<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಹಾಸನದ SDM ಆಯುರ್ವೇದ ವಿದ್ಯಾರ್ಥಿನಿಯರ ಸಾಹಸ;ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಸುರಕ್ಷಿತ ಹೆರಿಗೆ

ಹಾಸನದ SDM ಆಯುರ್ವೇದ ವಿದ್ಯಾರ್ಥಿನಿಯರ ಸಾಹಸ;ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಗೆ ಸುರಕ್ಷಿತ ಹೆರಿಗೆ
Summary: When a pregnant woman suddenly went into labor on a moving train, a Dharmasthala Manjunatheshwara Ayurveda medical student successfully delivered the baby with the limited facilities available, saving the lives of the mother and the baby. This humanitarian act that took place in the middle of the night is being praised from all over.

Belagavi News :

ಚಲಿಸುತ್ತಿದ್ದಾರೆ ಗರ್ಭಿಣಿಗೆ ಸುರಕ್ಷಿತ ಹೆರಿಗೆ; ಹಾಸನದ SDM ಆಯುರ್ವೇದ ವೈದ್ಯ ವಿದ್ಯಾರ್ಥಿನಿಯರ ಮಾನವೀಯ ಕಾರ್ಯ

ವಾರಣಾಸಿಗೆ ತೆರಳುತ್ತಿದ್ದ ರೈಲಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿ ಮಹಿಳೆಗೆ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮೂವರು ಸ್ನಾತಕೋತರ ವೈದ್ಯ ವಿದ್ಯಾರ್ಥಿನಿಯರು ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಜೀವ ಉಳಿಸಿದ ಅಪರೂಪದ ಘಟನೆ ವಾರಣಾಸಿ ಸಮೀಪ ನಡೆದಿದೆ.

ಹಾಸನ್ ನಗರದ ತಣ್ಣೀರುಹಳ್ಳದಲ್ಲಿರುವ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮಾನಸರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ.ರಶ್ಮಿ ಬಿಳಗಿ, ಡಾ.ಲತಾಶ್ರೀ ಎನ್. ಮತ್ತು ಡಾ. ಶಾಹಿನ್ ಎಂ.ಅವರ ಸಮಯಪ್ರಜ್ಞೆ ಮೆರೆದು ಚಲಿಸುತ್ತಿದ್ದ ರೈಲಿನಲ್ಲೇ ಹೆರಿಗೆ ಮಾಡಿಸಿ ಮಾನವಿಯತೆ ಮೆರೆದಿದ್ದಾರೆ.

ಈ ಕುರಿತು ಮಾಧ್ಯಮ ಒಂದರಲ್ಲಿ ಮಾತನಾಡಿದ ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ವಿಭಾಗದ ಪ್ರಾಧ್ಯಾಪಕಿ ಡಾ. ಸವಿತಾ, ರಾಷ್ಟ್ರೀಯ ಸಮ್ಮೇಳನ ಒಂದರಲ್ಲಿ ಭಾಗವಹಿಸಲು ಈ ಮೂವರು ವೈದ್ಯ ವಿದ್ಯಾರ್ಥಿನಿಯರು ರೈಲಿನಲ್ಲಿ ವಾರಣಾಸಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಅದೇ ವೇಳೆ ರೈಲಿನಲ್ಲಿದ್ದ ಗರ್ಭಿಣಿಯೊಬ್ಬರಿಗೆ ಏಕಾಏಕಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಸಮೀಪದಲ್ಲಿ ಯಾವುದೇ ಆಸ್ಪತ್ರೆ ಲಭ್ಯವಿರದ ಕಾರಣ ಹಾಗೂ ಸಮಯದ ಅಭಾವದಿಂದ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಎದುರಾಗಿರುವ ಸಾಧ್ಯತೆ ಇತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೂವರು ವೈದ್ಯ ವಿದ್ಯಾರ್ಥಿನಿಯರು ತಕ್ಷಣ ಮಹಿಳೆಯ ಆರೋಗ್ಯ ತಪಾಸನೆ ನಡೆಸಿ, ಲಭ್ಯವಿದ್ದ ಸೀಮಿತ ಸೌಲಭ್ಯಗಳಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾದರು.

ಈ ಮಾನವೀಯ ಕಾರ್ಯಕ್ಕೆ ವೈದ್ಯಕೀಯ ವಲಯ ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ರೈಲಿನಲ್ಲೇ ತುರ್ತು ಹೆರಿಗೆ : ಹೊಕ್ಕುಳ ಬಳ್ಳಿ ಸುತ್ತಿಕೊಂಡಿದ್ದ ಮಗುವನ್ನು ರಕ್ಷಿಸಿದ ಎಸ್‌ಡಿಎಂ ವೈದ್ಯ ವಿದ್ಯಾರ್ಥಿನಿಯರು.

ಚಲ್ಲಿಸುತ್ತಿದ್ದ ರೈಲಿನಲ್ಲಿ ಗರ್ಭಿಣಿಯೊಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯರ ಕಾರ್ಯಕ್ಕೆ ವ್ಯಾಪಕ ಮೆಚ್ಚಿಗೆ ವ್ಯರ್ಥವಾಗುತ್ತಿದೆ.

ಟ್ರೈನಿನಲ್ಲಿ ಹೆರಿಗೆ ಸಂದರ್ಭದಲ್ಲಿ ಮಗುವಿನ ಕೊಕ್ಕುಳ ಬಳ್ಳಿ ಸುತ್ತಿಕೊಂಡಿರುವುದು ಪತ್ತೆಯಾಗಿತ್ತು. ಸೀಮಿತ ಸೌಲಭ್ಯಗಳ ನಡುವೆ ಕೂಡ ಮೂವರು ವೈದ್ಯ ವಿದ್ಯಾರ್ಥಿನಿಯರು ತಮ್ಮ ವೃತ್ತಿಪರ ಜ್ಞಾನ, ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ಎಚ್ಚರಿಕೆಯಿಂದ ಹೊಕ್ಕಳ ಬಳ್ಳಿಯನ್ನು ಬಿಡಿಸಿ, ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ತಾಯಿ ಮತ್ತು ಮಗು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಹೆರಿಗೆ ನೆರವೇರಿಸಿದ ಡಾ.ರಶ್ಮಿ ಬೆಳಗಿ & ಡಾ.ಶಾಹಿಂ ಎಂ .ಮಾತನಾಡಿ, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಮಹಿಳೆಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿತು ಎಂದು ತಿಳಿಸಿದ್ದಾರೆ.

ತಕ್ಷಣ ರೈಲ್ವೆ ಸಿಬ್ಬಂದಿ ಗೆ ಮಾಹಿತಿ ನೀಡಲಾಗಿದ್ದು, ಅಗತ್ಯವಿದ್ದಷ್ಟು ಸಹಾಯ ಮತ್ತು ಪರಿಕರಣಗಳನ್ನು ಅವರು ಒದಗಿಸಿದರು. ಕಾಲೇಜಿನಲ್ಲಿ ಕಲಿತ ವೈದ್ಯಕೀಯ ತರಬೇತಿ ಹಾಗೂ ಸಹೋದ್ಯೋಗಿ ಡಾ. ಲತಾಶ್ರೀ ಎನ್. ಅವರ ಮಾರ್ಗದರ್ಶನದೊಂದಿಗೆ ಹೆರಿಗೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ವೈದ್ಯ ವಿದ್ಯಾರ್ಥಿನಿಯರು ಹೇಳಿದ್ದಾರೆ.

ಮಧ್ಯರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ಸವಾಲಿನ ಪರಿಸ್ಥಿತಿಯಲ್ಲೂ ತಾಯಿ - ಮಗುವಿನ ಜೀವ ಉಳಿಸಿದ ಈ ಮೂವರು ವೈದ್ಯ ವಿದ್ಯಾರ್ಥಿನಿಯರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಬಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹೆರಿಗೆಯ ಬಳಿಕ ಪ್ಲಾಸೆಂಟಾ ಹೊರಬರುವ ಪ್ರಕ್ರಿಯೆ ತಡವಾಗಿತ್ತು. ಈ ವೇಳೆ ಡಾ.ರಶ್ಮಿ ಅವರು ತಾಯಿಯ ಹೊಟ್ಟೆಯನ್ನು ಮೃದುವಾಗಿ ಮಸಾಜ್ ಮಾಡುವುದರ ಜೊತೆಗೆ, ಹೊಕ್ಕುಳ ಬಳ್ಳಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ ತಾಯಿಗೆ ಮತ್ತೊಮ್ಮೆ ಪ್ರಯತ್ನಿಸುವಂತೆ ಪ್ರೋತ್ಸಾಹಿಸಿದರು. ಇದರಿಂದ ಯಾವುದೇ ತೊಂದರೆ ಇಲ್ಲದೆ ಪ್ಲಾಸೆಂಟಾ ಸಂಪೂರ್ಣವಾಗಿ ಹೊರಬಂದಿತು ಎಂದು ತಿಳಿಸಿದ್ದಾರೆ.

ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಡಾ.ಶಾಹೀನ್ ಅವರು ನವಜಾತ ಶಿಶುವಿನ ಆರೈಕೆ, ಹೊಕ್ಕಳ ಬಳ್ಳಿಯ ನಿರ್ವಹಣೆ ಹಾಗೂ ತಾಯಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ರೈಲಿನಲ್ಲಿ ಲಭ್ಯವಿದ್ದ ಸ್ವಚ್ಛವಾದ ದಾರ ಮತ್ತು ಶೇವಿಂಗ್ ಬ್ಲೇಡ ಬಳಸಿ ಹೊಕ್ಕುಳ ಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ಗಂಟು ಹಾಕಲಾಯಿತು.

ಮಗುವಿನ ದೇಹದ ಉಷ್ಣತೆ ಕಾಪಾಡಲು ತಕ್ಷಣವೇ ಮಗುವನ್ನು ತಾಯಿಯ ಎದೆಯ ಮೇಲೆ ಮಲಗಿಸಲಾಯಿತು. ಬಳಿಕ ರೈಲ್ವೆ ಸಿಬ್ಬಂದಿಗಳ ಸಹಾಯದಿಂದ ತಾಯಿ ಮತ್ತು ಮಗುವನ್ನು ತುರ್ತು ವಾಹನದ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

"ನಮ್ಮ ಜೀವನದಲ್ಲಿ ಇದು ಮೊದಲ ಅನುಭವ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿರುವುದು ನಮಗೆ ಹೆಮ್ಮೆ ತಂದಿದೆ" ಎಂದು ವೈದ್ಯ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಕಾರ್ಯಕೆ ಹೆಮ್ಮೆ ವ್ಯಕ್ತಪಡಿಸಿದ ಕಾಲೇಜು ನಿರ್ದೇಶಕ

ಎಸ್‌ಡಿಎಂ ಆಯುರ್ವೇದ ಕಾಲೇಜಿನ ನಿರ್ದೇಶಕ ಪ್ರಸನ್ನ ಕುಮಾರ್ ಮಾತನಾಡಿ, "ನಮ್ಮ ಯುವ ವೈದ್ಯರು ತರಬೇತಿ ವೇಳೆ ಕಾಲೇಜಿನಲ್ಲಿ ಕಲಿತ ಜ್ಞಾನವನ್ನು ಬಳಸಿಕೊಂಡು, ರೈಲಿನಲ್ಲಿ ಲಭ್ಯವಿದ್ದ ಅತ್ಯಲ್ಪ ಸಂಪನ್ಮೂಲಗಳಲ್ಲಿಯೇ ಹೆರಿಗೆ ಮಾಡುತ್ತಿದ್ದಾರೆ. ಡಾ.ರಶ್ಮಿ ಮತ್ತು ಡಾ.ಶಾಹೀನ್ ಅವರ ಸಹಾಯದೊಂದಿಗೆ ಈ ಕಾರ್ಯ ಯಶಸ್ವಿಯಾಗಿದೆ. ನಮ್ಮ ವಿದ್ಯಾರ್ಥಿಗಳು ಎನ್ನುವುದಕ್ಕೆ ನಮಗೆ ಹೆಮ್ಮೆ ಇದೆ" ಎಂದು ಹೇಳಿದ್ದಾರೆ.

ಇದೇ ತಿಂಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಎರಡು ವಿಭಿನ್ನ ಸಂದರ್ಭಗಳಲ್ಲಿ ತುರ್ತು ಹೆರಿಗೆ ನೆರವೇರಿಸಿದ್ದಾರೆ. ಕಳೆದ ವರ್ಷ ಉತ್ತರ ಭಾರತದಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ತುರ್ತು ಪರಿಸ್ಥಿತಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ತರಬೇತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

ರೈಲಿನಲ್ಲಿ ಹೆರಿಗೆ ಮಾಡಿಸಿದ ಎಸ್‌ಡಿಎಂ ವಿದ್ಯಾರ್ಥಿನಿಯರಿಗೆ ಮೆಚ್ಚುಗೆ; ತಾಯಿ ಮತ್ತು ನವಜಾತ ಶಿಶು ಸುರಕ್ಷಿತ

ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗಾಯಿತ್ರಿ ಮಾತನಾಡಿ, "ನಮ್ಮ ಕಾಲೇಜಿನಲ್ಲಿ ನಡೆದಿರುವ ಇದು ಮೂರನೇ ಮಾನವೀಯ ಪ್ರಕರಣ. ವಿದ್ಯಾರ್ಥಿಗಳು ಇಂತಹ ತುರ್ತು ಸಂದರ್ಭಗಳಲ್ಲಿ ತಮ್ಮ ಜ್ಞಾನ ಮತ್ತು ತರಬೇತಿಯನ್ನು ಬಳಸಿಕೊಂಡಿರುವುದು ನಮಗೆ ಚಿನ್ನದ ಪದಕ ಪಡೆದಷ್ಟು ಸಂತೋಷ ನೀಡಿದೆ" ಎಂದು ಹೇಳಿದ್ದಾರೆ.

ಈ ಹಿಂದೆ ಜುಲೈ 4ರಂದು ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸಂಚಾರ ದಟ್ಟನೆಯಲ್ಲಿ ಸಿಲುಕಿದ್ದ ಗರ್ಭಿಣಿ ಒಬ್ಬರಿಗೆ ಕಾರಿನಲ್ಲೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದರು.ಇದೀಗ ಹಾಸನದಿಂದ ವಾರಣಾಸಿಗೆ ತೆರಳುತ್ತಿದ್ದ ರೈಲಿನಲ್ಲಿ ಮತ್ತೊಂದು ಕ್ಲಿಷ್ಟಕರ ಪರಿಸ್ಥಿತಿಯನ್ನು ಮೂವರು ವಿದ್ಯಾರ್ಥಿಯರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ರೈಲಿನಲ್ಲಿ ಹೆರಿಗೆ; ಮಹಿಳೆಯರ ಮನದಾಳದ ಮಾತುರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ಅಬಿತ ದೇವಿತಮ್ಮ ಅನುಭವ ಹಂಚಿಕೊಂಡಿದ್ದಾರೆ. "ನಾನು ಬೆಂಗಳೂರಿನಿಂದ ಬಿಹಾರಕ್ಕೆ ಪ್ರಯಾಣಿಸುತ್ತಿದ್ದೆ. ಈ ವೇಳೆ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಾವು ಬಡ ಕುಟುಂಬದವರು. ಬೆಂಗಳೂರಿನ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ, ನಮ್ಮ ಊರಿನ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ರೈಲಿನಲ್ಲಿ ತೆರಳುತ್ತಿದ್ದವು. ಆಗಲೇ ಪ್ರಸವ ವೇದನೆ ಆರಂಭವಾಯಿತು" ಎಂದು ಹೇಳಿದ್ದಾರೆ.

ರೈಲ್ವೆ ಸಿಬ್ಬಂದಿ ಮತ್ತು ರೈಲಿನಲ್ಲಿದ್ದ ವೈದ್ಯ ವಿದ್ಯಾರ್ಥಿನಿಯರ ಸಹಾಯದಿಂದ ಸುರಕ್ಷಿತವಾಗಿ ಹೆರಿಗೆ ನಡೆಯಿತು. "ನಾನು ನನ್ನ ಮಗು ಇಬ್ಬರು ಆರೋಗ್ಯವಾಗಿದ್ದೇವೆ" ಎಂದು ಅಬಿತ ದೇವಿ ಸಂತಸ ವ್ಯಕ್ತಪಡಿಸಿದ್ದಾರೆ.

ಸೀಮಿತ ಸೌಲಭ್ಯಗಳ ನಡುವೆಯೂ ಸಮಯಪ್ರಜ್ಞೆ,ವೈದ್ಯಕೀಯ ಜ್ಞಾನ ಮತ್ತು ಮಾನವೀಯತೆಯಿಂದ ತಾಯಿ- ಮಗುವಿನ ಜೀವ ಉಳಿಸಿದ ಡಾ. ರಶ್ಮಿ ಬೀಳಗಿ, ಡಾ.ಲತಾಶ್ರೀ ಎನ್. ಹಾಗೂ ಶಾಹಿನ್ ಎಂ. ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online