<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ವಿಶೇಷ ಪತ್ರ : ಭಕ್ತರಿಗೆ ನೀಡಿದ 5 ಶಪಥಗಳು ವೈರಲ್

ಅಮರನಾಥ ಯಾತ್ರಿಕರಿಗೆ ಪ್ರಧಾನಿ ಮೋದಿ ವಿಶೇಷ ಪತ್ರ :  ಭಕ್ತರಿಗೆ ನೀಡಿದ 5 ಶಪಥಗಳು ವೈರಲ್
Summary: Prime Minister Narendra Modi has written a special letter to Amarnath pilgrims, asking them to follow five vows related to devotion, knowledge and safety. This message has won the hearts of devotees.

Belagavi News:

ಈ ವರ್ಷದ ಪವಿತ್ರ ಅಮರನಾಥ ಯಾತ್ರೆ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರಿಕರಿಗೆ ವಿಶೇಷ ಎರಡು ಪುಟಗಳ ಪತ್ರ ಬರೆದು ಶುಭಾಶಯ ತಿಳಿಸಿದ್ದಾರೆ. "ಹರ ಹರ ಮಹದೇವ್" ಮತ್ತು "ಜೈ ಬಾಬಾ ಬರ್ಫಾನಿ" ಘೋಷಣೆಗಳೊಂದಿಗೆ ಭಕ್ತರಿಗೆ ಶುಭಕೋರಿರುವ ಪ್ರಧಾನಿ, ಯಾತ್ರೆಯನ್ನು ಸ್ವಚ್ಛ, ಸುರಕ್ಷಿತ ಹಾಗೂ ಅರ್ಥಪೂರ್ಣವಾಗಿಸಲು "5 ಪ್ರತಿಜ್ಞೆಗಳು" ಪಾಲಿಸುವಂತೆ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಾತ್ರದಲ್ಲಿ ಸ್ವಚ್ಛತೆ, ಸುರಕ್ಷತೆ, ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಪ್ರಥಮ ಎಂಬ ಐದು ಪ್ರಮುಖ ಅಂಶಗಳನ್ನು ಪಾಲಿಸುವಂತೆ ಯಾತ್ರಿಕರಿಗೆ ಮನವಿ ಮಾಡಿದ್ದಾರೆ. ಈ ಪ್ರತಿಜ್ಞೆಗಳು ಯಾತ್ರೆಯ ಅನುಭವವನ್ನು ಮಾತ್ರವಲ್ಲದೆ ಸಮಾಜ ಮತ್ತು ದೇಶದ ಅಭಿವೃದ್ಧಿಗೂ ಸಹಕಾರಿಯಾಗುತ್ತವೆ ಎಂದು ಅವರು ಹೇಳಿದ್ದಾರೆ.

ವಿಕಸಿತ ಭಾರತ ನಿರ್ಮಾಣದ ಹಾದಿಯಲ್ಲಿ ಯಾಂತ್ರಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಧಾರ್ಮಿಕ ಯಾತ್ರೆಗಳು ಜವಾಬ್ದಾರಿಯುತ ಹಾಗೂ ಪರಿಸರಸ್ನೇಹಿಯಾಗಿ ನಡೆಯಬೇಕು ಎಂದು ಪ್ರಧಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಯಾತ್ರೆಯ ಸಂದರ್ಭದಲ್ಲಿ ಪವಿತ್ರತೆಯ ಕಾಪಾಡುವುದು ಹಾಗೂ ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಬೆಂಬಲ ನೀಡುವುದು ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಧಾನಿಯಾಗಿ ಸಂದೇಶದ ಭಕ್ತರ ಮನೆಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಯಾತ್ರೆಯ ಆರಂಭಕ್ಕೂ ಮುನ್ನ ಬಂದ ಈ ಪತ್ರವನ್ನು ಭಕ್ತರು ಮಾರ್ಗದರ್ಶಕ ಸಂದೇಶವಾಗಿ ಸ್ವೀಕರಿಸಿದ್ದಾರೆ.

ಅಮರನಾಥ ಯಾತ್ರೆ ಪ್ರಧಾನಿ ಮೋದಿ ನೀಡಿದ 'ಐದು ಪ್ರತಿಜ್ಞೆಗಳು ' ಯಾವವು? ಸ್ವಚ್ಛತೆ ಸುರಕ್ಷತೆ ಸೇರಿ ಪ್ರಮುಖ ಸಂದೇಶಗಳು

ನವದೆಹಲಿ : ಈ ವರ್ಷದ ಅಮರನಾಥ ಯಾತ್ರೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಯಾತ್ರಿಕರಿಗೆ ವಿಶೇಷ ಸಂದೇಶವೊಂದನ್ನು ನೀಡಿ ಯಾತ್ರೆಯನ್ನು ಸ್ವಚ್ಛ, ಸುರಕ್ಷಿತ ಮತ್ತು ಅರ್ಥಪೂರ್ಣವಾಗಿಸಲು '5 ಪ್ರತಿಜ್ಞೆಗಳು' ಪಾಲಿಸುವಂತೆ ಕರೆ ನೀಡಿದ್ದಾರೆ. ಈ ಪ್ರತಿಜ್ಞೆಗಳು ಸಾಮಾಜಿಕ, ಪರಿಸರ ಮತ್ತು ರಾಷ್ಟ ನಿರ್ಮಾಣದ ದೃಷ್ಟಿಯಿಂದ ಮಹತ್ವದ್ದಾಗಿವೆ.

ಐದು ಪ್ರತಿಜ್ಞೆಗಳ ವಿವರ:

1. ಸ್ವಚ್ಛತೆ: ಇಡೀ ಯಾತ್ರಾ ಮಾರ್ಗದಲ್ಲಿ ನೈರ್ಮಲ್ಯ ಕಾಪಾಡುವುದು ಈ ಪ್ರತಿಜ್ಞೆಯ ಮುಖ್ಯ ಉದ್ದೇಶವಾಗಿದೆ.

2. ಸುರಕ್ಷಿತ್ತಾ ನಿಯಮಗಳ ಪಾಲನೆ : ಮಳೆ, ಶೀತ ಹಾಗೂ ಜ್ವರ ರಸ್ತೆಗಳಲ್ಲಿರುವ ಕಾರಣ ಆಡಳಿತ ನೀಡುವ ಸುರಕ್ಷತಾ ಸಲಹೆಗಳು ಮತ್ತು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪ್ರಧಾನಿ ಹೇಳಿದ್ದಾರೆ. 3. ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ (ವೋಕಲ್ ಫಾಲ್ ಲೋಕಲ್) : ಜಮ್ಮು & ಕಾಶ್ಮೀರದ ಸ್ಥಳೀಯ ಕುಟುಂಬಗಳು ಹಾಗೂ ಯುವಕರ ಜೀವನೋಪಾಯಕ್ಕೆ ನೆರವಾಗಲು, ಯಾತ್ರೆಯ ಒಟ್ಟು ವೆಚ್ಚದ ಕನಿಷ್ಠ ಶೇಕಡ ಹತ್ತರಷ್ಟು ಸ್ಥಳೀಯ ಉತ್ಪನ್ನಗಳ ಖರೀದಿಗೆ ಬಳಸುವಂತೆ ಸಲಹೆ ನೀಡಿದ್ದಾರೆ.

4. ಪರಿಸರ ಸಂರಕ್ಷಣೆ (ಏಕ್ ಪೆಡ್ ಮಾ ಕೆ ನಾಮ್ ) :

ಯಾತ್ರೆಯ ನಂತರ 'ರಕ್ಷಾ ಬಂಧನ' ದ ದಿನದಂದು ಸಹೋದರ ಅಥವಾ ಸಹೋದರಿಗೆ ಒಂದು ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.

5. ರಾಷ್ಟ್ರಪ್ರಥಮ (ನೇಷನ್ ಫಸ್ಟ್) : ಯಾತ್ರೆ ಮುಗಿದ ನಂತರವೂ "ರಾಷ್ಟ್ರವೇ ಮೊದಲು" ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ "ವಿಕಸಿತ ಭಾರತ" ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮೋದಿ ಹೇಳಿದ್ದಾರೆ.

ಯಾತ್ರಾ ಸೇವೆಗಳ ಶ್ಲಾಘನೆ :

ಅಮರನಾಥ ದೇವಾಲಯ ಮಂಡಳಿ, ಜಮ್ಮು ಕಾಶ್ಮೀರ್ ಆಡಳಿತ, ಭಾರತೀಯ ಸೇನೆ, ಸಿಆರ್ ಪಿಎಫ್ , ಪೊಲೀಸ್, ಐಟಿಬಿಪಿ, ಬಿಎಸ್ಎಫ್, ಎನ್ ಡಿ ಆರ್ ಎಫ್ , ವೈದ್ಯರು ಹಾಗೂ ಪಯಂಸೇವಕರ ನಿಸ್ವಾರ್ಥ ಸೇವನೆಯನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಜೊತೆಗೆ ಸ್ಥಳೀಯ ಕುದುರೆ ಮಾಲೀಕರು ಹಾಗೂ ಪಲ್ಲಕ್ಕಿ ಹರುವವರ ಕೊಡುಗೆಯನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

ಭಕ್ತರ ಪ್ರತಿಕ್ರಿಯೆ :

ಪ್ರಧಾನಿಯ ಈ ಸಂದೇಶ ಭಕ್ತರ ಮನ ಗೆದ್ದಿದ್ದು, ಯಾತ್ರೆಯ ಮಾರ್ಗದಲ್ಲಿ ಅನೇಕರು ಪತ್ರವನ್ನು ಕೈಯಲ್ಲಿ ಹಿಡಿದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಈ ಪ್ರತಿಜ್ಞೆಗಳನ್ನು ದಿನನಿತ್ಯ ಜೀವನದಲ್ಲೂ ಪಾಲಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೊನೆಯಲ್ಲಿ ಪ್ರಧಾನಿ ಮೋದಿ, ಬಾಬಾ ಅಮರನಾಥರ ಆಶೀರ್ವಾದ ಎಲ್ಲರ ಮೇಲಿರಲಿ, ಯಾತ್ರೆ ಸುರಕ್ಷಿತ ಹಾಗೂ ಮಂಗಳಕರವಾಗಿರಲಿ ಎಂದು ಶುಭ ಹಾರೈಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online