<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅಮೆರಿಕಾದಲ್ಲಿ ಬೆಚ್ಚಿ ಬೀಳಿಸಿದ ಘಟನೆ : 'ಮುಸ್ಲಿಮನಾ' ಎಂದು ಪ್ರಶ್ನಿಸಿ ಭಾರತೀಯ ಮೂಲದ ವ್ಯಕ್ತಿಯ ಮೇಲೆ 15 ಬಾರಿ ಚಾಕು ಇರಿತ

ಅಮೆರಿಕಾದಲ್ಲಿ ಬೆಚ್ಚಿ ಬೀಳಿಸಿದ ಘಟನೆ : 'ಮುಸ್ಲಿಮನಾ' ಎಂದು ಪ್ರಶ್ನಿಸಿ ಭಾರತೀಯ ಮೂಲದ ವ್ಯಕ್ತಿಯ ಮೇಲೆ 15 ಬಾರಿ ಚಾಕು ಇರಿತ
Summary: A serious attack has been carried out on an Indian-origin man in a shopping mall in America. He was allegedly stabbed 15 times after being asked about his religion, 'Are you Muslim?' and the incident has caused a lot of debate.

BELAGAVI NEWS :

ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯೋಗಿಗೆ ಚಾಕು ಇರಿತ : ಧರ್ಮ ಕೇಳಿ ದಾಳಿ ನಡೆಸಿದ ಆರೋಪ

ಅಮೇರಿಕದ ಯೂಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯಲ್ಲಿರುವ 'ವ್ಯಾಲಿ ಫೇರ್ ಮಾಲ್' ನಲ್ಲಿ ಜನಾಂಗೀಯ ದೇಶಕ್ಕೆ ಸಂಬಂಧಿಸಿದ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ಮೂಲದ ಕ್ರಿಯೋಸ್ಕ್ ಉದ್ಯೋಗಿ ಸೊಹೈಲ್ ಅವರ ಮೇಲೆ ಧರ್ಮದ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ ಸೊಹೈಲ್ ಅವರ ಬಳಿ ಬಂದ ಆರೋಪಿ ಮೊದಲು ಅವರ ಧರ್ಮದ ಬಗ್ಗೆ ಪ್ರಶ್ನಿಸಿದ್ದಾನೆ. "ನೀನು ಮುಸ್ಲಿಮನಾ" ಎಂದು ಕೇಳಿದಾಗ, ಸೊಹೈಲ್ ಅವರು ಹೌದು ಎಂದು ಉತ್ತರಿಸಿದ್ದಾರೆ. ಬಳಿಕ ಸಂತ್ರಸ್ತ ವ್ಯಕ್ತಿ ಮುಸ್ಲಿಂ ಎಂಬುದನ್ನು ತಿಳಿದ ಆರೋಪಿ, ಕೊಲೆ ಮಾಡುವ ಉದ್ದೇಶದಿಂದಲೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಈ ದಾಳಿಯಲ್ಲಿ ಸೋಹೈಲ್ ಅವರಿಗೆ 15 ಬಾರಿ ಚಾಕುವಿನಿಂದ ಇರಿತವಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.

ಅಮೇರಿಕದಲ್ಲಿ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ನಡೆಯುವ ದ್ವೇಷ ಅಪರಾಧಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದ್ದು, ಇಂತಹ ಘಟನೆಗಳನ್ನು ತಡೆಯಲು ಕಠಿಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಲಾಗುತ್ತಿದೆ.

ಈ ಘಟನೆ ನಡೆದಿದ್ದು ಹೇಗೆ?

ಅಮೆರಿಕಾದ ಯೂಟಾ ರಾಜ್ಯದ ವೆಸ್ಟ್ ವ್ಯಾಲಿ ಸಿಟಿಯಲ್ಲಿರುವ 'ವ್ಯಾಲಿ ಫೇರ್ ಮಾಲ್' ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಾಲ್ ನಲ್ಲಿದ್ದ ಸಣ್ಣ ಕಿಯೊಸ್ಕ್ ಮಳಿಗೆಯಲ್ಲಿ ಭಾರತೀಯ ಮೂಲದ ಸೊಹೈಲ್ ಎಂಬುವವರು ಕೆಲಸ ಮಾಡುತ್ತಿದ್ದರು.

ಮಾಹಿತಿಯ ಪ್ರಕಾರ, 48 ವರ್ಷದ ಪೀಟರ್ ಮೈಕೇಲ್ ಲಾರ್ಸೆನ್ ಎಂಬ ಆರೋಪಿ ಮೊದಲು ಸೊಹೈಲ್ ಅವರ ಬಳಿ ಬಂದು ಕುಡಿಯಲು ಒಂದು ಬಾಟಲಿ ನೀರು ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಸಾಮಾನ್ಯ ಮಾತುಕತೆ ಆರಂಭವಾಗಿದೆ. ಆದರೆ, ಬಳಿಕ ನಡೆದ ಘಟನೆ ತೀವ್ರ ತಿರುಗು ಪಡೆದುಕೊಂಡಿದ್ದು, ಧರ್ಮದ ಬಗ್ಗೆ ಪ್ರಶ್ನಿಸಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘಟನೆ ವಿವರ : ಧರ್ಮ ಕೇಳಿದ ಬಳಿಕ ದಾಳಿ ಆರೋಪ

ವೆಸ್ಟ್ ವ್ಯಾಲಿ ಸಿಟಿಯ ;ವ್ಯಾಲಿ ಫೇರ್ ಸ್ಮಾಲ್; ನಲ್ಲಿ ನಡೆದ ಚಾಕು ಇರಿತ ಪ್ರಕರಣದ ಬಗ್ಗೆ ಪ್ರತ್ಯಕ್ಷದರ್ಶಿ ಒಬ್ಬರು ಆಘಾತಕಾರಿ ವಿವರಗಳನ್ನು ನೀಡಿದ್ದಾರೆ. ಸೊಹೇಲ್ ಅವರ ಪಕ್ಕದ ಜ್ಯುವೆಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಲೂನಾ ನುನೆಜ್ ಅವರು ಘಟನೆಯ ಸಂಪೂರ್ಣ ವಿವರವನ್ನು ಹಂಚಿಕೊಂಡಿದ್ದಾರೆ.

ಲೂನಾ ನುನೆಜ್ ಅವರ ಪ್ರಕಾರ, ಆರೋಪಿ ಪೀಟರ್ ಮೈಕೇಲ್ ಲಾರ್ಸೆನ್ ಜೋಹೇಲ್ ಅವರ ಬಳಿ ಬಂದು "ನೀನು ಅಲ್ಲಿಂದ ಬಂದಿದ್ದೀಯಾ?"ಎಂದು ಪ್ರಸಿದ್ದಾನೆ. ಅದಕ್ಕೆ ಸೋಹೈಲ್ ಅವರು ತಾವು ಭಾರತದವರು ಎಂದು ಹೇಳಿ ತಮ್ಮ ಹೆಸರನ್ನು ಸೊಹೇಲ್ ಎಂದು ಪರಿಚಯಿಸಿಕೊಂಡಿದ್ದಾರೆ.

ಬಳಿ ಲಾರ್ಸೆನ್ "ನೀನು ಮುಸ್ಲಿಮನಾ?" ಎಂದು ಕೇಳಿದ್ದು, ಅದಕ್ಕೆ ಸೊಹೈಲ್ ಅವರು ಹೌದು ಎಂದು ಉತ್ತರಿಸಿದ್ದಾರೆ. ನಂತರ ಸೊಹೇಲ್ ನೀರಿನ ಬಾಟಲಿ ನೀಡಲು ತಿರುಗಿದ ಸಂದರ್ಭದಲ್ಲಿ ಆರೋಪಿ ಚಾಕು ತೆಗೆದು ಏಕಾಏಕಿ ದಾಳಿ ನಡೆಸಿದ್ದಾನೆ ಎಂದು ಲೂನಾ ನುನೆಜ್ ತಿಳಿಸಿದ್ದಾರೆ.

ದಾಳಿಯನ್ನು ತಡೆಯಲು ಮುಂದಾದ ಲೂನಾ ನುನೆಜ್ ಅವರು ಸೊಹೈಲ್ ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಕೈಗೆ ಸಿಕ್ಕ ಚಪ್ಪಲಿ, ಕುರ್ಚಿ ಸೇರಿದಂತೆ ವಿವಿಧ ವಸ್ತುಗಳನ್ನು ಆರೋಪಿಯತ್ತ ಎಸೆದು ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಘಟನೆ ಬಳಿಕ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ದಾಳಿಯ ಹಿಂದಿನ ಉದ್ದೇಶ ಮತ್ತು ಆರೋಪಿಯ ವಿರುದ್ಧದ ಕಾನೂನು ಕ್ರಮ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸೊಹೈಲ್ ಗೆ 15 ಬಾರಿ ಚಾಕು ಇರಿತ : ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಆರೋಪ

ದಾಳಿ ನಡೆಯುತ್ತಿದ್ದ ವೇಳೆ ಮಾಲ್ ನಲ್ಲಿದ್ದ ಸಾರ್ವಜನಿಕರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಬಳಿಕ ಕೆಲವರು ಆರೋಪಿಯನ್ನು ತಡೆದು ಕೆಳಗೆ ಬೀಳಿಸಿ, ಪೊಲೀಸರು ಸ್ಥಳಕ್ಕೆ ಆಗಮಿಸುವವರೆಗೆ ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಸಾರ್ವಜನಿಕರ ಸಮಯೋಚಿತ ಕ್ರಮದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವುದನ್ನು ತಪ್ಪಿಸಲಾಗಿದೆ.

"ಮುಸ್ಲಿಮರನ್ನು ಕೊಲ್ಲುವುದೇ ಉದ್ದೇಶ" ಎಂದು ಆರೋಪಿ ಹೇಳಿಕೆ

ಬಂಧಿತ ಆರೋಪಿ ಪೀಟರ್ ಮೈಕೇಲ್ ಲಾರ್ಸೆನ್ ತನಿಖಾಧಿಕಾರಿಗಳ ಮುಂದೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸೊಹೈಲ್ ಅವರು ಮುಸ್ಲಿಂ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ದಾಳಿ ನಡೆಸಿದ್ದು, ಮುಸ್ಲಿಮರನ್ನು ಗುರಿಯಾಗಿಸಿಕ್ಕೊಂಡು ಹಲ್ಲೆ ನಡೆಸುವ ಉದ್ದೇಶ ಬಂದಿದ್ದಾಗಿ ಆರೋಪಿ ಹೇಳಿದ್ದಾನೆ ಎನ್ನಲಾಗಿದೆ.

ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕೊಲೆ ಯತ್ನ ಹಾಗೂ ನಿಷೇಧಿತ ಮಾರಕಾಸ್ತ್ರ ಬಳಕೆಗೆ ಸಂಬಂಧಿಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆತನನ್ನು ಸಾಲ್ಟ್ ಲೇಕ್ ಕೌಂಟಿ, ಜೈಲಿನಲ್ಲಿ ಇರಿಸಲಾಗಿದ್ದು, ತನಿಖೆ ಮುಂದುವರೆದಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online