<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಪಾಕಿಸ್ತಾನ್ ರೈಲ್ವೆ ಇಲಾಖೆ ಸಂಕಷ್ಟದಲ್ಲಿ: ಬೋರ್ಡ್ ಬರವಣಿಗೆಗೂ ಸೀಮೆ ಸುಣ್ಣ ಬಳಕೆ!

ಪಾಕಿಸ್ತಾನ್ ರೈಲ್ವೆ ಇಲಾಖೆ ಸಂಕಷ್ಟದಲ್ಲಿ: ಬೋರ್ಡ್ ಬರವಣಿಗೆಗೂ ಸೀಮೆ ಸುಣ್ಣ ಬಳಕೆ!
Summary: The financial woes of the Pakistan Railways have once again drawn attention. It has been reported that there is a shortage of funds even for the basic facilities required for writing the route name boards at the railway stations.

beagavi news :

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ವೇಗವಾಗಿ ಮುಂದುವರೆಯುತ್ತಿರುವ ನಡುವೆಯೂ,ಕೆಲವೊಮ್ಮೆ ಸರಳ ಮತ್ತು ಹಳೆಯ ವಿಧಾನಗಳು ಜನರ ಗಮನ ಸೆಳೆಯುತ್ತಿವೆ.ಅಂತಹ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದ ರೈಲ್ವೆ ಇಲಾಖೆ ಬಳಸಿದ ಮಿತವ್ಯಯದ ಕ್ರಮವೇ ಚರ್ಚೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, Pakistan Railways ಅಡಿಯಲ್ಲಿ ಸಂಚರಿಸುವ ಒಂದು ಎಕ್ಸ್ಪ್ರೆಸ್ ರೈಲಿನಲ್ಲಿ ದುಬಾರಿ ಡಿಜಿಟಲ್ ಬೋರ್ಡ್ ಗಳು ಬದಲು ಸೀಮೆ ಸುಣ್ಣದಿಂದ ರೈಲು ಮಾರ್ಗದ ಹೆಸರನ್ನು ಬರೆಯಲಾಗಿದೆ.ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ರೈಲು ಸುಮಾರು 16 ಗಂಟೆಗಳ ಪ್ರಯಾಣದಿಂದ ಸುಮಾರು ೧,೦೦೦ಕಿಲೋಮೀಟರ್ ದೂರವನ್ನು ಕ್ರಮಿಸಿ, Lahore ರಿಂದ karachi ವರೆಗೆ ಸಂಚರಿಸುತ್ತದೆ ಎಂದು ತಿಳಿದು ಬಂದಿದೆ.ವಿಡಿಯೋದಲ್ಲಿ ರೈಲಿನ ಬೋರ್ಡ್ ಮೇಲೆ ಸೀಮೆ ಸುಣ್ಣದಿಂದ ಮಾರ್ಗದ ಹೆಸರು ಬರೆಯಲಾಗಿರುವುದು ಕಾಣಿಸುತ್ತದೆ.

Sponsored

ಈ ದೃಶ್ಯವನ್ನು ನೋಡಿ ಭಾರತೀಯ ನೆಟ್ಟಿಗರು ಹಾಸ್ಯಾತ್ಮಕ ಪ್ರತಿಕ್ರಿಯೆ ನೀಡಿದು, "ಮಳೆ ಬಂದರೆ ಮಾರ್ಗವೇ ಮಾಯವಾಗುತ್ತದೆ" ಎಂಬ ಪ್ರೀತಿಯ ತಮಾಷೆಯ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.ತಂತ್ರಜ್ಞಾನ ಕಾಲದಲ್ಲೂ ಇಂತಹ ಸರಳ ವಿಧಾನ ಬಳಕೆ ಮಾಡಿರುವುದು ಆಶ್ಚರ್ಯಕರಕ್ಕೂ ಕಾರಣವಾಗಿದೆ.

ಪಾಕಿಸ್ತಾನ ರೈಲ್ವೆ ನ ಈ ಕ್ರಮವು ಒಂದು ಕಡೆ ಮಿತವ್ಯದ ಉದಾಹರಣೆಯಾಗಿ ಕಾಣಿಸಿದರು,ಇನ್ನೊಂದು ಕಡೆ ಮೂಲ ಸೌಕರ್ಯ ಹಾಗೂ ಆಧುನಿಕರಣದ ಕೊರತೆಯ ಕುರಿತು ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ.

ಈ ವಿಡಿಯೋ ಈಗಾಗಲೇ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಲ್ಪಡುತ್ತಿದ್ದು,ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿವೆ.

ವಿದ್ಯುತ್ ಅಥವಾ ಡಿಜಿಟಲ್ ಬೋರ್ಡ್ ಗಳ ದುಬಾರಿ ವೆಚ್ಚಕ್ಕೆ ಪರ್ಯಾಯವಾಗಿ,ರೈಲ್ವೆ ಸಿಬ್ಬಂದಿಯು ರೂಟ್ ಬೋರ್ಡ್ ಮೇಲೆ ಉರ್ದು ಭಾಷೆಯಲ್ಲಿ ಸೀಮೆ ಸುಣ್ಣವನ್ನು ಬಳಸಿ ಅತ್ಯಂತ ಸರಳವಾಗಿ "ಮುಲ್ತಾನ್ ಜಕಾರಿಯಾ ಕರಾಚಿ" ಎಂದು ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Sponsored

ಪಾಕಿಸ್ತಾನ ರೈಲ್ವೆಯ ರೈಲಿನೊಂದರಲ್ಲಿ ಸೀಮೆ ಸುಣ್ಣದಿಂದ ಮಾರ್ಗದ ಹೆಸರು ಬರೆಯಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ,ಭಾರತೀಯ ನೆಟ್ಟಿಗರು ತಮ್ಮದೇ ಆದ ಹಾಸ್ಯ ಭರಿತ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.

ಕೆಲವರು ಇದನ್ನು ವ್ಯಂಗ್ಯವಾಗಿ"ರಹಸ್ಯ ತಂತ್ರಜ್ಞಾನ" ಎಂದು ಕರೆದಿದ್ದು,ಮಳೆ ಬಂದರೆ ಬೋರ್ಡ್ ಮೇಲೆ ಬರೆದ ಮಾರ್ಗ ಸ್ವಯಂ ಚಾಲಿತವಾಗಿ ಅಳಿದು ಹೋಗುತ್ತದೆ,ನಂತರ ರೈಲು ತಾನೇ ಹೊಸ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡು ಹೋಗಬಹುದು ಎಂಬ ರೀತಿಯ ತಮಾಷೆಯ ಕಾಮೆಂಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವೆ.

ವರದಿಗಳ ಪ್ರಕಾರ,ಈ ರೈಲು ಪಾಕಿಸ್ತಾನ ರೈಲ್ವೆಗೆ ಸೇರಿದ್ದು, ಎಸಿ ಸ್ಟ್ಯಾಂಡರ್ಡ್ ಭೋಗಿಗಳನ್ನು ಹೊಂದಿದ್ದರು,ಸೀಮೆ ಸುಣ್ಣದ ಬೋರ್ಡ್ ಬಳಕೆ ಮಾತ್ರ ಜನರ ಗಮನ ಸೆಳೆದಿದೆ.ಇದರ ನಡುವೆಯೂ ಈ ರೈಲು ದಿನನಿತ್ಯ ಸುಮಾರು ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗಮ್ಮಿ ಸ್ಥಾನಗಳಿಗೆ ತಲುಪಿಸುತ್ತದೆ.

ಲಾಹೋರ್-ಕರಾಚಿ ನಡುವಿನ ಈ ದೀರ್ಘ ಮಾರ್ಗದಲ್ಲಿ ಸಂಚರಿಸುವ ರೈಲಿನ ವಿಡಿಯೋ, ತಂತ್ರಜ್ಞಾನದ ವೈಭವಗಳ ನಡುವೆಯೂ ಸರಳ ವಿಧಾನಗಳು ಹೇಗೆ ಗಮನ ಸೆಳೆಯುತ್ತವೆ ಎಂಬುದನ್ನು ತೋರಿಸಿದೆ.ಜೊತೆಗೆ ಸಾರ್ವಜನಿಕರ ಹಾಸ್ಯ ಪ್ರಜ್ಞೆಗೂ ಸಾಕ್ಷಿಯಾಗಿದ್ದು,ಇಂಟರ್ನೆಟ್ ಲೋಕದಲ್ಲಿ ಲಘು ಮನರಂಜನೆಯ ವಾತಾವರಣವನ್ನು ಸೃಷ್ಟಿಸಿದೆ.

Sponsored

ಈ ಘಟನೆಯು ಎರಡು ದೇಶಗಳ ನೆಟ್ಟಿಗರ ನಡುವೆ ವ್ಯಂಗ್ಯ ಹಾಸ್ಯದ ಮೂಲಕ ಒಂದು ಅನೌಪಚಾರಿಕ ಸಂವಾದಕ್ಕೂ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಣ್ಣ ಹಾಸ್ಯದ ಅಲೆ ಹರಡಿದೆ.

Also Read:

ಮೆಟ್ರೋದಲ್ಲಿ ಸಿಎಂ ಡಿಕೆ ಶಿವಕುಮಾರ್ ಸರ್ಪ್ರೈಸ್ ಎಂಟ್ರಿ: ಪ್ರಯಾಣಿಕರು ಫುಲ್ ಖುಷ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online