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಒಂದು. ಇಲ್ಲಿ ನಿತ್ಯ 950 ವಿಮಾನಗಳನ್ನು ಕಾರ್ಯ ನಿರ್ವಹಣೆ ಮಾಡುತ್ತವೆ. ಈ ವಿಮಾನ ನಿಲ್ದಾಣ ನವೆಂಬರ್ 20 ರಂದು ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ, ಅಂದರೆ ಒಟ್ಟು 6 ಗಂಟೆಗಳ ಕಾಲ ಸಂಪೂರ್ಣವಾಗಿ ಬಂದ್ ಆಗಲಿದೆ. ವಿಮಾನ ನಿಲ್ದಾಣದ ರನ್ವೇ ದುರಸ್ತಿ ಮತ್ತು ನಿರ್ವಹಣೆ ಕಾರ್ಯದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ತಿಳಿಸಲಾಗಿದೆ.
ಪ್ರಯಾಣಿಕರ ಮೇಲೆ ಪರಿಣಾಮ:
ಈ ಕುರಿತು ಈಗಾಗಲೇ ಏರ್ಮೆನ್ಗಳಿಗೆ ಸೂಚನೆ ನೀಡಲಾಗಿರುವುದರಿಂದ ವಿಮಾನಯಾನ ಸಂಸ್ಥೆಗಳು, ನೆಲದ ನಿರ್ವಾಹಕರು ಇತ್ಯಾದಿಗಳು ತಮ್ಮ ವಿಮಾನ ವೇಳಾಪಟ್ಟಿ ಮತ್ತು ಸಿಬ್ಬಂದಿ ವ್ಯವಸ್ಥೆಗಳನ್ನು ಸಿದ್ಧಪಡಿಸಬಹುದು. ಪ್ರಯಾಣಿಕರು ತಮ್ಮ ವಿಮಾನ ನವೀಕರಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲು ಮತ್ತು ರದ್ದಾದ ವಿಮಾನಗಳು ಮತ್ತು ವಿಮಾನ ಸಮಯಗಳಲ್ಲಿನ ಬದಲಾವಣೆಗಳನ್ನು ಗಮನಿಸಲು ಸೂಚಿಸಲಾಗಿದೆ.
ಪ್ರಯಾಣಕ್ಕೆ ಮೊದಲು ವಿಮಾನಯಾನ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಗಳಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಮುಖ್ಯವಾಗಿದೆ. ಆರು ಗಂಟೆಗಳ ಕಾಲ ವಿಮಾನ ನಿಲ್ದಾಣ ಮುಚ್ಚುವುದರಿಂದ ಇದರ ಮೊದಲು ಅಥವಾ ನಂತರ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ದಟ್ಟಣೆಯಲ್ಲಿ ಹೆಚ್ಚಳವಾಗಬಹುದು.
ಮಾನ್ಸೂನ್ ಬಳಿಕದ ನಿರ್ವಹಣೆ:
ಪ್ರತಿವರ್ಷ ಮಾನ್ಸೂನ್ ಬಳಿಕ ರನ್ವೇ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತದೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪ್ರಕಾರ, ವಿಮಾನ ನಿಲ್ದಾಣದ ಎರಡೂ ರನ್ವೇಗಳನ್ನು (09/27 ಮತ್ತು 14/32) ಪರಿಶೀಲಿಸಲಾಗುತ್ತದೆ. ಮೇಲ್ಮೈ ದುರಸ್ತಿ, ಬೆಳಕು, ಗುರುತುಗಳು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ.
ಈ ನಿರ್ವಹಣೆಯ ಹಿನ್ನೆಲೆಯಲ್ಲಿ ಅನೇಕ ವಿಮಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ರದ್ದುಗೊಳಿಸಿವೆ. ಅಲ್ಲದೇ, ಕೆಲವು ವಿಮಾನಯಾನ ಸಂಸ್ಥೆಗಳು ಮುಂಬೈ ವಿಮಾನ ನಿಲ್ದಾಣದ ಬದಲಿಗೆ ಬೇರೆ ವಿಮಾನ ನಿಲ್ದಾಣದಲ್ಲಿ ತಮ್ಮ ವಿಮಾನಗಳ ಲ್ಯಾಂಡಿಂಗ್ ಮಾಡಲಿವೆ.
ಈ ವರ್ಷ ಮುಂಬೈನಲ್ಲಿ ಸುಮಾರು 400 ಮಿಮೀ ಮಳೆಯಾಗಿದೆ.
ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ರನ್ವೇ ಹಾನಿಗೊಳಗಾಗುತ್ತದೆ. ಇದರಿಂದಾಗಿ, ಅನೇಕ ಸ್ಥಳಗಳಲ್ಲಿ ರನ್ವೇಗೆ ಹಾನಿಯಾಗುವ ಸಾಧ್ಯತೆಗಳಿವೆ. ಮಳೆಗಾಲದ ನಂತರ ಪ್ರತಿ ವರ್ಷ ರನ್ವೇ ನಿರ್ವಹಣೆ ಕೈಗೊಳ್ಳುವುದು ವಾಡಿಕೆ. ಈ ಬಾರಿ ಕೆಲಸವನ್ನು ಕೆಲವು ತಿಂಗಳ ಮುಂಚಿತವಾಗಿ ಯೋಜಿಸಲಾಗಿದೆ. ರನ್ವೇಯ ದುರಸ್ತಿ ಮತ್ತು ಪರಿಶೀಲನೆಯು ರನ್ವೇಯ ಸುರಕ್ಷತೆಗೆ ಬಹಳ ಮುಖ್ಯವಾದ ಕಾರ್ಯಾವಾಗಿದೆ ಎಂದು ವಿಮಾನ ನಿಲ್ದಾಣ ಆಡಳಿತ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನಷ್ಟು ಓದಿರಿ :
ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ