<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ರಷ್ಯಾದಿಂದ ಭಾರತಕ್ಕೆ ಬೆಂಬಲದ ಸಂದೇಶ: ಚೀನಾ ವಿಚಾರದಲ್ಲಿ ಹಸ್ತಕ್ಷೇಪ ಇಲ್ಲ ಎಂದ ಪುಟಿನ್

ರಷ್ಯಾದಿಂದ ಭಾರತಕ್ಕೆ ಬೆಂಬಲದ ಸಂದೇಶ: ಚೀನಾ ವಿಚಾರದಲ್ಲಿ ಹಸ್ತಕ್ಷೇಪ ಇಲ್ಲ ಎಂದ ಪುಟಿನ್
Summary: Russian President Putin, in a conversation with the heads of major global news outlets, praised the leadership and strategic stance of Indian Prime Minister Narendra Modi and Chinese President Xi Jinping.

belagavi news :

ಭಾರತ ಮತ್ತು ಚೀನಾ ನಡುವಿನ ಸೂಕ್ಷ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿ ರಷ್ಯಾ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಉಭಯ ರಾಷ್ಟ್ರಗಳು ತಮ್ಮ ದೀರ್ಘಕಾಲದ ಗಡಿ ವಿವಾದಗಳನ್ನು ಶಾಂತಿಯುತ ಹಾಗೂ ಸೌಹಾರ್ದಯುತ ರೀತಿಯಲ್ಲಿ ಪರಿಹರಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪ್ರಮುಖ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥನೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಪುಟಿನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ನಾಯಕತ್ವವನ್ನು ಶ್ಲಾಘಿಸಿದರು. ಗಡಿ ಸಮಸ್ಯೆಗಳಂತಹ ಸೂಕ್ಷ್ಮ ವಿಷಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ದೃಢಸಂಕಲ್ಪ ಇಬ್ಬರು ನಾಯಕರಲಿದೆ ಎಂದು ಅವರು ಹೇಳಿದರು.

"ಇದು ಭಾರತ ಮತ್ತು ಚೀನಾ ನಡುವಿನ ಅತ್ಯಂತ ಸೂಕ್ಷ್ಮ ಹಾಗೂ ಬಹುಮುಖ್ಯ ಸಂಬಂಧದ ವಿಷಯವಾಗಿದೆ. ಈ ವಿಚಾರದಲ್ಲಿ ಹೊರಗಿನ ದೇಶಗಳು ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ. ನಾವು ಭಾರತ ಮತ್ತು ಚೀನಾ ಎರಡನ್ನು ನಮ್ಮ ಸ್ನೇಹಿತ ರಾಷ್ಟ್ರಗಳೆಂದು ಪರಿಗಣಿಸುತ್ತೇವೆ ಮತ್ತು ಉಭಯ ದೇಶಗಳೊಂದಿಗೆ ಉತ್ತಮ ಸಾಮೋಹನವನ್ನು ಮುಂದುವರಿಸುತ್ತೇವೆ" ಎಂದು ಪುಟಿನ್ ಹೇಳಿದ್ದರು.

Sponsored

ಪಿಟಿಐ ಹೇಳಿದ ಪ್ರಶ್ನೆಗೆ ಉತ್ತರಿಸಿದವರು, ಭಾರತ ಮತ್ತು ಚೀನಾ ನಡುವೆ ಉದ್ಭವಿಸುವ ಗಡಿ ಸಂಬಂಧಿತ ಸಮಸ್ಯೆಗಳನ್ನು ಉಭಯ ರಾಷ್ಟ್ರಗಳೇ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರಷ್ಯಾ, ಮಧ್ಯಸ್ಥಿಕೆ ವಹಿಸುವ ಉದ್ದೇಶ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರಾಷ್ಟ್ರದ ಈ ನಿಲುವು, ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಕುರಿತು ಮಾಸ್ಕೋ ಅನುಸರಿಸುತ್ತಿರುವ ತಟಸ್ಥ ಹಾಗೂ ಸಮತೋಲನದ ರಾಜತಾಂತ್ರಿಕ ಧೋರಣೆಯನ್ನು ಮತ್ತೊಮ್ಮೆ ಪ್ರತಿಬಿಂಬಿಸುತ್ತದೆ. ಜೊತೆಗೆ, ಏಷ್ಯಾದ ಎರಡು ಪ್ರಮುಖ ಶಕ್ತಿಗಳಾದ ಭಾರತ ಮತ್ತು ಚೀನಾ ನಡುವಿನ ಶಾಂತಿ ಹಾಗೂ ಸ್ಥಿರತೆ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿಯೂ ಮಹತ್ವದ್ದಾಗಿದೆ ಎಂಬ ಸಂದೇಶವನ್ನು ಪುಟಿನ್ ನೀಡಿದ್ದಾರೆ.

2020ರಲ್ಲಿ ನಡೆದ Galwan Valley clash ಬಳಿಕ ಉಂಟಾದ ಉದ್ವಿಗ್ನತೆಯ ನಂತರ ಭಾರತ ಮತ್ತು ಚೀನಾ ಸಂಬಂಧಗಳು ಕ್ರಮೇಣ ಸುಧಾರಣೆಯ ಹಾದಿಯಲ್ಲಿವೆ ಎಂದು ರಷ್ಯಾ ಅಧ್ಯಕ್ಷ ಪುಟಿನ್, ಅಭಿಪ್ರಾಯ ಪಟ್ಟಿದ್ದಾರೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಮುಂದುವರೆದ ಮಿಲಿಟರಿ ಮುಖಾಮುಖಿಯ ಬಳಿಕ ಉಭಯ ರಾಷ್ಟ್ರಗಳು ಕಳೆದ ಒಂದು ವರ್ಷದಿಂದ ಹಲವು ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಂಡಿರುವುದನ್ನು ಅವರು ಉಲ್ಲೇಖಿಸಿದರು.

ಪ್ರಮುಖ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಪುಟಿನ್, ಏಷ್ಯಾದಲ್ಲಿ ರಷ್ಯಾದ ರಾಜ ತಂತ್ರದ ಸಮತೋಲನವನ್ನು ಎತ್ತಿ ಹೇಳುತ್ತಾ, ಭಾರತ ಮತ್ತು ಚೀನಾ ಎರಡರೊಂದಿಗೆಗಿನ ಮಾಸ್ಕೋದ ಸಂಬಂಧಗಳು ದಶಕಗಳ ಕಾಲದಿಂದ ಸ್ವಾಭಾವಿಕವಾಗಿ ಬೆಳೆದು ಬಂದಿದ್ದು, ಅವು ಪರಸ್ಪರ ಸಂಪೂರ್ಣ ಸ್ವತಂತ್ರವಾಗಿವೆ ಎಂದು ತಿಳಿಸಿದರು.

Sponsored

ಭಾರತ ಮತ್ತು ಚೀನಾ ನಾಯಕರು ರಷ್ಯಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯ ಕುರಿತು ತಾವು ಹಿಂದೆ ಸಲಹೆ ನೀಡಿದ್ದ ವಿಚಾರವನ್ನು ಅವರು ಪ್ರಸ್ತಾಪಿಸಿದರು. ಉಭಯ ರಾಷ್ಟ್ರಗಳ ನಡುವೆ ನೇರ ಸಂವಾದವೇ ಗಡಿ ವಿವಾದಗಳಂತಹ ಸಂಕೀರ್ಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅತ್ಯುತ್ತಮ ಮಾರ್ಗ ಎಂದು ಪುಟಿನ್ ಅಭಿಪ್ರಾಯಪಟ್ಟರು.

ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತು ಪ್ರತಿಕ್ರಿಯೆ:

ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಹಾಗೂ ಭದ್ರತಾ ಸಂಬಂಧಿತ ಸಮಸ್ಯೆಗಳ ಕಟಿಲತೆಯ ಬಗ್ಗೆ ರಷ್ಯಾಕ್ಕೆ ಸಂಪೂರ್ಣ ಅರಿವು ಇದೆ ಎಂದು ಪುಟಿನ್ ಹೇಳಿದರು. ಆದರೆ, ಪಾಕಿಸ್ತಾನ ಸಂಪೂರ್ಣವಾಗಿ ಚೀನಾದ ಪ್ರಭಾವ ಅಥವಾ ನಿಯಂತ್ರಣದಲ್ಲಿದೆ ಎಂಬ ಅಭಿಪ್ರಾಯವನ್ನು ತಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"ಪಾಕಿಸ್ತಾನ ಒಂದು ದೊಡ್ಡ ಮತ್ತು ಸ್ವತಂತ್ರ ರಾಷ್ಟ್ರ. ಅದು ವಿವಿಧ ದೇಶಗಳೊಂದಿಗೆ ಬಹುಮುಖ ಸಂಬಂಧಗಳನ್ನು ಹೊಂದಿದೆ. ಚೀನಾದೊಂದಿಗಿನ ಸಹಕಾರ ಪಾಕಿಸ್ತಾನಕ್ಕೆ ಮಹತ್ವದ್ದಾಗಿದ್ದರು, ಅದರಿಂದ ಪಾಕಿಸ್ತಾನ ಚೀನಾದ ನಿಯಂತ್ರಣದಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಪುಟಿನ್ ಹೇಳಿದ್ದಾರೆ.

Sponsored

ರಷ್ಯಾದ ಅಧ್ಯಕ್ಷ ಈ ಹೇಳಿಕೆ, ಏಷ್ಯಾದ ಪ್ರಮುಖ ರಾಷ್ಟ್ರಗಳೊಂದಿಗೆ ಸಮತೋಲನದ ರಾಜತಾಂತ್ರಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಮಾಸ್ಕೋದ ನೀತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತ, ಚೀನಾ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳಲ್ಲಿ ಸ್ಥಿರತೆ ಹಾಗೂ ಸಂವಾದಕ್ಕೆ ರಷ್ಯಾ ಬೆಂಬಲ ನೀಡುತ್ತಿರುವ ಸಂದೇಶವನ್ನು ಇದು ರವಾನಿಸಿದೆ.

ಭಾರತ-ರಷ್ಯಾ ರಕ್ಷಣಾ ಪ್ರಚಾರವು ಪ್ರಸ್ತಾಪ: ರಷ್ಯಾದ ಅಧ್ಯಕ್ಷರು ಭಾರತದೊಂದಿಗಿನ ರಷ್ಯಾದ ರಕ್ಷಣಾ ಮತ್ತು ಮಿಲಿಟರಿ ಸಂಬಂಧಗಳ ಬಗ್ಗೆಯೂ ಮಾತನಾಡಿದರು. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳ ಸಹ -ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯನ್ನು ಅವರು ಸಂವಾದದ ವೇಳೆ ಉಲ್ಲೇಖಿಸಿದರು.

ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಷ್ಯಾ ಮಹತ್ವದ ಪ್ರಸ್ತಾಪ ಒಂದನ್ನು ಮುಂದಿಟ್ಟಿದೆ. ಐದನೇ ತಲೆಮಾರಿನ sukhio su - 57 ಯುದ್ಧ ವಿಮಾನಗಳ ಅಭಿವೃದ್ಧಿ ಮತ್ತು ಉತ್ಪಾದನೆಯಲ್ಲಿ ಜಂಟಿಯಾಗಿ ಕೆಲಸ ಮಾಡುವ ಕುರಿತು ಭಾರತಕ್ಕೆ ಅವಾಹನ ನೀಡಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ತಿಳಿಸಿದ್ದಾರೆ.

ಪ್ರಮುಖ ಜಾಗತಿಕ ಸುದ್ದಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಪುಟಿನ್, ಭಾರತವು ಪ್ರಸ್ತುತ ಐದನೆಯ ತಲೆಮಾರಿನ ಯುದ್ಧ ವಿಮಾನಗಳ ಖರೀದಿ ಹಾಗೂ ಅಭಿವೃದ್ಧಿ ಆಯ್ಕೆಯನ್ನು ಪರಿಶೀಲಿಸುತಿರುವ ಸಂದರ್ಭದಲ್ಲಿ, ಈ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳು ಕೈಜೋಡಿಸುವ ಅವಕಾಶವಿದೆ ಎಂದು ಹೇಳಿದರು.

Sponsored

"ಐದನೇ ತಲೆಮಾರಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಸ್ನೇಹಿತರು ನಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ನಾವು ಪ್ರಸ್ತಾಪಿಸಿದ್ದೇವೆ. ಯುದ್ಧ ವಿಮಾನಗಳ ಅಭಿವೃದ್ಧಿ, ಉತ್ಪಾದನೆ ಹಾಗೂ ಪೂರೈಕೆಯ ಕ್ಷೇತ್ರದಲ್ಲಿ ಭಾರತದೊಂದಿಗೆ ಸಹಕಾರಕ್ಕೆ ತಾವು ಸಂಪೂರ್ಣ ಸಿದ್ದರಾಗಿದ್ದೇವೆ" ಎಂದು ಪುಟಿನ್ ಹೇಳಿದರು.

ನಿರ್ಣಾಯಕ ರಕ್ಷಣಾ ತಂತ್ರಜ್ಞಾನ ಹಂಚಿಕೆಗೆ ಸಿದ್ಧತೆ:

ಭಾರತದೊಂದಿಗೆನ ದೀರ್ಘಕಾಲದ ರಕ್ಷಣಾ ಪಾಲುದಾರಿಕೆಯನ್ನು ಉಲ್ಲೇಖಿಸಿದ ಪುಟಿನ್, ಪ್ರಮುಖ ರಕ್ಷಣಾ ವೇದಿಕೆಗಳು ಮತ್ತು ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಅಗತ್ಯವಿರುವ ನಿರ್ಣಾಯಕ ತಂತ್ರಜ್ಞಾನಗಳನ್ನು ಭಾರತಕ್ಕೆ ಒದಗಿಸಲು ರಷ್ಯಾ ಸಿದ್ದವಾಗಿದೆ ಎಂದು ಸ್ಪಷ್ಟಪಡಿಸಿದರು.

ಭಾರತದ'ಆತ್ಮ ನಿರ್ಭರ ಭಾರತ' ಮತ್ತು ದೇಶಿಯ ರಕ್ಷಣಾ ಉತ್ಪಾದನಾ ಗುರಿಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ತಂತ್ರಜ್ಞಾನ ವರ್ಗಾವಣೆ, ಜಂಟಿ ಉತ್ಪಾದನೆ ಮತ್ತು ಸಂಶೋಧನಾ ಸಹಕಾರಕೂ ರಷ್ಯಾ ಮುಕ್ತ ಮನಸ್ಸಿನಿಂದ ಮುಂದಾಗಲಿದೆ ಎಂದು ಅವರು ಸೂಚಿಸಿದರು.

Sponsored

ಭಾರತ ರಷ್ಯಾ ರಕ್ಷಣಾ ಬಾಂಧವ್ಯಕ್ಕೆ ಹೊಸ ಆಯಾಮ:

ಭಾರತ ಮತ್ತು ರಷ್ಯಾ ಹಲವು ದಶಕಗಳಿಂದ ರಕ್ಷಣಾ ಕ್ಷೇತ್ರದಲ್ಲಿ ಆಪ್ತ ಸಹಕಾರ ಹೊಂದಿವೆ. Brahmos ಕ್ಷಿಪಣಿ ಯೋಜನೆ, sukhoi su- 30 MKI ವಿಮಾನಗಳು ಹಾಗೂ ಇತರೆ ರಕ್ಷಣಾ ವ್ಯವಸ್ಥೆಗಳ ಜಂಟಿ ಸಹಕಾರ ಈಗಾಗಲೇ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿವೆ.

ಈಗ Su-57 ಯೋಜನೆಯಲ್ಲಿ ಭಾರತವನ್ನು ಭಾಗಿಯಾಗಿಸುವ ರಷ್ಯಾದ ಪ್ರಸ್ತಾಪವು, ಭವಿಷ್ಯದ ಅತ್ಯಾಧುನಿಕ ಯುದ್ಧ ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡು ರಾಷ್ಟ್ರಗಳ ಸಹಕಾರಕ್ಕೆ ಹೊಸ ದಿಕ್ಕು ನೀಡುವ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ. ಭಾರತ ತನ್ನ ವಾಯುಪಡೆಯ ಆಧುನಿಕರಣಕ್ಕೆ ಮತ್ತು ನೀಡುತ್ತಿರುವ ಸಂದರ್ಭದಲ್ಲಿ, ರಷ್ಯಾದ ಈ ಪ್ರಸ್ತಾಪವು ರಕ್ಷಣಾ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

Also Read:

Sponsored

ಭಾರತಕ್ಕೆ ಮುಂಗಾರು 2026 ಆಗಮನ: 19 ರಾಜ್ಯಗಳಿಗೆ ಭಾರಿ ಮಳೆ, ಗಾಳಿ ಅಲರ್ಟ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online