BELAGAVI NEWS:
ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ನಡುವೆ ನಡೆದ ಪಂದ್ಯವು ಕೇವಲ ಕ್ರಿಕೆಟ್ ಸ್ಪರ್ಧೆಯಾಗಿರದೆ, ರೋಚಕತೆ ಮತ್ತು ನಾಟಕ ಕ್ಷಣಗಳಿಂದ ತುಂಬಿದ 'ರಂಗಭೂಮಿ' ಯಂತೆ ಕಾಣಿಸಿತು. ಪಂದ್ಯದ ಪ್ರತಿಯೊಂದು ಹಂತದಲ್ಲೂ ಅನಿರೀಕ್ಷಿತ ತಿರುವುಗಳು, ಉತ್ಸಾಹಭರಿತ ಆಟ ಹಾಗೂ ಕೊನೆಯವರೆಗೂ ಕಾದು ಕುಳಿತಂತಿರುವ ಪರಿಸ್ಥಿತಿ ಅಭಿಮಾನಿಗಳಿಗೆ ತೀವ್ರ ಥ್ರಿಲ್ ನೀಡಿತು. ಮೈದಾನದಲ್ಲಿ ನಡೆದ ಈ ಡ್ರಾಮಾ, ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾರದ ಅನುಭವವಾಗಿ ಪರಿಣಮಿಸಿತು.
ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲಿ ಸ್ಮರಣೀಯ ಹಾಗೂ ವಿವಾದಾತ್ಮಕ ಅಧ್ಯಾಯವಾಗಿ ಉಳಿಯುವಂತಾಗಿದೆ. ತೀವ್ರ ಪೈಪೋಟಿಯಿಂದ ಕೂಡಿದ್ದು, ಈ ಪಂದ್ಯವು ಅಂತಿಮವಾಗಿ ಸೂಪರ್ ಓವರ್ ಗೆ ತಲುಪಿದ್ದು, ಅಲ್ಲಿ ನಡೆದ ಘಟನೆಗಳು ಕೇವಲ ಆಟವಾಗಿರದೆ ಮಾನಸಿಕ ಯುದ್ದದಂತೆಯೇ ಕಾಣಿಸಿತು.
ಸೂಪರ್ ಓವರ್ ವೇಳೆ ಅಂಪೈರ್ ನೀಡಿದ 'ನೋ ಬಾಲ್' ತೀರ್ಪು ದೊಡ್ಡ ಚರ್ಚೆಗೆ ಕಾರಣವಾಯಿತು. ಜೊತೆಗೆ,ಕತ್ತಲಾಗುತ್ತಿದ್ದ ಸಂಧರ್ಭದಲ್ಲಿ ಶ್ರೀಲಂಕಾ ಬ್ಯಾಟರಗಳು ಕ್ರೀಸ್ ಗೆ ಬರಲು ತೋರಿಸಿದ ವಿಳಂಬವು ' ಮೈಂಡ್ ಗೇಮ್ಸ್ ' ಆಗಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಸಾಮಾನ್ಯವಾಗಿ ಐಪಿಎಲ್ ನಂತಹ ಟೂರ್ನಿಗಳಲ್ಲಿ ಕಾಣುವಷ್ಟು ಕ್ಯಾಮೆರಾ ಕವರೇಜ್ ಈ ಕಿರಿಯರ ಸರಣಿಯಲ್ಲಿ ಇರದಿದ್ದರೂ, ಮೈದಾನದಲ್ಲಿ "ಅತ್ಯುತ್ತಮ ನಾಟಕೀಯ ರಂಗಭೂಮಿ" ಎಂದು ಬಣ್ಣಿಸಿದ್ದಾರೆ.
ಒಟ್ಟಿನಲ್ಲಿ, ಈ ಪಂದ್ಯವು ರನ್ ಗಳ ಲೆಕ್ಕಾಚಾರಕ್ಕಿಂತ ಹೆಚ್ಚು ಮನಸ್ಸಿನ ಆಟ ಮತ್ತು ವಿವಾದಾತ್ಮಕ ಕ್ಷಣ ಕೂಡಿದ ವಿಶಿಷ್ಟ ಅನುಭವವಾಗಿ ಉಳಿದಿದೆ.
ರವಿಚಂದ್ರನ್ ಅಶ್ವಿನ ಅವರು ಈ ಮ್ಯಾಚ್ ಅನ್ನು "ಅತ್ಯುತ್ತಮ ನಾಟಕೀಯ ರಂಗಭೂಮಿ" ಎಂದು ಕರೆಯಲು ಮುಖ್ಯ ಕಾರಣ ಪಂದ್ಯದ ವೇಳೆ ಕಂಡು ಬಂದ ಟ್ವಿಸ್ಟ್ ಹಾಗೂ ಅವ್ಯವಸ್ಥೆ .
ಪಂದ್ಯ ಟೈ ಆಗಿ ಸೂಪರ್ ಓವರ್ ಗೆ ತಲುಪಿಸಿದಾಗ ಉಭಯ ತಂಡಗಳ ಮೇಲೂ ತೀವ್ರ ಒತ್ತಡ ನಿರ್ಮಾಣವಾಗಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಹಾಗೂ ಟಿವಿ ವೀಕ್ಷಕರಿಗೂ ಇದು ಯಾವುದೇ ರೋಚಕ ನಿನಿಮಾ ಅಥವಾ ನಾಟಕಕ್ಕಿಂತ ಕಡಿಮೆಯಿರಲಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಪಂದ್ಯದಲ್ಲಿ ಸೂಪರ್ ಓವರ್ ವೇಳೆ ಅಂಪೈರ್ ನೀಡಿದ ' ನೋ ಬಾಲ್ ತೀರ್ಪು ಅತಿ ದೊಡ್ಡ ಟ್ವಿಸ್ಟ್ ಆಗಿ ಹೊರಹೊಮ್ಮಿತು. ನಿಖರ ತಂತ್ರಜ್ಞಾನ ನೆರವಿಲ್ಲದೆ ನೀಡಲಾದ ಈ ತೀರ್ಪು, ನಾಟಕೀಯ ಕಥೆಯೊಂದರ ವಿವಾದಾತ್ಮಕ ಸನ್ನಿವೇಶದಂತೆ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಅಶ್ವಿನ್ ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಪಂದ್ಯವು ಕೇವಲ ಕ್ರಿಕೆಟ್ ಸ್ಪರ್ಧಿಯಾಗಿರದೆ, ಒತ್ತಡ , ಭಾವನೆ ಮತ್ತು ವಿವಾದಗಳಿಂದ ಕೂಡಿದ ನಿಜವಾದ 'ನಾಟಕೀಯ ರಂಗಭೂಮಿ' ಯಂತೆ ಪರಿಣಮಿಸಿತು.
ಸೂಪರ್ ನಲ್ಲಿ ಬಂದ ನೋ ಬಾಲ್ ತೀರ್ಪು ಈ ಪಂದ್ಯದ ಅತಿ ದೊಡ್ಡ ಟ್ವಿಸ್ಟ್ ಆಗಿತ್ತು. ನಿಖರ ತಂತ್ರಜ್ಞಾನ ನೆರವಿಲ್ಲದೆ ಅಂಪೈರ್ ನೀಡಿದ ಈ ತೀರ್ಪು, ನಾಟಕ ಒಂದರ ವಿವಾದಾತ್ಮಕ ಸನ್ನಿವೇಶದಂತೆ ಇಡಿ ಪಂದ್ಯದ ದಿಕ್ಕನ್ನೇ ಪೂರ್ಣವಾಗಿ ಬದಲಿಸಿತು ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಕತ್ತಲಾಗುತ್ತಿದ್ದ ಸಂದರ್ಭವನ್ನು ಬಳಸಿಕೊಂಡು ಶ್ರೀಲಂಕಾ ಆಟಗಾರರು ಕ್ರೀಸ್ ಗೆ ಬರಲು ತೋರಿಸಿದ ವಿಳಂಬವು ಪಕ್ಕ ಚಿತ್ರಕಥೆಯ 'ವಿಲನ್ ತಂತ್ರ'ಗಳಂತೆ ಕಂಡುಬಂದಿತು. ಇದು ಭಾರತೀಯ ಆಟಗಾರರಲ್ಲಿ ತೀವ್ರ ಹಿತಾಶೆ ಮತ್ತು ಆಗ್ರೋಶವನ್ನು ಉಂಟು ಮಾಡಿತು ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಪದ್ಯಕ್ಕೆ ಕ್ಲೈಮ್ಯಾಕ್ಸ ನಲ್ಲಿ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಾ ಮೈದಾನದಲ್ಲಿ ಪರಸ್ಪರ ತಲಾಟಕ್ಕೆ ಮುಂದಾದ ಘಟನೆ, ಪಂದ್ಯದಲ್ಲಿದ್ದ ತೀವ್ರ ಮಾನಸಿಕ ಒತ್ತಡ ಮತ್ತು ಭಾವನೆಗಳ ಸ್ಪೋಟವನ್ನು ಸ್ಪಷ್ಟವಾಗಿ ತೋರಿಸಿತು ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ.
ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದ ಇದು ಸರಿಯಲ್ಲದಿದ್ದರೂ,ವೀಕ್ಷರಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಇದೊಂದು ಮರೆಯಲಾಗದ, ಅತ್ಯಂತ ರೋಮಾಂಚಕ "ನಾಟಕೀಯ ಪಂದ್ಯವಾಗಿತ್ತು" ಎಂದು ರವಿಚಂದ್ರನ್ ಅಶ್ವಿನಿ ಹೇಳಿದ್ದಾರೆ.
ಮೊದಲ ಬ್ಯಾಟಿಂಗ್ ಮಾಡಿದ ಭಾರತ 'ಎ' ತಂಡವು 49.2 ಓವರ್ ಗಳಲ್ಲಿ 265 ಅಂಕಗಳನ್ನು ಕಲೆ ಹಾಕಿತು.ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 'ಎ' ತಂಡವು 50 ಓವರ್ ಗಳಲ್ಲಿ 265 ರನ್ನುಗಳನ್ನು ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.
ಆ ಬಳಿಕ ನಡೆದ ಸೂಪರ್ ಓವರ್ ನಲ್ಲಿ ಶ್ರೀಲಂಕಾ 16 ರನ್ ಗಳನ್ನು ಬಾರಿಸಿತು. 17 ಓವರ್ ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 6 ಎಸೆತಗಳಲ್ಲಿ ಒಂಬತ್ತು ರನ್ ಗಳನ್ನಷ್ಟೇ ಗಳಿಸಿ 7 ರನ್ ಗಳಿಂದ ಸೋಲೊಪ್ಪಿಕೊಂಡಿತು.
Also Read:
India ಮೈತ್ರಿ ಒಗ್ಗಟ್ಟಿಗೆ ಧಕ್ಕೆ: ರಾಹುಲ್ ಗಾಂಧಿ ವಿರುದ್ಧ ಡಿಎಂಕೆ ಕಿಡಿ