Belagavi News:
ಲೋಕಕಲ್ಯಾಣದ ಸಂಕಲ್ಪದೊಂದಿಗೆ ಕೈಗೊಂಡಿದ್ದ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಗದಗ ತಾಲೂಕಿನ ಅಂತೂರು - ಬೆಂತೂರು ಗ್ರಾಮದ ಬೂದೀಶ್ವರ ಮಠದ ರಾಚೋಟೇಶ್ವರ ಶ್ರೀಗಳು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಅನುಷ್ಠಾನ ಮುಕ್ತಾಯದ ಬಳಿಕ ಶ್ರೀಗಳು ಗರ್ಭಗುಡಿಯಿಂದ ಹೊರಬಂದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮಠದಲ್ಲಿ ನೆರೆದಿದ್ದರು.
33 ದಿನಗಳ ಕಾಲ ನಡೆದ ಈ ವಿಶೇಷ ಶಿವಯೋಗ ಸಮಾದಿ ಅನುಷ್ಠಾನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ಪಡೆದಿದ್ದು, ಲೋಕಕಲ್ಯಾಣ, ಶಾಂತಿ ಮತ್ತು ಸರ್ವರ ಸುಖ - ಸಮೃದ್ಧಿಗಾಗಿ ಸಂಕಲ್ಪ ಮಾಡಲಾಗಿತ್ತು. ಸಮಾರೋಪ ಸಮಾರಂಭದ ವೇಳೆ ಬೂದಿಶ್ವರ ಮಠದಲ್ಲಿ ಭಕ್ತರ ದಟ್ಟನೆ ಕಂಡುಬಂದಿದ್ದು, ಶ್ರೀಗಳ ಆಶೀರ್ವಾದ ಪಡೆಯಲು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು.
ಈ ಅಪರೂಪದ ಆಧ್ಯಾತ್ಮಿಕ ಕಾರ್ಯಕ್ರಮ ಗದಗ ಜಿಲ್ಲೆಯಲ್ಲಿ ಭಕ್ತರ ಗಮನ ಸೆಳೆದಿದ್ದು, ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸಿ ಸಮಾಧಿ ಅನುಷ್ಠಾನದ ಸಮಾರೋಪಕ್ಕೆ ಸಾಕ್ಷಿಯಾದರು.
33 ದಿನಗಳ ಶಿವಯೋಗ ಸಮಾಧಿ ಪೂರ್ಣ - ಗರ್ಭಗುಡಿಯಿಂದ ಹೊರಬಂದ ರಾಚೋಟೇಶ್ವರ ಶ್ರೀಗಳು, ಭಕ್ತರ ಭಾವಪೂರ್ಣ ದರ್ಶನ :
ಗದಗ ತಾಲೂಕಿನ ಅಂತೂರ - ಬೆಂತೂರ ಗ್ರಾಮದ ಬುಧೀಶ್ವರ ಮಠದ ರಾಚೋಟೇಶ್ವರ ಶ್ರೀಗಳು ಜೂನ್ 3ರಂದು ಆರಂಭಿಸಿದ್ದ 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದರು. ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಪೂಜಾ - ವಿಧಿ ವಿಧಾನಗಳ ನಡುವೆ ಗರ್ಭಗುಡಿಯ ಪ್ರವೇಶ ಭಾಗವನ್ನು ತೆರೆಯಲಾಗಿದ್ದು, ಶ್ರೀಗಳು ಹೊರಬಂದ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಮಠದಲ್ಲಿ ನೆರದಿದ್ದರು.
ಮಠದ ಆಡಳಿತ ಮಂಡಳಿ ನೀಡಿದ ಮಾಹಿತಿ ಪ್ರಕಾರ, ಈ 33 ದಿನಗಳ ಅವಧಿಯಲ್ಲಿ ರಾಚೋಟೇಶ್ವರ ಶ್ರೀಗಳು ಮೌನ ವ್ರತ ಆಚರಿಸುತ್ತಾ ಶಿವಯೋಗ ಸಮಾಧಿ ಅನುಷ್ಠಾನದಲ್ಲಿ ತೊಡಗಿದ್ದರು. ಈ ವಿಶೇಷ ಆಧ್ಯಾತ್ಮಿಕ ಸಾಧನೆಯನ್ನು ಲೋಕಕಲ್ಯಾಣ, ಉತ್ತಮ ಮಳೆ, ರೈತರ ಸಮೃದ್ಧಿ, ಸಮಾಜದ ಶಾಂತಿ ಹಾಗೂ ಸೌಹಾರ್ದ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಕೈಗೊಳ್ಳಲಾಗಿತ್ತು.
ಸಮಾಧಿ ಅನುಷ್ಠಾನದ ಸಮರೂಪದ ವೇಳೆ ಬೂದಿಶ್ವರ ಮಠದಲ್ಲಿ ಭಕ್ತರ ದಟ್ಟನೆ ಕಂಡುಬಂದಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಆಶೀರ್ವಾದ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಈ ಅಪರೂಪದ ಆಧ್ಯಾತ್ಮಿಕ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ನಿರ್ಮಿಸಿತು.
ಶಿವಯೋಗ ಸಮಾಧಿ ಸಮಾಪ್ತಿ ಬಳಿಕ ಭಕ್ತರಿಗೆ ಆಶೀರ್ವಾದ ನೀಡಿದ ರಾಚೋಟೇಶ್ವರ ಶ್ರೀಗಳು - ವಿಶೇಷ ಪೂಜೆ, ಪ್ರಸಾದ ವಿತರಣೆ :
33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ಗದಗ ತಾಲೂಕಿನ ಅಂತೂರ - ಬೆಂತೂರ ಗ್ರಾಮದ ಬೂದೀಶ್ವರ ಮಠದ ರಾಚೋಟೇಶ್ವರ ಶ್ರೀಗಳು ಭಕ್ತರಿಗೆ ಆಶೀರ್ವಾದ ನೀಡಿದರು. ಸಮಾಧಿ ಅನುಷ್ಠಾನದ ಸಮಾರೋಪದ ಅಂಗವಾಗಿ ಮಠದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು ಹಾಗೂ ಪ್ರಸಾದ ವಿತರಣೆಯನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು.
ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆಯಲು ಗದಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿದ್ದರು. ಮಠದ ಆವರಣದಲ್ಲಿ ಬೆಳಗ್ಗಿನಿಂದಲೇ ಭಕ್ತರ ದಟ್ಟನೆ ಕಂಡುಬಂದಿದ್ದು, ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.
33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವು ಲೋಕ ಕಲ್ಯಾಣ, ಉತ್ತಮ ಮಳೆ, ರೈತರ ಸಮೃದ್ಧಿ ಹಾಗೂ ಸಮಾಜದಲ್ಲಿ ಶಾಂತಿ - ಸೌಹಾರ್ದ ನೆಲೆಸಲಿ ಎಂಬ ಸಂಕಲ್ಪ ದೊಂದಿಗೆ ನಡೆದಿದ್ದು, ಸಮಾರೋಪದ ದಿನ ಆಧ್ಯಾತ್ಮಿಕ ವಾತಾವರಣ ಭಕ್ತರ ಮನ ಸೆಳೆಯಿತು.
ಕಾಲ್ನಡಿಗೆಯಲ್ಲೇ ಕೈಲಾಸ ಪರ್ವತ ಪರಿಕ್ರಮ ಪೂರ್ಣಗೊಳಿಸಿದ ಶ್ರೀಶೈಲ ಜಗದ್ಗುರು ; ದಾವಣಗೆರೆಗೆ ಆಗಮಿಸಿದ ಭಕ್ತರಿಗೆ ತೀರ್ಥ, ರುದ್ರಾಕ್ಷಿ ವಿತರಣೆ :
ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ದಾವಣಗೆರೆಗೆ ಆಗಮಿಸಿದ್ದಾರೆ. ಸುಮಾರು 20 ದಿನಗಳ ಕಾಲ ನೇಪಾಳದಲ್ಲಿ ವಾಸ್ತವ್ಯ ಮಾಡಿ, ಬಳಿಕ ಚೀನಾ ಮೂಲಕ ಕೈಲಾಸ ಪರ್ವತಕ್ಕೆ ತೆರಳಿ ದರ್ಶನ ಹಾಗೂ ಪರಿಕ್ರಮೇಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 18,741 ಅಡಿ ಎತ್ತರದಲ್ಲಿರುವ ಕೈಲಾಸಪರ್ವತ ಆಮ್ಲಜನಕದ ಕೊರತೆ ಹಾಗೂ ದುರ್ಗಮ ಮಾರ್ಗಕ್ಕೆ ಪ್ರಸಿದ್ಧವಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಶ್ರೀಶೈಲ ಜಗದ್ಗುರು ಅವರು ಕೆಲ ಮಠಾಧೀಶರೊಂದಿಗೆ ಕಾಲ್ನಡಿಗೆಯಲ್ಲೇ ಕೈಲಾಸ ಪರಿಕ್ರಮಿಯನ್ನು ಪೂರ್ಣಗೊಳಿಸಿ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ಯಾತ್ರೆ ಮುಗಿಸಿ ನೇರವಾಗಿ ಕರ್ನಾಟಕಕ್ಕೆ ಆಗಮಿಸಿದ ಶ್ರೀಗಳು ಶನಿವಾರ ದಾವಣಗೆರೆಯಲ್ಲಿ ಭಕ್ತರನ್ನು ಭೇಟಿ ಮಾಡಿದರು. ಆ ಸಂದರ್ಭದಲ್ಲಿ ಕೈಲಾಸಪರ್ವತದಿಂದ ತಂದಿದ್ದ ಪವಿತ್ರ ತೀರ್ಥ ಮತ್ತು ರುದ್ರಾಕ್ಷಿಗಳನ್ನು ಭಕ್ತರಿಗೆ ವಿತರಿಸಿ ಆಶೀರ್ವಾದ ನೀಡಿದರು. ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಶ್ರೀಗಳ ಯಶಸ್ವಿ ಕೈಲಾಸ ಮಾನಸ ಸರೋವರ ಯಾತ್ರೆ ಭಕ್ತರಲ್ಲಿ ಭಕ್ತಿ, ಸಂತಸ ಮತ್ತು ಆಧ್ಯಾತ್ಮಿಕ ಉತ್ಸಾಹವನ್ನು ಮೂಡಿಸಿದ್ದು, ಅವರ ಕಾಲ್ನಡಿಗೆಯ ಪರಿಕ್ರಮೆ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.