BELAGAVI NEWS :
ಕನ್ನಡದ ಸಂಗೀತ ನಿರ್ದೇಶಕ ಎಸ್ ಪಿ ವೆಂಕಟೇಶ್ ನಿಧನರಾಗಿದ್ದಾರೆ. ಅವರು ಕನ್ನಡದ ಹಲವಾರು ಪ್ರಸಿದ್ಧ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ ಅವರು ಮಂಗಳವಾರ ಬೆಳಿಗ್ಗೆ ಚೆನ್ನೈನ ತಮ್ಮ ಸ್ವಗೃಹದಲ್ಲಿ ಹೃದಯಘಾತದಿಂದ ಇಹಲೋಕ ತಿಳಿಸಿದ್ದಾರೆ. ಕುಮಾರ್ ಬಂಗಾರಪ್ಪ ಅಭಿನಯದ ಅಶ್ವಮೇಧ ಚಿತ್ರದ ‘ಹೃದಯ ಸಮುದ್ರ ಕಲಕಿ’ ಹಾಡಿನ ಸಂಗೀತ ನಿರ್ದೇಶನವನ್ನು ಅವರು ಮಾಡಿದ್ದಾರೆ. ಜೊತೆಗೆ ಇನ್ನೂ ಸಂಗೀತಗಳನ್ನು ನಿರ್ದೇಶನ ಮಾಡಿದ್ದಾರೆ. ಎಸ್. ಪಿ. ವೆಂಕಟೇಶ್ ಅವರಿಗೆ 71 ವರ್ಷ ವಯಸ್ಸಾಗಿತ್ತು ಅವರು ಮಂಗಳವಾರದಂದು ನಿಧನರಾಗಿದ್ದಾರೆ.
ಈ ಸುದ್ದಿ ತಿಳಿದ ಚಿತ್ರರಂಗವು ಸಂತಾಪವನ್ನು ಸೂಚಿಸಿತು. ಅವರು ಮಲಯಾಳಂ ಬಂಗಾಲಿ, ಹಿಂದಿ, ತೆಲುಗು, ಕನ್ನಡ, ಒರಿಯ ಮುಂತಾದ ಭಾಷೆಗಳು ಸೇರಿ 180ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕ್ಯೂಂಕಿ ಗೆ ಪ್ರಮುಖ ಸಂಗೀತ ವನ್ನು ವೆಂಕಟೇಶ್ ಅವರು ನೀಡಿದ್ದಾರೆ.
ಕನ್ನಡದ ಅಶ್ವಮೇಧ ಚಿತ್ರವಲ್ಲದೆ ,ಪ್ರೇಮಯುದ್ಧ ಶರವೇಗದ ಸರದಾರ ಹೀಗೆ ಹಲವಾರು ಸಿನಿಮಾಗಳಿಗೆ ಸಂಗೀತವನ್ನು ಅವರು ನೀಡಿದ್ದಾರೆ. ಅಷ್ಟೇ ಅಲ್ಲದೆ ಅನಿಲ್ ಕಪೂರ್, ಟಬು ನಟನೆಯ 'ಥೇವರ್ ಮಗನ್' ಸಿನಿಮಾ ರೀಮೇಕ್ 'ವಿರಾಸತ್'ಗೂ ವೆಂಕಟೇಶ್ ಅವರದ್ದೇ ಸಂಗೀತ. ವೆಂಕಟೇಶ್ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಹಲವು ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಮಲಯಾಳಂನಲ್ಲಂತೂ ಹಲವಾರು ಸಿನಿಮಾಗಳಿಗೆ ವೆಂಕಟೇಶ ಅವರೇ ಸಂಗೀತ ಆಯೋಜಿಸಿದ್ದಾರೆ. ಬುಧವಾರ ಚೆನ್ನೈಯಲ್ಲಿ ವೆಂಕಟೇಶ್ ಅವರ ಅಂತ್ಯಸಂಸ್ಕಾರ ಮಾಡಲು ಕುಟುಂಬ ತೀರ್ಮಾನ ತೆಗೆದುಕೊಂಡಿದೆ.
ತಮಿಳು ಚಿತ್ರದ ಕೆಲವು ಖ್ಯಾತ ಗಾಯಕರು, ಸಂಗೀತ ಕರ್ಮಿಗಳು ಸಂತಾಪವನ್ನು ಸೂಚಿಸಿದ್ದಾರೆ. ಕೆ.ಎಸ್.ಚೈತ್ರ ಅವರು ಎಸ್ಪಿ ವೆಂಕಟೇಶ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. ತಮ್ಮXನಲ್ಲಿ ದುಃಖವನ್ನು ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ ಅವರ ನಿಧನದಿಂದ ಚಲನಚಿತ್ರ ಸಂಗೀತದ ಮಧುರ ಯುಗಕ್ಕೆ ಬಿದ್ದಂತಿದೆ ಎಂದು ಅವರು ಹೇಳಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಓಂ ಶಾಂತಿ. ನಾನು ಕೂಡ ಅವರ ಕುಟುಂಬದ ದುಃಖವನ್ನು ಹಂಚಿಕೊಳ್ಳುತ್ತೇನೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಓದಿರಿ:
Stock Market: ಭಾರತ - ಅಮೆರಿಕ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರ ಸಂಪತ್ತು ಏರಿಕೆ