<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ರೈಲಿನಲ್ಲಿ ಅಪರೂಪದ ಘಟನೆ: ಪ್ರಯಾಣದ ಮಧ್ಯೆ ಮಗುವಿನ ಜನ್ಮ ನೀಡಿದ ಮಹಿಳೆ

ರೈಲಿನಲ್ಲಿ ಅಪರೂಪದ ಘಟನೆ: ಪ್ರಯಾಣದ ಮಧ್ಯೆ ಮಗುವಿನ ಜನ್ಮ ನೀಡಿದ ಮಹಿಳೆ
Summary: A rare incident has taken place where a woman gave birth to a healthy baby on a moving train. As soon as the labour pains started, railway staff and fellow passengers immediately rushed to help and assisted in a safe delivery. As a result of timely medical assistance, both the mother and the newborn baby are healthy and the emergency response of the railways has been widely appreciated.

Belagavi news:

ಕೋಟಾ, ರಾಜಸ್ಥಾನ್: ಸೂರತ್ ನ ವಲ್ಸಾದ್ ನಿಂದ ಉತ್ತರ ಪ್ರದೇಶದ ಫೆತೇಪುರ್ ಸಿಕ್ರಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರು ರೈಲು ಪ್ರಯಾಣದ ಮಧ್ಯೆಯೇ ಮಗುವಿನ ಜನ್ಮ ನೀಡಿದ ಅಪರೂಪದ ಘಟನೆ ನಡೆದಿದೆ. ಕೋಟಾ ರೈಲ್ವೆ ವಿಭಾಗದ ಮೂಲಕ ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ರೈಲ್ವೇ ಸಿಬ್ಬಂದಿಯ ತಕ್ಷಣದ ಸ್ಪಂದನೆಯಿಂದ ತಾಯಿ ಮತ್ತು ನವಜಾತ ಶಿಶು ಇಬ್ಬರು ಸುರಕ್ಷಿತರಾಗಿದ್ದಾರೆ.

ಜೂನ್ 9ರ ಬೆಳಗಿನ ಜಾವ, ವಲ್ಸಾದ್ - ಸುಬೇದಾರ್ಗಂಜ್ ರೈಲಿನಲ್ಲಿ ಈ ಘಟನೆ ನಡೆದಿದ್ದು, 24 ವರ್ಷದ ಸೋನಿ ದೇವಿ ಎಂಬ ಮಹಿಳೆ ತನ್ನ ಕುಟುಂಬದೊಂದಿಗೆ ಜೂನ್ 8ರಂದು ವಲ್ಸಾದ್ ನಿಂದ ಪತ್ತೆಪುರ್ ಸಿಕ್ರಿಗೆ ಪ್ರಯಾಣ ಆರಂಭಿಸಿದ್ದರು. ಪ್ರಯಾಣದ ವೇಳೆ ಅವರಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಹಪ್ರಯಾಣಿಕರು ತಕ್ಷಣ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಜೂನ್ 9ರ ಬೆಳಗ್ಗೆ 2:50ಕ್ಕೆ ರೈಲ್ವೆ ವಾಣಿಜ್ಯ ನಿಯಂತ್ರಣ ಕೊಠಡಿಗೆ ತಲುಪಿದ್ದು, ತಕ್ಷಣವೇ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸಲಾಗಿದೆ ಎಂದು ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಜೈನ್ ತಿಳಿಸಿದ್ದಾರೆ.

ರೈಲು ಕೋಟಾ ಜಂಕ್ಷನ್ ತಲುಪಿದ ನಂತರ ನರ್ಸಿಂಗ್ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿ ತಾಯಿ ಮತ್ತು ಶಿಶುವಿನ ಅಗತ್ಯ ಆರಕ್ಕೆ ನೀಡಿದರು. ರೈಲು ನಿಲ್ದಾಣಕ್ಕೆ ತಲುಪುವ ಮೊದಲೇ ಹೆರಿಗೆ ನಡೆದಿದ್ದರೂ, ಸಕಾಲಿಕ ನೆರವಿನಿಂದ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ರೈಲ್ವೆ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆ ಮತ್ತು ಮಾನವೀಯತೆಗೆ ಪ್ರಯಾಣಿಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಧಾವಿಸಿದ ವೈದ್ಯಕೀಯ ತಂಡ: ಕೋಟಾ ರೈಲ್ವೆ ವಿಭಾಗದಲ್ಲಿ ಚಲಿಸುತ್ತಿದ್ದಲ್ಲೇ ಮಗುವಿನ ಜನ್ಮ ನೀಡಿದ ಘಟನೆಯಲ್ಲಿ ವೈದಿಕೀಯ ತಂದ ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದಿದೆ. ರೈಲ್ವೆ ಆಡಳಿತ ಮಾಹಿತಿ ಪಡೆದ ತಕ್ಷಣವೇ ಕೋಟಾ ಜಂಕ್ಷನ್ ಗೆ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸಲಾಗಿದ್ದು ರೈಲು ತಲುಪುವ ಮೊದಲೇ 25 ನಿಮಿಷಗಳಲ್ಲಿ ತಂಡ ಸ್ಥಳಕ್ಕೆ ಆಗಮಿಸಿದೆ.

ತಂಡದಲ್ಲಿ ಹಿರಿಯ ವೈದ್ಯಾಧಿಕಾರಿ Dr. Sana Jameel, ಸಿಬ್ಬಂದಿ ಡ್ರೆಸ್ಸರ್ ಅಕಿಲಾ ಬಾನೋ ಹಾಗೂ ಇತರ ಆರೋಗ್ಯ ಸಿಬ್ಬಂದಿ ಇದ್ದರು. ರೈಲು ನಿಲ್ದಾಣ ತಲುಪುವ ವೇಳೆಗೆ ಮಹಿಳೆ ಸೋನಿ ದೇವಿ ಮಗುವಿನ ಜನ್ಮ ನೀಡಿದ್ದರು.

ವೈದ್ಯಕೀಯ ತಂಡ ತಕ್ಷಣವೇ ಸ್ಥಳಕ್ಕೆ ತೆರಳಿ ಹೊಕ್ಕುಳಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ನವಜಾತ ಶಿಶುವಿನ ಬೇರ್ಪಡಿಸಿತು. ಬಳಿಕ ನಂಜುನಿರೋಧಕ ಔಷಧ ನೀಡಿ ಮಗುವನ್ನು ಸ್ವಚ್ಛಗೊಳಿಸಿ ಸ್ಟೆರೈಲ್ ಕ್ಲ್ಯಾಂಪ್ ಅಳವಡಿಸಲಾಯಿತು. ನಂತರ ತಾಯಿ ಮತ್ತು ಮಗುವನ್ನು ಸಂಪೂರ್ಣವಾಗಿ ಪರೀಕ್ಷಿಸಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಖಚಿತಪಡಿಸಲಾಯಿತು.

ವೈದ್ಯರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸಲಹೆ ನೀಡಿದರು ಕುಟುಂಬವು ಆಸ್ಪತ್ರೆ ಸೇರುವುದನ್ನು ನಿರಾಕರಿಸಿ ತಮ್ಮ ಪ್ರಯಾಣವನ್ನು ಮುಂದುವರಿಸಲು ನಿರ್ಧರಿಸಿತು. ಇದಕ್ಕೆ ಅನುಗುಣವಾಗಿ ನವಜಾತ ಶಿಶುವಿಗೆ ಅಗತ್ಯ ಔಷಧಗಳನ್ನು ನೀಡಿ ವೈದ್ಯಕೀಯ ತಂಡ ಅವರನ್ನು ಬಿಳ್ಕೋಟ್ಟಿತು.

ಈ ವೇಳೆ ರೈಲ್ವೆ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕವೇ ರೈಲು ಮುಂದಿನ ಪ್ರಯಾಣ ಮುಂದುವರಿಸಿದೆ ಎಂದು ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ತಿಳಿಸಿದ್ದಾರೆ.

Also Read:

ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಚಟುವಟಿಕೆಗಳು : ವಿವಾಹದ ಬಳಿಕ ಶೂಟಿಂಗ್ ನಲ್ಲಿ ಸಕ್ರಿಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online