<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಕನ್ನಡ ಚಿತ್ರರಂಗಕ್ಕೆ ಆಘಾತ: ' ಉಲ್ಟಾ ಪಲ್ಟಾ' ನಿರ್ದೇಶಕ ಎನ್.ಎಸ್. ಶಂಕರ್ ನಿಧನ

ಕನ್ನಡ ಚಿತ್ರರಂಗಕ್ಕೆ ಆಘಾತ: ' ಉಲ್ಟಾ ಪಲ್ಟಾ' ನಿರ್ದೇಶಕ ಎನ್.ಎಸ್. ಶಂಕರ್ ನಿಧನ
Summary: Another shocking news has come to the Kannada cinema. Director N.S. Shankar, who rose to fame with the film 'Ulta Palta', has passed away, creating an atmosphere of mourning in the film industry. Shankar, who won the hearts of the audience with his unique style of comedy and direction, has left his colleagues and fans in mourning. Many celebrities from the film industry have expressed their condolences on his demise.

Belagavi News:

ಬೆಂಗಳೂರು: ಚಿತ್ರರಂಗ, ಪ್ರತಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ಧ ಎನ್ .ಎಸ್. ಶಂಕರ್, ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಗಮನ ಸೆಳೆದಿದ್ದರು.

1997ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ' ಉಲ್ಟಾ ಪಲ್ಟಾ' ಮೂಲಕ ನಿರ್ದೇಶಕರಾಗಿ ದೊಡ್ಡ ಹೆಸರುಗಳಿಸಿದ ಎನ್. ಎಸ್. ಶಂಕರ, ಹಾಸ್ಯ ಹಾಗೂ ವಿಭಿನ್ನ ನಿರೂಪಣಾ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದರು. ಸಿನಿಮಾ ಮಾತ್ರವಲ್ಲದೆ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅವರ ನಿಧನದ ಸುದ್ದಿ ತಿಳಿದು ಚಿತ್ರರಂಗದ ಗಣ್ಯರು, ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Sponsored

ಮುಖ್ಯಾಂಶಗಳು;

ಹೃದಯಾಘಾತದಿಂದ ಹಿರಿಯ ನಿರ್ದೇಶಕ ಎನ್ಎಸ್ ಶಂಕರ್ ವಿಧಿವಶ.

ಮಲಗಿದ್ದಾಗಲೇ ಕೊನೆಯುಸಿರು ಎಳೆದ 'ಉಲ್ಟಾ ಪಲ್ಟಾ' ಡೈರೆಕ್ಟರ್.

Sponsored

ಲೇಖಕನಾಗಿ, ಪತ್ರಕರ್ತನಾಗಿಯೂ ಗುರುತಿಸಿಕೊಂಡಿದ್ದ ಎನ್ಎಸ್ ಶಂಕರ್.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎನ್.ಎಸ್ ಶಂಕರ್ ಅವರು ನಿಧನರಾಗಿದ್ದಾರೆ. ಹೃದಯಘಾತದಿಂದ (Heart Attack) ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪತ್ರಕರ್ತರಾಗಿಯೂ ಕಾರ್ಯನಿರ್ವಹಿಸಿದ್ದ ಶಂಕರ್ ಅವರು ಕನ್ನಡದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

1997ರಲ್ಲಿ ಬಿಡುಗಡೆಯಾದ ಜನಪ್ರಿಯ ಚಿತ್ರ ' ಉಲ್ಟಾಪಲ್ಟಾ' (Ulta Palta) ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ನಿರ್ದೇಶನ ನೀಡಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ವಿಭಿನ್ನ ಕಥನಶೈಲಿ ಹಾಗೂ ಹಾಸ್ಯಭರಿತ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್. ಎಸ್. ಶಂಕರ್ ಅವರು ಮಲಗಿದ್ದ ಸ್ಥಿತಿಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು, ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Sponsored

ನಿರ್ದೇಶನ ಜೊತೆಗೆ ಉತ್ತಮ ಬರಹಗಾರರಾಗಿದ್ದ ಶಂಕರ್ ಅವರು ಹಲವಾರು ಪುಸ್ತಕಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

'ಪ್ರಜಾವಾಣಿ', 'ಮುಂಗಾರು', 'ಲಂಕೇಶ್ ಪತ್ರಿಕೆ' ಸೇರಿದಂತೆ ಹಲವು ಪ್ರಮುಖ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಎನ್.ಎಸ್ ಶಂಕರ್ ನಿಧನರಾಗಿದ್ದಾರೆ.

ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.

" ಶಂಕರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ" ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Sponsored

ಎನ್.ಎಸ್. ಶಂಕರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದರು. ಬಾಲ್ಯವನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಳೆದ ಅವರು, ಹೈಸ್ಕೂಲ್ ಶಿಕ್ಷಣವನ್ನು ಮೈಸೂರಿನಲ್ಲಿ ಹಾಗೂ ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಪಡೆದರು.

ಪತ್ರಿಕೋದ್ಯಮದಿಂದ ಆರಂಭಿಸಿದ ಅವರು ವೃತ್ತಿಜೀವನ ನಂತರ ಚಿತ್ರರಂಗದತ್ತ ವಿಸ್ತರಿಸಿ ಅಲ್ಲಿ ಕೂಡ ಯಶಸ್ಸು ಕಂಡಿದ್ದರು.

Also Read:

ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಜಿ.ಟಿ.ದೇವೇಗೌಡ ಫುಲ್ ಸ್ಟಾಪ್ : ಶಾಸಕ ಕೊಟ್ಟ ಸ್ಪಷ್ಟನೆ ಏನು?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online