ಚೋರ್ಲಾ ಘಾಟ್ 400 ಕೋಟಿ ರೂ. ರದ್ದಾದ ನೋಟುಗಳ ದರೋಡೆ ಪ್ರಕರಣ : ಚೋರ್ಲಾ ಘಾಟ್ ನಲ್ಲಿ ನಡೆದ 400 ಕೋಟಿ ರೂಪಾಯಿ ಮೌಲ್ಯದ ರದ್ದಾದ ನೋಟ್ ಗಳ ದರೋಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆಯನ್ನು ಪೊಲೀಸರು ಬಂಧಿಸಿದ್ದಾರೆ, ಇದರೊಂದಿಗೆ ಈ ಪ್ರಕರಣದಲ್ಲಿ ಬಂದಿತ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.ದೇಶಾದ್ಯಂತ ಚರ್ಚೆಗೆ ಕಾರಣವಾದ ಈ ದೊಡ್ಡ ದರೋಡೆ ಪ್ರಕರಣವು ಆರ್ಥಿಕ ಅಪರಾಧಗಳ ಗಂಭೀರತೆಯನ್ನು ಬಿಂಬಿಸಿದೆ.
ಕಿಶೋರ್ ಸಾಳ್ವೆ ಬಂಧನದಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿ ಮತ್ತು ಸಂಪರ್ಕ ಜಾಲಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ತನಿಕಾ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರವು ವಿಶೇಷ ತನಿಕಾ ತಂಡ (SIT) ತನಿಖೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮತ್ತು ವೇಗವಾಗಿ ಮುಂದುವರಿಸುವಂತೆ ಸೂಚಿಸಿದೆ. ಹಣದ ಮೂಲ ಸಾಗಣೆ ಮಾರ್ಗಗಳು ಮತ್ತು ಅದರಲ್ಲಿ ಭಾಗವಹಿಸಿರುವ ಇತರ ಆರೋಪಿಗಳ ಬಗ್ಗೆ ತನಿಖೆ ತೀವ್ರಗೊಳ್ಳಲಿದೆ.
ಚೋರ್ಲಾ ಘಾಟ್ ಕೇಸ್ನಲ್ಲಿ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ : ಕರ್ನಾಟಕ -ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟ್ನಲ್ಲಿ ನಡೆದ ಅಂದಾಜು 400 ಕೋಟಿ ರೂಪಾಯಿ ಮೌಲ್ಯದ ರದ್ದಾದ ನೋಟುಗಳ ದರೋಡೆ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣ ಪ್ರಮುಖ ಆರೋಪಿ ಕಿಶೋರ್ ಸಾಲ್ವೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಗೆ ಕಿಶೋರ್ ಸಾಳ್ವೆ ಸ್ವಯಂ ಶರಣಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಅಧಿಕೃತವಾಗಿ ಬಂಧಿಸಿದ್ದಾರೆ. ಈ ಬೆಳವಣಿಗೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ,
ಕಿಶೋರ್ ಸಾರ್ವೆ ಬಂಧನದ ನಂತರ, ತನಿಖಾ ಸಂಸ್ಥೆಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದು, ದರೋಡೆಗೆ ಸಂಬಂಧಿಸಿದ ಇತರ ಆರೋಪಗಳು, ಹಣದ ಮೂಲ ಮತ್ತು ಲಾಜಿಸ್ಟಿಕ್ ಬೆಂಬಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಚೋರ್ಲಾ ಘಾಟ್ನಲ್ಲಿ ಎರಡು ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿದ್ದ ರದ್ದಾದ ನೋಟುಗಳ ಭಾರಿ ದರೋಡೆ ದೇಶಾದ್ಯಂತ ಸಂಚಲನ ಮೂಡಿಸಿತು, ಈ ಪ್ರಕರಣವು ಆರ್ಥಿಕ ಅಪರಾಧಗಳ ಜಾಲ ಹಣದ ಸಾಗಾಣಿ ಮಾರ್ಗಗಳು ಮತ್ತು ಭಾಗಿಯಾದವರ ಕುರಿತಂತೆ ಹಲವು ಪ್ರಶ್ನೆಗಳು ಎಬ್ಬಿಸಿದೆ.
ಅಕ್ಟೋಬರ್ 25, 2025ರ ಘಟನೆ ದೇಶಾದ್ಯಂತ ಸಂಚಲನ : ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ ಪ್ರದೇಶದಲ್ಲಿ 2025ರ ಅಕ್ಟೋಬರ್ 25ರಂದು ನಡೆದ ಬಾರಿ ದರೋಡೆ ಪ್ರಕರಣ ಇದೀಗ ರಾಷ್ಟ್ರ ಮಟ್ಟದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಎರಡು ಕಂಟೇನರ್ಗಳಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂಪಾಯಿ ನಗದು ಹಣವನ್ನು ದರೋಡೆ ಮಾಡಲಾಗಿದೆ ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ಗುಪ್ತ ದತ್ತ ಪಾಟೀಲ್ ಇತ್ತೀಚಿಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ಸಲ್ಲಿಸಿದರು.ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ನೀಡಿದ ದೂರಿನೊಂದಿಗೆ ಈ ಪ್ರಕರಣ ಬೆಳಕಿಗೆ ಬಂದಿದ್ದು,
ದೇಶಾದ್ಯಂತ ಸಂಚಲನ ಮೂಡಿಸಿತು. ಈ ಪ್ರಕರಣದ ಈ ವಿಚಾರದ ಗಂಭೀರತೆ ಹಾಗೂ ದರೋಡೆಗೊಂಡ ಹಣದ ಮೊತ್ತ ಎಲ್ಲರ ಗಮನ ಸೆಳೆದಿದೆ, ರದ್ದಾದ ನೋಟುಗಳ ವಿಚಾರ, ಹಣದ ಸಾಗಾಣಿ ಮತ್ತು ಬಿಲ್ಡರ್ ಗಳ ಸಂಪರ್ಕ ಈ ಪ್ರಕರಣಕ್ಕೆ ಹೊಸ ತಿರುಗು ನೀಡಿದ್ದು, ಪೊಲೀಸ್ ಹಾಗೂ ತನಿಕಾ ಸಂಸ್ಥೆಗಳು ಎಲ್ಲರ ಆಯಮಗಳಿಂದ ತನಿಖೆ ನಡೆಸುತ್ತಿವೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸತ್ಯಾಂಶಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ದೂರುದಾರರ ಪ್ರಕಾರ ದರೋಡೆಯಾದ ಹಣವು ಗುಜರಾತ್ ಬಿಲ್ಡರ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದೆ ಎನ್ನಲಾಗಿದೆ. ಇದರಿಂದ ಪ್ರಮುಖ ಅಂಶವೆಂದರೆ ದರೋಡೆಗೊಂಡ ಹಣದಲ್ಲಿ ರದ್ದಾದ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟಗಳು ಸೇರಿದ್ದವು ಎಂಬ ಮಾಹಿತಿ ಹೊರಬಿದ್ದಿದೆ.
ಶೋರ್ ಸಾಳ್ವೆ ಬಂಧನದ ಬಳಿಕ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆ : ಎಸ್ಐಟಿ ತನಿಖೆ ಪ್ರಕರಣದ ಎಲ್ಲಾ ಆಯಾಮಗಳನ್ನು ಆಳವಾಗಿ ಪರಿಶೀಲಿಸಲು ವಿಶೇಷ ತನಿಕ ತಂಡ ಎಸ್ಐಟಿ ನೇಮಕ ಮಾಡಲಾಗಿದ್ದು, ತನಿಖೆ ತೀವ್ರಗೊಂಡಿದೆ. ಈ ಪ್ರಕಾರದಲ್ಲಿ ದೂರುದಾರರಾಗಿರುವ ಸಂದೀಪ್ ಪಾಟೀಲ್ ಅವರ ಅಪಹರಣ ಮತ್ತು ೪೦೦ ಕೋಟಿ ದರೋಡೆಗೆ ಸಂಬಂಧಿಸಿದ ಅಂಶಗಳ ಕುರಿತುಎಸ್ಐಟಿ ತನಿಖೆ ನಡೆಸುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿರುವ ಆಡಿಯೋ ಸಂಭಾಷಣೆಗಳನ್ನು ಎಸ್ಐಟಿ ಪರಿಶೀಲನೆಗೆ ತೆಗೆದುಕೊಂಡಿದೆ. ಈ ಆಡಿಯೋ ಕ್ಲಿಪ್ಗಳು ದರೋಡೆ ಪ್ರಕರಣದ ಹಿಂದಿರುವ ಜಾಲ ಮತ್ತು ಪಾತ್ರಗಳ ಕುರಿತು ಮಹತ್ವದ ಸುಳಿವು ನೀಡುವ ಸಾಧ್ಯತೆ ಇದೆ ಎಂದು ತನಿಕಾಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಮುಂದುವರೆದಂತೆ ಇನ್ನಷ್ಟು ಬಂಧನಗಳು ಹಾಗೂ ಪ್ರಮುಖ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.
ಇನ್ನಷ್ಟು ಓದಿರಿ:
ಸಿಂಗರ್ ಬಾಂಡ್ ವಿತರಣೆಗೆ ಪುರಸಭೆ ₹100 ಕೋಟಿ ಪ್ರೋತ್ಸಾಹ ಧನ ಘೋಷಣೆ