belagavi news:
Tata Motors Sales January 2026: ಟಾಟಾ ಮೋಟಾರ್ಸ್ ನಿಂದ ದಾಖಲೆ ಆರಂಭ
ಟಾಟಾ ಮೋಟಾರ್ಸ್ 2026 ನೇ ವರ್ಷವನ್ನು ಹೇಗೆ ದಾಖಲೆಗಳೊಂದಿಗೆ ಭರ್ಜರಿಯಾಗಿ ಆರಂಭಿಸಿದೆ ಜನವರಿ 2026ರಲ್ಲಿ ಕಂಪನಿ ಒಟ್ಟು 71,066 ಯುನಿಟ್ ಗಳ ಮಾರಾಟ ದಾಖಲಿಸುವ ಮೂಲಕ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ವರ್ಷ ಜನವರಿ 2025 ರಲ್ಲಿ 48,316 ಯೂನಿಟ್ ಗಳ ಮಾರಾಟವಾಗಿದ್ದರೆ ಈ ಬಾರಿ ಅದು ಶೇಕಡಾ 47.1 ರಷ್ಟು ಬಾರಿ ಬೆಳವಣಿಗೆ ಕಂಡಿದೆ.
ಈ ಸಾಧನೆಯಲ್ಲಿ ಟಾಟಾ ನೆಕ್ಸಾಲ್ ಮತ್ತು ಟಾಟಾ ಪಂಚ್ ಮಾದರಿಗಳು ಪ್ರಮುಖ ಪಾತ್ರ ವಹಿಸಿದ್ದು ಎರಡು ವಾಹನಗಳು ಸಾರ್ವಕಾಲಿಕ ಮಾರಾಟ ದಾಖಲೆ ಗಳನ್ನು ಸೃಷ್ಟಿಸಿವೆ. ಗ್ರಾಹಕರ ವಿಶ್ವಾಸ ಬಲಿಷ್ಠ ಉತ್ಪನ್ನ ಪೋರ್ಟ್ ಪೋಲಿಯೋ ಮತ್ತು EV ಹಾಗೂ ICE ವಿಭಾಗಗಳಲ್ಲಿ ಟಾಟಾ ಬಲ ಈ ಯಶಸ್ವಿಗೆ ಕಾರಣವಾಗಿದೆ.
ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಹಿಕಲ್ ಲಿಮಿಟೆಡ್ ರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿ, ಜನವರಿ 2026ರಲ್ಲಿ ಒಟ್ಟು 70,222 ಯೂನಿಟ್ ಗಳ ದೇಶಿಯ ಮಾರಾಟ ದಾಖಲಿಸಿದ್ದು ರಫ್ತು ವಿಭಾಗದಲ್ಲಿಯೂ ಗಮನಾರ್ಹ ಏರಿಕೆ ಕಂಡಿದೆ. ಈ ಬೆಳವಣಿಗೆ ಟಾಟಾ ಮೋಟಾರ್ಸ್ ಅನ್ನು ಭಾರತೀಯ ಆಟೋಮೊಬೈಲ್ ವಲಯದ ನಿರ್ವಿವಾದ ನಾಯಕ ಎಂಬಂತೆ ಸ್ಥಾಪಿಸುತ್ತಿದೆ.
ಕಳೆದ ವರ್ಷ ಜನವರಿಯಲ್ಲಿ ಟಾಟಾ ಮೋಟಾರ್ಸ್ ಕೇವಲ 48,076 ಯೂನಿಟ್ ಗಳ ಮಾರಾಟ ದಾಖಲಿಸಿತ್ತು, ಆದರೆ ಕೇವಲ ಒಂದು ವರ್ಷದ ಅವಧಿಯಲ್ಲಿ ಕಂಪನಿಯು ತನ್ನ ಮಾರಾಟ ಸಾಮರ್ಥ್ಯವನ್ನು ಗಣ ನೀಯವಾಗಿ ಹಂಚಿಕೊಂಡಿದ್ದು, ಅರ್ಧಕ್ಕಿಂತ ಹೆಚ್ಚು ಬೆಳವಣಿಗೆ ಸಾಧಿಸಿದೆ. ಈ ಬೃಹತ್ ಏರಿಕೆಗೆ ಪ್ರಮುಖ ಕಾರಣಗಳಾಗಿ ಸರಕಾರದ ಇತ್ತೀಚಿಗೆ ಘೋಷಿಸಿದ. ಜಿಎಸ್ಟಿ ಕಡಿತ ಮತ್ತು ಟಾಟಾ ಕಾರುಗಳ ಉತ್ಪನ್ನ ಸುರಕ್ಷತಾ ರೇಟಿಂಗ್ ಗಳು ಇದ್ದವೆಂದು ಆಟೋಮೊಬೈಲ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಯಶಸ್ವಿನಲ್ಲಿ ಟಾಟಾ ನೆಕ್ಸಾಲ್ SUV ಪ್ರಮುಖ ಪಾತ್ರವಹಿಸಿದ್ದು, ಇದು ಈಗ ಭಾರತೀಯ ಕುಟುಂಬಗಳ ಅತ್ಯಂತ ಪ್ರೀತಿಯ ಕಾರಾಗಿ ಹೊರಹೊಮ್ಮಿದೆ. ಜನವರಿ 2026ರಲ್ಲಿ ಮಾತ್ರವೇ 23,000 ಕ್ಕೂ ಹೆಚ್ಚು ನೆಕ್ಸಾನ್ ಕಾರುಗಳು ಮಾರಾಟವಾಗಿದ್ದು ಇದು ಈ ಮಾದರಿಯ ಇತಿಹಾಸದಲ್ಲಿ ಅತ್ಯುತ್ತಮ ಮಾಸಿಕ ಮಾರಾಟವಾಗಿದೆ.2017 ರಲ್ಲಿ ಬಿಡುಗಡೆಗೊಂಡ ಬಳಿಕ ನೆಕ್ಸನ್ ಈಗಾಗಲೇ ಒಂದು ಮಿಲಿಯನ್ (10 ಲಕ್ಷ) ಯೂನಿಟ್ ಮಾರಾಟ ಮೈಲಿಗಲ್ಲ ನ್ನು ದಾಟಿದೆ ಇದು ಟಾಟಾ ಮೋಟಾರ್ಸ್ ಪೋರ್ಟ್ ಪೋಲಿಯೋದಲ್ಲಿನ ಅತ್ಯಂತ ಯಶಸ್ವಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಪೆಟ್ರೋಲ್ ಡಿಸೈನ್ ಹಾಗೂ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಲಭ್ಯವಿರುವುದು ಇದರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.
ಇದಷ್ಟೇ ಅಲ್ಲದೆ ಟಾಟಾ ಪಂಚ್ ಫಸ್ಟ್ ಲಿಸ್ಟ್ ಬಿಡುಗಡೆ ಬಳಿಕ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡಿದೆ. ಈ ಮೈಕ್ರೋ SUV ಕೇವಲ 4 ವರ್ಷ ಮತ್ತು 3 ತಿಂಗಳಲ್ಲಿ 7 ಲಕ್ಷ ಯೂನಿಟ್ ಗಳದಾಟಿದ್ದು, ಜನವರಿ ತಿಂಗಳಲ್ಲಿ ಮಾತ್ರ 19,000 ಯೂನಿಟ್ ಗಳ ಮಾರಾಟ ದಾಖಲಿಸಿದೆ.
ಅದೇ ರೀತಿ ಟಾಟಾ ಟಿಯಾಗೋ ಹ್ಯಾಚ್ ಬ್ಯಾಕ್ ಕೂಡ 7 ಲಕ್ಷ ಯೂನಿಟ್ ಮಾರಾಟ ಮೈಲಿಗಲ್ಲು ತಲುಪುವ ಮೂಲಕ ಕಂಪನಿಗೆ ಬಲವಾದ ಬೆಂಬಲ ನೀಡುತ್ತಿದೆ. ಈ ಎಲ್ಲ ಮಾದರಿಗಳ ಯಶಸ್ಸು ಟಾಟಾ ಮೋಟಾರ್ಸ್ ಅನ್ನು ಭಾರತೀಯ ಅಟೋಮೊಬೈಲ್ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಿಷ್ಠವಾಗಿಸಿದೆ.
ಭಾರತೀಯ ರಸ್ತೆಗಳಿಗೆ ಐಕಾನಿಕ್ ಟಾಟಾ ಸಿಯೆರಾ ಮರಳುತ್ತಿರುವ ಸುದ್ದಿ, ಕಾರುಪ್ರಿಯರಲ್ಲಿ ಭಾರಿ ಉತ್ಸಾಹ ಮೂಡಿಸಿದೆ. ರೂ. 11.49 ಲಕ್ಷ ಆರಂಭಿಕ ಬೆಳೆಯೊಂದಿಗೆ ಮಾರುಕಟ್ಟೆಗೆ ಬರಲಿಲ್ಲವ ಈ ಹೊಸ ಏಸ್ ಯುವಿಗೆ ಭರ್ಜರಿ ಬಿಡುವುಗೆ ಕಂಡು ಬಂದಿದ್ದು ಅದಕ್ಕೆ ತಕ್ಕಂತೆ ಟಾಟಾ ಮೋಟಾರ್ಸ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಲೆಜೆಂಡರಿ ವಿನ್ಯಾಸ ಆಧುನಿಕ ತಂತ್ರಜ್ಞಾನ ಮತ್ತು ಭವಿಷ್ಯ ನೋಟದೊಂದಿಗೆ ಸಿಯೆರಾ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ
ಇದೇ ವೇಳೆ ಇಷ್ಟುವರೆಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾತ್ರ ಲಭ್ಯವಿದ್ದ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಲ್ಲಿ ಹೊಸ 1.5 ಲಿಟ್ಟರ್ ಟರ್ಬೊ ಪೆಟ್ರೋಲ್ ಎಂಜಿನ್ ಪರಿಚಯಿಸಿರುವುದರಿಂದ ಈ ಪ್ರೀಮಿಯಂ ಎಸ್ ಯುವಿಗಳ ಮಾರಾಟದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ ಪೆಟ್ರೋಲ್ ಆಯ್ಕೆಯ ಸೇರ್ಪಡೆ ಗ್ರಾಹಕರ ಆಯ್ಕೆ ವಿಸ್ತಾರಗೊಳಿಸಿ ಮಾರಾಟಕ್ಕಿ ಹೊಸ ಬಲ ನೀಡಿದೆ.
ಮುಂಬರುವ ದಿನಗಳಲ್ಲಿ ಟಾಟಾ ಕರ್ವ್ ಜೊತೆಗೆ ಹೆಚ್ಚಿನ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಟಾಟಾ ಮೋಟರ್ಸ್ ಹೊಂದಿದೆ.
ಬಜೆಟ್ ಸಂಬಂಧಿತ ಮುನ್ಸೂಚನೆಗಳ ನಡುವೆಯೂ ಗ್ರಾಹಕರ ವಿಶ್ವಾಸ ಟಾಟಾ ಮೋಟರ್ಸ್ ಮೇಲೆಯೇ ಉಳಿದಿದೆ. ಉನ್ನತ ಸುರಕ್ಷತಾ ಮಾನದಂಡಗಳು ಆಕರ್ಷಕ ವಿನ್ಯಾಸ ವ್ಯಾಪಕ ಮಾದರಿ ಶ್ರೇಣಿ ಮತ್ತು ವಿದ್ಯುತ್ ಭವಿಷ್ಯದ ಮೇಲಿನ ಸ್ಪಷ್ಟ ಗಮನದಿಂದ ಟಾಟಾ ಮೋಟರ್ಸ್ 2026ರ ಆರಂಭದಲ್ಲೇ ತನ್ನ ನಾಯಕತ್ವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಪ್ರಸ್ತುತ ವೇಗ ಮುಂದುವರಿದರೆ ಮುನ್ನಿನ ತಿಂಗಳುಗಳಲ್ಲಿ ಡೇಟಾ ಖಾತೆಗೆ ಹೊಸ ದಾಖಲೆಗಳು ಮತ್ತು ಮಹತ್ವದ ಮೈಲಿಗಲ್ಲುಗಳು ಸೇರ್ಪಡೆಯಾಗುವುದು ನಿಶ್ಚಿತ.
‘ಟಾಟಾ ಎಂದರೆ ಟಾಟಾ’ ಎಂಬ ಮಾತು ಭಾರತೀಯ ಆಟೋಮೊಬೈಲ್ ವಲಯದಲ್ಲಿ ಇನ್ನಷ್ಟು ಗಟ್ಟಿಯಾಗಿ ಪ್ರತಿ ಧ್ವನಿಸುವ ದಿನಗಳು ದೂರವಿಲ್ಲ.
ಇನ್ನಷ್ಟು ಓದಿರಿ: