ಭೂತನ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಭೂತನ್ ರಾಜನ ಹುಟ್ಟುಹಬ್ಬ ಹಾಗೂ ಪುನತ್ಸಂಗ್ಚು-2 ಜಲವಿದ್ಯುತ್ ಯೋಜನೆಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೂತನ್ ಪ್ರವಾಸ ಕೈಗೊಂಡಿದ್ದಾರೆ.
ಥಿಂಪು(ಭೂತನ್):
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ತ್ಶೆರಿಂಗ್ ಟೋಬ್ಗೆ, ಭೂತನ್ಗೆ ಬಂದಿಳಿದ ನಮ್ಮ ಪ್ರೀತಿಯ ಸಹೋದರನಿಗೆ ದೇಶದ ಜೊತೆ ಸೇರಿ ಸ್ವಾಗತಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಭೂತನ್ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೇ ವಾಂಗ್ಚುಕ್ ಅವರ 70ನೇ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಭೂತನ್ ಪ್ರವಾಸ ಕೈಗೊಂಡಿದ್ದು, ಇಂದು ಪರೊ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ, ಅವರನ್ನು ಭೂತನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಪ್ರೀತಿಯಿಂದ ಬರಮಾಡಿಕೊಂಡರು.
ಭಾರತ-ಭೂತಾನ್ ಜಂಟಿಯಾಗಿ ಅಭಿವೃದ್ಧಿಪಡಿಸಿದ 1,020 ಮೆಗಾವ್ಯಾಟ್ ಪುನತ್ಸಂಗ್ಚು-2 ಜಲವಿದ್ಯುತ್ ಯೋಜನೆಯನ್ನು ಮೋದಿ ಮತ್ತು ವಾಂಗ್ಚುಕ್ ಜಂಟಿಯಾಗಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಭೂತಾನ್ ರಾಜನ 70ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲೂ ಭಾಗಿಯಾಗಲಿದ್ದಾರೆ.
ಭೂತನ್ ಪ್ರವಾಸಕ್ಕೂ ಮುನ್ನ ಹೇಳಿಕೆಯಲ್ಲಿ ಮೋದಿ, ಈ ಭೇಟಿ ಎರಡು ದೇಶಗಳ ನಡುವಿನ ನಮ್ಮ ಸಂಬಂಧ ಮತ್ತು ಸ್ನೇಹವನ್ನು ಗಟ್ಟಿಗೊಳಿಸಲಿದೆ ಹಾಗು ಪ್ರಗತಿ ಮತ್ತು ಸಮೃದ್ಧಿಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುವ ಎಂಬ ವಿಶ್ವಾಸವಿದೆ. ಭೂತನ್ನ ನಾಲ್ಕನೇ ರಾಜ 70ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದು ನನಗೆ ಗೌರವ ತಂದಿದೆ.
ಭಾರತ ಮತ್ತು ಭೂತನ್ ಸ್ನೇಹ ಮತ್ತು ಆಳವಾದ ಪರಸ್ಪರ ನಂಬಿಕೆ, ತಿಳುವಳಿಕೆ ಹೊಂದಿದೆ. ಪುನತ್ಸಂಗ್ಚು-2 ಜಲವಿದ್ಯುತ್ ಯೋಜನೆ ನಮ್ಮ ಯಶಸ್ವಿ ಇಂಧನ ಪಾಲುದಾರಿಕೆಯಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಈ ಭೇಟಿಯ ವೇಳೆ ಮೋದಿ ಅವರು ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್ಗ್ಯಾಲ್ ವಾಂಗ್ಚುಕ್ ಮತ್ತು ಪ್ರಧಾನಿ ಟೋಬ್ಗೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಈ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಚೈತನ್ಯ ತುಂಬುವುದು ಹಾಗು ನಮ್ಮ ಸ್ನೇಹದ ವಿಶೇಷ ಬಂಧವು ಎರಡು ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ ಎಂದು ವಿದೇಶಾಂಗ ಸಚಿವಾಲಯ ಕೂಡ ತಿಳಿಸಿದೆ.
ಭೂತಾನಿನಲ್ಲಿ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ಆಯೋಜನೆಯ ಸಂದರ್ಭದಲ್ಲಿ ಭಾರತದಿಂದ ಭಗವಾನ್ ಬುದ್ಧನ ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವು ನಮ್ಮ ಎರಡೂ ದೇಶಗಳ ಆಳವಾದ ನಾಗರಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ ಎಂದೂ ಬರೆದುಕೊಂಡಿದ್ದಾರೆ.
ಇನ್ನಷ್ಟು ಓದಿರಿ :
ದೆಹಲಿ ಸ್ಫೋಟದ ರೂವಾರಿಗಳನ್ನು ನಾವು ಬಿಡುವುದಿಲ್ಲ: ಮೋದಿ