<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಮದುವೆ ಬೇಡ ಎಂದ ಸಿಯಾ ; ಕೇತನ್ ಬೆದರಿಕೆ ಹಾಕಿದ್ದ- “ಎಲ್ಲಿದ್ದರೂ ಹುಡುಕ್ತೀವಿ"ಎಂದು ಆರೋಪ

ಮದುವೆ ಬೇಡ ಎಂದ ಸಿಯಾ ; ಕೇತನ್ ಬೆದರಿಕೆ ಹಾಕಿದ್ದ- “ಎಲ್ಲಿದ್ದರೂ ಹುಡುಕ್ತೀವಿ"ಎಂದು ಆರೋಪ
Summary: She had clearly refused marriage. Siya has alleged that Ketan did not listen to her. "He said no to marriage and kept insisting. He said that if I ran away, we will find you wherever I go," Siya said.

belagavi news :

ಪುಣೆಯ ಲೋಹಗಡ್ ಕೋಟೆಯಲ್ಲಿ ನಡೆದ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಹೊಸ ತಿರುಗು ಪಡೆದಿದೆ.

ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌದರಿ ಜೊತೆಗೂಡಿ ಚೇತನ್ ಅಗರ್ವಾಲ್ ಅತ್ತೆಗೆ ಸಂಚು ರೂಪಿಸಿದ್ದಾಳೆ ಎಂದು ಗಂಭೀರ ಆರೋಪಗಳು ಹೊರಬಂದಿವೆ. ಇಬ್ಬರು ಸೇರಿ ಎರಡು ನೂರಕ್ಕೂ ಹೆಚ್ಚು ಫೋನ್ ಕರೆಗಳ ಮೂಲಕ ಯೋಜನೆ ರೂಪಿಸಿದ್ದರೆಂದು ತನಿಖೆಗಳಲ್ಲಿ ಬಯಲಾಗಿದೆ.

ಮದುವೆ ಇಷ್ಟವಿಲ್ಲದ ಕಾರಣದಿಂದ ಕೇತನ್ ನಿಂದ ದೂರವಾಗಲು ಅಥವಾ ಸಂಬಂಧ ಮುರಿಯಲು ಸಾಧ್ಯವಾಗದೆ, ಕೊನೆಗೆ ಇಬ್ಬರು ಸೇರಿ ಆತನನ್ನು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿರಬಹುದು ಎಂಬ ಪೊಲೀಸರು ಶಂಕಿಸಿದ್ದಾರೆ.

Sponsored

ಈ ನಡುವೆ, ಆರೋಪಿಸಿಯ ಗೊಯಲ್ ನೀಡಿರುವ ಹೇಳಿಕೆಯಲ್ಲಿ "ಮದುವೆ ಇಷ್ಟವಿಲ್ಲ ಎಂದು ನಾನು ಕೇತನ್ ಸ್ಪಷ್ಟವಾಗಿ ಹೇಳಿದ್ದೆ", ಎಂದು ಹೇಳಿರುವುದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರೆದಿದೆ.

ಆದರೆ, ನಮ್ಮದು ಪ್ರಭಾವಿ ಮತ್ತು ಶ್ರೀಮಂತ ಕುಟುಂಬ, ನೀನು ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಓಡಿ ಹೋಗ್ತಿದೀಯಾ ಹೋಗು ನೀನೆಲ್ಲಿದ್ರೂ ಹುಡುಕ್ತೀವಿ ಎಂದು ಕೇತನ್ ಹೇಳಿದಾಗ ಸಿಯ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾಳೆ. ಆದಾಗ್ಯೂ, ಆಕೆ ಈ ಹೇಳಿಕೆಯನ್ನು ಪೊಲೀಸರು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಿದ್ದಾರೆ.

ಕೊಲೆ ಮುನ್ನ ಓಡಿ ಹೋಗುವ ಯೋಜನೆ; ಬಳಿಕ ಕೃತ್ಯಕ್ಕೆ ತಿರುಗಿದ ಪ್ರೇಮಿಗಳ ಕಥೆ

ಪೊಲೀಸರ ಮೂಲಗಳ ಪ್ರಕಾರ, ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌದರಿ ಆರಂಭದಲ್ಲಿ ಮದುವೆ ತಪ್ಪಿಸಲು ಓಡಿ ಹೋಗಿ ಮದುವೆಯಾಗುವ ಯೋಜನೆ ಮಾಡಿಕೊಂಡಿದ್ದರು. ಆದರೆ ಸಿಯಾ ತನ್ನ ಕುಟುಂಬದ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಆಗಬಹುದು ಎಂಬ ಭಯದಿಂದ ಆ ಯೋಜನೆಯನ್ನು ಕೈಬಿಟ್ಟಿದ್ದಾಳೆ ಎಂದು ತನಿಕೆಯಲ್ಲಿ ತಿಳಿದು ಬಂದಿದೆ.

Sponsored

ಮದುವೆ ಸಂಬಂಧದಿಂದ ಹೊರಬರಲು ಹಲವು ಮಾರ್ಗಗಳನ್ನು ಹುಡುಕಿದರು ಯಶಸ್ಸು ಸಿಗದ ಕಾರಣ, ಇಬ್ಬರು ಸೇರಿ ಕೇತನ್ ಅಗರ್ವಾಲ್ ಅವರನ್ನು ಕೊಲೆ ಮಾಡುವಷ್ಟು ಕರಾಳ ನಿರ್ಧಾರಕ್ಕೆ ಬಂದಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ. ಮತ್ತು ಚೇತನ್ ನಡುವಿನ ಸಂಬಂಧ ನವೆಂಬರ್ 25 ರಂದು ದೀಪಾವಳಿ ಪಾರ್ಟಿ ಒಂದರಲ್ಲಿ ಆರಂಭವಾಗಿದ್ದು, ನಂತರ ಇಬ್ಬರ ನಡುವೆ 2,004 ಕ್ಕೂ ಹೆಚ್ಚು ಕರೆಗಳು ನಡೆದಿರುವುದು ಪತ್ತೆಯಾಗಿದೆ.

ಇದೇ ಸಮಯದಲ್ಲಿ, ಕುಟುಂಬಸ್ಥರು ನವೆಂಬರ್ ನಲ್ಲಿ ನಡೆಯಬೇಕಿದ್ದ ಸುಮಾರು 17 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಮದುವೆಗೆ ಜೈಪುರದಲ್ಲಿ ಅರಮನೆ ಹಾಗೂ ಖಾಸಗಿ ಜೆಟ್ ಗಳ ವರೆಗೆ ವ್ಯವಸ್ಥೆ ಮಾಡಿಕೊಂಡಿದ್ದರು ಎಂಬ ಮಾಹಿತಿಯು ಹೊರ ಬಿದ್ದಿದೆ. ಈ ನಡುವೆ ಇಬ್ಬರು ಪ್ರೇಮಿಗಳು ನಿರಂತರ ಫೋನ್ ಸಂಪರ್ಕದಲ್ಲಿದ್ದು, ಪ್ರಕರಣದ ಹಿನ್ನೆಲೆಯಲ್ಲಿ ಈಗ ಗಂಭೀರ ತನಿಕೆ ಮುಂದುವರೆದಿದೆ.

ಕಳೆದ ಕೇವಲ ಏಳು ತಿಂಗಳಲ್ಲಿ ಸಿಯಾ ಮತ್ತು ಚೇತನ್ ಪರಸ್ಪರ 2,004ರ ಬಾರಿ ಫೋನ್ ಕರೆ ಮಾಡಿಕೊಂಡಿದ್ದು, ಬರೋಬ್ಬರಿ 238 ಗಂಟೆಗಳ ಕಾಲ ಕೊನೆಯ ಸಂಚಿನ ಬಗ್ಗೆ ಮಾತನಾಡಿದ್ದಾರೆ ಎಂದು ಪೊಲೀಸರ ತಾಂತ್ರಿಕ ತನಿಕೆಯಲ್ಲಿ ಬಹಿರಂಗವಾಗಿದೆ.

Sponsored

'ಪ್ಲಾನ್ B 'ಇಂದ 'ಪ್ಲಾನ್ C’ ವರೆಗೆ: ಕೇತನ್ ಕಥೆ ಪ್ರಕರಣದ ಕರಾಳ ವಿವರಗಳು

ತನಿಕಾ ವರದಿಗಳ ಪ್ರಕಾರ, ಜೂನ್ 14ರಂದು ಸಿಯಾ ಕೇತನ್ ಅನ್ನು ಕೋಟೆಯ ಬಂಡೆ ಪ್ರದೇಶಕ್ಕೆ ಕರೆದೊಯ್ದು ಮೊದಲ ಬಾರಿ ಕೆಳಗೆ ತಳ್ಳಿದ್ದಾಳೆ. ಆದರೆ ಆತ ಪೊದೆ ಹಿಡಿದು ಬದುಕು ಉಳಿದಿದ್ದಾನೆ. ಬಳಿಕ ಸಿಯಾ "ಹಾವು ಬಂದಿದೆ" ಎಂದು ಹೇಳಿ ಪರಿಸ್ಥಿತಿಯನ್ನು ನಾಟಕೀಯವಾಗಿ ಬದಲಿಸಿ ಆತಂಕ ಸೃಷ್ಟಿಸಿದ್ದಾಳೆ ಎಂದು ಹೇಳಲಾಗಿದೆ.

ಆ ಮೊದಲ ಪ್ರಯತ್ನ ವಿಫಲವಾದ ನಂತರ, ಜೂನ್ 18ರಂದು ಇಬ್ಬರು ಮತ್ತೊಂದು ಯೋಜನೆ ರೂಪಿಸಿದ್ದಾರೆ. ಈ ಬಾರಿ ಸಿಯಾ ಮತ್ತೆ ಚೇತನ್ ನನ್ನು ಅದೇ ಕೋಟೆಗೆ ಕರೆದುಕೊಂಡು ಹೋಗಿದ್ದು, ಜೊತೆಗೆ ಚೇತನ್ ಚೌಧರಿಯನ್ನು ಸೇರಿಸಿಕೊಂಡಿದ್ದಾಳೆ. ಇಬ್ಬರು ಸೇರಿ ಕೇತನ್ ಅನ್ನು ಸುಮಾರು 400 ಅಡಿ ಆಳದ ಕಂದಕಕ್ಕೆ ತಳ್ಳಿದ ಪರಿಣಾಮ ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ತನಿಖೆ ಹೇಳುತ್ತದೆ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ಬಳಿಕ ಅದನ್ನು ಅಪಘಾತವೆಂದು ತೋರಿಸಲು ಇಬ್ಬರು ಪ್ರಯತ್ನಿಸಿದ್ದರು, ಆರೋಪಿಗಳ ವರ್ತನೆ ಹಾಗೂ ಸಾಕ್ಷ್ಯಾಧಾರಗಳು ಸಂಖ್ಯೆ ಮೂಡಿಸಿದವು.ಬಂಧನದ ನಂತರ ಇಬ್ಬರು ಪರಸ್ಪರರ ಮೇಲೆ ಆರೋಪ ಮಾಡಲಾರಂಬಿಸಿದ್ದಾರೆ.

Sponsored

ಚೇತನ್ ಚೌಧರಿ "ನನಗೆ ಸಿಯಾ ಜೊತೆ ಓಡಿ ಹೋಗುವುದಷ್ಟೇ ಗುರಿಯಾಗಿತ್ತು".ಕೇತನ್ ನನ್ನು ಕೊಲ್ಲುವಂತೆ ಸಿಯಾ ನನ್ನನ್ನು ಪ್ರೇರೇಪಿಸಿದ್ದಾಳೆ" ಎಂದು ಹೇಳಿದ್ದರೆ, ಸಿಯಾ "ಕೊಲೆ ಮಾಡುವ ಆಲೋಚನೆ ಚೇತನ್ ನದ್ದೇ. ಮೊದಲ ವಿಫಲ ಯತ್ನದ ಬಳಿಕ ಆತ ಕಣ್ಣೀರು ಹಾಕಿದ್ದರಿಂದ ನಾನು ಒಪ್ಪಬೇಕಾಯಿತು" ಎಂದು ಪ್ರತಿಪಾದ ಮಾಡಿರುವುದು ತನಿಕೆಯಲ್ಲಿ ದಾಖಲಾಗಿದೆ.

ಈ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Also Read:

ಡಿಕೆ ಶಿವಕುಮಾರ್ ಜೊತೆ ರಾಜಕೀಯ,ವ್ಯವಹಾರಿಕ ನಂಟಿಲ್ಲ : ವಿಜಯೇಂದ್ರ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online