belagavi news:
ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೆಲವರಿಗೆ ಈ ಫಲಿತಾಂಶ ಖುಷಿ ತಂದಿರಬಹುದು ಕೆಲವರಿಗೆ ಬೇಸರವಾಗಿರಬಹುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸದಾಶಿವ ನಗರ್ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದಲ್ಲೇ ಏನು ಆಗಲಿಲ್ಲ. ಈಗ ಏನಾಗುತ್ತದೆ?"ಎಂದು ಟೀಕಿಸಿದರು.
ಎಸ್ ಡಿಪಿಐ ಮತಗಳ ಕುರಿತು ಮಾತನಾಡಿದ ಡಿಕೆಶಿ, "ಎಸ್ ಡಿ ಪಿ ಐ ಓಟ್ ನಮಗೆ ಡೇಂಜರ್ ಆಗಿದೆ. ಇಷ್ಟು ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಎಸ್ ಡಿ ಪಿ ಐ ಕೂಡ 12,000 ಮತಗಳನ್ನು ಪಡೆದಿದೆ. ಈ ಬಗ್ಗೆ ಸಿಎಂ ಕೂಡ ಮಾತನಾಡಿದ್ದಾರೆ ಎಂದು ಹೇಳಿದರು.
ಅವರು ಮುಂದುವರೆದು, ಎಸ್ ಡಿ ಪಿ ಐ ಅನ್ನು ದಾವಣಗೆರೆಯಲ್ಲಿ ಲಘುವಾಗಿ ಪರಿಗಣಿಸಲಾಗಿತ್ತು ಎಂದು ಅದು ರಾಜಕೀಯ ಪಕ್ಷವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜೊತೆಗೆ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಜನರು ಸ್ಪಂದಿಸಿದ್ದಾರೆ ಈ ಫಲಿತಾಂಶ ಅದಕ್ಕೆ ಉದಾಹರಣೆ ಎಂದು ಡಿಕೆಶಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮತ್ ಡಿಲೀಟ್ ಮಾಡಲಾಗಿದೆ ಹಾಗೂ ಮಷೀನ್ ಗಳಲ್ಲಿ ಸಮಸೆ ಉಂಟಾಗಿದೆ ಎಂದು ಆರೋಪಿಸಿದರು ಅವರು ಗೆಲ್ಲಲೇ ಬೇಕು ಎಂಬ ಕಾರಣಕ್ಕೆ ಬಿಜೆಪಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಅಸ್ಸಾಂ ಚುನಾವಣೆಯಲ್ಲಿ ತಾವು ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ ಅವರು, ಹೆಚ್ಚಿನ ಸ್ಥಾನಗಳ ನಿರೀಕ್ಷೆಯಿತ್ತು. ಸ್ಥಳೀಯ ಮಟ್ಟದಲ್ಲಿಯೂ ಸುಮಾರು 50 ಸ್ಥಾನಗಳು ಸಿಗಬಹುದು ಎಂಬ ಅಂದಾಜಿತ್ತು ಎಂದು ತಿಳಿಸಿದ್ದಾರೆ. ಆದರೆ ಡಿಲಿಮಿಟೇಶನ್ ಕಾರ್ ನದಿಂದ ಪರಿಣಾಮ ಬದಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೇರಳದಲ್ಲಿ 10 ವರ್ಷಗಳ ನಂತರ ಬದಲಾವಣೆಗಾಗಿ ಜನರು ಆಶಿಸಿದ್ದರಿಂದ ಉತ್ತಮ ಬೆಂಬಲ ದೊರೆತಿದೆ ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಫಲಿತಾಂಶವನ್ನು ಆಶ್ಚರ್ಯಕರ ಎಂದು ಹೇಳಿದವರು, ಅಲ್ಲಿ ಹೊಸ ರಾಜಕೀಯ ಯುಗಾರಂಭವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತಮಿಳುನಾಡಿನ ಮತದಾನ ವರ್ತನೆಯನ್ನು ಸರಿಯಾಗಿ ಅಂದಾಜು ಮಾಡಲು ಸಾಧ್ಯವಾಗಲಿಲ್ಲ, 30 - 40% ಮತ ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಿದರು ಈ ಪ್ರಮಾಣದ ಬದಲಾವಣೆ ನಿರೀಕ್ಷೆಗೂ ಮೀರಿದದ್ದು ಎಂದು ತಿಳಿಸಿದ್ದಾರೆ.
ದೇಶದ ಅತಿ ದೊಡ್ಡ ಕ್ರೈಂ: ಶೃಂಗೇರಿ ಮತ ಎಣಿಕೆ ವಿಚಾರವಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, "ಇದು ದೇಶ ಅತಿ ದೊಡ್ಡ ಕ್ರೈಂ. ಸಂಪೂರ್ಣ ಮತಗಳನ್ನು ಇನ್ ವ್ಯಾಲಿಡ್ ಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ಅಗತ್ಯ" ಎಂದು ಹೇಳಿದ್ದಾರೆ.
ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ತಂದಿರುವುದಾಗಿ ತಿಳಿಸಿದ ಅವರು, " ಬ್ಯಾಲೆಟ್ ಗಳನ್ನು ಬಂಡಲ್ ನಲ್ಲಿ ಇಟ್ಟ ನಂತರ ಟ್ಯಾಂಪರ್ ಮಾಡಿ ನಂತರ ಒಂದೊಂದು ಮತವನ್ನು ಗುರುತು ಮಾಡಿ ಅಮಾನತುಗೊಳಿಸಲಾಗಿದೆ. ಇದು ಪೂರ್ವ ನಿಯೋಜಿತ ಕುತಂತ್ರ" ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದ್ದು, ಕಾನೂನು ಹೋರಾಟ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. "ಹಿಂದೆ ಸಹಕಾರ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ನುಂಗಿದ ಘಟನೆ ನಡೆದಿತ್ತು. ಆದರೆ ಈಗ ಅಧಿಕಾರಿಗಳ ದುರುಪಯೋಗ ಮಾಡಿಕೊಂಡು ಈ ರೀತಿಯ ಘಟನೆ ನಡೆದಿರುವುದು ಶಾಕ್ ನೀಡಿದೆ" ಎಂದರು.
"ಇದು ಅಂತಾರಾಷ್ಟ್ರೀಯ ಮಟ್ಟದ ಗಂಭೀರ ಕ್ರೈಂ ಆಗಿದ್ದು, ಈ ಹಿಂದೆ ನಿರೀಕ್ಷಿಸಿರಲಿಲ್ಲ" ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
Also Read: