<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಕ್ರಿಕೆಟ್ ಲೋಕದಲ್ಲಿ ದುಃಖದ ಕ್ಷಣ : ಗೆಳೆಯನನ್ನು ಕಳೆದುಕೊಂಡ ವಿರಾಟ್ ಕೊಹ್ಲಿ

ಕ್ರಿಕೆಟ್ ಲೋಕದಲ್ಲಿ ದುಃಖದ ಕ್ಷಣ : ಗೆಳೆಯನನ್ನು ಕಳೆದುಕೊಂಡ ವಿರಾಟ್ ಕೊಹ್ಲಿ
Summary: Virat Kohli is emotional over the untimely demise of his childhood friend with whom he played cricket. Reacting to this sad news, Kohli shared his memories of friendship and paid tribute. The incident has created an atmosphere of mourning in the cricket world.

Belagavi news:

ಭಾರತದ ಮಾಜಿ ಅಂಡರ್-19 ಕ್ರಿಕೆಟಿಗ ಹಾಗೂ ವಿರಾಟ್ ಕೊಹ್ಲಿಯ ಸಹ ಆಟಗಾರ ಅಮನ್ ಪ್ರೀತ್ ಗಿಲ್ ಕೇವಲ 36ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ಸಾವಿಗೆ ಕ್ರಿಕೆಟ್ ವಲಯದಲ್ಲಿ ಆಘಾತ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.

ಚಂಡೀಗಢ ಮೂಲದ ಅಮನ್ ಪ್ರೀತ್ ಗಿಲ್ ಪಂಜಾಬ್ ರಾಜ್ಯದ ಪರದೇಶಿಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದರು. ಪ್ರತಿಭಾವಂತ ಆಲ್ರೌಂಡರ್ ಆಗಿದ್ದ ಅವರು 2007ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್ - 19 ತ್ರಿಕೋನ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ತಂಡದಲ್ಲಿ ವಿರಾಟ್ ಕೊಹ್ಲಿ ಕೂಡ ಪ್ರಮುಖ ಆಟಗಾರನಾಗಿ ಭಾಗಿಯಾಗಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಗಿಲ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಸಹ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿರಾಟ್ ಕೊಹ್ಲಿ ಅವರು ತಮ್ಮ ಹಳೆಯ ಸಹ ಆಟಗಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Sponsored

ದೇಶಿಯ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ಪರ ಹಲವು ಪಂದ್ಯಗಳಲ್ಲಿ ಆಡಿದ್ದ ಗಿಲ್, ಯುವ ಕ್ರಿಕೆಟಿಗರ ನಡುವೆ ಭರವಸೆಯನ್ನು ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಅವರು ಕ್ರಿಕೆಟ್ ವೃತ್ತಿ ಜೀವನ ನಿಧಾನವಾಗಿ ಕಡಿಮೆಯಾಗಿತ್ತು.

ಅವರ ಅಕಾಲಿಕ ನಿಧನ ಕ್ರಿಕೆಟ್ ಜಗತ್ತಿಗೆ ದೊಡ್ಡ ನಷ್ಟವಾಗಿದ್ದು, ಚಹಾ ಆಟಗಾರರು ಅವರನ್ನು ಒಬ್ಬ ಶಿಸ್ತು ಬದ್ಧ ಹಾಗೂ ಪ್ರತಿಭಾವಂತ ಕ್ರಿಕೆಟಿಗನಾಗಿ ಸ್ಮರಿಸುತ್ತಿದ್ದಾರೆ.

ಅಮನ್ ಪ್ರೀತ್ ಗಿಲ್ ನಿಧನಕ್ಕೆ ವಿರಾಟ್ ಕೊಹ್ಲಿ ಬಾವುಕ ಶ್ರದ್ಧಾಂಜಲಿ :

ಭಾರತದ ಮಾಜಿ ಅಂಡರ್-19 ಕ್ರಿಕೆಟಿಗ ಅಮನ್ ಪ್ರೀತಿ ಸಿಂಗ್ ಗಿಲ್ ಅವರ ಅಕಾಲಿಕ ನಿಧನಕ್ಕೆ ವಿರಾಟ್ ಕೊಹ್ಲಿ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹಳೆಯ ಸಹ ಆಟಗಾರನ ಸಾವಿನ ಸುದ್ದಿಗೆ ತೀವ್ರ ದುಃಖವೆತಪಡಿಸಿರುವ ಕೊಹ್ಲಿ, ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಂದೇಶ ಹಂಚಿಕೊಂಡಿದ್ದಾರೆ.

Sponsored

ಅಮನ್ ಪ್ರೀತ್ ಗಿಲ್, 2007ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್-19 ತ್ರಿಕೋನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಮನೀಶ್ ಪಾಂಡೆ ಕೂಡ ಪ್ರಮುಖ ಆಟಗಾರರಾಗಿ ಭಾಗವಹಿಸಿದ್ದರು. ಪಂಜಾಬ್ ಪರದೇಶಿಯ ಕ್ರಿಕೆಟ್ ಆಡಿದ್ದ ಗಿಲ್, ಯುವ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.

ಗಿಲ್ ಅವರ ನಿಧನದ ಸುದ್ದಿ ಸಿರಿದ ಬಳಿಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೃದಯವಿದ್ರಾವಕ ಸಂದೇಶವನ್ನು ಹಂಚಿಕೊಂಡಿದ್ದಾರೆ."ಅಮನ್ ಪ್ರೀತ್ ಗಿಲ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಯಿತು. ಅವರ ಕುಟುಂಬ ಮತ್ತು ಪ್ರೀತಿ ಪಾತ್ರರು ಈ ನಷ್ಟವನ್ನು ಬರಿಸುವ ಶಕ್ತಿಯನ್ನು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ" ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಕೊಹ್ಲಿಯ ಈ ಭಾವನಾತ್ಮಕ ಪ್ರತಿಕ್ರಿಯೆ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಮುಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅಮನ್ ಪ್ರೀತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಅವರ ಅಕಾಲಿಕ ನಿಧನ ಕ್ರಿಕೆಟ್ ಲೋಕಕ್ಕೆ ದೊಡ್ಡ ನಷ್ಟವಾಗಿದ್ದು, ಮಾಜಿ ಸಹ ಆಟಗಾರರು ಹಾಗೂ ಅಭಿಮಾನಿಗಳು ಅವರ ನೆನಪಿನಲ್ಲಿ ದುಃಖ ವ್ಯಕ್ತಪಡಿಸುತ್ತಿದ್ದಾರೆ.

Sponsored

ಅಮನ್ ಪ್ರೀತ್ ಗಿಲ್ ಸಾವಿಗೆ ಕಾರಣ ಬಹಿರಂಗ:

ಭಾರತ ಮಾಜಿ ಅಂಡರ್-19 ಕ್ರಿಕೆಟಿಗ ಹಾಗೂ ಪಂಜಾಬ್ ತಂಡದ ವೇಗಿ ಅಮನ್ ಪ್ರೀತ್ ಸಿಂಗ್ ಜಿಲ್ ಅವರ ಸಾವಿಗೆ ದೀರ್ಘಕಾಲದ ಅನಾರೋಗ್ಯವೇ ಕಾರಣ ಎಂದು ತಿಳಿದುಬಂದಿದೆ. ಕಳೆದ ಆರು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ರೋಗದ ವಿರುದ್ಧದ ಹೋರಾಟದಲ್ಲಿ ಸೋತು ಇಹಲೋಕ ತಜಿಸಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

ಅಮನ್ ಪ್ರೀತ ಗಿಲ್ 2007ರಲ್ಲಿ ಶ್ರೀಲಂಕಾದಲ್ಲಿ ನಡೆದ ಅಂಡರ್-19 ತ್ರಿಕೋನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆ ಟೂರ್ನಿಯಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿ 5 ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಪಡೆದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫೈನಲ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಅವರು ಅಮೋಘ ಪ್ರದರ್ಶನ ನೀಡಿದ್ದರು.

ದೇಶಿಯ ಕ್ರಿಕೆಟ್ ನಲ್ಲಿ ಪಂಜಾಬ್ ಪರ ರಣಜಿ ಟ್ರೋಫಿ ಆಡಿದ ಒಟ್ಟು ಆರು ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದಿದ್ದರು. 2008ರಲ್ಲಿ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಅವರು ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಆ ಪಂದ್ಯದಲ್ಲಿ ಅವರು ರೋಹಿತ್ ಶರ್ಮ ಅವರನ್ನು ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ತನ್ನ ಮೊದಲ ಪ್ರಥಮ ದರ್ಜೆ ಪಂದ್ಯದಲ್ಲೇ ನಾಲ್ಕು ವಿಕೆಟ್ಗಳನ್ನು ಪಡೆದು ಭರವಸೆಯ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು.

Sponsored

ಆದರೆ ನಂತರದ ವರ್ಷಗಳಲ್ಲಿ ಅವರಿಗೆ ತಂಡದಲ್ಲಿ ಸ್ಥಾನಸಿದರೆ ಇದ್ದುದರಿಂದ ಅವರ ಕ್ರಿಕೆಟ್ ಪಯಣ ನಿಧಾನವಾಗಿ ಅಂತ್ಯಗೊಂಡಿತು. ಅನಾರೋಗ್ಯದ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಸಾರ್ವಜನಿಕ ಜೀವನದಿಂದ ದೂರವಿದ್ದರು.

ಅಮನ್ ಪ್ರೀತ್ ಗಿಲ್ ಅವರ ಅಕಾಲಿಕ ನಿಧನ ಕ್ರಿಕೆಟ್ ವಲಯದಲ್ಲಿ ಶೋಕದ ವಾತಾವರಣ ಸೃಷ್ಟಿಸಿದ್ದು, ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Also Read:

ಗುರುವಾರದ ಪಂಚಾಂಗ ದಿನ ಭವಿಷ್ಯ: ಕೆಲಸದಲ್ಲಿ ಜಯ, ಶತ್ರುಗಳಿಂದ ಅಸೂಯೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online