<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಬಾಡಿಗೆಗೆ ತಂದ ಗರಿ ಮಾತ್ರ,ಯಾವುದೇ ಜೀವಿಗೆ ಹಾನಿಯಾಗಿಲ್ಲ;'ಕಿಶನ್ ಹೇಳಿಕೆ

ಬಾಡಿಗೆಗೆ ತಂದ ಗರಿ ಮಾತ್ರ,ಯಾವುದೇ ಜೀವಿಗೆ ಹಾನಿಯಾಗಿಲ್ಲ;'ಕಿಶನ್ ಹೇಳಿಕೆ
Summary: Kishan has clarified the criticisms heard on social media and in some circles regarding the use of feathers. "We rented feathers. We did not harm or torture any birds," he said. Kishan clarified that the allegations being made against him are far from the truth and all the steps have been taken as per the rules.

BELAGAVI NEWS :

ಕಿಶನ್ ನೃತ್ಯ ವಿವಾದಕ್ಕೆ ಸ್ಪಷ್ಟನೆ : ನವಿಲುಗರಿ ಬಾಡಿಗೆಗೆ ಬಳಸಿದ್ದು, ನಿಯಮ ಉಲ್ಲಂಘನೆ ಇಲ್ಲ'

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ನವಿಲುಗರಿ ಬಳಸಿ ಕಿಶನ್ ಮಾಡಿದ ನೃತ್ಯದ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಕುರಿತು ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಯಾದ ನಂತರ, ಕಿಶನ್ ಅವರು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಸ್ಪಷ್ಟನೆಯಲ್ಲಿ, ನವಿಲುಗರಿಯನ್ನು ಕಾನೂನು ಬದ್ಧವಾಗಿ ಬಾಡಿಗೆಗೆ ಪಡೆದು ಬಳಸಲಾಗಿತ್ತು ಮತ್ತು ಯಾವುದೇ ನಿಯಮ ಉಲ್ಲಂಘನೆ ಅಥವಾ ಪಕ್ಷಿಗಳಿಗೆ ಹಾನಿ ಮಾಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಉದ್ದೇಶಪೂರ್ವಕವಾಗಿ ಯಾವುದೇ ಜೀವಗಳಿಗೆ ತೊಂದರೆ ನೀಡಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

Sponsored

ಈ ಘಟನೆ ಸಂಬಂಧಿಸಿದಂತೆ ಹೊರಬಂದಿರುವ ಟೀಕೆಗಳು ಮತ್ತು ತಪ್ಪು ಮಾಹಿತಿಗಳನ್ನು ನಿರಾಕರಿಸುವ ಕಿಶನ್, ವಿಷಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಈ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕಿಶನ್ ವಿವಾದಕ್ಕೆ ಸ್ಪಷ್ಟನೆ : 'ನವಿಲುಗರಿ ಬಾಡಿಗೆ ಬಳಕೆ, ಹಾನಿ ಉದ್ದೇಶ ಇರಲಿಲ್ಲ'

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ನವಿಲುಗರಿ ಬಳಸಿ ಮಾಡಲಾದ ನೃತ್ಯ ವಿಡಿಯೋ ಕುರಿತು ಉಂಟಾದ ವಿವಾದಕ್ಕೆ ಸಂಬಂಧಿಸಿ ಕಿಶನ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. "ಸಾಮಾನ್ಯವಾಗಿ ಕೃಷ್ಣ ಜನ್ಮಾಷ್ಟಮಿ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಿಗೆ ಬಳಸುವಂತೆ, ನಾವು ಕೂಡ ವಿಡಿಯೋ ಕಾನ್ಸೆಪ್ಟ್ ಗಾಗಿ ಅಂಗಡಿ ಒಂದರಿಂದ ನವಿಲುಗರಿಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದೆವು. ಯಾವುದೇ ಪಕ್ಷಿಗೆ ವಯಕ್ತಿಕವಾಗಿ ಹಾನಿ ಮಾಡಲಾಗಿಲ್ಲ" ಎಂದು ಅವರು ತಿಳಿಸಿದ್ದಾರೆ

ಅವರು ಮುಂದುವರೆದು, ನವಿಲುಗರಿಗಳನ್ನು ಈ ರೀತಿ ವಾಣಿಜ್ಯವಾಗಿ ಬಾಡಿಗೆಗೆ ನೀಡುವುದು ಅಥವಾ ಬಳಸುವುದು ಕಾನೂನು ಬಾಹಿರ ಎಂಬ ಅರಿವು ನಮಗೂ ಹಾಗೂ ತಮ್ಮ ತಂಡಕ್ಕೂ ಇರಲಿಲ್ಲ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯಿಂದ ನೋಟಿಸ್ ಬಂದ ಬಳಿಕ ಅಧಿಕಾರಿಗಳು ಈ ವಿಷಯದ ಗಂಭೀರತೆಯನ್ನು ವಿವರಿಸಿದ್ದು, ತಕ್ಷಣವೇ ಅಗತ್ಯ ಸಹಕಾರ ನೀಡಲಾಗಿದೆ ಎಂದು ಕಿಶನ್ ಸ್ಪಷ್ಟಪಡಿಸಿದ್ದಾರೆ.

Sponsored

ಈ ವಿವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರೆದ ಚರ್ಚೆಗೆ ಕಾರಣವಾಗಿದ್ದು, ನಿಯಮಗಳ ಕುರಿತು ಜಾಗೃತಿ ಅಗತ್ಯವೆಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಕಿಶನ್ ಕ್ಷಮೆ ಯಾಚನೆ: 'ವಿಡಿಯೋ ತೆಗೆದು ಹಾಕಿದ್ದೇವೆ,ಯಾರಿಗಾದರೂ ಬೇಸರವಾದರೆ ಕ್ಷಮೆ ಕೇಳುತ್ತೇನೆ'

ನವಿಲುಗರಿ ಬಳಕೆಯ ನೃತ್ಯ ವಿಡಿಯೋ ಸಂಬಂಧ ಉಂಟಾದ ವಿವಾದಕ್ಕೆ ಪ್ರತಿಕ್ರಿಯಿಸಿರುವ ಕಿಶನ್, ಸಮಾಜಕ್ಕೆ ತಪ್ಪು ಸಂದೇಶ ಹೊಗಬಾರದು ಎಂಬ ಜವಾಬ್ದಾರಿಯಿಂದ ತಾವು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದುಹಾಕಿರುವುದಾಗಿ ತಿಳಿಸಿದ್ದಾರೆ.

"ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎಂಬ ಜವಾಬ್ದಾರಿಯಿಂದ ನಾವು ತಕ್ಷಣವೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ" ಎಂದು ಅವರು ಹೇಳಿದ್ದಾರೆ.

Sponsored

ಅದೇ ವೇಳೆ, ತಮ್ಮ ನಡೆ ಯಾರಿಗಾದರೂ ಬೇಸರ ತಂದಿದ್ದರೆ ನಿಜಕ್ಕೂ ಕ್ಷಮೆ ಕೇಳುತ್ತೇನೆ ಎಂದು ಹೇಳಿರುವ ಕಿಶನ್, ಈ ಘಟನೆ ಮೂಲಕ ಉಂಟಾದ ಗೊಂದಲಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ವಿವಾದದ ನಂತರ ವಿಷಯ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

Also Read:

ರಾಸ್ ಲಫಾನ್ ದುರಂತ : ಪ್ರಧಾನಿ ಮೋದಿಗೆ ಕರೆ ಮಾಡಿ ವಿಷದ ವ್ಯಕ್ತಪಡಿಸಿದ ಕತಾರ್ ಅಮೀರ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online