ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಮುಹಮ್ಮದ್ ಯೂನಿಸ್
ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ದೇಶದ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ತಕ್ಷಣವೇ ಗಡೀಪಾರು ಮಾಡುವಂತೆ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಸೋಮವಾರ ಭಾರತಕ್ಕೆ ಮನವಿ ಮಾಡಿದೆ.
ಢಾಕಾ, ಬಾಂಗ್ಲಾದೇಶ:
ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ. ಬಾಂಗ್ಲಾದೇಶದ ನ್ಯಾಯಾಲಯವು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮರಣದಂಡನೆ ಶಿಕ್ಷೆ ವಿಧಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದ ನ್ಯಾಯಾಲಯಗಳು ಸ್ಪಷ್ಟತೆಯಿಂದ ಮಾತನಾಡಿವೆ ಮತ್ತು ಶಿಕ್ಷೆಯು ನ್ಯಾಯಾಂಗದ ಮೂಲಭೂತ ತತ್ವವನ್ನು ದೃಢಪಡಿಸಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಹೇಳಿದ್ದಾರೆ.
ನಾವು ಪ್ರಜಾಪ್ರಭುತ್ವವನ್ನು ಪುನರ್ ನಿರ್ಮಿಸುವ ಹಂತದಲ್ಲಿ ನಿಂತಿದ್ದೇವೆ ಎಂದು ಮುಹಮ್ಮದ್ ಯೂನಸ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ವರ್ಷಗಳ ದಬ್ಬಾಳಿಕೆಯಿಂದ ನಾಶವಾದ ಅಡಿಪಾಯಗಳು, ಪ್ರಶ್ನೆಯಲ್ಲಿರುವ ಅಪರಾಧಗಳು - ಯುವಕರು ಮತ್ತು ಮಕ್ಕಳ ವಿರುದ್ಧ ಮಾರಕ ಬಲಪ್ರಯೋಗದ ಆದೇಶ - ನಮ್ಮ ಕಾನೂನುಗಳು ಮತ್ತು ಸರ್ಕಾರ ಮತ್ತು ನಾಗರಿಕರ ನಡುವಿನ ಮೂಲಭೂತ ಬಾಂಧವ್ಯವನ್ನು ಉಲ್ಲಂಘಿಸಿದೆ.
ಈ ಕೃತ್ಯಗಳು ಬಾಂಗ್ಲಾದೇಶದ ಮೂಲ ಮೌಲ್ಯಗಳಾದ ಘನತೆ, ಸ್ಥಿತಿಸ್ಥಾಪಕತ್ವ ಮತ್ತು ನ್ಯಾಯದ ಬದ್ಧತೆಯನ್ನು ಕೆರಳಿಸಿದ್ದವು. 1,400 ಜೀವಗಳು ಬಲಿಯಾದವು. ಅವು ಬರೀ ಅಂಕಿ- ಅಂಶಗಳಲ್ಲ, ವಿದ್ಯಾರ್ಥಿಗಳು, ಪೋಷಕರು ಮತ್ತು ಹಕ್ಕುಗಳನ್ನು ನಿರಾಯುಧ ಪ್ರತಿಭಟನಾಕಾರರ ವಿರುದ್ಧ ಹೇಗೆ ಬಳಸಲಾಗಿದೆ ಎಂಬುದನ್ನು ತಿಂಗಳುಗಳ ಕಾಲ ನಡೆದ ವಿಚಾರಣೆ ಮತ್ತು ಸಾಕ್ಷ್ಯಗಳು ವಿವರಿಸಿವೆ.
ಈ ತೀರ್ಪು ಅವರ ನೋವನ್ನು ಗುರುತಿಸುತ್ತದೆ ಮತ್ತು ನಮ್ಮ ನ್ಯಾಯ ವ್ಯವಸ್ಥೆಯು ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಮುಹಮ್ಮದ್ ಯೂನಿಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾದೇಶ ಸರ್ಕಾರದ ಮುಖ್ಯ ಸಲಹೆಗಾರರು, ತಮ್ಮ ಪೋಸ್ಟ್ವೊಂದರ ಮೂಲಕ ಈ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದ ನ್ಯಾಯಾಲಯಗಳು ದೇಶ ಮತ್ತು ಅದರಾಚೆಗೆ ಪ್ರತಿಧ್ವನಿಸುವ ಸ್ಪಷ್ಟತೆಯ ತೀರ್ಮಾನವನ್ನು ಪ್ರಕಟಿಸಿವೆ. ಅಪರಾಧ ನಿರ್ಣಯ ಮತ್ತು ಶಿಕ್ಷೆಯು ಮೂಲಭೂತ ತತ್ವವನ್ನು ಈ ತೀರ್ಪು ದೃಢಪಡಿಸುತ್ತದೆ. ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಈ ತೀರ್ಪು ಜುಲೈ ಮತ್ತು ಆಗಸ್ಟ್ 2024 ರ ದಂಗೆಯಲ್ಲಿ ಹಾನಿಗೊಳಗಾದ ಸಾವಿರಾರು ಜನರಿಗೆ ನ್ಯಾಯವನ್ನು ನೀಡಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶವು ಮುಂದಿನ ಸವಾಲುಗಳನ್ನು ಧೈರ್ಯ ಮತ್ತು ನಮ್ರತೆಯಿಂದ ಎದುರಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಕಾನೂನಿನ ನಿಯಮ, ಮಾನವ ಹಕ್ಕುಗಳು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಾಮರ್ಥ್ಯಕ್ಕೆ ಬದ್ಧತೆಯೊಂದಿಗೆ, ನ್ಯಾಯವು ಬಾಂಗ್ಲಾದೇಶದಲ್ಲಿ ಕೇವಲ ಉಳಿಯುವುದಿಲ್ಲ. ಅದು ಮೇಲುಗೈ ಸಾಧಿಸುತ್ತದೆ ಮತ್ತು ಸುಸ್ಥಿರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಹಾದಿಗೆ ಕೇವಲ ಕಾನೂನು ಹೊಣೆಗಾರಿಕೆ ಮಾತ್ರವಲ್ಲ, ಸಂಸ್ಥೆಗಳು ಮತ್ತು ನಾಗರಿಕರ ನಡುವೆ ನಂಬಿಕೆಯನ್ನು ಪುನರ್ನಿರ್ಮಿಸುವ ಅಗತ್ಯವಿದೆ. ಜನರು ನಿಜವಾದ ಪ್ರಾತಿನಿಧ್ಯಕ್ಕಾಗಿ ಎಲ್ಲವನ್ನೂ ಏಕೆ ಪಣಕ್ಕಿಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು - ಮತ್ತು ಆ ನಂಬಿಕೆಗೆ ಯೋಗ್ಯವಾದ ವ್ಯವಸ್ಥೆಗಳನ್ನು ಪುನರ್ ರಚಿಸುವುದು ಇಂದಿನ ಅಗತ್ಯವಾಗಿದೆ. ಇಂದಿನ ತೀರ್ಪು ಆ ನಿಟ್ಟಿನಲ್ಲಿ ಇಟ್ಟಿರುವ ಅತಿದೊಡ್ಡ ಹೆಜ್ಜೆಯಾಗಿದೆ ಎಂದು ಮುಹಮ್ಮದ್ ಯೂನಿಸ್ ಪ್ರತಿಪಾದಿಸಿದ್ದಾರೆ.
ತಕ್ಷಣವೇ ಹಸೀನಾರನ್ನ ಗಡಿಪಾರು ಮಾಡಿ; ಭಾರತಕ್ಕೆ ಬಾಂಗ್ಲಾ ಮನವಿ:
ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಇಂದಿನ ತೀರ್ಪಿನಲ್ಲಿ, ತಲೆಮರೆಸಿಕೊಂಡಿರುವ ಆರೋಪಿ ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಜಲ್ಲಾಹಿ ಕೊಲೆಗೆ ಶಿಕ್ಷೆ ವಿಧಿಸಲಾಗಿದೆ.
ಯಾವುದೇ ದೇಶವು ಮಾನವೀಯತೆಯ ವಿರುದ್ಧದ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಈ ವ್ಯಕ್ತಿಗಳಿಗೆ ಆಶ್ರಯ ನೀಡಿದರೆ, ಅದು ಅತ್ಯಂತ ಅಸಹಿಷ್ಣುತೆಯ ಕೃತ್ಯ ಮತ್ತು ನ್ಯಾಯದ ನಿರ್ಲಕ್ಷ್ಯವಾಗಿರುತ್ತದೆ. ಈ ಇಬ್ಬರು ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ತಕ್ಷಣ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ನಾವು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಎರಡೂ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಹಸ್ತಾಂತರ ಒಪ್ಪಂದದ ಪ್ರಕಾರ, ಇದು ಭಾರತದ ಕಡ್ಡಾಯ ಕರ್ತವ್ಯವೂ ಆಗಿದೆ ಎಂದು ಬಾಂಗ್ಲಾದೇಶ ಹೇಳಿದೆ.
ಕಳೆದ ವರ್ಷ ಸಾಮೂಹಿಕ ಪ್ರತಿಭಟನೆಗಳ ವಿರುದ್ಧದ ದಮನಕ್ಕೆ ಸಂಬಂಧಿಸಿದ ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಮರಣದಂಡನೆ ವಿಧಿಸಲಾಗಿದೆ. ಈ ಶಿಕ್ಷೆ ಪ್ರಕಟವಾದ ಬಳಿಕ, ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ದೇಶದ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ತಕ್ಷಣವೇ ಗಡೀಪಾರು ಮಾಡುವಂತೆ, ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಸೋಮವಾರ ಭಾರತಕ್ಕೆ ಮನವಿ ಮಾಡಿದೆ.
ಇನ್ನಷ್ಟು ಓದಿರಿ :
ಹವಾಮಾನ ಬದಲಾವಣೆ ನಿಜ, ಡಿಸೆಂಬರ್ ಒಳಗೆ ಎನ್ಡಿಸಿ ಸಲ್ಲಿಸಲಿರುವ ಭಾರತ