BELAGAVI NEWS :
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಪ್ರಸ್ತಾಪವಾಗಿರುವ ಟೌನ್ ಶಿಪ್ ಯೋಜನೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಯೋಜನೆ ಅಥವಾ ಸ್ಕೀಮ್ ಜಾರಿಗೆ ತರಲು ಹೋಗಿ ಸರ್ಕಾರಕ್ಕೆ ಧಕ್ಕೆ ಉಂಟಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬಿಡದಿ ಟೌನ್ ಶಿಪ್ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಪಕ್ಷದ ಭವಿಷ್ಯವು ಕೆಲವು ನಿರ್ಧಾರಗಳ ಮೇಲೆ ಅವಲಂಬಿತವಾಗಿರುವುದರಿಂದ ಈ ಯೋಜನೆ ಸರ್ಕಾರಕ್ಕೆ ಹೊರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ ಎಂದು ಹೇಳಿದರು.
"ಯಾವುದೋ ಒಂದು ಸ್ಕೀಮ್ ಮಾಡಲು ಹೋಗಿ ಸರ್ಕಾರಕ್ಕೆ ಧಕ್ಕೆ ಆಗಬಾರದು. ಅಂತಹ ಸಮಯ ಉದ್ಭವವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಶನಿವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ" ಎಂದು ಅವರು ಹೇಳಿದರು.
ಇದೇ ವೇಳೆ, ಬಿಡದಿ ಟೌನ್ ಶಿಪ್ ವಿಚಾರವಾಗಿ ಎಚ್ .ಡಿ. ಕುಮಾರಸ್ವಾಮಿ ಹಾಗೂ ಎಚ್. ಡಿ. ದೇವೇಗೌಡರ ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಅವರು ಏನು ಹೋರಾಟ ಮಾಡುತ್ತಾರೋ ಮಾಡಲಿ, ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಒಳ್ಳೆಯದಾಗಬೇಕು ಹೊರತು ಕೆಟ್ಟದಾಗಬಾರದು" ಎಂದರು.
ಯೋಜನೆ ಎಷ್ಟು ಬೆಂಬಲ ಮತ್ತು ವಿರೋಧವಿದೆ ಎಂಬುದರ ಕುರಿತು ಚರ್ಚೆ ನಡೆಸಲಾಗುವುದು ಪಕ್ಷದ ಹಿತ ದೃಷ್ಟಿಯಿಂದ ಈ ವಿಷಯವನ್ನು ಸಮಗ್ರವಾಗಿ ಪರಿಗಣಿಸುವುದು ಅಗತ್ಯ ಎಂದು ಸಚಿವರು ತಿಳಿಸಿದರು.
ಜಮೀರ್ ಗೆ ಸಚಿವ ಸ್ಥಾನ ಕೊಡಲು ಮನವಿ: ಜಮೀರ್ ಅಹ್ಮದ್ ಅವರಿಗೆ ಸಚಿವ ಸ್ಥಾನ ಕೋಡಿ ಅಂತಾ ಹೇಳಿದ್ದೇನೆ. ಸಿಎಂ ಡಿಕೆಶಿ ಭೇಟಿ ಮಾಡಿದಾಗ ಅಭಿಪ್ರಾಯ ಹೇಳಿದ್ದೇನೆ. ಮುಸ್ಲಿಂ ಸಮುದಾಯವೇ ನಮಗೆ ಹೆಚ್ಚು ಮತ ಹಾಕುವುದು. ಹೀಗಾಗಿ ಜಮೀರ್ ಹಾಗೂ ಮತ್ತೊಬ್ಬರಿಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ. ಹಿಂದೆ ಇಬ್ಬರಿಗೆ ಕೊಟ್ಟಿದ್ದರು, ಈಗ ಮೂವರಿಗೆ ಕೊಡಿ ಅಂತಾ ಹೇಳಿದ್ದೇನೆ ಎಂದರು.
ಜೆಡಿಎಸ್ ಪಾದಯಾತ್ರೆ: ಜೂನ್ 21ರಂದು 26 ಹಳ್ಳಿಗಳಲ್ಲಿ ಬೃಹತ್ ಪ್ರತಿಭಟನೆ:
ರಾಮನಗರ ಜಿಲ್ಲೆಯ ಬಿಡದಿ ಟೌನ್ ಶಿಪ್ (GBDA) ಯೋಜನೆ ವಿರೋಧಿಸಿ Janata Dal (Secular) ಜೂನ್ 21ರಂದು ಯೋಜನೆ ವ್ಯಾಪ್ತಿಯ 26 ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಂತ್ರಸ್ತ ರೈತರೊಂದಿಗೆ ಈ ಪಾದಯಾತ್ರೆ ನಡೆಸಲು ಜೆಡಿಎಸ್ ಮುಂದಾಗಿದೆ.
ಭಾನುವಾರ ಬಿಡದಿಯ ಅರಳಾಳುಸಂದ್ರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು. ಬಿಡದಿ ಟೌನ್ ಶಿಪ್ (GBDA) ಹೆಸರಿನಲ್ಲಿ ಸರ್ಕಾರ ಅನ್ಯಾಯಕರ ಭೂಸ್ವಾಧೀನಕ್ಕೆ ಮುಂದಾಗಿದ್ದು, ಅವರ ವಿರುದ್ಧದ ಹೋರಾಟ ಈಗ ಜನರ ಮಧ್ಯೆ ಬಂದಿದೆ ಎಂದು ಅವರು ಹೇಳಿದರು.
ಈ ಯೋಜನೆ ಸರ್ಕಾರ ರಿಯಲ್ ಎಸ್ಟೇಟ್ ಯೋಜನೆಯಾಗಿದ್ದು, ಹಣ ಲೂಟಿ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಆರೋಪಿಸಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೇ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.
"ಸರ್ಕಾರದ ಖಜಾನೆಯಲ್ಲಿ ಹಣದ ಕೊರತೆ ಇರುವ ಸಂದರ್ಭದಲ್ಲಿ, ಆರ್ಥಿಕ ಇಲಾಖೆಯ ವರದಿಯನ್ನು ಕಡೆಗಣಿಸಿ ಶೇ. 87 ರಷ್ಟು ಸಾಲದ ಮೊತ್ತವನ್ನು ಆಧರಿಸಿ ಈ ಯೋಜನೆ ಕೈಗೊಳ್ಳಲು ಮುಂದಾಗಿರುವುದು ಯಾರ ಹಿತಾಸಕ್ತಿಗಾಗಿ ಎಂಬ ಪ್ರಶ್ನೆ ಉದ್ಭವಿಸಿದೆ. ಹೈನುಗಾರಿಕೆ, ರೇಷ್ಮೆ ಹಾಗೂ ಕೃಷಿಯನ್ನು ನಂಬಿ ಬದುಕುತ್ತಿರುವ ರೈತರ ಬದುಕಿಗೆ ಸಂಕಷ್ಟ ತರುವ ಈ ಯೋಜನೆ ವಿರುದ್ಧ ನಮ್ಮ ಹೋರಾಟ ನಿರಂತವಾಗರಲಿದೆ"ಎಂದು ಅವರು ಹೇಳಿದರು.
ಯೋಜನೆಯನ್ನು ತಕ್ಷಣ ಕೈ ಬಿಡುವಂತೆ ಸರ್ಕಾರವನ್ನು ಒತ್ತಾಯಿಸಿದ ಅವರು ಜೂನ್ 21 ರಂದು ನಡೆಯುತ್ತಿರುವ ಬೃಹತ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
Also Read:
ಸ್ಲೋವಾಕಿಯಾದ ಶ್ರೇಷ್ಠ ಪ್ರಶಸ್ತಿ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' ಗೌರವಕ್ಕೆ ಭಾಜನರಾದ ಪ್ರಧಾನಿ ಮೋದಿ