<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಹೃದಯಾ ಸಿನಿಮಾಗೆ ಎಂಟ್ರಿ ಕೊಟ್ಟ ನವೀನ್ ಶಂಕರ್

ಹೃದಯಾ ಸಿನಿಮಾಗೆ ಎಂಟ್ರಿ ಕೊಟ್ಟ ನವೀನ್ ಶಂಕರ್
Summary: 20 ವರ್ಷಗಳ ಹಿಂದಿನ ಕಾಲೇಜ್ ಪ್ರೇಮ ಕಥೆಯನ್ನು ಆಧಾರವಾಗಿಸಿಕೊಂಡು ಮೂಡಿ ಬರುತ್ತಿರುವ "ಹೃದಯಾ" ಸಿನಿಮಾ ಇದೀಗ ಸಿನಿಮಾ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

Belagavi news:

ಮೂರು ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯಗಳಿಂದ ಪ್ರೇಕ್ಷಕರ ಮನ ಗೆದ್ದ ಪೃಥ್ವಿ ಶಾಮನೂರು ಇದೀಗ ತಮ್ಮ 4ನೇ ಚಿತ್ರ "ಹೃದಯಾ" ಬಣ್ಣ ಹಚ್ಚುವ ಮೂಲಕ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಹೊಸ ಕಥೆ ವಿಭಿನ್ನ ಪಾತ್ರ ಮತ್ತು ಭಾವನಾತ್ಮಕ ನಿರೂಪಣೆಯೊಂದಿಗೆ 'ಹೃದಯಾ' ಚಿತ್ರವು ಅವರ ಸಿನಿಮಾ ಪಯಣದಲ್ಲಿ ಮತ್ತೊಮ್ಮೆ ಮಹತ್ವದ ಹೆಜ್ಜೆಯಾಗಲಿದೆ ಎಂಬ ನಿರೀಕ್ಷೆ ಮೂಡಿ ಬಂದಿದೆ.

ಉಡಾಳ ಚಿತ್ರದಿಂದ ಪ್ರಸಿದ್ಧಿಯನ್ನು ಪಡೆದಿರುವ ನಟ ಪೃಥ್ವಿ ಶಾಮನೂರು ಇದೀಗ ಮತ್ತೊಂದು ಹೊಸ ಚಿತ್ರವನ್ನು ಪರದೆಯ ಮೇಲೆ ತರುವ ಸಿದ್ಧತೆಯಲ್ಲಿದ್ದಾರೆ. ಇದೀಗ ಮತ್ತೊಂದು ಸುಂದರವಾದ ಲವ್ ಸ್ಟೋರಿಯೊಂದಿಗೆ ಬೆಳ್ಳಿಯ ತೆರೆಯ ಮೇಲೆ ಮಿಂಚಲು ಸಿದ್ಧತೆಯನ್ನು ನಡೆಸಿಕೊಂಡಿದ್ದಾರೆ ಅದೇ ಚಿತ್ರದ ಹೆಸರು 'ಹೃದಯಾ' ಇದೊಂದು ಒಳ್ಳೆಯಲ್ ಪ್ರೇಮಕಥೆಯಾಗಿದ್ದು ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ರಜತ್ ಸೂರ್ಯವಂಶಿ ಈ ಚಿತ್ರದ ಸಾರಥ್ಯವಹಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂರು ಚಿತ್ರಗಳನ್ನು ಸಂಪೂರ್ಣವಾಗಿ ಎತ್ತರಕ್ಕೆ ಏರಿಸಿ ಇದೀಗ ನಾಲ್ಕನೇ ಚಿತ್ರಕ್ಕೆ ಕಾಲಿಟ್ಟಂತಹ ಪೃಥ್ವಿ ಶಾಮನೂರು ಒಂದು ಒಳ್ಳೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದ್ದು ಚಿತ್ರದ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ದಾರೆ.

Sponsored

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಇವರು ಸಹ ಚಿತ್ರಕ್ಕೆ ಶುಭ ಹಾರೈಕೆಯನ್ನು ನೀಡಿದ್ದಾರೆ. ಸಮಾರಂಭಕ್ಕೆ ನೆರವೇರಿಸಿದಂತಹ ಎಲ್ಲ ಗಣ್ಯಮಾನ್ಯರು ಕೂಡ ಈ ಒಂದು ಚಿತ್ರಕ್ಕೆ ಶುಭ ಹಾರೈಸುವ ಮೂಲಕ ತಮ್ಮ ಅನಿಸಿಕೆಗಳನ್ನು ತೋರಿದ್ದಾರೆ.

"ಹೃದಯಾ" ಚಿತ್ರದ ನಾಯಕ ನಟನಾಗಿರುವ ಪೃಥ್ವಿ ಶಾಮನೂರು ಮಾತನಾಡಿ ಪದವಿ ಪೂರ್ವದಿಂದ ಆರಂಭಿಸಿ ಇದು ನಾನು ನಟಿಸುತ್ತಿರುವ ನಾಲ್ಕನೇ ಚಿತ್ರ ಎಂದು ಹೇಳಿದ್ದಾರೆ. ಜೊತೆಗೆ ಅದೊಂದು ಟೀನೇಜ್ ಲವ್ ಸ್ಟೋರಿ ಆಗಿದ್ದು,ಇದು 2006ರಲ್ಲಿ ನಡೆಯುವ ಅಪ್ಪಟ ಪ್ರೇಮಕಥೆ.ಜೊತೆಗೆ ಸ್ಟೋರಿ ತುಂಬಾ ಚೆನ್ನಾಗಿದೆ ಒಬ್ಬ ಕಾಲೇಜ್ ಹುಡುಗನಾಗಿ ನಾನು ಈ ಚಿತ್ರದಲ್ಲಿ ನಡೆಸುತ್ತಿದ್ದೇನೆ ಎಂದು ಹೃದಯಪೂರ್ವಕವಾಗಿ ಹೇಳಿದ್ದಾರೆ.

ನಂತರ ನಾಯಕಿಯಾಗಿ ನಡೆಸುತ್ತಿರುವಂತಹ ಆರಾಧನ ಭಟ್ ಅವರು ಈ ಚಿತ್ರದ ಬಗ್ಗೆ ಮಾತನಾಡಿ, ಕಿರುತೆರೆ ಮಹಾನಟಿಯಲ್ಲಿರಿ ಭಾಗವಹಿಸಿದ್ದೆ ನಂತರ ಇದು ನನ್ನ ಎರಡನೇ ಚಿತ್ರ ಎಂದು ಅವರು ಹೇಳಿಕೊಂಡಿದ್ದಾರೆ.ಹಾಗೆ ಕಥೆ ಕೇಳಿ ತುಂಬಾ ಖುಷಿಯಾಯಿತು ಎಂದು ಹೇಳುತ್ತಾ ನನ್ನದು ಕಾಲೇಜ್ ಹುಡುಗಿಯ ಪಾತ್ರ 3 ಶೇಡ್ಸ್ ಇದೆ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಚಿತ್ರದ ನಿರ್ಮಾಪಕಿ ಎಂದು ಪ್ರಸಿದ್ಧಿಯಾದ ಶ್ರೀದೇವಿ ಎಂ ಕೆ ಮಾತನಾಡಿದರು.ನಿರ್ದೇಶಕರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ ಹಾಗೆ ನಾವು ಈ ಚಿತ್ರ ಕಥೆ ನಿರ್ಮಾಣಕ್ಕೆ ಮುಂದಾಗಿ ಎಂದು ಸಂತೋಷದಿಂದ ಹೇಳಿದರು. ಮಾರ್ಚ್ ತಿಂಗಳಿಂದ ಬೆಂಗಳೂರು , ಮೈಸೂರು ಮಂಗಳೂರು,ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು ಚಿತ್ರದಲ್ಲಿ ಐದು ಹಾಡುಗಳಿದ್ದು ಮ್ಯೂಸಿಕ್ ಮಾಡುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಜೊತೆಗೆ ಪ್ರಣಿತ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಶ್ರೀದೇವಿ ಎಲ್.ಕೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಸಾಗರ್ ಅವರ ಛಾಯಾಗ್ರಹಣ, ರಜತ್ ಉಪೇಂದ್ರ ಮನೋಜ್ ಅವರ ಸಂಭಾಷಣೆ ನಾಗೇಂದ್ರ ಪ್ರಸಾದ್ ಪ್ರಮೋದ್ ಮರವಂದೇ ಧನಂಜಯ್ ಸೇರಿದಂತೆ ಹಲವಾರು ಸಾಹಿತ್ಯ ಈ ಚಿತ್ರಕ್ಕಿದೆ ಎಂದು ಹೇಳಿದ್ದಾರೆ.

Sponsored

ಸಮಾರಂಭದ ನಂತರ ಮಾತನಾಡಿರುವಂತಹ ರಜೆ ಅವರು ಇದೊಂದು ಫಿಲಂ ಗುಡ್ ಲವ್ ಸ್ಟೋರಿ.ಹಾಗೆ ಸೂರ್ಯವಂಶಿಯವರು ಕಳೆದ 12 ವರ್ಷಗಳಿಂದ ನಾನು ನಂದಕಿಶೋರ ಜೊತೆ ವಿಕ್ಟರಿ ಅಧ್ಯಕ್ಷ ಮೊದಲ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೊದಲ ಚಿತ್ರ ಇದೆ ಎಂದು ಹೇಳಿದ್ದಾರೆ.ನೈಜ ಘಟನೆಯನ್ನಾ ಧರಿಸಿ 2000 ದಿಂದ 2006ರ ಸಮಯದಲ್ಲಿ ನಡೆಯುವ ಕಾಲೇಜ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ ಎಂದು ಹೇಳಿದ್ದಾರೆ.ಹಾಗೆ ಆ ಕಾಲದಲ್ಲಿ 20223ರ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ ಪ್ರೇಮದ ಪ್ರಕರಣಗಳು ಹೇಗೆಲ್ಲಾ ನಡೆಯುತ್ತಿದ್ದವು ಎಂಬುದು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಇನ್ನಷ್ಟು ಓದಿರಿ:

Gold Price Today: ಡಾಲರ್ ಕುಸಿತದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ದರ ಏರಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online