<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಸೀತಾರಾಮನ್ ಘೋಷಣೆ: ದೇಶದ 7 ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಬೆಂಗಳೂರಿಗೆ ಬಂಪ್

ಸೀತಾರಾಮನ್ ಘೋಷಣೆ: ದೇಶದ 7 ಹೈಸ್ಪೀಡ್ ರೈಲು ಮಾರ್ಗಗಳಲ್ಲಿ ಬೆಂಗಳೂರಿಗೆ ಬಂಪ್
Summary: ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ 7 ಪ್ರಮುಖ ಹೈ ಸ್ಪೀಡ್ ರೈಲು ಮಾರ್ಗಗಳಲ್ಲಿ ಕಾರಿಡಾರ್ ಘೋಷಿಸಿದರು. ಬೆಂಗಳೂರಿಗೆ ವಿಶೇಷ ಒತ್ತು ನೀಡಲಾದ, ಈ ಯೋಜನೆ ಟ್ರಾನ್ಸ್ಪೋರ್ಟ್ ವೇಗ ಬಂಡವಾಳ ಹೂಡಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಿದೆ.
Belagavi News:
ಇಂದಿನ ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7 ಹೈಸ್ಪೀಡ್ ರೈಲು ಕಾರಿಡಾರ್ ಗಳನ್ನು ಘೋಷಿಸಿದರು. ಈ ಯೋಜನೆಯಿಂದ ಹೈದರಾಬಾದ್, ಚೆನ್ನೈ, ಪುಣೆ ಸೇರಿದಂತೆ ಕರ್ನಾಟಕ ಪ್ರಮುಖ ಪ್ರಯೋಜನ ಪಡೆಯಲಿದೆ.
ಹೈ ಸ್ಪೀಡ್ ರೈಲು ಕಾರಿಡಾರ್ ಗಳ ಯೋಜನೆಯು ನಗರ ಸಂಪರ್ಕವನ್ನು ಸುಧಾರಣೆ ಪ್ರಯಾಣದ ಸಮಯ ಕಡಿತ, ಮೂಲ ಸೌಕರ್ಯ, ಅಭಿವೃದ್ಧಿ ಮತ್ತು ಆರ್ಥಿಕ ಹೂಡಿಕೆಗಳಿಗೆ ದಿಕ್ಕು ನೀಡುತ್ತದೆ. ಬೆಂಗಳೂರಿನ ಹಾಗೂ ಉತ್ತರ ದಕ್ಷಿಣ ಮತ್ತು ಪಶ್ಚಿಮ ಕೇಂದ್ರ ಭಾರತ ನಡುವಿನ ಪ್ರಮುಖ ನಗರಗಳ ಸಂಚಾರ ವೇಗವನ್ನು ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ.
ಈ ಹೈ ಸ್ಪೀಡ್ ರೈಲು ಯೋಜನೆ ಭಾರತದ ತಂತ್ರಜ್ಞಾನಧಾರಿತ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಿ ರಾಜ್ಯಗಳ ನಡುವಿನ ವಾಣಿಜ್ಯ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡಲಿದೆ.

ನವದೆಹಲಿ : ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್, 2026 27ರ ಸಾಲಿನ ಕೇಂದ್ರ ಬಜೆಟ್ ಮಂಡನೆ ವೇಳೆ ದೇಶದ 7 ಹೈ ಸ್ಪೀಡ್ ರೈಲು ಕಾರಿಡಾರ್ ಗಳ ಕುರಿತು ಪ್ರಸ್ತಾಪಿಸಿದ್ದಾರೆ ಸರ್ಕಾರವು ಈ ಕಾರಿಡಾರಗಳನ್ನು ನಗರಗಳ ನಡುವಿನ ಪ್ರಮುಖ ಬೆಳವಣಿಗೆ ಸಂಪರ್ಕಗಳಾಗಿ ಅಭಿವೃದ್ಧಿಪಡಿಸಲು ಯೋಜಿಸಿದೆ.

ಈ ಏಳು ಹೈ ಸ್ಪೀಡ್ ರೈಲು ಕಾರಿಡಾರ್ ಗಳಲ್ಲಿ ಪ್ರಮುಖ ಮಾರ್ಗಗಳು:

ಮುಂಬೈ - ಪುಣೆ

ಹೈದರಾಬಾದ್ - ಪುಣೆ

ಹೈದ್ರಾಬಾದ್ - ಬೆಂಗಳೂರು

ಚೆನ್ನೈ - ಬೆಂಗಳೂರು

ದೆಹಲಿ - ವಾರಣಾಸಿ

ವಾರಣಾಸಿ - ಸಿಲಿಗುರಿ

ಈ ಯೋಜನೆಯು ಪ್ರಮುಖ ಆರ್ಥಿಕ ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸುತ್ತಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮತ್ತು ಪ್ರಾದೇಶಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು ಮುಖ್ಯ ಉದ್ದೇಶವಾಗಿದೆ.
ಹೈಸ್ಪೀಡ್ ರೈಲು ಕಾರಿಡಾರ್ ಗಳ ಮೂಲಕ ಲಾಜಿಸ್ಟಿಕ್ ದಕ್ಷತೆ ಹೆಚ್ಚಿಸಿ ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವುದನ್ನು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಕೇಂದ್ರವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೈ ಸ್ಪೀಡ್ ರೈಲು ಯೋಜನೆ ಬಗ್ಗೆ ಪ್ರಸ್ತಾಪಿಸುತ್ತಾ ತಿಳಿಸಿದ್ದಾರೆ, ಪ್ರಸ್ತಾವಿತ ಕಾರಿಡಾರ್ ಗಳ ದೇಶದ ಪ್ರಮುಖ ಆರ್ಥಿಕ ಕೈಗಾರಿಕಾ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಸಂಪರ್ಕಿಸಲಿವೆ.

ಸಚಿವೆ ಹೇಳಿದರು; ಈ ಹೈ ಸ್ಪೀಡ್ ರೈಲು ಕಾರಿಡಾರ್ ಗಳು ಮುಖ್ಯ ಗುರಿಗಳು:

ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು

ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಣೆ ಮಾಡುವುದು

ಸಮತೋಳಿನ ಪ್ರಾದೇಶಿಕ ಬೆಳವಣಿಗೆ ಬೆಂಬಲ ನೀಡುವುದು

ಈ ಯೋಜನೆಯು ಪ್ರಾದೇಶಿಕ ಆರ್ಥಿಕತೆಯನ್ನು ಸಬಲೀಕರಿಸಿ ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ಸಹಾಯ ಮಾಡುವುದಕ್ಕೆ ಪ್ರಮುಖ ಮಾರ್ಗವಾಗಿ ಕಾರ್ಯನಿರ್ವಹಿಸಲಿದೆ.

ಕೇಂದ್ರವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026 - 27ರ ಸಾಲಿನ ಮೊಟ್ಟಮೊದಲ ಬಜೆಟ್ ಅನ್ನು ಕರ್ತವ್ಯ ಭವನದಲ್ಲಿ ಸಿದ್ಧಪಡಿಸಿ ಮಂಡಿಸಿದರು. ವಿತ್ತ ಸಚಿವೆ ಹೇಳಿದರು, ಈ ಭವನವು ನಮ್ಮ ಕರ್ತವ್ಯಕ್ಕೆ ಪ್ರೇರಣೆಯಾಗಿ ಸೇವೆಯ ಭಾವನೆಗೆ ಪ್ರೇರಣೆ ನೀಡಿದೆ.

2026 ಬಜೆಟ್ ಯುವಶಕ್ತಿಯ ಬಜೆಟ್: ಸೀತಾರಾಮನ್ ಹೇಳಿದರು ಜನಸೇವೆಯನ್ನು ಕರ್ತವ್ಯ ಎಂದು ತಿಳಿದು ಯುವಶಕ್ತಿಯೇ ಬೆಳವಣಿಗೆಯನ್ನು ಗಮನದಲ್ಲಿಟ್ಟು ಈ ಬಜೆಟ್ ಸಿದ್ಧಪಡಿಸಲಾಗಿದೆ. ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿಂದ ಭಾರತದ ಆರ್ಥಿಕ ಪಥವು ಸ್ಥಿರತೆಯಿಂದ ಗುರುತಿಸಲ್ಪಟ್ಟಿದ್ದು, ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಈ ಬಜೆಟ್ ಸ್ಥಿರತೆ ನಿರಂತರ ಬೆಳವಣಿಗೆ ಮತ್ತು ಜನ ಸಾಮರ್ಥವನ್ನು ಪ್ರೋತ್ಸಾಹಿಸುವ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ.

ಕೇಂದ್ರವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ತವ್ಯ ಭವನದಲ್ಲಿ ರಚಿಸಿದ ಮೊಟ್ಟಮೊದಲ ಬಜೆಟ್ ನಲ್ಲಿ ಮೂರು ಪ್ರಮುಖ ಕರ್ತವ್ಯ ಗಳಿಗೆ ಆದ್ಯತೆ ನೀಡಲಾಗಿದೆ ಎಂದು ಪ್ರಕಟಿಸಿದರು.

ಮೂರು ಪ್ರಮುಖ ಕರ್ತವ್ಯಗಳು:

ಆರ್ಥಿಕ ಬೆಳವಣಿಗೆ ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದು:
ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಮತ್ತು ಅಸ್ಥಿರ ಜಾಗತಿಕ ಚಲನಶೀಲತೆಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯನ್ನು ಗಟ್ಟಿಗೊಳಿಸುವುದು.

ಜನರ ಸಾಮರ್ಥ್ಯವರ್ಧನೆ ಮತ್ತು ಪಾಲುದಾರರ ರೂಪಿಸುವುದು:

ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಅವರ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಭಾರತದ ಸಮೃದ್ಧಿ ಹಾದಿಯಲ್ಲಿ ಬಲವಾದ ಪಾಲುದಾರರನ್ನಾಗಿ ಮಾಡುವುದು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್:
ಎಲ್ಲಾ ಕುಟುಂಬಗಳು ಸಮುದಾಯಗಳು ಪ್ರದೇಶಗಳು ಸಮತೋಲನಗಳು ಸೌಲಭ್ಯಗಳು ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಗೆ ಸಾಮಾನ್ಯ ಅವಕಾಶಗಳನ್ನು ಹೊಂದುವಂತೆ ಯೋಜನೆಗಳನ್ನು ಜಾರಿ ಮಾಡುವುದು.

ಸೀತಾರಾಮನ್ ತಿಳಿಸಿದ್ದಾರೆ ಈ ಮೂರು ಕರ್ತವ್ಯಗಳು ಸ್ಥಿರ ಸಮತೋಳಿನ ಮತ್ತು ಸಮಗ್ರ ಭಾರತ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುತ್ತವೆ, ಮತ್ತು 2026 ಬಜೆಟ್ ಅನ್ನು ಯುವಶಕ್ತಿ ಸಮ ಸಾಮರ್ಥ್ಯ ಮತ್ತು ಸಮಗ್ರ ಬೆಳವಣಿಗೆ ಮೇಲೆ ಕೇಂದ್ರೀಕರಿಸುವುದಾಗಿ ತೋರಿಸುತ್ತವೆ.

ಇನ್ನಷ್ಟು ಓದಿರಿ:
400 ಕೋಟಿ ರೂ. ದರೋಡೆ ಪ್ರಕರಣ: ಕಿಶೋರ್ ಸಾಳ್ವೆ ಬಂಧನ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online