ಸತ್ಯಸಾಯಿ ಬಾಬಾ ಎಂದರೆ ಪ್ರೀತಿಯ ಸಾಕಾರ ರೂಪ; ಪ್ರಧಾನಿ ಮೋದಿ ಬಣ್ಣನೆ
ಆಧ್ಯಾತ್ಮಿಕ ನಾಯಕ ಸತ್ಯಸಾಯಿ ಬಾಬಾ ಅವರನ್ನು ಸಾರ್ವತ್ರಿಕ ಪ್ರೀತಿಯ ಸಾಕಾರ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಆಧ್ಯಾತ್ಮಿಕ ನಾಯಕರ ಪ್ರೀತಿ ಮತ್ತು ಸೇವೆಯ ಸಂದೇಶವು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಆಚರಣೆಯಲ್ಲಿ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ.
ಪುಟ್ಟಪರ್ತಿ:
ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಇಂದಿನಿಂದ ನವೆಂಬರ್ 23ರವರೆಗೆ ಶ್ರೀ ಸತ್ಯಸಾಯಿ ಬಾಬಾ (Sri Sathya Sai Baba) ಅವರ ಶತಮಾನೋತ್ಸವ ಆಚರಣೆಗಳು ನಡೆಯುತ್ತಿವೆ. ಪುಟ್ಟಪರ್ತಿಯ ಪ್ರಾಚೀನ ಬೀದಿಗಳು ಸಾಯಿಬಾಬಾ ಸ್ಮರಣೆಯಿಂದ ಪ್ರತಿಧ್ವನಿಸುತ್ತಿವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಸತ್ಯಸಾಯಿ ಬಾಬಾ ಸಾರ್ವತ್ರಿಕ ಪ್ರೀತಿಯ ಸಾಕಾರ ಎಂದು ಹೇಳಿದ್ದಾರೆ.
“ಸಾಯಿಬಾಬಾ ಇಂದು ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ, ಅವರ ಪ್ರೀತಿ ನಮ್ಮೊಂದಿಗೆ ಉಳಿದಿದೆ. ಅವರ ಬೋಧನೆಗಳು ದೇಶಾದ್ಯಂತ ಅಸಂಖ್ಯಾತ ಜೀವನಗಳನ್ನು ಪರಿವರ್ತಿಸಿವೆ. ಅವರ ಲಕ್ಷಾಂತರ ಭಕ್ತರು ಮಾನವೀಯತೆಗೆ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಮೋದಿ ಹೇಳಿದ್ದಾರೆ.
ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯಲ್ಲಿ ನಡೆದ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ, ಸತ್ಯಸಾಯಿ ಬಾಬಾ ಅವರ ಪ್ರೀತಿಯ ತತ್ವಗಳಾದ ಮಾನವ ಸೇವೆ ಪ್ರಪಂಚದಾದ್ಯಂತ ಕೇಳಿಬರುತ್ತಿದೆ. ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವುದು ತಮ್ಮ ಅದೃಷ್ಟ ಎಂದು ಭಾವಿಸುತ್ತೇನೆ. ಸತ್ಯಸಾಯಿ ಬಾಬಾ ಸಾರ್ವತ್ರಿಕ ಪ್ರೀತಿಯ ಸಾಕಾರ. ಶ್ರೀ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಆಧ್ಯಾತ್ಮಿಕ ಸೌಂದರ್ಯ ಗೋಚರಿಸುತ್ತದೆ ಎಂದಿದ್ದಾರೆ.
ಈ ವೇಳೆ, ಆಂಧ್ರದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ, ಮೋದಿ ಅವರು ಪ್ರಶಾಂತಿ ನಿಲಯಂನಲ್ಲಿರುವ ಸತ್ಯಸಾಯಿ ಬಾಬಾ ಅವರ ಮಹಾ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸತ್ಯಸಾಯಿ ಅವರ ಬೋಧನೆಗಳು ಜಗತ್ತಿಗೆ ಸರಿಯಾದ ಮಾರ್ಗವನ್ನು ತೋರಿಸಿವೆ. ‘ಎಲ್ಲರನ್ನೂ ಪ್ರೀತಿಸಿ.. ಎಲ್ಲರಿಗೂ ಸೇವೆ ಮಾಡಿ’ ಎಂಬುದು ಸಾಯಿಬಾಬಾ ಅವರ ಧ್ಯೇಯವಾಕ್ಯ. ಅವರು ಸಾವಿರಾರು ಜೀವನವನ್ನು ಬದಲಾಯಿಸಿದ್ದಾರೆ. ಅವರು ಜನರಿಗಾಗಿ ಅನೇಕ ಸೇವಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಸಾಮಾಜಿಕ ಸೇವೆಗೆ ಹೆಚ್ಚಿನ ಆದ್ಯತೆ ನೀಡಿದ ಸತ್ಯಸಾಯಿ ಕುಡಿಯುವ ನೀರು, ಶಿಕ್ಷಣ ಮತ್ತು ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆಗಳನ್ನು ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಸ್ಮರಿಸಿದರು.
ಕುಡಿಯುವ ನೀರು ಸರಬರಾಜು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಶ್ರೀ ಸತ್ಯಸಾಯಿ ಸಂಘಟನೆಗಳು ಮಾಡುತ್ತಿರುವ ಕೆಲಸವನ್ನು ಮೋದಿ ಶ್ಲಾಘಿಸಿದರು. ಪುಟ್ಟಪರ್ತಿಯನ್ನು “ವಿಶೇಷ ದೈವಿಕ ಶಕ್ತಿ ಹೊಂದಿರುವ ಪವಿತ್ರ ಭೂಮಿ” ಎಂದು ಬಣ್ಣಿಸಿದರು.
ಇನ್ನಷ್ಟು ಓದಿರಿ:
ಪ್ರಧಾನಿ ಮೋದಿ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ