<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಇತಿಹಾಸ ನಿರ್ಮಿಸಿದ RCB : ಮೂರು ವರ್ಷಗಳಲ್ಲಿ ನಾಲ್ಕು ಕಿರೀಟಗಳ ಭರ್ಜರಿ ಸಾಧನೆ

ಇತಿಹಾಸ ನಿರ್ಮಿಸಿದ RCB : ಮೂರು ವರ್ಷಗಳಲ್ಲಿ ನಾಲ್ಕು ಕಿರೀಟಗಳ ಭರ್ಜರಿ ಸಾಧನೆ
Summary: Indian cricket's most popular team Royal Challengers Bangalore has once again made headlines with a new achievement. The team has started a new chapter in its performance by winning four trophies in the last three years.

Belagavi News:

ಒಂದಾನೊಂದು ಕಾಲದಲ್ಲಿ ಟ್ರೋಫಿ ಇಲ್ಲದೆ ಅತಿ ಹೆಚ್ಚು ಟ್ರೋಲ್ ಆಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಬರೆಯುತ್ತಿದೆ. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಆರ್‌ಸಿಬಿ ಒಟ್ಟು ನಾಲ್ಕು ಟ್ರೋಫಿಗಳನ್ನು ಗೆದ್ದು ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣಗಳನ್ನು ನೀಡಿದೆ.

ಈ ನಾಲ್ಕು ಟ್ರೋಫಿಗಳಲ್ಲಿ ಎರಡು ಕಪ್ ಗಳನ್ನು ಮಹಿಳಾ ತಂಡ ಜಯಿಸಿದ್ದು, ಉಳಿದ ಎರಡು ಟ್ರೋಫಿಗಳನ್ನು ಪುರುಷರ ತಂಡ ಹಿಡಿದಿದೆ. ಇದರೊಂದಿಗೆ ಭಾರತೀಯ ಟಿ20 ಲೀಗ್ ಲ್ಲಿ ಆರ್‌ಸಿಬಿ ಅತ್ಯಂತ ಸಮತೋಲನದ ಮತ್ತು ಪ್ರಬಲ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

2024ರಲ್ಲಿ ಆರಂಭವಾದ ಈ ಹೊಸ ಯಶಸ್ಸಿನ ಅಧ್ಯಾಯದಲ್ಲಿ ಆರ್‌ಸಿಬಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಬ್ಯಾಕ್ ಟು ಬ್ಯಾಕ್ ಗೆಲುವುಗಳು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು, ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ಹುಟ್ಟುಹಾಕಿದೆ.

Sponsored

ಮಹಿಳಾ ತಂಡದ ಭರ್ಜರಿ ಸಾಧನೆ ಹಾಗೂ ಪುರುಷರ ತಂಡದ ಸ್ತ್ರೀ ಪ್ರದರ್ಶನ ಎರಡು ಸೇರಿ ಆರ್‌ಸಿಬಿ ಫ್ರಾಂಚೈಸಿಗೆ ಹೊಸ ಗುರುತನ್ನು ನೀಡಿದೆ. ಐಪಿಎಲ್ ನಲ್ಲಿ ನಿರಂತರವಾಗಿ ಉತ್ತಮ ಫಲಿತಾಂಶ ನೀಡುತ್ತಿರುವ ಈ ತಂಡ ಈಗ "ಟ್ರೋಫಿ ಬರದ ತಂಡ" ಎಂಬ ಹಳೆಯ ಟ್ಯಾಗ್ ಅನ್ನು ಪೂರ್ಣವಾಗಿ ಮುರಿದಿದೆ.

ಮೂರು ವರ್ಷಗಳಲ್ಲಿ ಆರ್‌ಸಿಬಿ ಗೆದ್ದ ಟ್ರೋಫಿಗಳು :

ಈ ಅವಧಿಯಲ್ಲಿ ಆರ್‌ಸಿಬಿ ತಂಡದ ಪುರುಷ ಮತ್ತು ಮಹಿಳಾ ವಿಭಾಗಗಳು ಸೇರಿ ಒಟ್ಟು ನಾಲ್ಕು ಪ್ರಮುಖ ಕಪ್ ಗಳನ್ನು ತಮ್ಮದಾಗಿಸಿಕೊಂಡಿದೆ.ಇದರಿಂದ ಭಾರತೀಯ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಆರ್‌ಸಿಬಿ ಬ್ರ್ಯಾಂಡ್ ಮತ್ತಷ್ಟು ಬಲವಾಗಿದೆ.

ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ತಂಡದ ಸರಿಯಾದ ಯೋಜನೆ, ಆಟಗಾರರ ಆಯ್ಕೆ ಮತ್ತು ನಿರಂತರ ಪ್ರಯತ್ನವೇ ಈ ಯಶಸ್ಸಿಗೆ ಕಾರಣ. ಅಭಿಮಾನಿಗಳ ಪ್ರಕಾರ, ಇದು ಆರ್‌ಸಿಬಿಯ "ಹೊಸ ಚಿನ್ನದ ಯುಗ" ಎಂದು ಹೇಳಲಾಗುತ್ತಿದೆ.

Sponsored

ಒಂದು ಕಾಲದಲ್ಲಿ ಟ್ರೋಫಿ ಇಲ್ಲದೆ ಟೀಕೆಗೆ ಗುರಿಯಾಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಕೇವಲ ಎರಡು ವರ್ಷಗಳಲ್ಲಿ ರಡು ಪ್ರಮುಖ ಟ್ರೋಫಿಗಳನ್ನು ಗೆದ್ದು ಆರ್‌ಸಿಬಿ ತನ್ನ ಫ್ರಾಂಚೈಸಿ ಇತಿಹಾಸವನ್ನು ಸಂಪೂರ್ಣವಾಗಿ ಬದಲಿಸಿದೆ.

2024 ಮೊದಲ WPL ಟ್ರೋಫಿ :

2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಭರ್ಜರಿ ಪ್ರದರ್ಶನ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ತನ್ನ ಮೊದಲ WPL ಕಪ್ ಗೆದ್ದಿತು.

ಈ ಗೆಲುವಿನೊಂದಿಗೆ ಮಹಿಳಾ ತಂಡವು "ಟ್ರೋಫಿ ಬರದ ತಂಡ" ಎಂಬ ಹಳೆಯ ಟ್ಯಾಗ್ ಅನ್ನು ಮುರಿದು ಹೊಸ ಅಧ್ಯಾಯ ಆರಂಭಿಸಿತು.

Sponsored

2025 ಮೊದಲ ಐಪಿಎಲ್ ಟ್ರೋಫಿ:

2025ರಲ್ಲಿ ಆರ್ಸಿಬಿ ಪುರುಷರ ತಂಡವು 17 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿತು. ಪಂಜಾಬ್ ಕಿಂಗ್ ವಿರುದ್ಧ ನಡೆದ ಭರ್ಜರಿ ಫೈನಲ್ ನಲ್ಲಿ ಜಯಸಾಧಿಸಿ ತಂಡವು ತನ್ನ ಮೊದಲ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಈ ಐತಿಹಾಸಿಕ ಗೆಲುವಿನೊಂದಿಗೆ ಆರ್ಸಿಬಿ ಪುರುಷರ ತಂಡವು ಟ್ರೋಫಿ ಖಾತೆ ತೆರೆದಿದ್ದು, ಫ್ರಾಂಚೈಸಿ ಮಟ್ಟದಲ್ಲಿ ಡಬಲ್ ಯಶಸ್ಸು ದಾಖಲಿಸಿತು.

ಈ ಎರಡು ಟ್ರೋಫಿಗಳೊಂದಿಗೆ ಆರ್‌ಸಿಬಿ ಕ್ರಿಕೆಟ್ ಲೋಕದಲ್ಲಿ ಹೊಸ ಚಿನ್ನದ ಯುಗಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.

Sponsored

ತಂಡದ ಶಿಸ್ತು, ಯೋಜನೆ ಮತ್ತು ಆಟಗಾರರ ಸಾಮರ್ಥ್ಯವೇ? ಈ ಯಶಸ್ಸಿನ ಪ್ರಮುಖ ಕಾರಣವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಸಿಬಿ ಚಿನ್ನದ ಯುಗ ಮುಂದುವರಿಕೆ : 2026ರಲ್ಲಿ WPL ಮತ್ತು ಐಪಿಎಲ್ 2 ಟ್ರೋಫಿಗಳಿಂದ ಐತಿಹಾಸಿಕ ಸಾಧನೆ:

ಒಂದು ಕಾಲದಲ್ಲಿ ಟ್ರೋಫಿ ಗೆಲ್ಲಲು ಪರದಾಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಪೂರ್ವ ಸಾಧನೆ ಮಾಡಿದೆ. 2024 ರಿಂದ ಆರಂಭವಾದ ಚಿನ್ನದ ಯುಗ 2026 ರವರಿಗೆ ಮುಂದುವರೆದು, ಫ್ರಾಂಚೈಸಿ ಒಟ್ಟು ನಾಲ್ಕು ಪ್ರಮುಖ ರೋಗಿಗಳನ್ನು ತನ್ನದಾಗಿಸಿಕೊಂಡಿದೆ.

2026ರಲ್ಲಿ ಎರಡನೇ WPL ಟ್ರೋಫಿ :

Sponsored

ಫೆಬ್ರುವರಿ 2026ರಲ್ಲಿ ನಡೆದ ರೋಮಾಂಚಕ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಚೇಸ್ ನಡೆಸಿ ಭರ್ಜರಿ ಜಯಸಾಧಿಸಿತು. ಈಗ ಗೆಲುವಿನೊಂದಿಗೆ ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ ನಲ್ಲಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದೆ.

ಮಹಿಳಾ ತಂಡದ ನಿರಂತರ ಪ್ರದರ್ಶನವು ಫ್ರಾಂಚೈಸಿಗೆ ಹೊಸ ಶಕ್ತಿ ನೀಡಿದ್ದು, ಆರ್ ಸಿ ಬಿ ಮಹಿಳಾ ವಿಭಾಗವನ್ನು ಲೀಗ್ ನ ಅತ್ಯಂತ ಸತಿಶಾಲಿ ತಂಡಗಳಲ್ಲಿ ಒಂದಾಗಿ ಸ್ಥಾಪಿಸಿದೆ.

2026 ಎರಡನೇ ಐಪಿಎಲ್ ಟ್ರೋಫಿ :

ಇದೇ ವರ್ಷ ಐಪಿಎಲ್ ಸೀಸನ್ ನಲ್ಲಿ ರಜತ್ ಪಟಿದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡವು ಮತ್ತೊಮ್ಮೆ ಟ್ರೋಫಿ ಪಡೆದುಕೊಂಡಿದೆ. ಈ ಜಯದೊಂದಿಗೆ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಐಪಿಎಲ್ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸುವ ಮೂಲಕ ವಿಶೇಷ ದಾಖಲೆ ಬರೆದಿದೆ.

Sponsored

ಪುರುಷರ ತಂಡದ ಈ ನಿರಂತರ ಯಶಸ್ಸು ಆರ್‌ಸಿಬಿಯನ್ನು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಬಲಿಷ್ಠ ಫ್ರಾಂಚೈಸಿಗಳ ಸಾಲಿನಲ್ಲಿ ನಿಲ್ಲಿಸಿದೆ.

ಆರ್ ಸಿ ಬಿ ಚಿನ್ನದ ಯುಗ:

2024 ರಿಂದ 2026ರ ನಡುವೆ ಮಹಿಳಾ ಮತ್ತು ಪುರುಷರ ತಂಡಗಳು ಸೇರಿ ಒಟ್ಟು ನಾಲ್ಕು ಪ್ರಮುಖ ಟ್ರೋಫಿಗಳನ್ನು ಗೆದ್ದಿದ್ದು, ಟ್ರೋಫಿ ಬರೆದ ತಂಡ ಎಂಬ ಹಳೆಯ ಹಣೆಪಟ್ಟೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದೆ.

ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಉತ್ತಮ ನಾಯಕತ್ವ, ಸಮತೋಲನ ತಂಡ ನಿರ್ಮಾಣ ಮತ್ತು ನಿರಂತರ ಯೋಜನೆಯೇ ಈ ಐತಿಹಾಸಿಕ ಯಶಸ್ಸಿನ ಮೂಲ ಕಾರಣವಾಗಿದೆ. ಅಭಿಮಾನಿಗಳ ಪ್ರಕಾರ, ಇದು RCB ಹೊಸ ಚಿನ್ನದ ಯುಗದ ಶಿಖರ ಕ್ಷಣವಾಗಿದೆ.

Sponsored

Also Read:

ರಾಜ್ಯಸಭೆಗೆ ಸಿದ್ದರಾಮಯ್ಯ ಪತ್ನಿ ? ರಾಹುಲ್ ಗಾಂಧಿ ಆಫರ್ ಗೆ ಮಾಜಿ ಸಿಎಂ ಹೇಳಿದ್ದೇನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online