BELAGAVI NEWS :
ಹೆಲ್ಮೆಟ್ ಇಲ್ಲದ ಸವಾರರಿಗೆ ಪೆಟ್ರೋಲ್ ನಿರಾಕರಣೆ? ಬೆಳಗಾವಿ ಪೊಲೀಸ್ ಕಮಿಷನರ್ ವಿನುತನ ಕ್ರಮ
ರಸ್ತೆ ಸುರಕ್ಷತೆಗಾಗಿ ಹಲವು ರೀತಿಯ ಜಾಗೃತಿ ಅಭಿಯಾನಗಳು, ದಂಡ ವಿಧಿಸುವ ಕ್ರಮಗಳು ಹಾಗೂ ಸಂಕೇತಾತ್ಮಕವಾಗಿ ಗುಲಾಬಿ ಹೂವು ನೀಡಿ ಮನವೊಲಿಸುವ ಪ್ರಯತ್ನಗಳ ಬಳಿಕವು ಹೈಲೈಟ್ ಧರಿಸದೇ ಬೈಕ್ ಚಲಾಯಿಸುವವರಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸ್ ಕಮಿಷನರ್ ಹೊಸ ಹಾಗೂ ಕಟುನ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಹೆಲ್ಮೆಟ್ ಧರಿಸಿದ ಬೈಕ್ ಸವಾರರಿಗೆ ಪೆಟ್ರೋಲ್ ನೀಡದಂತೆ ಬಂಕ್ ಮಾಲೀಕರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಮ ಪಾಲನೆಗೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ಬಾರಿ ಜಾಗೃತಿ ಮೂಡಿಸಿದರು ಕೆಲವು ಸವಾರರರು ನಿಯಮಗಳನ್ನು ನಿರ್ಲಕ್ಷಿಸುತ್ತಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ.
ಅಂಕಿ ಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಬೆಳಗಾವಿ ನಗರದಲ್ಲಿ ಹೆಲ್ಮೆಟ್ ಧರಿಸದೆ ಸಂಭವಿಸಿದ ಅಪಘಾತಗಳಲ್ಲಿ 2,282ಪ್ರಕರಣಗಳನ್ನು ದಾಖಲಾಗಿವೆ. ಅವುಗಳಲ್ಲಿ 358 ಮಂದಿ ಮೃತಪಟ್ಟಿದ್ದು, 1,492 ಮಂದಿ ಗಾಯಗೊಂಡಿದ್ದಾರೆ. ಈ ಅಂಕಿ ಅಂಶಗಳು ಹೆಲ್ಮೆಟ್ ಬಳಕೆಯ ಮಹತ್ವವನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿವೆ.
ಹೊಸ ನಿಯಮ ಜಾರಿಗೆ ಬಂದರೆ ರಸ್ತೆ ಸುರಕ್ಷತೆಯಲ್ಲಿ ದೊಡ್ಡ ಬದಲಾವಣೆ ಸಾಧ್ಯವೆಂದು ನಿರೀಕ್ಷಿಸಲಾಗುತ್ತಿದ್ದು, ಸಾರ್ವಜನಿಕರಿಂದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಹೆಲ್ಮೆಟ್ ಜಾಗೃತಿಗೆ ಬೆಳಗಾವಿ ಪೊಲೀಸರ ಬಿಗ್ ಅಭಿಯಾನ ; ಪೆಟ್ರೋಲ್ ನಿರಾಕರಣೆ ಕ್ರಮಕ್ಕೆ ಮುಂದಾಗಿರುವ ಕಮಿಷನರ್
ರಸ್ತೆ ಸುರಕ್ಷತೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಭೋರಸೆ ಅವರು ಹೊಸ ಕ್ರಮಕ್ಕೆ ಮುಂದಾಗಿದ್ದಾರೆ.ಹೆಲ್ಮೆಟ್ ಧರಿಸದೆ ಬರುವ ಬೈಕ್ ಸವಾರರಿಗೆ ಪೆಟ್ರೋ ನೀಡದಂತೆ ಬಂಕ್ ಮಾಲೀಕರಿಗೆ ಅಧಿಕೃತ ಪತ್ರ ಬರೆದಿರುವವರು, ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸಂದೇಶ ನೀಡಿದ್ದಾರೆ.
ಇದೆ ವೇಳೆ, ನಗರದಲ್ಲಿ ಇಂದಿನಿಂದ ಒಂದು ವಾರದ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ಸಹ ಆರಂಭಿಸಲಾಗಿದೆ. ಅಭಿಯಾನದ ಮೊದಲ ದಿನ ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದ ಬೈಕ್ ರ‍್ಯಾಲಿಗೆ ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಚಾಲನೆ ನೀಡಿದರು. ಅವರು ಸ್ವತಃ ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡಿ ಸಾರ್ವಜನಿಕರಿಗೆ ಸಂದೇಶ ನೀಡಿದರು.
ಈ ಅಭಿಯಾನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ಪೊಲೀಸ್ ಕಮಿಷನರ್ ಭೂಷನ್ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿ ಹೆಲ್ಮೆಟ್ ಬಳಕೆಯ ಮಹತ್ವವನ್ನು ಒತ್ತಿ ಹೇಳಿದರು. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರ ಪ್ರಕಾರ ಅತ್ಯಗತ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಐಜಿಪಿ ಸಂದೀಪ್ ಪಾಟೀಲ್, ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ ಹೆಜ್ಜೆ. ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಹಾಕಿಕೊಳ್ಳಲು ಬಂದವರಿಗೆ ಪೆಟ್ರೋಲ್ ಕೊಡಬೇಡಿ ಅಂತ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದ್ದರು.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಮಾತನಾಡಿ, ಒಂದು ವಾರದ ಹೆಲ್ಮೆಟ್ ಜಾಗೃತಿ ಅಭಯಾನವನ್ನು ಹಂತ ಹಂತವಾಗಿ ವಿಭಿನ್ನ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮೊದಲ ದಿನ ಬೈಕ್ ರ‍್ಯಾಲಿ ಮೂಲಕ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅವರ ವರದಿಗಳ ಪ್ರಕಾರ, ಎರಡನೇ ದಿನ ಸಿಗ್ನಲ್ ಗಳಲ್ಲಿ ಬೈಕ್ ಸವಾರರೊಂದಿಗೆ ನೇರ ಸಂವಾದ ನಡೆಸಿ ಹೆಲ್ಮೆಟ್ ಬಳಕೆಯ ಮಹತ್ವವನ್ನು ತಿಳಿಸಲಾಗುತ್ತದೆ. ಮೂರನೇ ದಿನಾ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.ನಾಲ್ಕನೇ ದಿನ ಹೆಲ್ಮೆಟ್ ಧರಿಸುವ ಸವಾರರನ್ನು ಗುರುತಿಸಿ ಅವರಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೆ ವೇಳೆ, ಹೆಲ್ಮೆಟ್ ಧರಿಸದೆ ಬರುವವರಿಗೆ ಪೆಟ್ರೋಲ್ ನೀಡದಂತೆ ಬಂಕ್ ಮಾಲೀಕರಿಗೆ ಈಗಾಗಲೇ ಪತ್ರ ಬರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಬಂಕ್ ಮಾಲೀಕರು ಕೂಡ ಈ ಕ್ರಮಕ್ಕೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
"ಬೈಕ್ ಸವಾರರು ತಮ್ಮ ಜೀವವನ್ನು ಉಳಿಸಿಕೊಳ್ಳಲು, ತಮ್ಮ ಕುಟುಂಬದ ಭವಿಷ್ಯಕ್ಕಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು" ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಪಿ ನಾರಾಯಣ್ ಬರಮನಿ,ಡಿಸಿಪಿ ನಿರಂಜನರಾಜೆ ಅರಸ್, ಡಿಸಿಪಿ ಎಂ.ವೈ.ಕಾಶಪ್ಪನವರ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
Also Read:
ಇತಿಹಾಸ ಸೃಷ್ಟಿಸಿದ ಭಾರತ ಮಹಿಳಾ ತಂಡ; ಟಿ-20 ವಿಶ್ವಕಪ್ ನಲ್ಲಿ ಮಹಾಸಾಧನೆ