<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಟಿಬಿ ಡ್ಯಾಮ್ ಗೆ ಹೊಸ ಮೆರಗು : ಉದ್ಘಾಟನೆಯ ಡೇಟ್ ಫಿಕ್ಸ್

ಟಿಬಿ ಡ್ಯಾಮ್ ಗೆ ಹೊಸ ಮೆರಗು : ಉದ್ಘಾಟನೆಯ ಡೇಟ್ ಫಿಕ್ಸ್
Summary: Installation of all new crest gates in the renovated Tungabhadra Dam has been completed. The dam will be inaugurated on May 15 in the presence of the DCM, which will provide a significant boost to water management.

Belagavi news:

ನವಿಕೃತ ತುಂಗಭದ್ರ ಡ್ಯಾಮ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ಮೇ 15ರಂದು ಲೋಕಾರ್ಪಣೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ತುಂಗಭದ್ರಾ ಅಣೆಕಟ್ಟಿನಲ್ಲಿ ಎಲ್ಲಾ 33 ಹೊಸ ಟ್ರಸ್ಟ್ ಗೇಟ್ ಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಡ್ಯಾಮ್ ಗೆ ಹೊಸ ತಂತ್ರಜ್ಞಾನ ಆಧರಿತ ಬಲ ಸಿಕ್ಕಿದೆ. ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಅಣೆಕಟ್ಟಿಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಉಳಿದಿರುವ ಅಂತಿಮ ಹಂತದ ಕೆಲಸಗಳು ವೇಗವಾಗಿ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

ಅವರು ಮಾತನಾಡುತ್ತಾ,"ವೆಲ್ಡಿಂಗ್ ಸೇರಿದಂತೆ ಕೆಲವು ಅಂತಿಮ ಕಾರ್ಯಗಳು ಮಾತ್ರ ಬಾಕಿ ಇದ್ದು, ಅವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸೂಚಿಸಲಾಗಿದೆ. ಮೇ ಇವರೊಳಗೆ ಮೊದಲ ಚೈನ್ ಲಿಂಕ್ ಸೆಟ್ ಚೆನ್ನೈನಿಂದ ತಲುಪಲಿದ್ದು, ಮೇ 15ರೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ" ಎಂದು ಹೇಳಿದರು.

Sponsored

ನಿನೀಕರಣ ಕಾರ್ಯದಿಂದ ತುಂಗಭದ್ರಾ ಅಣೆಕಟ್ಟಿನ ನೀರು, ಸಂಗ್ರಹ ಮತ್ತು ನಿರ್ವಹಣಾ ಸಾಮರ್ಥ್ಯ ಹೆಚ್ಚಳವಾಗಲಿದೆ. ಕೃಷಿ ಹಾಗೂ ನೀರಾವರಿ ಅವಲಂಬಿತ ಪ್ರದೇಶಗಳಿಗೆ ಇದು ದೊಡ್ಡ ಮಟ್ಟದ ನೆರವು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಸರ್ಕಾರ ಈ ಯೋಜನೆಯನ್ನು ಪ್ರಮುಖ ಜಲ ಸಂಪನ್ಮೂಲ ಅಭಿವೃದ್ಧಿ ಕಾರ್ಯಾವಾಗಿ ಪರಿಗಣಿಸಿದ್ದು, ಭದ್ರತೆ ಹಾಗೂ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಅಣೆಕಟ್ಟಿನ ನವೀಕರಣದಿಂದ ಮುಂದಿನ ದಿನಗಳಲ್ಲಿ ನೀರು ವಿತರಣೆಯಲ್ಲಿ ಸ್ಥಿರತೆ ಬರಲಿದ್ದು, ರೈತರಿಗೆ ಹೆಚ್ಚಿನ ಲಾಭವಾಗಲಿದೆ.

ಮೇ 15ರಂದು ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಈ ಯೋಜನೆ ರಾಜ್ಯದ ಜಲ ವ್ಯವಸ್ಥೆಗೆ ಹೊಸ ದಿಕ್ಕು ನೀಡಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ನವೀಕೃತ ತುಂಗಭದ್ರಾ ಡ್ಯಾಮ್ ಕಾಮಗಾರಿಗಳ ಕುರಿತು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ರೈತರು ಒಂದು ಬೆಳೆ ತ್ಯಾಗ ಮಾಡಿರುವುದನ್ನು ಉಲ್ಲೇಖಿಸಿದವರು, ಸರ್ಕಾರ ತನ್ನ ಮಾತು ಉಳಿಸಿಕೊಂಡು ₹54 ಕೋಟಿ ವೆಚ್ಚದಲ್ಲಿ ಕ್ರೆಸ್ಟ್ ಗೇಟ್ ಗಳ ಅಳವಡಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.

Sponsored

ಅಣೆಕಟ್ಟಿಗೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ತುಂಗಭದ್ರಾ ಯೋಜನೆ ರಾಜ್ಯದ ರೈತರ ಜೀವನಾಡಿಯಾಗಿದ್ದು, ಸುಮಾರು ಎರಡುವರೆ ಲಕ್ಷ ರೈತರಿಗೆ ಇದರ ಮೇಲೆ ಅವಲಂಬನೆ ಇದೆ ಎಂದು ಹೇಳಿದರು." ಕ್ರೆಸ್ಟ್ ಗೇಟ್ ಅಳವಡಿಕೆ ಯಾವ ಹಂತದಲ್ಲಿದೆ ಎಂಬುದನ್ನು ನೋಡಲು ಬಂದಿದ್ದೇನೆ. ಈಗಿನ ನವೀಕರಣ ದಿಂದ ಮುಂದಿನ ವರ್ಷಗಳವರೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ನವಲಿ ಜಲಾಶಯ ನಿರ್ಮಾಣ ಕುರಿತು ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಜೊತೆಗೆ ಅಣೆಕಟ್ಟಿನ ಹೂಳು ತೆಗೆಯುವ ಕಾರ್ಯಕ್ಕಾಗಿ ಶೀಘ್ರದಲ್ಲೇ ಜಾಗತಿಕ ಮಟ್ಟದ ಟೆಂಡರ್ ಕರೆಯುವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದರು.

ಅಣೆಕಟ್ಟಿನ ಎತ್ತರ ಹೆಚ್ಚಿಸುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿಎಂ, ಪ್ರಸ್ತುತ ನವೀಕರಣ ಮತ್ತು ನಿರ್ವಹಣಾ ಕಾರ್ಯಗಳ ಮೂಲಕ ನೀರು ಸಂಗ್ರಹ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು ಬಲಪಡಿಸುವುದೇ ಸರ್ಕಾರದ ಆದ್ಯತೆ ಎಂದು ಹೇಳಿದರು.

ತುಂಗಭದ್ರಾ ಅಣೆಕಟ್ಟಿನ ಈ ಸಮಗ್ರ ನವೀಕರಣ ದಿಂದ ನೀರಾವರಿ ವ್ಯವಸ್ಥೆ ಸುಧಾರಣೆಗೊಂಡು ರೈತರಿಗೆ ಹೆಚ್ಚಿನ ಲಾಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.

Sponsored

ಕಾಮಗಾರಿಗಳ ವೀಕ್ಷಣೆ ವೇಳೆ ಉಪಮುಖ್ಯಮಂತ್ರಿ ಹಾಗೂ ದರ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹಲವು ಪ್ರಮುಖ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದಲ್ಲಿ ಬಾಕಿ ಇರುವ ಕಡತಗಳ ಬಗ್ಗೆ ಮಾತನಾಡಿದ ಡಿಸಿಎಂ,"ವಿಭಿನ್ನ ಇಲಾಖೆಗಳಲ್ಲಿ ಸುಮಾರು 86 ಸಾವಿರ ಕಡತಗಳು ಬಾಕಿ ಇವೆ. ಈ ವಿಚಾರವನ್ನು ಸಚಿವ ಸಂಪುಟದಲ್ಲಿಯೂ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಕಡತ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ," ಎಂದು ತಿಳಿಸಿದ್ದಾರೆ. ಆಡಳಿತ ಕಾರ್ಯಕ್ಷಮತೆ ಹೆಚ್ಚಿಸಲು ಇದು ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಇದೇ ವೇಳೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಗಂಭೀರ ಆರೋಪಗಳನ್ನು ಮಾಡಿದರು. ಇಲ್ಲಿ ದೊಡ್ಡ ಮಟ್ಟದ ಅಪರಾಧ ನಡಿದಿದೆ. ಪೋಸ್ಟಲ್ ಮತಗಳಲ್ಲಿ ಟ್ಯಾಂಪ್ ರಿಂಗ್ ಮಾಡಲಾಗಿದೆ. ಇದು ದೇಶಕ್ಕೆ ಅವಮಾನಕಾರಿ. ನಮ್ಮ ಎಂಎಲ್ಎ ಬಂದ ಮತಗಳನ್ನು ತಿದ್ದಿದ್ದಾರೆ. ಸಂಪೂರ್ಣ ತನಿಖೆ ಅಗತ್ಯ ಎಂದು ಅವರು ಹೇಳಿದರು. ಜೊತೆಗೆ ಜಯನಗರ ಕ್ಷೇತ್ರದಲ್ಲಿಯೂ ಇದೇ ರೀತಿ ಟ್ಯಾಂಪ್ ರಿಂಗ್ ನಡೆದಿದೆ ಎಂಬ ಆರೋಪ ಮಾಡಿದರು."ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ"ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಿವರಾಜ್ ತಂಗಡಗಿ, ಈಶ್ವರ್ ಖಂಡ್ರೆ, ಎಚ್ ಆರ್ ಗವಿಯಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಸೇರಿದಂತೆ ಅಧಿಕಾರಿಗಳು ಕಾಮಗಾರಿಗಳ ಬಗ್ಗೆ ವಿವರ ನೀಡಿದರು.

Sponsored

ಅದೇ ವೇಳೆ, ಅಣೆಕಟ್ಟಿನ ಹೊಸ ಗೇಟ್ ಗಳ ಟ್ರಯಲ್ ವೀಕ್ಷಣೆ ಕೂಡ ನಡೆಯಿತು. ಡಿಸಿಎಂ ಅವರ ಸಮ್ಮುಖದಲ್ಲಿ ಅಧಿಕಾರಿಗಳು ಗೇಟ್ಗಳನ್ನು ಎತ್ತಿ ಕಾರ್ಯ ಪದ್ಧತಿ ಪ್ರದರ್ಶಿಸಿದರು. ಈ ಟ್ರಯಲ್ ಯಶಸ್ವಿಯಾಗಿದ್ದು, ಕಾಮಗಾರಿಗಳು ಅಂತಿಮ ಹಂತದಲ್ಲಿರುವುದು ದೃಢಪಡಿಸಿದೆ.

ಒಟ್ಟಿನಲ್ಲಿ, ತುಂಗಭದ್ರಾ ಅಣೆಕಟ್ಟಿನ ರವೀಕರಣ ಕಾರ್ಯಗಳು ಜೊತೆಗೆ ಆಡಳಿತಾತ್ಮಕ ಹಾಗೂ ರಾಜಕೀಯ ವಿಚಾರಗಳಲ್ಲಿಯೂ ಡಿಸಿಎಂ ನೀಡಿದ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Also Read:

ಹುಬ್ಬಳ್ಳಿ - ಧಾರವಾಡ ಕಾನೂನು ಸುವ್ಯವಸ್ಥೆ ಬಗ್ಗೆ ಶಾಸಕ ಟೀಕೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online