<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ಬೆಂಗಳೂರು ಶಾಲೆಗಳಲ್ಲಿ ಹೊಸ ರೂಲ್ಸ್ : ಫುಡ್ ಡೆಲಿವರಿ ಆ್ಯಪ್ ಗಳಿಗೆ ಸಂಪೂರ್ಣ ನಿಷೇಧ

ಬೆಂಗಳೂರು ಶಾಲೆಗಳಲ್ಲಿ ಹೊಸ ರೂಲ್ಸ್ : ಫುಡ್ ಡೆಲಿವರಿ ಆ್ಯಪ್ ಗಳಿಗೆ ಸಂಪೂರ್ಣ ನಿಷೇಧ
Summary: In order to maintain the health and discipline of students, food delivery apps like Zomato and Swiggy have been completely banned from entering the campus in Bengaluru schools. The new rules have imposed strict controls on outside food delivery in the school environment.

Belagavi News:

ಮಕ್ಕಳ ಆರೋಗ್ಯ, ಸುರಕ್ಷತೆ ಮತ್ತು ಸಮಾನತೆಯನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳು ಕ್ಯಾಂಪಸ್ ಆವರಣದಲ್ಲಿ ಫುಡ್ ಡೆಲಿವರಿ ಆ್ಯಪ್ ಗಳಾದ swiggy & Zomato ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಈ ಹೊಸ ನಿಯಮವು ವಿದ್ಯಾರ್ಥಿಗಳು ಮಾತ್ರವಲ್ಲದೆ ಶಾಲಾ ಸಿಬ್ಬಂದಿಗೂ ಅನ್ವಯವಾಗಿದ್ದು, ಆರೋಗ್ಯಕರ ಹಾಗೂ ಆಹಾರ ಪದ್ಧತಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.

ನಗರದ ಬನಶಂಕರಿಯಲ್ಲಿರುವ ವಿದ್ಯಾ ಶಿಲ್ಪ ಸೇರಿದಂತೆ ಹಲವು ಪ್ರಮುಖ ಶಾಲೆಗಳು ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಜಾರಿಗೆ ತಂದಿವೆ. ಶಾಲಾ ಆಡಳಿತ ಮಂಡಳಿಯ ಪ್ರಕಾರ, ಕ್ಯಾಂಪಸ್ ಒಳಗೆ ಹೊರಗಿನ ಆಹಾರ ವಿತರಣೆಯಿಂದ ವಿದ್ಯಾರ್ಥಿಗಳಲ್ಲಿ ಅಸಮಾನತೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆರೋಗ್ಯ ಮತ್ತು ಶಿಸ್ತಿಗೆ ಆದ್ಯತೆ :

Sponsored

ಶಾಲೆಗಳು ನೀಡಿರುವ ಸೂಚನೆ ಪ್ರಕಾರ, ವಿದ್ಯಾರ್ಥಿಗಳು ಮನೆಯ ಊಟವನ್ನು ಹೆಚ್ಚು ಆದ್ಯತೆಯಾಗಿ ಬಳಸಬೇಕು ಎಂದು ತಿಳಿಸಲಾಗಿದೆ. ಹೊರಗಿನ ಆಹಾರ ಪದ್ಧತಿಗೆ ಕಡಿವಾಣ ಹಾಕುವುದರಿಂದ ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ. ಜೊತೆಗೆ ಕ್ಯಾಂಪಸ್ ನಲ್ಲಿ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ.

ಈ ನಿಯಮವು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಶಾಲಾ ಸಿಬ್ಬಂದಿಗು ಕ್ಯಾಂಪಸ್ ಒಳಗೆ ಫುಡ್ ಡಿಲೆವರಿ ಆ್ಯಪ್ ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ಶಿಕ್ಷಕರು ಮತ್ತು ಸಿಬ್ಬಂದಿ ಕೂಡ ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ.

ನಗರದ ಇನ್ನೂ ಹಲವು ಪ್ರತಿಷ್ಠಿತ ಶಾಲೆಗಳು ಇದೇ ರೀತಿಯ ನಿಯಮವನ್ನು ಜಾರಿಗೆ ತರುವ ಹಾದಿಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಹೆಚ್ಚಿನ ಶಾಲೆಗಳಲ್ಲಿ ಈ ನೀತಿ ಸಾಮಾನ್ಯವಾಗಿ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಶಿಕ್ಷಣ ತಜ್ಞರ ಪ್ರಕಾರ, ಈ ಕ್ರಮವು ಮಕ್ಕಳಲ್ಲಿ ಶಿಸ್ತಿನ ಜೊತೆಗೆ ಆರೋಗ್ಯಕರ ಆಹಾರ ಅಭ್ಯಾಸವನ್ನು ಬೆಳೆಸಲು ಸಹಾಯಕವಾಗಬಹುದು. ಆದರೆ ಕೆಲವು ಪೋಷಕರು ಈ ನಿಯಮವನ್ನು ಬೆಂಬಲಿಸಿದರೆ, ಇನ್ನು ಕೆಲವರು ವೈಯಕ್ತಿಕ ಆಯ್ಕೆಗೆ ಅವಕಾಶ ಇರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಬೆಂಗಳೂರಿನಲ್ಲಿ ಶಾಲೆಗಳಲ್ಲಿ ಫುಡ್ ಡೆಲಿವರಿ ಆ್ಯಪ್ ಗಳಿಗೆ ನಿಷೇಧವು ಶಿಕ್ಷಣ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

Sponsored

ಬೆಂಗಳೂರು ಶಾಲೆಗಳಲ್ಲಿ Swiggy, Zomato ನಿಷೇಧ - ಜಂಕ್ ಫುಡ್ ತಡೆಗೆ ಕಠಿಣ ಕ್ರಮ :

ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ಮತ್ತು ಸಮಾನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರಿನ ಹಲವು ಪ್ರಮುಖ ಶಾಲೆಗಳು, ಫುಡ್ ಡೆಲಿವರಿ ಆ್ಯಪ್ ಗಳಾದ Swiggy ಮತ್ತು Zomato ಬಳಕೆಯನ್ನು ಕ್ಯಾಂಪಸ್ ಆವರಣದಲ್ಲಿ ಕಡ್ಡಾಯವಾಗಿ ನಿಷೇಧಿಸಿದೆ. ಈ ನಿರ್ಧಾರವು ಜಂಕ್ ಫುಡ್ ಬಳಕೆಯನ್ನು ನಿಯಂತ್ರಿಸುವುದರ ಜೊತೆಗೆ ಶಾಲಾ ಶಿಸ್ತು ಮತ್ತು ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಮಾಡಲಾಗಿದೆ.

ಫುಡ್ ಡೆಲಿವರಿ ನಿಷೇಧಕ್ಕೆ ಕಾರಣಗಳೇನು? :

ಶಾಲಾ ಆಡಳಿತ ಮಂಡಳಿಗಳ ಪ್ರಕಾರ, ಹೊರಗಿನಿಂದ ತರಲಾಗುವ ಜಂಕ್ ಫುಡ್ ಗಳಲ್ಲಿ ಹೆಚ್ಚಾಗಿ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಆರೋಗ್ಯಕರ ಆಹಾರ ಪದ್ಧತಿಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

Sponsored

ಶಾಲೆಯೊಂದರ ಪ್ರಾಂಶುಪಾಲರ ಪ್ರಕಾರ, ವಿದ್ಯಾರ್ಥಿಗಳ ನಡುವೆ ಆಹಾರದಲ್ಲಿ ಅಸಮಾನತೆ ಮೂಡುವ ಸಾಧ್ಯತೆ ಹೆಚ್ಚಾಗಿದೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸರಳ ಉಟವನ್ನು ತಿನ್ನುವಾಗ ಮತ್ತೊಬ್ಬ ವಿದ್ಯಾರ್ಥಿ ಹೊರಗಿನಿಂದ ಪಿಜ್ಜಾ ಅಥವಾ ಬರ್ಗರ್ ಆರ್ಡರ್ ಮಾಡಿದರೆ, ಅದು ಅನಗತ್ಯ ಆಕರ್ಷಣೆ ಮತ್ತು ತಾರತಮ್ಯಕ್ಕೆ ಕಾರಣವಾಗುತ್ತದೆ. ಇದರಿಂದ ಪೋಷಕರ ಮೇಲೂ ಆರ್ಥಿಕ ಮತ್ತು ಸಾಮಾಜಿಕ ಒತ್ತಡ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ಅಪರಿಚಿತ ಡೆಲಿವರಿ ಸಿಬ್ಬಂದಿ ಶಾಲಾ ಆವರಣಕ್ಕೆ ಪದೇ ಪದೇ ಪ್ರವೇಶಿಸುವುದು ಭದ್ರತೆಯ ದೃಷ್ಟಿಯಿಂದ ಸೂಕ್ತವಲ್ಲ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ. ದಿನನಿತ್ಯ ಹಲವು ಪಾರ್ಸಲ್ ಗಳನ್ನು ತರಗತಿಗಳಿಗೆ ತಲುಪಿಸುವ ಪ್ರಕ್ರಿಯೆ ಶಾಲೆಯ ಶಿಸ್ತು, ಸಮಯ ಪಾಲನೆ ಮತ್ತು ಅಧ್ಯಯನ ವಾತಾವರಣಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆಡಳಿತ ಮಂಡಳಿಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ಶಾಲೆಗಳು ಕ್ಯಾಂಪಸ್ ಒಳಗೆ ಹೊರಗಿನ ಆಹಾರ ಆರ್ಡರ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ವಿದ್ಯಾರ್ಥಿಗಳಿಗೆ ಮನೆಯ ಊಟಕ್ಕೆ ಹೆಚ್ಚಿನ ಆದ್ಯತೆ ನೀಡಲು ಸೂಚಿಸಲಾಗಿದೆ. ಸಿಬ್ಬಂದಿಗೂ ಈ ನಿಯಮ ಅನ್ವಯವಾಗಿದ್ದು, ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ಶಿಸ್ತುಬದ್ಧ ಆಹಾರ ಅಭ್ಯಾಸವನ್ನು ಅನುಸರಿಸಲು ಸೂಚಿಸಲಾಗಿದೆ.

ಶಿಕ್ಷಣ ತಜ್ಞರ ಪ್ರಕಾರ, ಈ ಕ್ರಮವು ಮಕ್ಕಳಲ್ಲಿ ಆರೋಗ್ಯಕರ ಜೀವನ ಶೈಲಿ ಬೆಳೆಸಲು ಮತ್ತು ಶಾಲಾ ಪರಿಸರದಲ್ಲಿ ಸಮಾನತೆಯ ಹಾಗೂ ಶಿಸ್ತು ಕಾಪಾಡಲು ಸಹಾಯಕವಾಗಬಹುದು.

Sponsored

ಬೆಂಗಳೂರು ಶಾಲೆಗಳಲ್ಲಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಸೇರಿದಂತೆ ಫುಡ್ ಡಿಲೆವರಿ ಆ್ಯಪ್ ಗಳಿಗೆ ನಿಷೇಧ ಜಾರಿಯಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸಮಾನತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದ್ದು, ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಲು ಶಾಲೆಗಳು ಪೋಷಕರಿಗೆ ಸೂಚಿಸಿವೆ. ಅನಿವಾರ್ಯ ಸಂದರ್ಭಗಳಲ್ಲಿ ಹೋಟೆಲ್ ಆಹಾರವನ್ನು ಲಂಚ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡಿ ಕಳುಹಿಸಲು ವಿನಂತಿಸಲಾಗಿದೆ. ವಿಶೇಷವಾಗಿ, ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಿಕ್ಷಕರು ಹಾಗೂ ಸಿಬ್ಬಂದಿಗೂ ಆನ್ ಲೈನ್ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

Also Read:

ಉದ್ದವ್ ಠಾಕ್ರೆ ನಿವಾಸಕ್ಕೆ ಡಿಕೆ ಶಿವಕುಮಾರ್ ದಿಡೀರ್ ಭೇಟಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online