<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಚಿನ್ನಸ್ವಾಮಿ ಸ್ಟೇಡಿಯಂ ವಿರುದ್ಧ ಗಂಭೀರ ಆರೋಪ - ಏನದು? ಇಲ್ಲಿದೆ ನೋಡಿ ಫುಲ್ ಅಪ್ಡೇಟ್ಸ್

ಚಿನ್ನಸ್ವಾಮಿ ಸ್ಟೇಡಿಯಂ ವಿರುದ್ಧ ಗಂಭೀರ ಆರೋಪ - ಏನದು? ಇಲ್ಲಿದೆ ನೋಡಿ ಫುಲ್ ಅಪ್ಡೇಟ್ಸ್
Summary: The Chinnaswamy Stadium CCTV lease dispute has taken a new turn, with serious allegations that a false case has been registered against innocent people for not paying the dues.

Belagavi news:

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ವೇಳೆ ಸಿಸಿಟಿವಿ ವೈರ್ ಕಟ್ ಪ್ರಕರಣಕ್ಕೆ ಇದೀಗ ಸಿಕ್ಕಿದ್ದು, ಪ್ರಕರಣದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ.

ಮೂಲಗಳ ಪ್ರಕಾರ, ಸಿಸಿಟಿವಿ ತಂತ್ರಜ್ಞಾನ ಸಂಸ್ಥೆಗಳು ಬಾಕಿ ಹಣ ನೀಡದೆ ವಂಚಿಸಲು ಅಮಾಯಕರ ಮೇಲೆ ಸುಳ್ಳು ಕೇಸ್ ದಾಖಲಿಸಿವೆ ಎಂಬ ಆರೋಪ ಕೇಳಿ ಬಂದಿದೆ. ಪಂದ್ಯದ ಸಮಯದಲ್ಲಿ ಯಾವುದೇ ಭದ್ರತಾ ಲೋಪ ಅಥವಾ ದುಷ್ಕೃತ್ಯ ನಡೆದಿಲ್ಲ ಎಂಬ ಐವಿಎಸ್ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ಕೋರ್ಟ್ ನೀಡಿದ್ದ ಎಸ್ ಓಪಿ ನಿಯಮಗಳನ್ನು ಉಲ್ಲಂಘಿಸಿ, ಎ ಐ ತಂತ್ರಜ್ಞಾನ ಹೆಸರಿನಲ್ಲಿ ಸಾಮಾನ್ಯ ಕ್ಯಾಮರಾ ಗಳನ್ನು ಅಳವಡಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪವು ವ್ಯಕ್ತವಾಗಿದೆ. ತಾಂತ್ರಿಕ ದೋಷದಿಂದ ಸಿಸಿಟಿವಿ ವ್ಯವಸ್ಥೆ ತಾತ್ಕಾಲಿಕವಾಗಿ ಆಫ್ ಆಗಿದ್ದ ಘಟನೆಯನ್ನು ದುಷ್ಕೃತ್ಯವಾಗಿ ಬಿಂಬಿಸಲಾಗಿದೆ ಎಂದು ಸಿಬ್ಬಂದಿ ದೂರಿದ್ದಾರೆ.

Sponsored

ಈ ಘಟನೆಯ ಹಿನ್ನೆಲೆಯಲ್ಲಿ ನಿಜವಾದ ಸತ್ಯವನ್ನು ಮರೆಮಾಚಿ, ಹಣದ ವ್ಯವಹಾರಕ್ಕಾಗಿ ಪ್ರಕರಣವನ್ನು ತಿರುವು ನೀಡಲಾಗಿದೆ ಎಂಬ ಆರೋಪಗಳು ಗಂಭೀರ ಚರ್ಚೆಗೆ ಕಾರಣವಾಗಿವೆ. ವಿಷಯ ಇದೀಗ ಕಾನೂನು ಮತ್ತು ಕ್ರೀಡಾ ವಲಯದಲ್ಲೂ ಗಮನ ಸೆಳೆದಿದೆ.

ಡಿಸಿ ಟಿವಿ ವೈರ್ ಕಟ್ ಪ್ರಕರಣದ ನಿಜಾಂಶ ತಿಳಿಯಲು ತನಿಖೆ ನಡೆಯಬೇಕೆಂಬ ಒತ್ತಾಯವು ಹೆಚ್ಚುತ್ತಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಸಿಸಿಟಿವಿ ಪ್ರಕರಣಕ್ಕೆ ಹೊಸ ಟ್ವಿಸ್ಟ್: 40 ಲಕ್ಷ ಬಾಕಿ ಆರೋಪ:

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಹಣಕಾಸು ವ್ಯವಹಾರ ಹಾಗೂ ಟೆಂಡರ್ ಪ್ರಕ್ರಿಯೆ ಕುರಿತು ಗಂಭೀರ ಆರೋಪಗಳು ಹೊರಬಂದಿವೆ.

Sponsored

ಮೂಲಗಳ ಪ್ರಕಾರ, ಆರ್ ಸಿಬಿ ಮತ್ತು ಕೆಎಸ್ ಸಿಎ ಮುಖಾಂತರ ಸ್ಟೇಡಿಯಂ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಮಾರು ₹7 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಹರಿಯಾಣ ಸ್ಟಾಕು ಸಂಸ್ಥೆಗೆ ₹4.5 ಕೋಟಿಗೆ ಟೆಂಡರ್ ನೀಡಲಾಗಿತ್ತು. ನಂತರ ಗುಜರಾತ್ ಮೊದಲ ಟೆಕ್ ಸ್ಟಿಚ್ ಸಂಸ್ಥೆ ಹಾಗೂ ಕೊನೆಗೆ ಪುಣೆ ಟೆಕ್ ಸೆಕ್ಯೂರ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಿಸಿಟಿವಿ ಅಳವಡಿಕೆಯ ಹೊಣೆ ನೀಡಲಾಗಿತ್ತು.

ಐ ವಿ ಎಸ್ ಸಂಸ್ಥೆಯು ಬೆಂಗಳೂರಿನ ತಂಡದ ಮೂಲಕ ಸುಮಾರು 1.2 ಕೋಟಿಗೆ ಕೆಲಸವನ್ನು ಪೂರ್ಣಗೊಳಿಸಿದ್ದು, ಮೂರು ಪಂದ್ಯಗಳು ಮುಗಿದ ನಂತರ ಒಂದು ಕೋಟಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಉಳಿದ ಸುಮಾರು 40 ಲಕ್ಷ ಬಾಕಿ ಹಣ ಇನ್ನೂ ಪಾವತಿ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಹಣ ಬಾಕಿ ಹಿನ್ನೆಲೆಯಲ್ಲಿ ವಿವಾದ ತೀವ್ರಗೊಂಡಿದ್ದು, ಸಿಸಿಟಿವಿ ವಯರ್ ಕಟ್ ಪ್ರಕರಣದ ಹಿಂದೆ ಹಣಕಾಸು ವ್ಯವಹಾರದ ಗೊಂದಲ ಇರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಮತ್ತೊಂದು ಪ್ರಮುಖ ಆರೋಪವೆಂದರೆ, ಕೊನೆಯ ಪಂದ್ಯಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಪವರ್ ಸಮಸ್ಯೆಯಿಂದಾಗಿ ಸಿಸಿಟಿವಿ ವ್ಯವಸ್ಥೆ ತಾತ್ಕಾಲಿಕವಾಗಿ ಆಫ್ ಆಗಿತ್ತು. ಈ ಸಂದರ್ಭದಲ್ಲಿ ಐವಿಎಫ್ ಸಿಬ್ಬಂದಿ ಅಬ್ದುಲ್ ಕಲಾಂ ಮತ್ತು ಮಂಜುನಾಥ್ ಸ್ಥಳಕ್ಕೆ ತೆರಳಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಿದ್ದರೂ ತಾಂತ್ರಿಕ ದೋಷದಿಂದ ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.

Sponsored

ಆದರೆ ಈ ತಾಂತ್ರಿಕ ದೋಷದ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರವಾಗಿಸಿಕೊಂಡು, ಸ್ಟಾಕು ಸಂಸ್ಥೆಯ ಆದಿತ್ಯ ಬಟ್ ಅವರು ವೈರ್ ಕಟ್ ಮಾಡಿದ್ದಾರೆ ಎಂದು ಅಮಾಯಕರ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತಪ್ಪು ಮುಚ್ಚಿಕೊಳ್ಳಲು ಹಾಗೂ ಹಣಕಾಸು ವ್ಯವಹಾರದಲ್ಲಿ ವಂಚನೆ ಮಾಡಲು ಪ್ರಕರಣವನ್ನು ತಿರುಚಲಾಗಿದೆ ಎಂಬ ಆರೋಪಗಳು ಇದೀಗ ಕಾನೂನು ಹಾಗೂ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.

ಕೋರ್ಟ್ ಎಸ್ ಓ ಪಿ ಉಲ್ಲಂಘನೆ, ಲಂಚ ಆರೋಪ ಮತ್ತು ಹಣಕಾಸು ಗೊಂದಲದ ಸ್ಪೋಟಕ ಮಾಹಿತಿ:

ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಿಸಿಟಿವಿ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ಕೋರ್ಟ್ ಸೂಚಿಸಿದ ಭದ್ರತಾ ನಿಯಮಾವಳಿ ಉಲ್ಲಂಘನೆ, ಲಂಚ ಆರೋಪ ಹಾಗೂ ಹಣಕಾಸು ಗೊಂದಲಗಳ ಕುರಿತು ಗಂಭೀರ ಆರೋಪಗಳು ಹೊರಬಂದಿವೆ.

Sponsored

ಮೂಲಗಳ ಪ್ರಕಾರ, ಕಾಲ್ತುಳಿತ ದುರಂತದ ಬಳಿಕಾಗಿ ಎಸ್ ಓ ಪಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿತ್ತು. ಆದರೆ ಎ ಐ ಕ್ಯಾಮೆರಾ ಗಳನ್ನು ಅಳವಡಿಸಿಸುವುದಾಗಿ ಹೇಳಿ, 122 ಕೇವಲ ಹೆಡ್ ಕೌಂಟ್ ಮಾತ್ರ ಸಾಧ್ಯವಾಗುವ ಸಾಮಾನ್ಯ ಕ್ಯಾಮೆರಾ ಗಳನ್ನು ಅಳವಡಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಐವಿಎಸ್ ಪ್ರಾಜೆಕ್ಟ್ ಮ್ಯಾನೇಜರ್ ವರುಣ್ ಹಾಗೂ ಸಿಬ್ಬಂದಿ ಅಚ್ಚುತ್ ಆರೋಪಿಸಿದ್ದಾರೆ.

ಸುಮಾರು 1.5 ಕೋಟಿ ಬಜೆಟ್ ನಲ್ಲಿ ನಿಜವಾದ ಎಐ ಕ್ಯಾಮೆರಾ ಅಳವಡಿಕೆ ಸಾಧ್ಯವಿಲ್ಲದಿದ್ದರೂ, ತಪ್ಪು ಮುಚ್ಚಿ ಹಾಕಲು ಈ ರೀತಿಯ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ.

ಇದೆ ವೇಳೆ, ಕ್ರೀಡಾಂಗಣದಲ್ಲಿ ಕೆಲಸ ಮಾಡುವ ಕೆ ಎಸ್ ಸಿ ಎ ಐ ಟಿ ಹೆಡ್ ಎನ್ನಲಾದ ರವಿ ಎಂಬಾತ ಆನ್ಲೈನ್ ಮೂಲಕ 40,000 ಹಾಗೂ ನಗದು ರೂಪದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ಲಂಚವಾಗಿ ಪಡೆದಿದ್ದಾನೆ ಎಂಬ ಗಂಭೀರ ಆರೋಪವು ಹೊರಬಂದಿದೆ.

ಹಣ ಬಾಕಿ ವಿಚಾರದಲ್ಲಿ ಕೆ ಎಸ್ ಸಿ ಎ ಮತ್ತು ಟೆಕ್ ಸ್ಟಿಚ್ ಕಂಪನಿಗಳು ಒಬ್ಬರ ಮೇಲೊಬ್ಬರು ಜವಾಬ್ದಾರಿ ತಳ್ಳುತ್ತಾ ಜಾರಿಕೊಳ್ಳುತ್ತಿರುವುದಾಗಿ ಐವಿಎಸ್ ಸಿಬ್ಬಂದಿ ದೂರಿದ್ದಾರೆ. ಈ ಹಣಕಾಸು ವಿವಾದವೇ ಪ್ರಕರಣವನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದೆ ಎಂದು ಹೇಳಲಾಗಿದೆ.

Sponsored

ಪೊಲೀಸ್ ತನಿಖೆಯ ಪ್ರಾಥಮಿಕ ಹಂತದಲ್ಲಿ ಇದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಎಂದು ಪತ್ತೆಯಾಗಿದ್ದು, ಇಬ್ಬರು ಯುವಕರಿಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಆದರೆ ಸುಳ್ಳು ಆರೋಪಗಳಿಂದ ಯುವಕರು ಅನಗತ್ಯ ಮುಜುಗರಕ್ಕೆ ಒಳಗಾಗಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ.

ಇದೇ ವೇಳೆ ಭದ್ರತಾ ಗೊಂದಲ ಮತ್ತು ಸುಮಾರು 10,000 ಐಪಿಎಲ್ ಟಿಕೆಟ್ ಗಳ ಬೇಡಿಕೆಯ ಒತ್ತಡವೇ ಐಪಿಎಲ್ ಅಂತಿಮ ಪಂದ್ಯಗಳನ್ನು ಪ್ರಮುಖ ಕಾರಣವಾಗಿತ್ತು ಎಂಬ ಆಘಾತಕಾರಿ ಮಾಹಿತಿ ಕೂಡ ಹೊರಬಂದಿದೆ.

Also Read:

ಅಮೆರಿಕ: ಓಹಿಯೋ ಫೆಸ್ಟಿವಲ್ ನಲ್ಲಿ ಗುಂಡಿನ ದಾಳಿ: 12ಕ್ಕೂ ಹೆಚ್ಚು ಜನರಿಗೆ ಗಾಯ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online