<?= $pageTitle ?>
Logo
ಮುಖಪುಟ ಓದುವುದು ಕೇಳು
Trending

Work From Home ಸಲಹೆ ನೀಡಿದ ಪ್ರಧಾನಿ ಮೋದಿ

Work From Home ಸಲಹೆ ನೀಡಿದ ಪ್ರಧಾನಿ ಮೋದಿ
Summary: Prime Minister Narendra Modi's advice to work from home has now become a hot topic of discussion in the travel industry. The industry is concerned that if remote working arrangements increase, it will have a direct impact on the travel and transport sectors. In this context, representatives of the travel sector have made an open appeal to Prime Minister Modi, requesting him to consider the difficulties of the industry and the impact on the lives of millions of employees.

belagavi news :

PM Modi WFH Advise : ಚಿನ್ನ ಖರೀದಿ ಕಡಿಮೆ ಮಾಡಿ, ವರ್ಕ್ ಫ್ರಂ ಹೋಂ ಗೆ ಆದ್ಯತೆ ನೀಡಿ ಎಂದು ಹೇಳಿಕೆ ಕಾರಣ ಹೈದರಾಬಾದ್ ನಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕೆಲವು ಸಲಹೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಚಿನ್ನವನ್ನು ಹೆಚ್ಚು ಕಳುಹಿಸಬೇಡಿ, "ವರ್ಕ್ ಫ್ರಂ ಹೋಂ ಗೆ ಆದ್ಯತೆ ನೀಡಿ"ಎಂಬ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯನ್ನು ಬಿಟ್ಟು ಹಾಕಿದೆ. ವರ್ಕ್ ಫ್ರಂ ಹೋಂ ಕುರಿತಾ ಈ ಅಭಿಪ್ರಾಯದಿಂದ ಪ್ರವಾಸ ಮತ್ತು ಸಾರಿಗೆ ಕ್ಷೇತ್ರದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಚಿಂತೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘವು ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದ್ದು, ಉದ್ಯಮದ ಸ್ಥಿತಿ ಹಾಗೂ ಉದ್ಯೋಗಾವಕಾಶಗಳ ಮೇಲೆ ಈ ರೀತಿಯ ಸಲಹೆಗಳ ಪರಿಣಾಮವನ್ನು ಪರಿಗಣಿಸುವಂತೆ ವಿನಂತಿಸಿದೆ.

ದೇಶದ ಇಂಧನ ಭದ್ರತೆ ಹಾಗೂ ಆರ್ಥಿಕ ಸಮತೋಲನ ಕಾಪಾಡುವ ಅಗತ್ಯವನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ ರಾಮಕೃಷ್ಣ ಹೊಳ್ಳ ಹೇಳಿದ್ದಾರೆ. ಅಗತ್ಯವಿದ್ದರೆ ದೇಶದ ಜನತೆಗೆ ಅನಗತ್ಯ ಚಿನ್ನ ಖರೀದಿ, ಅನಾವಶ್ಯಕ ವಿದೇಶ ಪ್ರವಾಸಗಳು, ಅತಿಯಾದ ಖರ್ಚು ಹಾಗೂ ಆಮದು ಮಧ್ಯ ಬಳಕೆಯನ್ನು ಕಡಿಮೆ ಮಾಡುವಂತಹ ಜವಾಬ್ದಾರಿಯುತ ಕ್ರಮಗಳನ್ನು ಅನುಸರಿಸಬಹುದು ಎಂದು ಅವರು ತಿಳಿಸಿದ್ದಾರೆ. ಆರ್ಥಿಕ ಸುಸ್ತು ಮತ್ತು ದೇಶಿಯ ಸಂಪನ್ಮೂಲಗಳ ಸಮರ್ಪಕ ಬಳಕೆ ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅಗತ್ಯವಾಗಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತ ರಾಗಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದಾದ್ಯಂತ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಮಾಡುತ್ತಿರುವ ಎಂಪ್ಲಾಯಿ ಟ್ರಾನ್ಸ್ ಪೋರ್ಟ್ ಉದ್ಯಮವನ್ನು ಕಡೆಗಣಿಸುವುದು ಅತ್ಯಂತ ಬೇಸರದ ವಿಷಯವಾಗಿದೆ"ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ. ಯಾವುದೇ ವಿಶೇಷ ಸರ್ಕಾರಿ ನೆರವಿಲ್ಲದೆ, ಬ್ಯಾಂಕ್ ಸಾಲಗಳು, ಅಡಮಾನ ಸಾಲಗಳು ಹಾಗೂ ಓವರ್ ಡ್ರಾಫ್ಟ್ ಸೌಲಭ್ಯಗಳ ಮೂಲಕ ವಾಹನಗಳನ್ನು ಖರೀದಿಸಿ ಈ ಉದ್ಯಮವನ್ನು ನಡೆಸುತ್ತಿರುವ ಸಾವಿರಾರು ಉದ್ಯಮಿಗಳು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇವರು ಸರ್ಕಾರಕ್ಕೆ ಉತ್ತಮ ಪ್ರಮಾಣದ ತೆರಿಗೆ ಹಾಗೂ ಜಿ ಎಸ್ ಟಿ ಪಾವತಿಸುತ್ತಾ, ದೇಶದ ಐಟಿ, ಕಾರ್ಪೊರೇಟ್ ಹಾಗೂ ಕೈಗಾರಿಕಾ ವಲಯಗಳಿಗೆ ನಿರಂತರ ಸಾರಿಗೆ ಸೇವೆ ಒದಗಿಸುತ್ತಿರುವುದಾಗಿ ಹೊಳ್ಳ ಹೇಳಿದ್ದಾರೆ. ಉದ್ಯಮದ ಪಾತ್ರವನ್ನು ಸೂಕ್ತವಾಗಿ ಗುರುತಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.

ಸಾರಿಗೆ ಉದ್ಯಮದ ಚಿಂತೆಗೆ ಕಾರಣವಾದ ಪ್ರಧಾನಿಗಳ ವರ್ಕ್ ಫ್ರಮ್ ಹೋಂ ಸಲಹೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕರೋನಾ ಸಂಕಷ್ಟ, ಕಾಶ್ಮೀರದ ಉಗ್ರ ಚಟುವಟಿಕೆಗಳು ಹಾಗೂ ಜಾಗತಿಕ ಆರ್ಥಿಕ ಸ್ಥಿರತೆಯಿಂದ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿರುವ ಈ ಉದ್ಯಮಕ್ಕೆ ಮತ್ತೆ ಅನಿಸಿದತೆ ಉಂಟಾಗಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಅಭಿಪ್ರಾಯ ಪಟ್ಟಿದ್ದಾರೆ.

ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ವರ್ಕ್ ಫ್ರಂ ಹೋಂ, ಕಾರ್ ಪೂಲಿಂಗ್ ಹಾಗೂ ಪ್ರಯಾಣ ಕಡಿತ ಕುರಿತ ಸೂಚನೆಗಳು ಸಾರಿಗೆ ಉದ್ಯಮದಲ್ಲಿ ಆತಂಕ ಮತ್ತು ದಿಗ್ಭ್ರಮೆಯನ್ನು ಉಂಟು ಮಾಡಿವೆ ಎಂದು ಅವರು ಹೇಳಿದ್ದಾರೆ. ಎಂಪ್ಲಾಯಿ ಟ್ರಾನ್ಸ್ಪೋರ್ಟ್ ಒಂದು ಲಕ್ಜುರಿಯಲ್ಲ, ಅದು ಲಕ್ಷಾಂತರ ಉದ್ಯೋಗಿಗಳ ದೈನಂದಿನ ಸಂಚಾರಕ್ಕೆ ಅಗತ್ಯವಾದ ಅನಿವಾರ್ಯ ಹಾಗೂ ಸಂಘಟಿತ ಸೇವಾ ವ್ಯವಸ್ಥೆಯಾಗಿದೆ ಎಂದು ಹೊಳ್ಳ ಸ್ಪಷ್ಟಪಡಿಸಿದ್ದಾರೆ. ಈ ವಲಯದ ಮೇಲೆ ನೇರ ಪರಿಣಾಮ ಬೀರುವ ಯಾವುದೇ ನೀತಿ ಅಥವಾ ಸಲಹೆಗಳು ಸಾವಿರಾರು ವಾಹನ ಮಾಲೀಕರು, ಚಾಲಕರು ಹಾಗೂ ಅವರ ಕುಟುಂಬದ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಹಾರ್ಮುಜ್ ಜಲಸಂಧಿ ಹಾಗೂ ಜಾಗತಿಕ ಇಂಧನ ಸಾಧನೆ ಸಂಬಂಧಿತ ವಿವಾದಗಳು ಪರಿಹರಿಸಲು ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸಕ್ರಿಯ ರಾಜ್ಯ ತಾಂತ್ರಿಕ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಹೇಳಿದ್ದಾರೆ. ಸಾರಿಗೆ, ಪ್ರವಾಸೋದ್ಯಮ ಹಾಗೂ ಸೇವಾ ವಲಯದ ಉದ್ಯಮಗಳನ್ನು ರಕ್ಷಿಸುವ ನೀತಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

ಜಾಗತಿಕ ಇಂಧನ ಅಸ್ಥಿರತೆ ನೇರವಾಗಿ ಈ ವಲಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸೂಕ್ತ ನೀತಿಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ದುಡಿದು ಬದುಕುತ್ತಿರುವ ಸಣ್ಣ ಉದ್ಯಮಿಗಳು ಹಾಗೂ ಸೇವಾ ವಲಯದವರ ಆತಂಕವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಮತೋಲನದ ಹಾಗೂ ದೀರ್ಘಕಾಲಿನ ನೀತಿಗಳನ್ನು ಅನುಸರಿಸಬೇಕು ಎಂದು ರಾಧಾಕೃಷ್ಣನ್ ಹೊಳ್ಳ ಆಗ್ರಹಿಸಿದ್ದಾರೆ.

Also Read:

ಅಕ್ಷರ್ ಪಟೇಲ್ ಗೆ 12 ಲಕ್ಷ ರೂ. ದಂಡ ವಿಧಿಸಿದ ಐಪಿಎಲ್ 2026 ಆಡಳಿತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online