<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

Rishab Shetty: ಸಂಸ್ಕೃತಿ ಕುರಿತು ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ

Rishab Shetty: ಸಂಸ್ಕೃತಿ ಕುರಿತು ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
Summary: Rishab Shetty: Actor Rishab Shetty has shared an emotional video on social media, saying, 'I am celebrating the culture I grew up with.' His post has caught the attention of fans and the video has now gone viral. What's in the video? Know the full details here

Belagavi News :

ಬೆಂಗಳೂರು: ' ಕಾಂತಾರ' ಚಿತ್ರದ ಮೂಲಕ ಕರಾವಳಿಯ ದೈವಾರಾಧನೆ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ Instagram ಖಾತೆಯಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ.

ತಮ್ಮ ಮನೆಯಲ್ಲಿ ನಡೆದ ಧಾರ್ಮಿಕ ಆಚರಣೆಯ ಸುಂದರ ಕ್ಷಣಗಳನ್ನು ಒಳಗೊಂಡಿರುವ ಈ ವಿಡಿಯೋದಲ್ಲಿ ಕುಟುಂಬದೊಂದಿಗೆ ಸಂಪ್ರದಾಯ ಬದ್ಧವಾಗಿ ನಡೆಯುವ ವಿಧಿವಿಧಾನಗಳನ್ನು ಕಾಣಬಹುದು. ಈ ವಿಡಿಯೋಗೆ ಭಾವನಾತ್ಮಕ ಶಿರ್ಷಿಕೆ ನೀಡಿರುವ ರಿಷಬ್ ಶೆಟ್ಟಿ, " ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ" ಎಂದು ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಂಚಿಕೊಂಡ ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಕರಾವಳಿಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಅವರಿಗಿರುವ ಗೌರವವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ರಿಷಬ್ ಅವರ ಸರಳತೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮೆಚ್ಚಿಕೊಂಡಿದ್ದಾರೆ.

Sponsored

ಕುಟುಂಬದೊಂದಿಗೆ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾದ ರಿಷಬ್ ಶೆಟ್ಟಿ:

ವಿಡಿಯೋಗೆ ಭಾವನಾತ್ಮಕ ಶೀರ್ಷಿಕೆ ನೀಡಿರುವ ರಿಷಬ್ ಶೆಟ್ಟಿ, " ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ ನಮ್ಮ ಮನೆಯಲ್ಲಿ ನಡೆದಾಗ ಮನ ತುಂಬಿದ ಕ್ಷಣಗಳು" ಎಂದು ಬರೆದುಕೊಂಡಿದ್ದಾರೆ.

ಹಂಚಿಕೊಂಡಿರುವ ವಿಡಿಯೋದಲ್ಲಿ ರಿಷಬ್ ಶೆಟ್ಟಿ ಅವರ ಇಡೀ ಕುಟುಂಬ ಸಾಂಪ್ರದಾಯಿಕ ಉಡುಪಿನಲ್ಲಿ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸುವುದು ಕಾಣಿಸುತ್ತದೆ. ರಿಷಬ್ ಶೆಟ್ಟಿ ಮತ್ತು ಅವರ ಪತ್ನಿ ಪ್ರಗತಿ ಶೆಟ್ಟಿ ಜೊತೆಯಾಗಿ ಪೂಜೆ ಸಲ್ಲಿಸಿರುವ ದೃಶ್ಯಗಳು ಗಮನ ಸೆಳೆಯುತ್ತವೆ.

Sponsored

ಕುಟುಂಬದೊಂದಿಗೆ ಸಂಪ್ರದಾಯವನ್ನು ಆಚರಿಸಿರುವ ಈ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವರು ರಿಷಬ್ ಶೆಟ್ಟಿ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡಿರುವ ರೀತಿಯನ್ನು ಶ್ಲಾಘಿಸಿದ್ದು, ಅವರ ಪೋಸ್ಟ್ ಗೆ ಸಾವಿರಾರು ಲೈಕ್ ಗಳು ಹಾಗೂ ಕಮೆಂಟ್ ಗಳು ಹರಿದುಬರುತ್ತಿವೆ.

ಯಕ್ಷಗಾನ ಕಲಾ ವೈಭವದಿಂದ ಮೆರಗುಗೊಂಡ ಧಾರ್ಮಿಕ ಆಚರಣೆ:

ರಿಷಬ್ ಶೆಟ್ಟಿ ಹಂಚಿಕೊಂಡಿರುವ ವಿಡಿಯೋದ ಮತ್ತೊಂದು ವಿಶೇಷ ಆಕರ್ಷಣೆಯೆಂದರೆ ಕರಾವಳಿಯ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನ. ಅವರ ಮನೆಯ ಆವರಣದಲ್ಲಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಅದರ ಮನಮೋಹಕ ದೃಶ್ಯಗಳು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

Sponsored

ಕಲಾವಿದರು ಬಣ್ಣ ಹಂಚಿಕೊಳ್ಳುವ ಸಿದ್ಧತೆಯಿಂದ ಆರಂಭಿಸಿ, ವೇಷಭೂಷಣ, ಸಂಗೀತ ಹಾಗೂ ಅದ್ಭುತ ರಂಗಪ್ರದರ್ಶನದವರೆಗಿನ ಹಲವು ಕ್ಷಣಗಳನ್ನು ವಿಡಿಯೋದಲ್ಲಿ ಕಾಣಬಹುದು. ಯಕ್ಷಗಾನದ ಸಾಂಪ್ರದಾಯಿಕ ಸೊಬಗು ಮತ್ತು ಕಲಾವಿದರ ಅದ್ಭುತ ಪ್ರದರ್ಶನ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಕುಟುಂಬದ ಸದಸ್ಯರು ಮುಂಭಾಗದಲ್ಲಿ ಕುಳಿತು ಯಕ್ಷಗಾನದ ಕಲಾ ವೈಭವವನ್ನು ಆಸ್ವಾದಿಸಿರುವ ದೃಶ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ. ಈ ವಿಡಿಯೋ ಮೂಲಕ ಕರಾವಳಿಯ ಸಂಸ್ಕೃತಿ, ಧಾರ್ಮಿಕ ಆಚರಣೆ ಮತ್ತು ಯಕ್ಷಗಾನ ಕಲೆಯ ಮೇಲಿನ ತಮ್ಮ ಅಭಿಮಾನವನ್ನು ರಿಷಬ್ ಶೆಟ್ಟಿ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

Also Read:

ಕಾರವಾರ - ಅಂಕೋಲಾ ಘಾಟ್ ರಸ್ತೆ ಈಗ ಪ್ರಕೃತಿ ಪ್ರಿಯರ ಹಾಟ್ ಸ್ಪಾಟ್ : ಜಲಧಾರೆಗಳ ಸೌಂದರ್ಯ ವೈರಲ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online