BELAGAVI NEWS :
ವಿಶ್ವದ ನಂ.೧ ಟೆನಿಸ್ ಆಟಗಾರ ಜಾನಿಕ್ ಸಿನ್ನರ್ ಮತ್ತೊಮ್ಮೆ ವಿಂಬಲ್ಡನ್ ಅಂಗಳದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಭಾನುವಾರ ನಡೆದ ರೋಚಕ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-7(7),7-6(2),6-3,6-4 ಸೆಟ್ ಗಳಿಂದ ಮಣಿಸಿದ ಸಿನ್ನರ್, ಸತತ ಎರಡನೇ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಮೊದಲ ಸೆಟ್ ಕೈಚೆಲ್ಲಿದರೂ ಅದ್ಭುತ ಕಮ್ ಬ್ಯಾಕ್ ಮಾಡಿದ ಇಟಲಿಯ ಸ್ಟಾರ್ ಆಟಗಾರ, ನಂತರದ 3 ಸೆಟ್ಗಳಲ್ಲಿ ಸಂಪೂರ್ಣ ಮೈಲುಗೈ ಸಾಧಿಸಿ ವೃತ್ತಿ ಜೀವನದ ಐದನೇ ಗ್ರಾಂಡ್ ಸ್ಲ್ಯಾಮ್ ಟ್ರೋಫಿಗೆ ಮುತ್ತಿಟ್ಟರು. ಈ ಜಯದೊಂದಿಗೆ ವಿಂಬಲ್ಡನ್ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಹತ್ತನೇ ಆಟಗಾರ ಎಂಬ ಐತಿಹಾಸಿಕ ಸಾಧನೆಯನ್ನು ಸಿನ್ನರ್ ದಾಖಲಿಸಿದರು.
ಅಷ್ಟೇ ಅಲ್ಲ, ಜ್ವೆರೆವ್ ವಿರುದ್ಧ ತಮ್ಮ ಸತತ ಗೆಲುವಿನ ಸರಣಿಯನ್ನು 10 ಪಂದ್ಯಗಳಿಗೆ ವಿಸ್ತರಿಸಿದ ಸಿನ್ನರ್, ವೃತ್ತಿಜೀವನದ 100ನೇ ಗ್ರಾಂಡ್ ಸ್ಲ್ಯಾಮ್ ಪಂದ್ಯ ಜಯ ದಾಖಲಿಸುವ ಮೂಲಕ ಮತ್ತೊಂದು ಮಹತ್ವದ ಮೈಲುಗೊಲ್ಲನ್ನು ತಲುಪಿದರು. ವಿಶ್ವದ ನಂಬರ್ ವನ್ ಆಟಗಾರನಾಗಿ ತಮ್ಮ ಪ್ರಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಸಿನ್ನರ್, ಟೆನ್ನಿಸ್ ಲೋಕದಲ್ಲಿ ಹೊಸ ಇತಿಹಾಸ ಬರೆಯುತ್ತಲೇ ಸಾಗುತ್ತಿದ್ದಾರೆ.
ಫ್ರೆಂಚ್ ಓಪನ್ ನಿರಾಸೆಯಿಂದ ವಿಂಬಲ್ಡನ್ ವೈಭವದವರೆಗೆ! ಜಾನಿಕ್ ಸಿನ್ನರ್ ಅವರ ಚಾಂಪಿಯನ್ ಪಯಣ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮೇ ತಿಂಗಳ ಲ್ಲಿ ನಡೆದ ಫ್ರೆಂಚ್ ಓಪನ್ ನಲ್ಲಿ ಎರಡನೇ ಸುತ್ತಿನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಸಿನ್ನರ್, ಅದೇ ವರ್ಷ ವಿಂಬಲ್ಡನ್ ನಲ್ಲಿ ಅಪ್ರತಿಮ ಪ್ರದರ್ಶನ ನೀಡಿ ಮತ್ತೊಮ್ಮೆ ವಿಶ್ವ ಟೆನ್ನಿಸ್ ಗೆ ತಮ್ಮ ಸಾಮರ್ಥವನ್ನು ಸಾಬೀತುಪಡಿಸಿದ್ದಾರೆ.
ರೋಲ್ಯಾಂಡ್ ಗ್ಯಾರೋಸ್ ನಲ್ಲಿ ಜುವಾನ್ ಮ್ಯಾನುಯೆಲ್ ಸೇರುಂಡೊಲೊ ವಿರುದ್ಧ 5 ಸೆಟ್ ಗಳ ಕಠಿಣ ಹಣಾಹಣಿಯಲ್ಲಿ ಸೋತಿದ್ದ ಇಟಲಿಯ ಸ್ಟಾರ್ ಆಟಗಾರ, ಅನಿರಾಸೆಯನ್ನು ಹಿಂದೆ ಬಿಟ್ಟು ಆಲ್ ಇಂಗ್ಲೆಂಡ್ ಕ್ಲಬ್ ನ ಹುಲ್ಲಿನ ಅಂಗಳದಲ್ಲಿ ಸಂಪೂರ್ಣ ವಿಭಿನ್ನ ಆಟ ಪ್ರದರ್ಶಿಸಿದರು. ಸೆಮಿ ಫೈನಲ್ ನಲ್ಲಿ ಟೆನ್ನಿಸ್ ದಿಗ್ಗಜ ನೋವಾಕ್ ಜೊಕೊವಿಚ್ ಅವರನ್ನು ಸತತ ಎರಡನೇ ವರ್ಷವೂ ನೇರ ಸೆಟ್ ಗಳಲ್ಲಿ ಮಣಿಸಿ ಫೈನಲ್ ಗೆ ಪ್ರವೇಶಿಸಿದ ಸಿನ್ನರ್, ಬಳಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಫೈನಲ್ ನಲ್ಲಿ ಅಲೆಗ್ಸಾಂಡರ್ ಜ್ವೆರೆವ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡರು. ಸಿನ್ನರ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಸೆಂಟರ್ ಕೋರ್ಟ್ ನಲ್ಲಿ ಗಾಳಿಯ ಸವಾಲಿನ ನಡುವೆಯೂ ಅತ್ಯಂತ ಶಾಂತ ಮತ್ತು ಅಕ್ರಮಣಕಾರಿ ಆಟ ಪ್ರದರ್ಶಿಸಿದ ಅವರು, ಎರಡನೇ ಸೆಟ್ ನ ಟೈಬ್ರೇಕ್ ನಲ್ಲಿ
ಭರ್ಜರಿ ಕಮ್ ಬ್ಯಾಕ್ ಮಾಡಿ ಪಂದ್ಯದ ಗತಿಯನ್ನು ಸಂಪೂರ್ಣವಾಗಿ ಬದಲಿಸಿದರು. ನಂತರದ ಎರಡು ಸೆಟ್ಗಳಲ್ಲಿ ಪ್ರಾಬಲ್ಯ ಮೆರೆದ ಸಿನ್ನರ್ ಸತತ ಎರಡನೇ ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದರು
ಈ ಗೆಲುವಿನೊಂದಿಗೆ ಜಾನಿಕ್ ಸಿನ್ನರ್ ತಮ್ಮ ವೃತ್ತಿ ಜೀವನದ ಐದನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಸಸ್ತಿ, 100ನೇಗ್ರ್ಯಾಂಡ್ ಸ್ಲ್ಯಾಮ್ ಪಂದ್ಯ ಜಯ ಹಾಗೂ ವಿಂಬಲ್ಡನ್ ಕಿರೀಟವನ್ನು ಸತತ ಎರಡನೇ ಬಾರಿ ಉಳಿಸಿಕೊಂಡ ಅಪರೂಪದ ಸಾಧನೆಯನ್ನು ದಾಖಲಿಸಿದರು. ಫ್ರೆಂಚ್ ಓಪನ್ ನ ನಿರಾಸೆಯಿಂದ ವಿಂಬಲ್ಡನ್ ಚಾಂಪಿಯನ್ ವರೆಗೆ ಅವರ ಪಯಣ ವಿಶ್ವ ಟೆನ್ನಿಸ್ ನಲ್ಲಿ ಈ ವರ್ಷದ ಅತ್ಯಂತ ದೊಡ್ಡ ಕಮ್ ಬ್ಯಾಕ್ ಕಥೆಗಳಲ್ಲಿ ಒಂದಾಗಿದೆ.
ಸಿನ್ನರ್ ನ ಭರ್ಜರಿ ಗೆಲುವು: ವಿಂಬಲ್ಡನ್ ಕಿರೀಟ ಮತ್ತೊಮ್ಮೆ ಮುಡಿಗೇರಿಸಿದ ವಿಶ್ವದ ನಂಬರ್ 1
ಜಾನಿಕ್ ಸಿನ್ನರ್ ಫೈನಲ್ ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಮೂರನೇ ಮತ್ತು ನಾಲ್ಕನೇ ಸೆಟ್ಗಳಲ್ಲಿ ತಲಾ ಒಂದು ಬಾರಿ ಜ್ವೆರೆವ್ ಅವರ ಸರ್ವ ಮುರಿದ ಸಿನ್ನರ್, ಪಂದ್ಯದಲ್ಲಿ ಸಂಪೂರ್ಣ ಸಾಧಿಸಿದರು. ಎದುರಾಳಿಗೆ ಒಂದೇ ಒಂದು ಬ್ರೇಕ್ ಪಾಯಿಂಟ್ ಅವಕಾಶ ನೀಡದೆ, 58 ವಿನ್ನರ್ ಗಳನ್ನು ಸಿಡಿಸಿದ ಅವರು ಮೂರು ಗಂಟೆ 46 ನಿಮಿಷಗಳ ಹೋರಾಟದ ಬಳಿಕ ವಿಂಬಲ್ಡನ್ ಟ್ರೋಫಿ ಗೆದ್ದರು.
ಚಾಂಪಿಯನ್ಶಿಪ್ ಪಾಯಿಂಟ್ ಯಶಸ್ವಿಯಾಗಿ ಪಡೆದುಕೊಂಡ ಬಳಿಕ ಸಿನ್ನರ್ ಭರ್ಜರಿ ಸಂಭ್ರಮ ಆಚರಿಸಿದರು. ಈ ಗೆಲುವಿನೊಂದಿಗೆ ಅವರು 2026ರ ಋತುವಿನ ಆರನೇ ATP ಪ್ರಶಸ್ತಿ ಗೆದ್ದುಕೊಂಡರು. ರೋಮನಲ್ಲಿ ಪ್ರಶಸ್ತಿ ಗೆದ್ದು ನೃತ್ಯ ಜೀವನದ ಗೋಲ್ಡನ್ ಮಾಸ್ಟರ್ಸ್ ಪೂರ್ಣಗೊಳಿಸಿದ್ದ ಸಿನ್ನರ್, 2025ರ ವಿಂಬಲ್ಡನ್ ಬಳಿಕ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯನ್ನು ಮತ್ತೊಮ್ಮೆ ಎತ್ತಿ ಹಿಡಿದರು.
ವಿಂಬಲ್ಡನ ಗೆಲುವಿನ ಬಳಿಕ ಸಿನ್ನರ್ ಅಗ್ರಸ್ಥಾನ ಮತ್ತಷ್ಟು ಬಲಪಡಿಸಿದರು.
24 ವರ್ಷದ ಜಾನಿಕ್ ಸಿನ್ನರ್ ವಿಂಬಲ್ಡನ್ ಚಾಂಪಿಯನ್ ಆದ ಬಳಿಕ ATP ಶ್ರೇಯಾಂಕದಲ್ಲಿ ವಿಶ್ವ ನಂ.1 ಸ್ಥಾನವನ್ನು ಮುಂದುವರಿಸಲಿದ್ದಾರೆ. ಈ ಐತಿಹಾಸಿಕ ಗೆಲುವಿನೊಂದಿಗೆ ಸಿನ್ನರ್ ಸುಮಾರು 46 ಕೋಟಿ ರೂ ಬಹುಮಾನ ಮೊತ್ತವನ್ನು ಪಡೆದರು.
ಇನ್ನೊಂದೆಡೆ, ಫೈನಲ್ ಸೋಲಿನ ಬಳಿಕ ಅಲೆಕ್ಸಾಂಡರ್ ಜ್ವೆರೆವ್ ATP ಶ್ರೇಯಾಂಕದಲ್ಲಿ ವಿಶ್ವ ನಂಬರ್ 2 ಸ್ಥಾನಕ್ಕೆರಲಿದ್ದಾರೆ. ಸತತ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ತಲುಪಿದ ಜರ್ಮನಿಯ ಆಟಗಾರ, ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡರು ಉತ್ತಮ ಅಭಿಯಾನ ನಡೆಸಿದರು.