ಟ್ರಂಪ್ ಹೇಳಿಕೆ ಬೆನ್ನಲ್ಲೇ ಪರಮಾಣು ಪರೀಕ್ಷೆ ಮತ್ತೆ ಆರಂಭಿಸಲು ಸಜ್ಜಾದ ರಷ್ಯಾ
ಇತ್ತೀಚಿಗೆ ರಷ್ಯಾ ಪರಮಾಣು ಚಾಲಿತ ಕ್ರೂಸ್ ಕ್ಷಿಪಣಿ ಮತ್ತು ನೀರೊಳಗಿನ ಡ್ರೋನ್ನ ಯಶಸ್ವಿ ಪರೀಕ್ಷೆ ನಡೆಸಿತ್ತು. ಇದೀಗ ಮತ್ತೆ ತನ್ನ ಪರೀಕ್ಷೆಯನ್ನು ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಮಾಸ್ಕೋ (ರಷ್ಯಾ):
ಇತ್ತೀಚಿಗೆ ರಷ್ಯಾ ಪರಮಾಣು ಚಾಲಿತ ಮತ್ತು ಪರಮಾಣು ಸಾಮರ್ಥ್ಯದ ಕ್ರೂಸ್ ಕ್ಷಿಪಣಿ ಮತ್ತು ನೀರೊಳಗಿನ ಡ್ರೋನ್ನ ಯಶಸ್ವಿ ಪರೀಕ್ಷೆ ನಡೆಸಿತ್ತು. ಇದರ ಬೆನ್ನಲ್ಲೇ ಟ್ರಂಪ್ ಸಾಮಾಜಿಕ ಮಾಧ್ಯಮದ ಮೂಲಕ ಅಮೆರಿಕ ಕೂಡ ಪರಮಾಣು ಪರೀಕ್ಷೆಗೆ ಮುಂದಾಗುವುದಾಗಿ ತಿಳಿಸಿದ್ದರು. ಜೊತೆಗೆ ಉಕ್ರೇನ್ನಲ್ಲಿನ ಸಂಘರ್ಷವನ್ನು ಅಂತಿಮಗೊಳಿಸುವ ಬಗ್ಗೆ ಟ್ರಂಪ್ಗೆ ಮತ್ತೊಂದು ಸಂದೇಶ ರವಾನಿಸಿದ್ದರು.
ಟ್ರಂಪ್ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಅಮೆರಿಕ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನು ಪುನಾರಂಭಿಸಲಿದೆ ಎಂದಿದ್ದರು. ಟ್ರಂಪ್ ಆದೇಶ ಯುಎಸ್ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆಯ ಹೊಸ ಪರೀಕ್ಷೆಗಳು ಪರಮಾಣು ಸ್ಫೋಟಗಳನ್ನು ಒಳಗೊಂಡಿರುವುದಿಲ್ಲ ಎಂದು ಯುಎಸ್ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಭಾನುವಾರ ಸ್ಪಷ್ಟಪಡಿಸಿದ್ದರು.
ಭದ್ರತಾ ಮಂಡಳಿ ಸಭೆಯಲ್ಲಿ, ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್, ವಾಷಿಂಗ್ಟನ್ನಿಂದ ಪರಮಾಣು ಪರೀಕ್ಷೆಗಳ ಪುನಾರಂಭವು ರಷ್ಯಾಕ್ಕೆ ಮಿಲಿಟರಿ ಬೆದರಿಕೆಗಳ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಅಮೆರಿಕ ಪರಮಾಣು ಪರೀಕ್ಷೆಗಳನ್ನು ಪ್ರಾರಂಭಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪರಮಾಣು ಪರೀಕ್ಷೆಗಳನ್ನು ಪುನಾರಂಭಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಮ್ಮ ಭದ್ರತಾ ಮಂಡಳಿಯೊಂದಿಗಿನ ಸಭೆಯಲ್ಲಿ ಮಾತನಾಡಿದ ಪುಟಿನ್, ಅಮೆರಿಕ ಮೊದಲು ಪರಮಾಣು ಪರೀಕ್ಷೆಗಳನ್ನು ಆರಂಭಿಸಿದರೆ ಮಾತ್ರ ಮಾಸ್ಕೋ ಪರಮಾಣು ಪರೀಕ್ಷೆಗಳನ್ನು ಪುನಾರಂಭಿಸುತ್ತದೆ ಎಂದು ಹೇಳಿದರು. ಆದರೆ, ವಾಷಿಂಗ್ಟನ್ನ ಉದ್ದೇಶಗಳನ್ನು ವಿಶ್ಲೇಷಿಸಲು, ರಕ್ಷಣಾ ಮತ್ತು ವಿದೇಶಾಂಗ ಸಚಿವಾಲಯಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಪುನಾರಂಭಿಸುವ ಪ್ರಸ್ತಾಪಗಳನ್ನು ರೂಪಿಸಲು ನಿರ್ದೇಶಿಸಿದ್ದಾರೆ.
ಮಿಲಿಟರಿಯ ಜನರಲ್ ಸ್ಟಾಫ್ ಮುಖ್ಯಸ್ಥ ಜನರಲ್ ವ್ಯಾಲೆರಿ ಗೆರಾಸಿಮೊವ್ ಕೂಡ ಪರೀಕ್ಷೆಗಳಿಗೆ ಸಿದ್ಧತೆಗಳನ್ನು ತ್ವರಿತವಾಗಿ ಪ್ರಾರಂಭಿಸುವುದಾಗಿ ಹೇಳಿದರು.
ಪುಟಿನ್ ಸರ್ಕಾರಿ ಸಂಸ್ಥೆಗಳಿಗೆ ಈ ವಿಷಯದ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು, ಭದ್ರತಾ ಮಂಡಳಿಯ ಚೌಕಟ್ಟಿನೊಳಗೆ ಅದನ್ನು ವಿಶ್ಲೇಷಿಸಲು ಮತ್ತು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗಳ ಸಿದ್ಧತೆಗಳ ಕುರಿತು ಕೆಲಸದ ಸಂಭವನೀಯ ಆರಂಭದ ಕುರಿತು ಸಂಘಟಿತ ಪ್ರಸ್ತಾಪಗಳನ್ನು ಸಲ್ಲಿಸಲು ಸೂಚಿಸಿದ್ದಾರೆ.
ಆರ್ಕ್ಟಿಕ್ ನೊವಾಯಾ ಜೆಮ್ಲ್ಯಾ ದ್ವೀಪ ಸಮೂಹದಲ್ಲಿ ಪರಮಾಣು ಪರೀಕ್ಷೆಗಳಿಗೆ ಮಾಸ್ಕೋ ತಕ್ಷಣ ಸಿದ್ಧತೆಗಳನ್ನು ಪ್ರಾರಂಭಿಸಬೇಕು. 1990 ರಲ್ಲಿ ಸೋವಿಯತ್ ಒಕ್ಕೂಟವು ಕೊನೆಯದಾಗಿ ಪರಮಾಣು ಶಸ್ತ್ರಾಸ್ತ್ರವನ್ನು ಪರೀಕ್ಷಿಸಿದ ಸ್ಥಳವು ಇದೀಗ ಮತ್ತೆ ತ್ವರಿತವಾಗಿ ಪುನಾರಂಭಿಸಲು ಸಿದ್ಧವಾಗಿದೆ ಎಂದು ತಿಳಿಸಿದರು.
ಇನ್ನಷ್ಟು ಓದಿರಿ :
ಡಿಕೆಶಿ: ನವೆಂಬರ್ ಕ್ರಾಂತಿಯೂ ಇಲ್ಲ, ಡಿಸೆಂಬರ್ ಕ್ರಾಂತಿಯೂ ಇಲ್ಲ, ಕ್ರಾಂತಿ ಏನಿದ್ರೂ 2028ರಲ್ಲಿ