<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಬಿಬಿಎಂಪಿಯಲ್ಲಿ ಗಿಡ ನೆಡುವ ವೆಚ್ಚದ ಬಗ್ಗೆ ಪ್ರಶ್ನೆ: ಅಧಿಕಾರಿಗಳ ಬೆವರಿಳಿಸಿದ ಕೃಷ್ಣಬೈರೇಗೌಡ

ಬಿಬಿಎಂಪಿಯಲ್ಲಿ ಗಿಡ ನೆಡುವ ವೆಚ್ಚದ ಬಗ್ಗೆ ಪ್ರಶ್ನೆ: ಅಧಿಕಾರಿಗಳ ಬೆವರಿಳಿಸಿದ ಕೃಷ್ಣಬೈರೇಗೌಡ
Summary: The information that it costs ₹ 3,300 to plant a tree and ₹ 300 to dig a hole led to a heated discussion in the BBMP meeting. Minister Krishna Byre Gowda questioned the officials about the details of this cost and asked bluntly, "Are you misusing public money?"

Belagavi News :

ಮುಖ್ಯಾಂಶಗಳು;

ಬಿಬಿಎಂಪಿ ಅಧಿಕಾರಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಅತಿಯಾದ ವೆಚ್ಚ ಮತ್ತು ಭ್ರಷ್ಟಾಚಾರ

ಬಿಬಿಎಂಪಿ ವತಿಯಿಂದ ಒಂದು ಗಿಡ ನೆಡಲು 300 ರೂ. ಖರ್ಚು ಮಾಡಲಾಗುತ್ತಿದೆ.

ಗುಂಡಿ ತೊಡಲು 300 ರೂ. ಮೀಸಲಿಡಲಾಗಿದೆ.

ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಗಿಡ ನೆಡುವ ಕಾಮಗಾರಿಗಳ ವೆಚ್ಚದ ಕುರಿತು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಒಂದು ಗಿಡ ನೆಡಲು ₹3,300 ವೆಚ್ಚ ಮಾಡಲಾಗುತ್ತಿದ್ದು, ಅದರಲ್ಲಿ ಗುಂಡಿ ತೋಡಲು ₹300 ನಿಗದಿಪಡಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದ ಸಚಿವರು, ಈ ವೆಚ್ಚದ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರು.

ತಮ್ಮ ಕ್ಷೇತ್ರದಲ್ಲಿ ನೆಡಲಾಗಿರುವ ಹಲವು ಗಿಡಗಳಿಗೆ ನಿಯಮಾನುಸಾರ ಗುಂಡಿ ತೋಡಿಲ್ಲ ಎಂದು ಹೇಳಿದ ಅವರು, " ಪುಟ್ ಪಾತ್ ಗಳು ಹಾಗೂ ರಸ್ತೆ ಮೀಡಿಯನ್ ಗಳಲ್ಲಿ ಮೇಲ್ನೋಟಕ್ಕೆ ಗಿಡಗಳನ್ನು ಇರಿಸಲಾಗಿದೆ. ಆದರೆ, ನಿಗದಿತ ಮಾನದಂಡಗಳಂತೆ ಗುಂಡಿ ತೋಡಿರುವುದು ಕಂಡುಬಂದಿಲ್ಲ. ಈ ರೀತಿಯ ವೆಚ್ಚವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಗಿಡ ನೆಡುವ ಕಾಮಗಾರಿಗಳ ಗುಣಮಟ್ಟ, ವೆಚ್ಚದ ಪಾರದರ್ಶಕತೆ ಹಾಗೂ ಸಾರ್ವಜನಿಕ ಹಣದ ಸಮರ್ಪಕ ಬಳಕೆಯ ಕುರಿತು ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸಚಿವರು ಸಭೆಯಲ್ಲಿ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಗಿಡ ನೆಡುವ ಕಾಮಗಾರಿಯಲ್ಲಿ ಗುಂಡಿ ತೋಡಲು ನಿಗದಿಪಡಿಸಿರುವ ₹ 300 ವೆಚ್ಚದ ಬಳಕೆಯ ಬಗ್ಗೆಯೂ ತೀವ್ರ ಪ್ರಶ್ನೆ ಎತ್ತಿದರು. ತಮ್ಮ ಪರಿಶೀಲನೆಯ ಪ್ರಕಾರ ಹಲವು ಸ್ಥಳಗಳಲ್ಲಿ ನಿಯಮಾನುಸಾರ ಗುಂಡಿ ತೋಡಿಲ್ಲ ಎಂದು ಹೇಳಿದ ಅವರು, ಈ ಹಣದ ಬಳಿಕೆಯಲ್ಲಿ ಅಕ್ರಮ ಅಥವಾ ದುರ್ಬಳಕೆ ನಡೆದಿದ್ದೆಯೇ ಎಂಬ ಅನುಮಾನವೆಕ್ತಪಡಿಸಿ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು.

ಇದೇ ವೇಳೆ, ಕಳೆದ 20 ವರ್ಷಗಳಲ್ಲಿ ಬಿಬಿಎಂಪಿ (ಹಿಂದಿನ ಬಿಎಂಪಿ ಸೇರಿ) ಎಷ್ಟು ಗಿಡಗಳನ್ನು ನೆಟ್ಟಿದೆ, ಮರಗಣತಿ (Tree Census) ಎಷ್ಟು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಹಾಗೂ ನೆಟ್ಟ ಗಿಡಗಳು ಮರಗಣತಿಯಲ್ಲಿ ಸಮರ್ಪಕವಾಗಿ ದಾಖಲಾಗುತ್ತಿವೆಯೇ ಎಂಬ ಪ್ರಶ್ನೆಗಳನ್ನು ಸಚಿವರು ಮುಂದಿಟ್ಟರು.

ಸಭೆಯಲ್ಲಿ ಈ ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೆ ಹಿನ್ನೆಲೆಯಲ್ಲಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಹಣದ ವಳಿಕೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯತನ ಅತ್ಯಗತ್ಯವಾಗಿದ್ದು, ಗಿಡ ನೆಡುವ ಯೋಜನೆಗಳ ಅನುಷ್ಠಾನ ಮತ್ತು ವೆಚ್ಚದ ಕುರಿತು ಸಮಗ್ರ ಪರಿಶೀಲನೆ ನಡೆಸುವಂತಹ ಅಧಿಕಾರಿಗಳಿಗೆ ಸೂಚನೆ ನೀಡಿದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online