Belagavi News:
ಬೆಂಗಳೂರು ಮೇ 17: ಬೆಂಗಳೂರು ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್ ಪ್ರೆಸ್ ರೈಲಿಗೆ ಭೈಯ್ಯಪ್ಪನಹಳ್ಳಿ ಬಳಿಯ SMVT ಬೆಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ವರ್ಚುವಲ್ ಮೂಲಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪಿಸಿ ಮೋಹನ್ ಅವರು ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ.
ಬೆಂಗಳೂರು - ಮುಂಬೈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಎಕ್ಸ್ ಪ್ರೆಸ್ ಸೇವೆಯನ್ನು ರೈಲ್ವೆ ಇಲಾಖೆ ಘೋಷಿಸಿದೆ. ಹೊಸ ರೈಲು ಸೇವೆಯಿಂದ ಎರಡು ಮಹಾನಗರಗಳ ನಡುವಿನ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಮುಂಬೈ ನಡುವಿನ ಹೊಸ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ. ಈ ರೈಲು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರಿನಿಂದ ಲೋಕಮಾನ್ಯ ತಿಲಕ್ ಟರ್ಮಿನಸ್ವರೆಗೆ ಸಂಚರಿಸಲಿದೆ. ವಾರಕ್ಕೆ ಎರಡು ದಿನ ಸೇವೆ ನೀಡಲಿರುವ ಈ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.
ಪ್ರಯಾಣ ಮಾರ್ಗದಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ಪುಣೆ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸಲಾಗುತ್ತದೆ . ಒಟ್ಟು 17 ಭೋಗಿಗಳಿರುವ ಈ ರೈಲು, ಬೆಂಗಳೂರು - ಮುಂಬೈ ನಡುವಿನ ಪ್ರಯಾಣವನ್ನು ಇನ್ನಷ್ಟು ಸುಗಮಗೊಳಿಸುವ ನಿರೀಕ್ಷೆ ಇದೆ.
ಬೆಂಗಳೂರು - ಮುಂಬೈ ನಡುವಿನ ಹೊಸ ಎಕ್ಸ್ ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ತೋರಲಾಗಿದ್ದು, ಇದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಲೋಕಮಾನ್ಯ ತಿಲಕ್ ಟರ್ಮಿನಸ್ವರೆಗೆ ಸಂಚರಿಸಲಿದೆ. ಈ ರೈಲು ವಾರಕ್ಕೆ ಎರಡು ದಿನ ಬೆಂಗಳೂರು ಮುಂಬೈ ಮಾರ್ಗದಲ್ಲಿ ಕಾರ್ಯ ನಿರ್ವಹಿಸಲಿದೆ.
ಶನಿವಾರ ಮತ್ತು ಮಂಗಳವಾರ ಬೆಂಗಳೂರು ನಿಂದ ಮುಂಬೈಗೆ ರೈಲು ಸಂಚಾರ ನಡೆಯಲಿದ್ದು, ಭಾನುವಾರ ಮತ್ತು ಬುಧವಾರ ಮುಂಬೈಯಿಂದ ಬೆಂಗಳೂರಿಗೆ ಸೇವೆ ಒದಗಿಸಲಾಗುತ್ತದೆ. ಈ ಮಾರ್ಗವು ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ಮಹಾರಾಷ್ಟ್ರದ ಪುಣೆ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ನೀಡಲಿದೆ.
ಒಟ್ಟು 17 ಕೋಚ್ ಗಳನ್ನು ಹೊಂದಿರುವ ಈ ರೈಲಿನಲ್ಲಿ ಒಂದು ಎಸಿ 2- ಟೈರ್, ನಾಲ್ಕು ಎಸಿ 3- ಟೈರ್, ಆರು ಸ್ಲೀಪರ್ ಹಾಗೂ ನಾಲ್ಕು ಸಾಮಾನ್ಯ ದರ್ಜೆಯ ಭೋಗಿಗಳು ಒಳಗೊಂಡಿವೆ. ಈ ಹೊಸ ಸೇವೆಯಿಂದ ಬೆಂಗಳೂರು - ಮುಂಬೈ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಪೆಟ್ರೋಲ್ ಮಿತ ಬಳಕೆ ಹಾಗೂ ಚಿನ್ನ ಖರೀದಿಸದಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದೇಶದ ಹಿನ್ನೆಲೆ ಆಯೋಜಿಸಲಾದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ ಅವರು ವಿಶೇಷವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಆಗಮಿಸಿದ್ದಾರೆ.
ಅವರು ನಮ್ಮ ಮೆಟ್ರೋ ಎಲ್ಲಿ ಎಂ.ಜಿ. ರಸ್ತೆ ನಿಲ್ದಾಣದಿಂದ ಸ್ವಾಮಿ ವಿವೇಕಾನಂದ ನಿಲ್ದಾಣದವರೆಗೆ ಪ್ರಯಾಣ ಮಾಡಿ, ಬಳಿಕ ಎಲೆಕ್ಟ್ರಿಕ್ ಬೈಕ್ ಮೂಲಕ SMVT ಬೆಂಗಳೂರು ರೈಲು ನಿಲ್ದಾಣ ವರೆಗೆ ತೆರಳಿ ಗಮನ ಸೆಳೆದಿದ್ದಾರೆ.
ಈ ವೇಳೆ ಬೆಂಗಳೂರು ಸೆಂಟ್ರಲ್ ಸಂಸತ್ ಪಿ.ಸಿ. ಮೋಹನ್ ಅವರು ಸಚಿವರೊಂದಿಗೆ ಜೊತೆಗಿದ್ದರು. ಪರಿಸರ ಸ್ನೇಹಿ ಹಾಗೂ ಇಂಧನ ಉಳಿತಾಯಕ್ಕೆ ಉತ್ತೇಜನ ನೀಡುವ ಸಂದೇಶವನ್ನು ಈ ಪ್ರಯಾಣದ ಮೂಲಕ ನೀಡಲಾಗಿದೆ ಎಂದು ತಿಳಿದು ಬಂದಿದೆ.
Also Read:
ಪೆಟ್ರೋಲ್ , ಡೀಸೆಲ್ ಮತ್ತೆ ದುಬಾರಿ? ತಜ್ಞರಿಂದ ₹8-10 ಏರಿಕೆ ಎಚ್ಚರಿಕೆ