<?= $pageTitle ?>
Logo
ಮುಖಪುಟ ಓದುವುದು ಕೇಳು
Business

Stock Market: ಭಾರತ - ಅಮೆರಿಕ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರ ಸಂಪತ್ತು ಏರಿಕೆ

Stock Market: ಭಾರತ - ಅಮೆರಿಕ ವ್ಯಾಪಾರ ಒಪ್ಪಂದದಿಂದ ಹೂಡಿಕೆದಾರ ಸಂಪತ್ತು ಏರಿಕೆ
Summary: ಭಾರತ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಪಾಸಿಟಿವ್ ಪರಿಣಾಮದಿಂದ ದೇಶದ ಷೇರುಪೇಟೆಯಲ್ಲಿ ಭರ್ಜರಿ ಏರಿಕೆ ಕಂಡು ಬಂದಿದೆ.
belagavi news:
ಈ ಒಪ್ಪಂದದ ಪರಿಣಾಮವಾಗಿ ಷೇರುಪೇಟೆ, ಹೂಡಿಕೆದಾರರ ಒಟ್ಟು ಸಂಪತ್ತು ₹12.10 ಲಕ್ಷ ಕೋಟಿ ಹೆಚ್ಚಳವಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳಲ್ಲಿ ಬಲವಾದ ಏರಿಕೆ ದಾಖಲಾಗಿದ್ದು, ಬ್ಯಾಂಕಿಂಗ್ ಐಟಿ ಮತ್ತು ಎಕ್ಸ್ ಫೋರ್ಟ್ ಕ್ಷೇತ್ರದ ಶೇರುಗಳಿಗೆ ಹೆಚ್ಚಿನ ಲಾಭವಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಈ ವ್ಯಾಪಾರ ಒಪ್ಪಂದವು ಆರ್ಥಿಕ ಬೆಳವಣಿಗೆ ಹೊಸ ಚೈತನ್ಯ ನೀಡುವ ಜೊತೆಗೆ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಳಪಡಿಸಿದೆ.

ಭಾರತ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ದೇಶದ ಷೇರು ಮಾರುಕಟ್ಟೆಗೆ ಭರ್ಜರಿ ಉತ್ತೇಜನ್ನು ನೀಡಿದೆ. ಈ ಮಹತ್ವದ ಒಪ್ಪಂದ ಪರಿಣಾಮವಾಗಿ ಶೇರುಪೇಟೆಯಲ್ಲಿ ಬಲವಾದ ಏರಿಕೆ ಕಂಡು ಬಂದಿದ್ದು ಹೂಡಿಕೆದಾರರು ಒಟ್ಟು ಸಂಪತ್ತು ಸುಮಾರು ₹ 12.10 ಲಕ್ಷ ಕೋಟಿ ರೂಪಾಯಿಗಳಷ್ಟು ವೃದ್ಧಿಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಜಿಗಿತ ಕಂಡಿದ್ದು, ಐಟಿ, ಬ್ಯಾಂಕಿಂಗ್ ಮತ್ತು ರಫ್ತು ಆಧಾರಿತ ಕಂಪನಿಗಳ ಷೇರುಗಳಿಗೆ ಹೆಚ್ಚಿನ ಲಾಭ ದೊರೆತಿದೆ. ಮಾರುಕಟ್ಟೆ ತಜ್ಞರ ಅಭಿಪ್ರಾಯದಂತೆ ಈ ವ್ಯಾಪಾರ ಒಪ್ಪಂದವು ಆರ್ಥಿಕ ಬೆಳವಣಿಗೆ ವೇಗ ನೀಡುವ ಜೊತೆಗೆ ಹೂಡಿಕೆದಾರರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.

ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಫಲವಾಗಿ ಭಾರತದ ಷೇರುಪೇಟೆಗಳಲ್ಲಿ ಇಂದು ತೀವ್ರ ಏರಿಕೆ ಕಂಡು ಬಂದಿದ್ದು, 30 ಶೇರುಗಳ ಬಿಎಸ್ ಇ ಸೆನ್ಸೆಕ್ಸ್ 4,205.27 ಪಾಯಿಂಟು ಅಥವಾ ಶೇಕಡಾ 5.14 ರಷ್ಟು ಏರಿಕೆಯಾಗಿ ದಿನದ ಗರಿಷ್ಠ 85, 871.73ಕ್ಕೆ ತಲುಪಿತು. ನಂತರ 2,072.67 ಪಾಯಿಂಟು ಅಥವಾ ಶೇ.2.54 ರಷ್ಟು ಏರಿಕೆಯಾಗಿ 83,739.13 ಕ್ಕೆ ವ್ಯಾಪಾರ ಕೊನೆಗೊಳಿಸಿತು. ಇದರೊಂದಿಗೆ ಬಿಎಸ್ ಇ ಎಲ್ಲಿ ಪಟ್ಟಿ ಮಾಡಲಾರದ ಕಂಪನಿಗಳ ಮಾರುಕಟ್ಟೆ ಬಂಡವಾಳ 12,10,877.45 ಕೋಟಿ ರೂ. ಗಳಷ್ಟು ಹೆಚ್ಚಾಗಿ 4,67,14,754.77 ಕೋಟಿ ರೂ. ಗಳಿಗೆ ಅಂದರೆ 5.16 ಟ್ರಿಲಿಯನ್ ಯು ಎಸ್ ಡಾಲರ್ ಗೆ ತಲುಪಿತು.

ಷೇರು ಮಾರುಕಟ್ಟೆ ತಜ್ಞರು ಏನಂದ್ರು?
ಭಾರತ ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಷೇರು ಮಾರುಕಟ್ಟೆ ತಜ್ಞರ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಿತ್ಯ ಬಿರ್ಲಾ ಸನ್ ಲೈಫ್ ಎ ಎಂ ಸಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ. ಬಾಲಸುಬ್ರಮಣಿ ಯನ್ ಅವರ ಪ್ರಕಾರ ಈ ವ್ಯಾಪಾರ ಒಪ್ಪಂದವು ಭಾರತೀಯ ಷೇರು ಮಾರುಕಟ್ಟೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಬಂಡವಾಳ ಹರಿವು ರೂಪಾಯಿ ಮೌಲ್ಯ ಹಾಗೂ ಉತ್ಪಾದನಾ ಹೂಡಿಕೆಗಳಲ್ಲಿ ಗಣನೀಯ ಸುಧಾರಣಿ ಕಾಣುವ ನಿರೀಕ್ಷೆ ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ಜಿಯೋ ಜಿತ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಅವರು, ಭಾರತೀಯ ಷೇರುಗಳು ಇಂದು ಗಮನಾರ್ಹ ಜಿಗಿತ ಕಂಡಿವೆ ಎಂದು ತಿಳಿಸಿದ್ದಾರೆ. ರೂಪಾಯಿ ಮೌಲ್ಯಕ್ಕೆ ಬಲ ದೊರೆತಿದ್ದು, ವಿದೇಶಿ ಹೂಡಿಕೆದಾರರು (FII) ಒಳಹರಿವಿನ ನಿರೀಕ್ಷೆಗಳು ಹೆಚ್ಚಾಗಿವೆ. ಅಮೇರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50 ರಿಂದ ಶೇ.18ಕ್ಕೆ ಇಳಿಸಿರುವುದರಿಂದ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಲಿದೆ. ಕೇಂದ್ರ ಬಜೆಟ್ ಬೆಂಬಲಿತ ಜವಳಿ, ಜಲಚರ ಸಾಕಣೆ, ರತ್ನ ಬರನ ಮತ್ತು ಔಷಧೀಯ ಉತ್ಪನ್ನಗಳಂತಹ ರಫ್ತು ಆಧಾರಿತ ವಲಯಗಳಿಗೆ ಇದು ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ಸಂಶೋಧನಾ ಮತ್ತು ಸಂಪತ್ತು ನಿರ್ವಹಣೆಯ ಮುಖ್ಯಸ್ಥ ಸಿದ್ದಾರ್ಥ್ ಖೇಮ್ಕಾ ಮಾತನಾಡಿ ವ್ಯಾಪಾರ ಒಪ್ಪಂದ ಘೋಷಣೆಯಾದ ನಂತರ ಭಾರತೀಯ ಶೇರುಗಳು ಒಂದೇ ದಿನದಲ್ಲಿ ಅತಿ ದೊಡ್ಡ ಲಾಭ ಗಳಿಸಿವೆ ಎಂದು ಹೇಳಿದ್ದಾರೆ.

2025 ರ ಏಪ್ರಿಲ್ ನಿಂದ ಮಾರುಕಟ್ಟೆಗಳ ಮೇಲೆ ಹೊರೆಯಾಗಿದ್ದ ಸುಂಕ ಸಂಬಂಧಿ ಆತಂಕಗಳು ಈ ಬೆಳವಣಿಗೆಯಿಂದ ತೆಗ್ಗಿವೆ ಆಟೋಮೊಬೈಲ್ ರಕ್ಷಣೆ ಜವಳಿ ಇಎಂಎಸ್, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಐಟಿ ಸೇವೆಗಳು ಮತ್ತು ಉಪಯುಕ್ತ ಸರಕುಗಳ ವಲಯಗಳು ಈ ಒಪ್ಪಂದದ ಪ್ರಮುಖ ಪಲಾನುಭವಿಗಳಾಗಿವೆ.

ಯಾರಿಗೆಲ್ಲಾ ಲಾಭ?
ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಅದಾನಿ ಪೋರ್ಟ್ಸ್ ಶೇ 9.12ರಷ್ಟು ಏರಿಕೆ ಕಂಡಿತು.
ವ್ಯಾಪಾರ ಒಪ್ಪಂದವು ಜವಳಿ, ಚರ್ಮ, ರತ್ನ ಮತ್ತು ಆಭರಣಗಳು, ಆಟೋ, ಸಮುದ್ರಾಹಾರ ರಫ್ತು ಮತ್ತು ವಿಶೇಷ ರಾಸಾಯನಿಕ ಪದಾರ್ಥಗಳ ಷೇರುಗಳ ಮೇಲೆ ಏರಿಕೆಗೂ ಕಾರಣವಾಗಿತ್ತು.
ಉಳಿದಂತೆ, ಬಜಾಜ್ ಫೈನಾನ್ಸ್, ಇಂಟರ್ ಗ್ಲೋಬ್ ಏವಿಯೇಷನ್, ಪವರ್ ಗ್ರೀಡ್, ಸನ್ ಪಾರ್ಮಾ, ಬಜಾಜ್ ಫಿನ್ ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಗಳ ಶೇರುಗಳು ಗಳಿಕೆ ಕಂಡವು. ಬ್ಲೂ ಚಿಪ್ ಕಂಪನಿಗಳಾದ ಟೆಕ್ ಮಹೀಂದ್ರಾ ಮತ್ತು ಭಾರತ ಎಲೆಕ್ಟ್ರಾನಿಕ್ಸ್ ಮಾತ್ರ ಹಿಂದುಳಿಯಿತು.

ವಲಯವಾರು ವಿವರ :
ಷೇರು ಸೂಚ್ಯಂಕಗಳಲ್ಲಿ, ಸೇವೆಗಳು ಶೆ.4.86 ರಷ್ಟು ಜಿಗಿದವು. ನಂತರದಲ್ಲಿ ರಿಯಾಲ್ಟಿ (ಶೇ.4.79), ವಿದ್ಯುತ್( ಶೇ.4.79), ಬಂಡವಾಳ ಸರಕುಗಳು ( ಶೇ.3.71), ಕೈಗಾರಿಕೆಗಳು ( ಶೇ.3.44), ಗ್ರಾಹಕ ವಿವೇಚನೆ ( ಶೇ.3.06), ಲೋಹ (ಶೇ.2.85), ಆರೋಗ್ಯ ರಕ್ಷಣೆ (ಶೇ.2.83) ಮತ್ತು ಹಣಕಾಸು ಸೇವೆಗಳು ( ಶೇ.2.83) ಏರಿವೆ.


ಇನ್ನಷ್ಟು ಓದಿರಿ:
ಇಂದು ಸುಪ್ರೀಂ ಕೋರ್ಟ್ನಲ್ಲಿ ಸ್ವತ: ವಾದ ಮಂಡಿಸಿದ ಮಮತಾ ಬ್ಯಾನರ್ಜಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online